ಅಜೀಂ ಪ್ರೇಮ್ ಜಿ ಫೌಂಡೇಶನ್ ಸ್ಕಾಲರ್ಶಿಪ್ | Azim Premji Foundation Scholarship 2026

January 13, 2026 6:25 AM

ಬಡ ಹಾಗೂ ಪ್ರತಿಭಾವಂತ ಹೆಣ್ಣು ಮಕ್ಕಳ ಹಣಕಾಸಿನ ಕೊರತೆಯಿಂದಾಗಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಇಂತಹ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಅಜಿಂ ಜೀಮ್ ಪ್ರೇಮ್ ಜಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನುಆಹ್ವಾನಿಸಿದ್ದಾರೆ.

Azim Premji Foundation Scholarship 2026

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಲವು ವಿದ್ಯಾರ್ಥಿ ವೇತನವನ್ನು ನಮ್ಮ ಸರ್ಕಾರ ಜಾರಿಗೊಳಿಸಿ ವಾರ್ಷಿಕವಾಗಿ 30,000 ವಿದ್ಯಾರ್ಥಿ ವೇತನ ಹೆಣ್ಣು ಮಕ್ಕಳಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.

ಈ ಸ್ಕಾಲರ್ಶಿಪ್ ಗೆ ಯಾರು ಅರ್ಹರು? ಎಷ್ಟು ಹಣ ಸಿಗುತ್ತೆ? ಯಾವ ಅರ್ಹತೆಗಳು ಇರಬೇಕು ಎಂಬ ಎಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ವಿದ್ಯಾರ್ಥಿಗಳೇ ಹಣದ ಸಮಸ್ಯೆಯಿಂದಾಗಿ ನಿಮ್ಮ ಮುಂದಿನ ಭವಿಷ್ಯ ಹಾಳಾಗಬಾರದೆಂದು ನಮ್ಮ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಹಲವಾರು ಸ್ಕಾಲರ್ಶಿಪ್ ಗಳನ್ನು ನೀಡುತ್ತಿವೆ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಹಲವು ಸ್ಕಾಲರ್ಶಿಪ್ ಗಳಲ್ಲಿ ಈ ಸ್ಕಾಲರ್ಶಿಪ್ ಕೂಡ ಪ್ರಮುಖವಾಗಿದೆ

ಅಜೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನ ಎಂದರೆ?

ಅಜೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನವು ಭಾರತದಖ್ಯಾತ ಉದ್ಯಮಿ ಮತ್ತು ದಾನಿ ಅಜೀಮ್ ಪ್ರೇಮ್ ಜಿ ಅವರ ನೇತೃತ್ವದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನೀಡಲಾಗುವ ಒಂದು ಆರ್ಥಿಕ ನೆರವು.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆದರೆ ತುಂಬ ಚನ್ನಾಗಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

ಅಜೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಕೆಲವೊಂದಿಷ್ಟು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಥಿ ವೇತನದ ಬಗ್ಗೆಸಂಪೂರ್ಣ ಮಾಹಿತಿ :-

ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳು ಓದುವುದರಲ್ಲಿಎಷ್ಟೇ ಮುಂದಿದ್ದರು ಅವರು ಓದಿ ಏನು ಸಾಧಿಸಬೇಕು ಎಂಬ ಒಂದು ಯೋಜನೆಗಳು ನಮ್ಮ ಮಾಧ್ಯಮ ವರ್ಗ ಹಾಗು ಹಿಂದುಳಿದ ವರ್ಗದವರ ತಲೆಯಲ್ಲಿ ಈ ಯೋಚನೆಗಳು ಬಂದು ಅಥವಾ ಬಡತನ ಹಿಂಗೇ ಹಲವು ಕಾರಣಗಳಿಂದಾಗಿ ಹೆಣ್ಣು ಮಕ್ಕಳ ವಿದ್ಯಭ್ಯಾಸದ ಕನಸನ್ನು ನುಚ್ಚು ನೂರು ಮಾಡಿ ಅವರನ್ನು ಶಾಲಾ ಕಾಲೇಜನ್ನು ಬಿಡಿಸುತ್ತಾರೆ. ಆದರೆ ನಮ್ಮ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವಿದ್ಯಾರ್ಥಿ ವೇತನವನ್ನು ನೀಡಿ ಇವರನ್ನು ಪ್ರೊತ್ಸಯಿಸುತ್ತಿದೆ.

ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆಯನ್ನ ಸುಧಾರಿಸುವ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಪದ್ಧತಿಯ ಒಂದು ಭಾಗವಾಗಿದೆ.

ವಿದ್ಯಾರ್ಥಿ ವೇತನ ಉದ್ದೇಶ

ಶಿಕ್ಷಣದಲ್ಲಿ ಸಮಾನತೆಯನ್ನು ಕಾಪಾಡುವುದು

ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಸಮಾನತೆಯನ್ನು ಕಾಪಾಡುವಲ್ಲಿಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಉದ್ದೇಶವಾಗಿದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಸಮಾನ ಅವಕಾಶಗಳನ್ನು ಒದಗಿಸುವುದು ಪ್ರಮುಖ ಗುರಿಯಾಗಿದೆ

ಉನ್ನತ ಶಿಕ್ಷಣ ಮತ್ತು ಮಹಿಳಾ ಸಬಲೀಕರಣ

ಹೆಣ್ಣು ಮಕ್ಕಳು ಹಣಕಾಸಿನ ತೊಂದರೆಯಿಂದಾಗಿ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದೆಂದು ಹಾಗೂ ಉನ್ನತ ಶಿಕ್ಷಣದ ಮೂಲಕ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕು ಸಾಗಿಸಬಹುದಾಗಿದೆ

ಶೈಕ್ಶಣಿಕ ಅಡೆತಡೆಗಳು

ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಭಾಗದ ಹೆಣ್ಣು ಮಕ್ಕಳು ಪ್ರಯಾಣ ವೆಚ್ಚ ಪುಸ್ತಕಗಳು ಮತ್ತು ಬೋಧನಾ ಶುಲ್ಕವನ್ನು ಕಟ್ಟಲು ಕಷ್ಟ ಪಡುತ್ತಾರೆ ಈ ವಿದ್ಯಾರ್ಥಿ ವೇತನದ ಮೂಲಕ ಅಂತಹ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡಿ ವಿದ್ಯಾರ್ಥಿನಿಯರು ತಮ್ಮ ಓದಿನ ಮೇಲೆ ಮಾತ್ರ ಗಮನಹರಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುವುದು

ಸರ್ಕಾರಿ ಶಾಲೆಗಳಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಖಾತಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಂತೆ ಸಮಾನ ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸುವುದು ಮತ್ತು ಉತ್ತಮ ಉದ್ಯೋಗಾವಕಾಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು

ಬಾಲ್ಯ ವಿವಾಹವನ್ನು ತಡೆಗಟ್ಟುವುದು

ಗ್ರಾಮೀಣ ಭಾಗದಲ್ಲಿ ಅನೇಕ ಕುಟುಂಬಗಳು ಹಣದ ಕೊರತೆಯಿಂದಾಗಿ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸದೆ ಬೇಗ ಮದುವೆ ಮಾಡುತ್ತಾರೆ ಈ ಯೋಜನೆಯು ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡುವ ಮೂಲಕ ಬಾಲ್ಯ ವಿವಾಹದ ಸಮಸ್ಯೆಗಳನ್ನು ತಡೆಯಲು ಸಹಾಯವಾಗುತ್ತದೆ

ಹೆಣ್ಣು ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಸಹಾಯಕಾರಿ:-

ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಸಾಕು ಆಕೆಯ ಭವಿಷ್ಯ ಮತ್ತು ಶಿಕ್ಷಣದ ಬಗ್ಗೆ ಪೋಷಕರಿಗೆ ಸಾವಿರಾರು ಕನಸುಗಳಿರುತ್ತವೆ. ಓದಿ ದೊಡ್ಡ ಅಧಿಕಾರಿಯಾಗಬೇಕು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ಆಸೆ ಇರುವುದು ಸರ್ವೇಸಾಮಾನ್ಯ ಆದರೆ ಮನೆಯ ಆರ್ಥಿಕ ಪರಿಸ್ಥಿತಿರುವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಲೇಜು ಪೀಸ್ ದೈನಂದಿನ ಖರ್ಚು ಇವನ್ನೆಲ್ಲ ನೋಡಿದ್ರೆ ಬಡ ಕುಟುಂಬದ ಪ್ರತಿಭಾವಂತ ಹೆಣ್ಣು ಮಕ್ಕಳು ಕಷ್ಟವಾಗುತ್ತದೆ. ಹಣದ ಸಮಸ್ಯೆಯಿಂದಾಗಿ ಯಾವುದೇ ಹೆಣ್ಣು ಮಗು ಓದು ಅರ್ಧದಲ್ಲಿಯೇ ನಿಲ್ಲಬಾರದೆಂದು ಎಂಬ ಉದ್ದೇಶದಿಂದ ಅಜೀಂ ಜಿ ಫೌಂಡೇಶನ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಮುಂದೆ ಬಂದಿದೆ

ಹೆಣ್ಣುಮಕ್ಕಳು ಮತ್ತು ತಮ್ಮ ಪದವಿಪೂರ್ವ ಪದವಿ ಅಥವಾ ಡಿಪ್ಲೋಮಾ ಕೋರ್ಸಿನ ಪೂರ್ಣ ಅವಧಿಗೆ 30000 ವರೆಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಈ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗೆ ವಿವಿಧ ಹಂತಗಳನ್ನ ನೀಡಲಾಗಿದೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ನೀವು ಸಹ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ 2026 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ನೀವು ಸಹ ಅರ್ಜಿಯನ್ನು ಸಲ್ಲಿಸಿ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ.

ಫಲಾನುಭವಿಗಳು:-

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆದರೆ ತುಂಬ ಚನ್ನಾಗಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.

  • ಸರ್ಕಾರಿ ಶಾಲೆ ಅಥವಾ ಕಾಲೇಜಿನಿಂದ ನಿಯಮಿತ ವಿದ್ಯಾರ್ಥಿಯಾಗಿ 10 ಮತ್ತು 12 ನೇ ತರಗತಿ ಎರಡರಲ್ಲೂ ಉತ್ತೀರ್ಣರಾಗಿರಬೇಕು
  • ಪಿಯುಸಿ ಮೊದಲ ವರ್ಷದ ಡಿಗ್ರಿ ಕೋರ್ಸ್ ಗಳಿಗೆ ದಾಖಲೆಯಾದ ವಿದ್ಯಾರ್ಥಿನಿಯರು
  • ವಿದ್ಯಾರ್ಥಿಯು ಸರ್ಕಾರಿ ಕಾಲೇಜು ಅಥವಾ ಅನುದಾನಿತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು
  • ವಿಶ್ವವಿದ್ಯಾಲಯದಲ್ಲಿ ಮಾನ್ಯತೆ ಪಡೆದ ಪದವಿಪೂರ್ವ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ನ (2 ರಿಂದ 5 ವರ್ಷಗಳ ಅವಧಿ) ನಿಯಮಿತ ವಿದ್ಯಾರ್ಥಿಯಾಗಿ ಮೊದಲ ವರ್ಷದಲ್ಲಿ (ಶೈಕ್ಷಣಿಕ ಅವಧಿ 2025–26) ಪ್ರವೇಶ ಪಡೆದಿರಬೇಕು .

ಯಾವ ರಾಜ್ಯದ ವಿದ್ಯಾರ್ಥಿಗಳು ಅರ್ಹರು?

ಅರುಣಾಚಲ ಪ್ರದೇಶಮಿಜೋರಾಂ
ಅಸ್ಸಾಂನಾಗಾಲ್ಯಾಂಡ್
ಬಿಹಾರ ಒಡಿಶಾ
ಛತ್ತೀಸ್‌ಗಢಪುದುಚೇರಿ
ಜಾರ್ಖಂಡ್ ರಾಜಸ್ಥಾನ
ಕರ್ನಾಟಕಸಿಕ್ಕಿಂ
ಮಧ್ಯಪ್ರದೇಶತೆಲಂಗಾಣ
ಮಣಿಪುರತ್ರಿಪುರ
ಘಾಲಯಉತ್ತರ ಪ್ರದೇಶ ಮತ್ತು ಉತ್ತರಾಖಂಡ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-

  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಸಿಗ್ನೇಚರ್
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • 10ನೇ ತರಗತಿಯ ಅಂಕಪಟ್ಟಿ
  • 12ನೇ ತರಗತಿಯ ಅಂಕಪಟ್ಟಿ
  • ಕಾಲೇಜಿಗೆ ಸೇರ್ಪಡೆಯಾದ ಪುರಾವೆಯ ದಾಖಲೆಗಳು

ವಿದ್ಯಾರ್ಥಿವೇತನದ ಪ್ರಯೋಜನಗಳು:

ಪ್ರತಿ ವರ್ಷ ವಿದ್ಯಾರ್ಥಿನಿಯರ ಖಾತೆಗೆ 30,000 ಹಣ ಬರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆಇದು ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗದೆ ಪದವಿ ಮುಗಿಯುವವರೆಗೂ ಪ್ರತಿವರ್ಷವೂ ಸಹ ಈ ಹಣ ಸಹಾಯ ಸಿಗುತ್ತದೆ. ಇದರಿಂದ ಹೆಣ್ಣು ಮಕ್ಕಳು ಯಾವುದೇ ಅರ್ಜಿ ಶುಲ್ಕದ ಬಗ್ಗೆ ತಲೆಕೆಡಿಸಿಕೊಳ್ಳೋದು ಉತ್ತಮವಾದ ರೀತಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗುತ್ತದೆ

ಆಯ್ಕೆಯ ಮಾನದಂಡಗಳು:

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಯೋಮಿತಿ ನಿಯಮಗಳಿಗೆ ಸರಿಯಾಗಿ ಹೊಂದಿಕೊಳ್ಳಬೇಕು ವಿದ್ಯಾರ್ಥಿಯ ಆದಾಯದ ಮಿತಿ ಸಂಸೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಇರಬಾರದು ಎಲ್ಲಾ ಆಗುತ್ತೆ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಅರ್ಜಿದಾರರು ಸಂಬಂಧಿತ ಇಲಾಖೆಯ ವೆಬ್ ಸೈಟ್ https://azimpremjifoundation.org/what-we-do/education/azim-premji-scholarship/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು
  • ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  • ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
  • ಅರ್ಜಿಸಲ್ಲಿಸುವ ಮೊದಲು ಎಲ್ಲಾ ಮಾಹಿತಿ ಸರಿಯಾಗಿದೆಯಾ ಎಂದು ಪರಿಶೀಲಿಸಿ
  • ಆನ್ಲೈನ್ ನಲ್ಲಿ ಕೇಳಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್ ಲಿಂಕು:-ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಲಿಂಕುಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಮಾಧ್ಯಮ ವರ್ಗದ ಹಾಗು ಬಡ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಡತನ ಯಾವುದೇ ಕಾರಣಕ್ಕೂ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನೀಡುತ್ತಿರುವ ಇಸ್ಕಾಲರ್ಶಿಪ್ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಹಾಗು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಇದು ಬಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದಾಗಿದೆ, ಈ ಹಣದಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಿ ಉದ್ಯೋಗವನ್ನು ಪಡೆದು ಅವರ ಗೌರವ ಮತ್ತು ಪ್ರತಿಷ್ಠೆಯನ್ನುಹೆಚ್ಚಿಸಿಕೊಳ್ಳಲು ಹಾಗೂ ಸ್ವಾವಲಂಬಿಯಾಗಿ ಬದುಕಲು ನೆರವಾಗುತ್ತದೆ.ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment