ನಮಸ್ಕಾರ ಕರ್ನಾಟಕ,,, ಮಕ್ಕಳು ಚಿಕ್ಕ ಆಯಸ್ಸಿನಿಂದಲೇ ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಲು ನಾನು ಡಾಕ್ಟಾರ್ ಆಗ್ಬೇಕು ದೊಡ್ಡ ಆಫೀಸರ್ ಆಗಬೇಕು ಎನ್ನುವ ಕನಸ್ಸಿಗೆ ಕೇಂದ್ರ ಸರ್ಕಾರ,,, ಮರಿ ಹಕ್ಕಿಗಳಿಗೆ ತಾಯಿ ಹೇಗೆ ಆಸರೆಯೂ,, ಹಾಗೆ ಇಂದಿನ ಮಕ್ಕಳ ಭವಿಷ್ಯದ ಕನಸ್ಸಿಗೆ ನಮ್ಮ ಸರ್ಕಾರ ಆಸರೆಯಾಗಿದೆ.
PM Vidyalakshmi Scholarship 2026
ಹೌದು ಸ್ನೇಹಿತರೆ ಭಾರತ ಮಾತೆಯಂತ ತಾಯಿ ಮಡಿಲಲ್ಲಿ ಹುಟ್ಟಿದ ಪ್ರತಿಯೊಬ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಭವಿಷ್ಯದಲ್ಲಿ ತಮ್ಮ ಉತ್ತಮ ಜೀವನವನ್ನ ರೂಪಿಸಿ ಕೊಳ್ಬೇಕು ಎನ್ನುವ ಪ್ರಮುಖ ಗುರಿ ಹೊತ್ತ ಸರ್ಕಾರ “ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ” ಯನ್ನ ಜಾರಿ ಮಾಡಿತು. ಪ್ರತಿಭಾವಂತ ವಿದ್ಯಾರ್ಥಿಗಳ ಆರ್ಥಿಕ ಬೆಂಬಲಕ್ಕಾಗಿ ನಿಲ್ಲುವುದೇ ಈ ಯೋಜನೆಯ ದ್ಯೋಯೋದ್ದೇಶವಾಗಿದೆ ಅಷ್ಟೇ ಅಲ್ಲದೆ ಹಣಕಾಸಿನ ಕೊರತೆಯಿಂದಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಯು ಸರ್ಕಾರದೊಂದಿದೆ ಕೈ ಜೋಡಿಸಿದೆ.
“ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಾಳಿಗೆ ಬೆನ್ನುಲುಬಾಗಿ ಈ ಯೋಜನೆ ನಿಂತಿದೆ ಹೇಗೆ ಎನ್ನುವುದರ ಅರಿವು ನಿಮ್ಮಗಿದೆಯೇ ?
ಎಲ್ಲಿ ಗಮನಿಸಿ ಈ ಯೋಜನೆಯು ಸರಳ, ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹಿ ಇನ್ನೊಂದು ರೀತಿ ಹೇಳುವುದಾದರೆ ವಿದ್ಯಾರ್ಥಿಗಳಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರಳವಾಗಿರಲಿ ಎಂದು ಡಿಜಿಟಲ್ ಅರ್ಜಿ ಪ್ರಕ್ರಿಯೆಯ ಮೂಲಕ ಅವಕಾಶ ಸರ್ಕಾರ ಮಾಡಿ ಕೊಟ್ಟಿದೆ. ಇಂತಹ ಸರ್ಕಾರೀ ಯೋಜನೆಗಳು ನಮ್ಮ ಭಾರತ ದೇಶದಲ್ಲಿ ಜಾರಿ ಬರುಯುದರಿಂದ ವಿದ್ಯಾರ್ಥಿಗಳು ತಮ್ಮ ಉತ್ತಮ ಶಿಕ್ಶಣದಿಂದ ದೇಶ ವಿದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರಿನ ಜೊತೆಗೆ ದೇಶದ ಹೆಸರನ್ನು ಕೊಂದಾಡುವಂತೆ ಈ ಯೋಜನೆ ಮಾಡುತ್ತದೆ
ಹಾಗಿದ್ದರೆ ಏನಿದು ಏನಿದು ವಿದ್ಯಾಲಕ್ಷ್ಮಿ ಯೋಜನೆ ? ವಿದ್ಯಾರ್ಥಿಗಳು ಪಡೆಯುವ ಸಾಲದ ಪ್ರಮಾಣವಾದರೂ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ ತಿಳಿತಾ ಹೋಗೋಣ ಬನ್ನಿ ?
ಹಾಗಿದ್ದರೆ ಏನಿದು ಏನಿದು ವಿದ್ಯಾಲಕ್ಷ್ಮಿ ಯೋಜನೆ ?
ವಿದ್ಯಾಲಕ್ಷ್ಮಿ ಯೋಜನೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶಿಕ್ಷಣಕ್ಕೆ ಸಾಲವನ್ನು ಒದಗಿಸುತ್ತದೆ ಅಷ್ಟೇ ಅಲ್ಲದೆ ಎಲ್ಲ ಮಕ್ಕಳನ್ನು ಸರಿಸಮಾನವಾಗಿ ಕಾಣುತ್ತಾ ಉನ್ನತ ಶಿಕ್ಷಣ ಕುರಿತು ಯಾವುದೇ ವಿದ್ಯಾರ್ಥಿಗಳನ್ನು ತಾರತಮ್ಯ ಮಾಡದೆ ಭಾರತ ದೇಶದ ಪ್ರತಿ ಮೂಲೆ ಮೂಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯು ಸುಮಾರು 6 ನವೆಂಬರ್ 2024 ರಂದು ಕ್ಯಾಬಿನೆಟ್ ನಲ್ಲಿ ಮಂಜೂರಿಸಲಾಗಿದೆ. ವಿದ್ಯಾರ್ಥಿಗಳೇ ನೀವು ಈ ಯೋಜನೆಯ ಲಾಭ ಪಡೆಯಲು ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆಯು ಎಲ್ಲಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಅನುಸೂಚಿತ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ’ ಸರ್ಕಾರ ಶಿಫಾರಸು ಮಾಡಿ ಕೊಟ್ಟಿದೆ. ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ 3% ಬಡ್ಡಿ ರಿಯಾಯಿತಿ ಇರುತ್ತದೆ ಜೊತೆಗೆ 10 ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು. 860 ಅರ್ಹತಾ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ ಈ ಯೋಜನೆಗೆ ಅರ್ಹ ಫಲಾನು ಭವಿಗಳಾಗಿರುತ್ತಾರೆ ಜೊತೆಗೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಡಿಯಲ್ಲಿ ಸಾಲ ಒದಗಿಸುವ ಗುರಿಯನ್ನ ಹೊಂದಿದೆ.
ಪ್ರಮುಖ ಉದ್ದೇಶ ಹೀಗಿದೆ :-
- ಯಾವುದೇ ವಿದ್ಯಾರ್ಥಿ ಆರ್ಥಿಕ ಸಮಸ್ಯೆ ಇಂದಾಗಿ ತಾನು ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಬಾರದು ಎನ್ನುವ ಉದ್ದೇಶ.
- ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ತೊಂದರೆ ಎದುರಿಸಬಾರದು ಎನ್ನುವ ಕಾರಣದಿಂದ ಒಂದು ಏಕೀಕೃತ ಡಿಜಿಟಲ್ ವೇದಿಕೆ ಒದಗಿಸಿದೆ
- ನೀವು ಈ ಯೋಜನೆಗೆ ಸಂಬಂಧ ಪಟ್ಟ ಬ್ಯಾಂಕ್ ಗಳಲ್ಲಿ ಅರ್ಜಿಸಲ್ಲಿಸಿದ ನಂತರ ವೇಗವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ತಡಮಾಡದೇ ಬೇಗ ವರ್ಗಾಹಿಸಬೇಕು ಎನ್ನುವ ಉದ್ದೇಶವನ್ನ ಹೊಂದಲಿದೆ.
- ಬರಿ ಶಿಕ್ಷಣಕ್ಕೆ ಈ ಯೋಜನೆ ಒಟ್ಟು ಕೊಡದೆ ವಿದ್ಯಾರ್ಥಿಗಳಲ್ಲಿ ಕೆಲವೊಂದು ಪಾರದರ್ಶಕ ಗುಣಗಳನ್ನು ಒಳಗೊಂಡಿದೆ.
ವಿದ್ಯಾರ್ಥಿಗಳು ಪಡೆಯಬಹುದಾದ ಪ್ರಯೋಜನ ಏನು ?
- ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಿರಾ,,,, ಹಾಗಿದ್ದರೆ ಸರ್ಕಾರದಿಂದ ಈ ಪ್ರಯೋಜನಗಳು ನಿಮಗೆ ಸಿಗುವುದು ಖಂಡಿತ!
- ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಲು ಸರ್ಕಾರ ಈ ಯೋಜನೆ ಮೂಲಕ ಶೈಕ್ಷಣಿಕ ಸಾಲವನ್ನು ಒದಗಿಸಲು ಸುಲಭ ಹಾಗೆ ಸರಳವಾದ ಅವಕಾಶವನ್ನು ಮಾಡಿಕೊಟ್ಟಿದೆ.
- ಓದಲು ಇಚ್ಚಾ ಶಕ್ತಿ ಹೊಂದಿದ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಆರ್ಥಿಕ ಬೆಂಬಲ ಸಿಗುತ್ತದೆ.
- ಅಭ್ಯರ್ಥಿಗಳು ಈ ಶೈಕ್ಷಣಿಕ ಸಾಲ ಪಡೆಯಲು ಯಾವುದೇ ರೀತಿಯ ತಡವಾಗುವುದಿಲ್ಲ ಡಿಜಿಟಲ್ ಪ್ರಕ್ರಿಯೆ ಮೂಲಕ ಅರ್ಜಿ ಹಾಕಿದ ಕೆಲವೇ ದಿನಗಳೊಳಗೆ ಸಾಲ ಮಂಜೂರಾತಿ ಆಗುತ್ತದೆ.
- ಈ ವಿದ್ಯಾಲಕ್ಷ್ಮಿ ಯೋಜನೆಗೆ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಬೇಕಾದರೂ ಅರ್ಜಿಯನ್ನು ಹಾಕಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ.
- ಹಣ ವರ್ಗಾವಣೆಯ ಸಂದರ್ಭದಲ್ಲಿ ಯಾವುದೇ ಮಧ್ಯಾಹ್ನದ ಕೈವಾಡ ಇರುವುದಿಲ್ಲ.
- ಶಿಕ್ಷಣವನ್ನು ಉತ್ತೇಜಿಸುವ ಮೂಲಕ ದೇಶದಲ್ಲಿ ಪ್ರತಿಯೊಬ್ಬ ವಿದ್ಯಾವಂತ ವಿದ್ಯಾರ್ಥಿಗಳಿಗೂ ಉತ್ತಮ ಉದ್ಯೋಗ ಪಡೆಯಲೇಬೇಕು ಎನ್ನುವ ಹಠವನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಕೌಶಲ್ಯವನ್ನು ತಿಳಿಸಿಸುತ್ತದೆ.
ನೀವು ಈ ಅರ್ಹತೆಗಳನ್ನ ಹೊಂದಿರಬೇಕು :-
- ಮೊದಲು ನೀವು ಭಾರತದ ಪ್ರಜೆಯಾಗಿರಬೇಕು
- ಮಾನ್ಯತೆ ಪಡೆದ ಮಂಡಳಿಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ವ್ಯಾಪಕಕ್ಕೆ ವ್ಯಾಸಂಗಕ್ಕೆ ಪ್ರವೇಶವನ್ನು ಹೊಂದಿರಬೇಕು ಅಂದರೆ ಪದವಿ, ಸ್ನಾತಕೋತ್ತರ ಪದವಿ ಅಥವಾ ಇತರೆ ಯಾವುದೇ ಕೋರ್ಸ್ ಗಳಿಗೆ ಸೇರ್ಪಡೆಯಾಗಿರಬೇಕು.
- ವಿದ್ಯಾರ್ಥಿ ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು
- ಕೆಲವೊಂದು ಕೋರ್ಸ್ ಗಳಿಗೆ ಮತ್ತು ಸಂಸ್ಥೆ ಯೋಜನೆಗೆ ಅರ್ಹವಾಗಿರಬೇಕು
- ಕೆಲವು ಬ್ಯಾಂಕ್ ನಲ್ಲಿ ಸಾಲ ನೀಡಲು ವಿದ್ಯಾರ್ಥಿಗಳನ್ನು ಮೆರಿಟ್ ಪಾರ್ಟಿ ಆಧಾರದ ಮೇಲೆ ಮೊದಲು ಆಯ್ಕೆ ಮಾಡುತ್ತಾರೆ
- ಈ ಯೋಜನೆ ಮೂಲಕ ಯಾವುದೇ ವಿದ್ಯಾರ್ಥಿನಿ ಅಥವಾ ವಿದ್ಯಾರ್ಥಿಯಾಗಲಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಕೆಲವೊಂದು ಶರತು ಮತ್ತು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಈ ಮೇಲಿನ ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿರಲೇ ಬೇಕಾಗುತ್ತೆ.
ದಾಖಲೆಗಳು :-
- ಹಿಂದಿನ ಅರ್ಹತಾ ಅಂಕಪಟ್ಟಿಗಳು (ಸ್ವಯಂ ದೃಢೀಕರಿಸಲಾಗಿದೆ)
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ವಿಳಾಸ ಪುರಾವೆ
- ಪ್ರವೇಶ ಪರೀಕ್ಷೆಯ ಫಲಿತಾಂಶ
- ಪ್ರವೇಶ ಪತ್ರ
- ಆದಾಯ ಪ್ರಮಾಣಪತ್ರ
ನೀವು ಅರ್ಜಿ ಸಲ್ಲಿಸಲು ಈ ಕ್ರಮವನ್ನ ಅನುಸರಿಸಿ :-
ಮೊದಲ ಹಂತದಲ್ಲಿ ನೀವು ನಿಮ್ಮನ್ನ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಮೊದಲು ನೊಂದಾಯಿಸಿಕೊಳ್ಳಬೇಕು. ಹೇಗೆಂದರೆ ನೀವು ಏಕೀಕೃತ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಪೋರ್ಟಲ್ https://www.vidyalakshmi.co.in/Students/ ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
ಈ ಕೆಳಗೆ ಹಂತವನ್ನ ಕ್ರಮಬಂಡವಾಗಿ ಅನುಸರಿಸಿ
- ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವಿದ್ಯಾಲಕ್ಷ್ಮಿ ಪೋರ್ಟಲ್ https://www.vidyalakshmi.co.in/Students/ ಮೇಲೆ ಕ್ಲಿಕ್ ಮಾಡಿ.
- ನಂತರ ಅಕೌಂಟ್ ತೆರೆಯುವ ಮೂಲಕ ನೊಂದಣಿ ಮಾಡಿಕೊಳ್ಳಿ ಹಾಗೆ ನಿಮ್ಮ ಹೆಸರು, ಇಮೇಲ್, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯನ್ನು ನೀವು ನಮೂದಿಸಬೇಕಾಗುತ್ತದೆ.
- ನೋಂದಣಿ ನಂತರ, ವಿದ್ಯಾಲಕ್ಷ್ಮಿ ಪೋರ್ಟಲ್‌ಗೆ ಲಾಗಿನ್ ಮಾಡಿ.
- ‘ಸಾಲ ಅರ್ಜಿ ವಿಭಾಗ’ಕ್ಕೆ ಹೋಗಿ ಮತ್ತು ಸಾಲದ ಪ್ರಕಾರವನ್ನು ಆಯ್ಕೆಮಾಡಿ.
- ನಿಮ್ಮ ಕೋರ್ಸ್ ಹೆಸರು, ಸಂಸ್ಥೆ ಮತ್ತು ಇತರ ವೈಯಕ್ತಿಕ ನಿಮ್ಮ ಎಲ್ಲ ದಾಖಲೆಗಳನ್ನ ಸರಿಯಾಗಿ ಭರ್ತಿ ಮಾಡಿ.
- ನೀವು ನಂತರ ಎಲ್ಲಿ ಸಾಲ ಪಡೆಯಲು ಬಯಸುತ್ತೀರೋ ಅಂದರೆ ಬ್ಯಾಂಕ್ ನಲ್ಲಿ ಅಥವಾ ಹಣಕಾಸು ಸಂಸ್ಥೆಯೆಲ್ಲೋ ಅನ್ನೋದನ್ನ ಆಯ್ಕೆ ಮಾಡಬೇಕು
- ಎಲ್ಲಾ ಪ್ರಕ್ರಿಯೆಗಳು ಆದ ನಂತರ ಸಲ್ಲಿಸು(submit) ಬಟನ್ ಮೇಲೆ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಹಿತಿ:-
| ಟೋಲ್-ಫ್ರೀ ಸಂಖ್ಯೆ: 1800 1031 ಮತ್ತು ದೂರವಾಣಿ: 080- 22533876, ಇಮೇಲ್: hoel@canarabank.com & hogps@canarabank.com |








