ಸ್ವಾವಲಂಬಿ ಸಾರಥಿ ಯೋಜನೆ ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಸಬ್ಸಿಡಿ vehicle subsidy

January 12, 2026 11:13 AM

ನೀವು ನಿಮ್ಮ ಕಾಲಿನಮೇಲೆ ನಿಂತು ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂಬ ಅಸೆ ನಿಮಗಿದೆಯೇ? ಬಾಡಿಗೆಗೆ ಕಾರು ಅಥವಾ ಆಟೋ ಓದಿಸಿ ಉತ್ತಮ ಜೀವನ ನೆಡೆಸಬೇಕು ಅಂದುಕೊಂಡಿದೀರಾ? ಮಾಧ್ಯಮ ವರ್ಗದ ಹಾಗು ಹಿಂದುಳಿದ ನಿರುದ್ಯೋಗಿ ಯುವಕ ಯುವತಿಯರಿಗೆ ನಮ್ಮ ಕರ್ನಾಟಕ ಸರ್ಕಾರದಿಂದ ನಿಮಗೊಂದು ಸಿಹಿಸುದ್ದಿ ಇಲ್ಲಿದೆ ನೋಡಿ!!

Swavalambi Sarathi Yojana Karnataka

ವಾಹನ ಖರೀದಿಸಲು ಹಣವಿಲ್ಲ ಎಂದು ಚಿಂತಿಸಬೇಕಿಲ್ಲ ನಮ್ಮ ಕರ್ನಾಟಕ ಸರ್ಕಾರವೇ ನಿಮಗೆ ಲಕ್ಷಾಂತರ ರೂಪಾಯಿ ಸಹಾಯಧನ ನೀಡುತ್ತಿದೆ

ಹಿಂದುಳಿದ ಯುವಕರಿಗೆ ಪ್ರೋತ್ಸಾಹ ನೀಡಲು ನಮ್ಮ ರಾಜ್ಯ ಸರ್ಕಾರವೇ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದೆ ನಿರುದ್ಯೋಗಿ ಯುವಕ ಯುವತಿಯರು ಸ್ವಯಂ ಉದ್ಯೋಗ ಹೊಂದಲು ವಾಣಿಜ್ಯ ವಾಹನಗಳನ್ನು ಕಳುಹಿಸಲು ಬಾರಿ ಮೊತ್ತದ ಸಹಾಯಧನ ನೀಡುವ ಮಹತ್ವದ ಉದ್ದೇಶವನ್ನು ಹೊಂದಿದೆ

ಹಣ ಮಾಡಬೇಕು, ವವ್ಯಹಾರ ಪ್ರಾರಂಭಿಸಬೇಕು, ಮನೆ ಕಟ್ಟಬೇಕು, ಕಾರು ಖರೀದಿಸಬೇಕು ಹೀಗೆ ಹತ್ತು ಹಲವು ಆಸೆಗಳು ಯಾರಿಗೆ ಇರಲ್ಲ ಹೇಳಿ. ಅದರಲ್ಲೂ ನಮ್ಮ ಮಧ್ಯಮ ವರ್ಗದವರಿಗೆ ಇಂತಹ ಆಸೆಗಳು ಇದ್ದೇ ಇರುತ್ತದೆ ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಅಗತ್ಯವಾದ ವಾಹನ ಖರೀದಿಗೆ ಸಹಾಯಧನ ನೀಡುವ ಮೂಲಕ ಉದ್ಯೋಗವಿಲ್ಲದ ಯುವಕರು ಮತ್ತು ಹಿಂದುಳಿದ ವರ್ಗದವರಿಗೆ ಆದಾಯದ ಸ್ವಂತ ಮೂಲ ಸೃಷ್ಟಿಸುವುದು ಇದರಿಂದ ಅವರು ಉದ್ಯೋಗಾವಕಾಶವನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು

ಸ್ವಾವಲಂಬಿ ಸಾರಥಿ ಯೋಜನೆ ಎಂದರೇನು?

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವ ಜನತೆಯು ಉದ್ಯೋಗಕ್ಕಾಗಿ ಅಲೆಯದೆ ತಾವೇ ಸ್ವಂತ ಉದ್ಯೋಗ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆ ಅಡಿ ಫಲಾನುಭವಿಗಳು ನಾಲ್ಕು ಚಕ್ರದ ವಾಹನದ ವಾಹನಗಳಾದ ಟ್ಯಾಕ್ಸಿ ಸರಕು ಸಾಗಾಣಿಕೆ ವಾಹನಗಳು ಅಥವಾ ಕೃಷಿ ಉದ್ದೇಶದ ಟ್ರಾಕ್ಟರ್ ಗಳನ್ನು ಖರೀದಿಸಲು ಆರ್ಥಿಕ ನೆರವು ಪಡೆಯಬಹುದು ಯೋಜನೆಯನ್ನು ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಈ ಸ್ವಾವಲಂಬಿ ಸಾರಥಿ ಯೋಜನೆಯು ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಹೊಂದಲು ನೆರವಾಗಲು ತಮ್ಮ ಸ್ವಂತ ಉದ್ಯೋಗವನ್ನು ತಾವೇ ಸೃಷ್ಟಿಸಿಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಿದೆ

ಸಂಕ್ಷಿಪ್ತ ವಿವರಣೆ

ಒಬ್ಬ ವ್ಯಕ್ತಿ ಸರ್ಕಾರದಿಂದ ಸಹಾಯಧನ ಪಡೆದು ವಾಹನ ಖರೀದಿಸಿ ಅದರ ಮೂಲಕ ನಿರಂತರ ಆದಾಯ ಗಳಿಸಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಮಾಡುವುದೇ ಸ್ವಾಬಲಂಬಿ ಸಾರಥಿ ಯೋಜನೆಯ ಉದ್ದೇಶವಾಗಿದೆ

ಯೋಜನೆಯ ಹೆಸರು ಕರ್ನಾಟಕ ಸ್ವಾವಲಂಬಿ ಸಾರಥಿ
ಫಲಾನುಭವಿಗಳು ಅಲ್ಪಸಂಖ್ಯಾತರು ಇತರೆ ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು
ಪ್ರಯೋಜನ ವಾಹನ ಖರೀದಿಯ ಮೇಲೆ ಸಬ್ಸಿಡಿ
ಅಧಿಕೃತ ವೆಬ್ ಸೈಟ್ https://kmdconline.karnataka.gov.in/Portal/login

ಈ ಯೋಜನೆಯ ಉದ್ದೇಶ:-

ಸ್ವಯಂ ಉದ್ಯೋಗ ಸೃಷ್ಟಿ

ರಾಜ್ಯದ ನಿರುದ್ಯೋಗಿ ಯುವಕ ಯುವತಿಯರು ಕೇವಲ ಉದ್ಯೋಗಕ್ಕಾಗಿ ಅಳೆಯದ ತಾವೇ ಸ್ವಂತ ಉದ್ಯೋಗದಾತರಾಗಬೇಕು ಎಂಬ ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಸ್ವಂತ ವಾಹನ ಹೊಂದುವ ಮೂಲಕ ಗೌರವಯುವ ಜೀವನ ನಡೆಸಲು ಇದು ಸಹಾಯಕವಾಗುತ್ತದೆ.

ಬಡತನ ಮತ್ತು ನಿರುದ್ಯೋಗ ಕಡಿಮೆಮಾಡುವುದು

ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಅಗತ್ಯವಾದ ವಾಹನ ಖರೀದಿಗೆ ಸಹಾಯಧನ ನೀಡುವ ಮೂಲಕ ಉದ್ಯೋಗವಿಲ್ಲದ ಯುವಕರು ಮತ್ತು ಹಿಂದುಳಿದ ವರ್ಗದವರಿಗೆ ಆದಾಯದ ಸ್ವಂತ ಮೂಲ ಸೃಷ್ಟಿಸುವುದು ಇದರಿಂದ ಅವರು ಉದ್ಯೋಗಾವಕಾಶವನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಆರ್ಥಿಕ ಸಬಲೀಕರಣ

ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ಜನರಿಗೆ ಆರ್ಥಿಕ ಬೆಂಬಲ ನೀಡುವುದು ಬಾರಿ ಮೊತ್ತದ ಸಹಾಯಧನ ನೀಡುವ ಮೂಲಕ ಬಡ ಕುಟುಂಬಗಳ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡುವುದು ಇದರ ಗುರಿ ಆಗಿದೆ.

ಕೌಶಲ್ಯ ಇದ್ದ ಚಾಲಕರಿಗೆ ಬೆಂಬಲ

ಡಿಯಲ್ಲಿದ್ದರೂ ಸಹ ವಾಹನಗಳನ್ನು ತೆಗೆದುಕೊಳ್ಳಲು ಹಣದ ಕೊರತೆಯಿಂದಾಗಿಸ್ವಂತ ವಾಹನ ಖರೀದಿಸಲು ಸಾಧ್ಯವಾಗದ ಚಾಲಕರಿಗೆ ಈ ಯೋಜನೆ ಒಂದು ವರದಾನ ಅಂತಾನೆ ಹೇಳಬಹುದು, ಬಾಡಿಗೆ ವಾಹನ ಚಾಲನೆ ಮಾಡುವ ಬದಲು ತಮ್ಮದೇ ಆದ ಒಂದು ಸ್ವಂತ ವಾಹನದ ಮಾಲೀಕರಾಗಲು ಇದು ಉತ್ತೇಜನ ನೀಡುತ್ತದೆ.

ಸಾರಿಗೆ ಮತ್ತು ಸರಕು ಸೇವೆಗಳ ವಿಸ್ತರಣೆ

ಯುವಕರು ಟ್ಯಾಕ್ಸಿ ಅಥವಾ ಸರಕು ಸಾಗಾಣಿಕೆಗೆ ವಾಹನಗಳನ್ನು ಖರೀದಿಸುವುದಂದ ರಾಜ್ಯದ ಸಾರಿಗೆ ವ್ಯವಸ್ಥೆ ಬಲಗೊಳ್ಳುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಲು ಮತ್ತು ಸರಕುಗಳನ್ನು ಸಾಗಿಸಲು ಇದು ಸಹಕಾರಿಯಾಗುತ್ತದೆ.

ಸಾಮಾಜಿಕ ಸಮಾನತೆ ಹೆಚ್ಚುತ್ತದೆ

ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಅಥವಾ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸರ್ಕಾರದ ಸವಲತ್ತುಗಳನ್ನುತಲುಪಿಸುವ ಮೂಲಕ ಅವರ ಜೀವನಮಟ್ಟವನ್ನು ಅಭಿವೃದ್ಧಿಯತ್ತ ಸಾಗಿಸುವುದು

ಪ್ರಮುಖ ಅರ್ಹತೆಗಳು

ನಿರುದ್ಯೋಗಿ ಅರ್ಜಿದಾರರು ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸದಲ್ಲಿ ಇರಬಾರದು

ಕಡ್ಡಾಯವಾಗಿ ಎಲ್ ಎಮ್ ಬಿ ಅಥವಾ ವಾಣಿಜ್ಯ ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು

ವಯೋಮಿತಿ ಈ ಯೋಜನೆಗೆ ಅರ್ಜಿಸಲ್ಲಿಸಲು ಕನಿಷ್ಠ 21 ವರ್ಷ 45 ವರ್ಷದೊಳಗಿರಬೇಕು

ಆದಾಯದ ಮಿತಿ ಕುಟುಂಬದ ವಾರ್ಷಿಕ ಆದಾಯವು ನಿಗದಿಪಡಿಸಿದ ಮಿತಿಗಿಂತ ಕಡಿಮೆ ಇರಬೇಕು

ಸ್ವಾವಲಂಬಿ ಸಾರಥಿ ಯೋಜನೆ ಸೌಲಭ್ಯ ಮತ್ತು ಸಹಾಯಧನ

ವರ್ಗ ಸಹಾಯಧನ
SC/ST4,00,000 ವರೆಗೆ ಅಥವಾ ವಾಹನ ಬೆಲೆಯ 75%
OBC3,00,000 ವರೆಗೆ ಅಥವಾ ವಾಹನ ಬೆಲೆಯ50%
ಅಲ್ಪಸಂಖ್ಯಾತರು 3,00,000 ವರೆಗೆ ಅಥವಾ ವಾಹನ ಬೆಲೆಯ

ಫಲಾನುಭವಿಗಳು

ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇರಿದವನಾಗಿರಬೇಕು

ಈ ಯೋಜನೆಯಲ್ಲಿ ಆರ್ಥಿಕ ಸಹಾಯಧನ ಪಡೆಯಲು ಇಚ್ಛಿಸುವು ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶಗಳಿಗೆ 98,000 ನಗರ ಪ್ರದೇಶ1,20,000 ರೂಪಾಯಿಗಳನ್ನು ಮೀರಿರಬಾರದು

ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

ಯಾರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ

ಈ ಹಿಂದೆ ಸರ್ಕಾರದ ಯಾವುದೇ ಯೋಜನೆಯಲ್ಲಿ ವಾಹನ ಸಹಾಯಧನ ಪಡೆದವರು

ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗಗಳಲಿಲ್ಲದವರು

ಅಪರಾಧ ಹಿನ್ನೆಲೆ ಹೊಂದಿದವರು ಅಥವಾ ಚಲನ ಪರವಾನವಿ ಇಲ್ಲದವರು ಇಲ್ಲದವರು

ವಯೋಮಿತಿ

ಈ ಯೋಜನೆಗೆ ಅರ್ಜಿಸಲ್ಲಿಸಲು ಕನಿಷ್ಠ 21 ವರ್ಷ 45 ವರ್ಷದೊಳಗಿರಬೇಕು

ಪ್ರಮುಖ ದಾಖಲೆಗಳು

  • ಡ್ರೈವಿಂಗ್ ಲೈಸೆನ್ಸ್
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಪಾಸ್ ಬುಕ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಪ್ಯಾನ್ ಕಾರ್ಡ್
  • ವಾಸ ಸ್ಥಳ ದೃಢೀಕರಣ ಪತ್ರ

ಅರ್ಜಿ ಸಲ್ಲಿಸುವ ವಿಧಾನ

  • ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅರ್ಹ ಪಲಾನುಭವಿಗಳುಗ್ರಾಮ ಒನ್ ಕಚೇರಿಗೆ ಹೋಗಿ ಸೇವಾ ಸಿಂಧೂ ಪೋರ್ಟಲ್ ನಲ್ಲಿಅರ್ಜಿ ಸಲ್ಲಿಸಿ
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://kmdconline.karnataka.gov.in/Portal/login ಗೆ ಭೇಟಿ ನೀಡಿ
  • ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಹಾಗೂ ಒಟಿಪಿ ಭರ್ತಿ ಮಾಡಿ ಎಲ್ಲಾ ಮಾಹಿತಿಯನ್ನು ಅಪ್ಲೋಡ್ ಮಾಡಿ
  • ಕಚೇರಿಗೆ ಹೋಗಿ ಅರ್ಜಿ ಫಾರಂ ತೆಗೆದುಕೊಳ್ಳಿ ನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿಮಾಡಿ
  • ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರನ್ನು ನಮೂದಿಸಿ

ತೀರ್ಮಾನ

ಸಾವನಂಬಿ ಸಾರಥಿ ಯೋಜನೆ ಸರ್ಕಾರದ ಮಹತಾಕಾಂಕ್ಷಿ ಯೋಜನೆ ಯಾಗಿದ್ದು ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತರು ಹಾಗೂ ಉದ್ಯೋಗವಿಲ್ಲದ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತದೆ ವಾಹನ ಖರೀದಿಗೆ ಸಹಾಯಧನ ನೀಡುವ ಮೂಲಕ ಫಲಾನುಭವಿಗಳು ಆದಾಯದ ಶಾಶ್ವತ ಮೂಲಗಳನ್ನು ಹೊಂದಿ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಾರೆ. ನಿರುದ್ಯೋಗ ಯುವಕ ಯುವತಿಯರಿಗೆ ಸ್ವಂತ ಕಾಲಿನ ಮೇಲೆ ನಿಲ್ಲಲು ಆರ್ಥಿಕವಾಗಿ ಸದೃಢರಾಗದು ಮತ್ತು ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಲು ಸರ್ಕಾರ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ ನೀವು ಅರ್ಜಿ ಸಲ್ಲಿಸಿ ನಿಮ್ಮ ಉತ್ತಮ ಜೀವನವನ್ನು ರೂಪಿಸಿಕೊಳ್ಳಿ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment