ಇಂತಹ ಅವಕಾಶವನ್ನು ಮಹಿಳೆಯರು ತಪ್ಪದೆ ಬಳಸಿಕೊಳ್ಳಿ ಇಲ್ಲಿ ನೋಡಿ ನಮ್ಮ ಕರ್ನಾಟಕ ಸರ್ಕಾರ ಎಲ್ಲಾ ಮಹಿಳೆಯರಿಗೂ ಈ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟಿದೆ. ಸರ್ಕಾರದಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಬಹುತೇಕ ಮಹಿಳೆಯರು ಟೈಲರಿಂಗ್ ಕೌಶಲ್ಯವನ್ನು ಹೊಂದಿರುತ್ತಾರೆ ಆದರೆ ಅವರ ಬಳಿ ಮಷಿನ್ ತೆಗೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ ಇಂತಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ಕೊಡುವ ಮೂಲಕ ಅವರನ್ನು ಸದೃದುಗೊಳಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ.
Free Sewing Machine Scheme 2026
ಹೆಚ್ಚಿನ ಆದಾಯವನ್ನು ಗಳಿಸಿ ಅವರ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಒಂದು ಉತ್ತಮ ಯೋಜನೆಯನ್ನು ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ತಾವು ಇದ್ದ ಸ್ಥಳದಲ್ಲಿಯೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಅದರ ಜೊತೆಗೆ ಉಚಿತ ತರಬೇತಿಯನ್ನು ಕೊಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗುತ್ತದೆ.
ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ಈ ಒಂದು ಯೋಜನೆಗೆ ನೀವು ಅರ್ಹರಾಗಿದ್ದರೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು ಹಂತಂತವಾಗಿ ಕೆಳಗೆ ಎಲ್ಲ ಮಾಹಿತಿಯನ್ನು ನೀಡಲಾಗಿರುವಂಥದ್ದು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ
ಸಂಪೂರ್ಣ ಮಾಹಿತಿ
ಕರ್ನಾಟಕ ಸರ್ಕಾರವು ಗ್ರಾಮೀಣ ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಪ್ರಮುಖವಾದದ್ದು ಉಚಿತ ಹೊಲಿಗೆ ಯಂತ್ರ ಯೋಜನೆ, ಈ ಯೋಜನೆಯ ಮೂಲಕ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ತಮ್ಮ ಮನೆಯಲ್ಲೇ ಕುಳಿತುಕೊಂಡು ಹೊಲಿಗೆ ಕೆಲಸವನ್ನು ಮಾಡಿ ಹೆಚ್ಚಿನ ಆದಾಯವನ್ನು ಗಳಿಸಿ ಸಮಾಜದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಿದೆ.
ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರ ಸಬಲೀಕರಣ ಮತ್ತು ಸ್ವಯಂ ಉದ್ಯೋಗ ಸೃಷ್ಟಿಈ ಸಂಕ್ರಾಂತಿ ಹಬ್ಬದ ದಿನದಂದು ಸರ್ಕಾರ ಸಿಹಿ ಸುದ್ದಿ ನೀಡಿದ್ದು ಮಹಿಳೆಯರು ಈ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆ ಲಾಭವನ್ನು ಪಡೆದುಕೊಳ್ಳಿ ಪ್ರತಿ ಮಹಿಳೆಯರು ತಮ್ಮ ಕಾಲು ಮೇಲೆ ನಿಂತು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಬೇಕು ಎಂಬ ಮುಖ್ಯ ಉದ್ದೇಶದಿಂದ ರೂಪಿಸಲಾದ ಯೋಜನೆಯಾಗಿದೆ
ಈ ಯೋಜನೆಯ ಮುಖ್ಯ ಉದ್ದೇಶಗಳು
- ಮಹಿಳೆಯರು ಆರ್ಥಿಕವಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗಿದೆ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಹಾಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದು
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಡ ಮಹಿಳೆಯರು ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಲಿ ಎಂಬುದು ಮುಖ್ಯ ಗುರಿಯಾಗಿದೆ
- ಯಾವುದೇ ಉದ್ಯೋಗ ಸಿಗದೇ ಕಾಲಹರಣ ಮಾಡುವ ಮಹಿಳೆಯರಿಗೆ ಈ ಯೋಜನೆ ಮೂಲಕ ನಿರಂತರ ಕೆಲಸದ ಅವಕಾಶ ಲಭ್ಯವಾಗುತ್ತದೆ
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರು ಹೊಲಿಗೆ ಕೆಲಸದ ಮೂಲಕ ಹೆಚ್ಚಿನ ಹಣವನ್ನು ಗಳಿಸಿ
- ಅವರ ಕುಟುಂಬದ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಅಭಿವೃದ್ಧಿಗೆ ನೆರವಾಗುತ್ತದೆ
- ಈಗಾಗಲೇ ಕೆಲಸ ಕಲಿತಿದ್ದು ಮಷಿನ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಬೇಸರಗೊಂಡಿರುವ ಮಹಿಳೆಯರಿಗೆ ಇದೊಂದು ಉತ್ತಮ ಅವಕಾಶ ಅಂತಾನೇ ಹೇಳಬಹುದಾಗಿದೆ
- ಸ್ವ ರೋಜಗಾರ್ ಮತ್ತು ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದಲೂ ಈ ಒಂದು ಯೋಜನೆ ತುಂಬಾನೆ ಉಪಯುಕ್ತವಾಗಿದೆ
- ದಾರಿದ್ಯ ಮತ್ತು ಸ್ಥಳೀಯ ಅರ್ಥ ವ್ಯವಸ್ಥೆಯ ಸಬಲೀಕರಣವನ್ನು ಇನ್ನಷ್ಟು ಉತ್ತೇಜಿಸುವ ಒಂದು ಉದ್ದೇಶ
- ಎಸ್ಸಿ ಎಸ್ಟಿ ಒಬಿಸಿ ಇಂತಹ ವರ್ಗಕ್ಕೆ ಸೇರಿದಂತಹ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆ ಆಗುವುದಕ್ಕೆ ಈ ಒಂದು ಯೋಜನೆ ತುಂಬಾನೆ ಸಹಾಯವಾಗುತ್ತೆ
ಪ್ರಮುಖ ಷರತ್ತುಗಳು:-
- ಅರ್ಜಿದಾರರ ಕುಟುಂಬದಲ್ಲಿ ಯಾರು ಸಹ ಸರ್ಕಾರಿ ಕೆಲಸದಲ್ಲಿ ಇರಬಾರದು ಅಂತಹ ಅಭ್ಯರ್ಥಿಗಳಿಗೆ ಅವಕಾಶವಿಲ್ಲ
- ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯವು ನಿಗದಿಪಡಿಸಿದ ನಿಗದಿತ ಮಿತಿಗಿಂತ ಕಡಿಮೆ ಇರಬೇಕು
- ಅಜ್ಜಿದಾರರು ಕಡ್ಡಾಯವಾಗಿ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಕನಿಷ್ಠ 10 ವರ್ಷದೊಳಗಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು
- ಸರ್ಕಾರಿ ಅಥವಾ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಯಿಂದ ಸರ್ಟಿಫಿಕೇಟ್ ಕಡ್ಡಾಯವಾಗಿ ಪಡೆದಿರಬೇಕು
- ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಹೊಲಿಗೆ ಯಂತ್ರ ಪಡೆದಿರಬಾರದು, ಒಬ್ಬ ಮಹಿಳೆಯರಿಗೆ ಒಂದು ಬಾರಿ ಮಾತ್ರ ಈ ಸೌಲಭ್ಯ ಸಿಗುತ್ತದೆ
ವಯೋಮಿತಿ:-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಗರಿಷ್ಠ 55 ವರ್ಷದೊಳಗಿನ ಮಹಿಳಾ ಅಭ್ಯರ್ಥಿಯಾಗಿರಬೇಕು
ಈ ಯೋಜನೆಯ ಪ್ರಮುಖ ಲಾಭಗಳು:-
1.ಉಚಿತ ಸಬ್ಸಿಡಿ ಹೊಲಿಗೆ ಯಂತ್ರ
2.ಸ್ವಯಂ ಉದ್ಯೋಗಕ್ಕೆ ಅವಕಾಶ
3.ಹೆಚ್ಚಿನ ಆದಾಯ ಗಳಿಕೆ
4.ಕೌಶಲ್ಯಾಭಿವೃದ್ಧಿ
5.ಮಹಿಳಾ ಸಬಲೀಕರಣ
6.ತರಬೇತಿ ಮತ್ತು ಮಾರ್ಗದರ್ಶನ
7.ಮನೆಯಲ್ಲೇ ಕುಳಿತು ಕೆಲಸ ಮಾಡುವ ಸೌಲಭ್ಯ
ಅವಲೋಕನಗಳು
| ಯೋಜನೆಯ ಹೆಸರು | ಉಚಿತ ಹೊಲಿಗೆ ಯಂತ್ರ |
| ಫಲಾನುಭವಿಗಳು | ಮಹಿಳೆಯರು |
| ರಾಜ್ಯ | ಕರ್ನಾಟಕ |
| ಅಧಿಕೃತ ವೆಬ್ ಸೈಟ್ | https://sevasindhuservices.karnataka.gov.in/ |
ಈ ಯೋಜನೆಗೆ ಅರ್ಜಿಸಲ್ಲಿಸಲು ಯಾರು ಅರ್ಹರು:-
ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು:- ಅಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ
ಆದಾಯದ ಮಿತಿ:-ವಾರ್ಷಿಕ ಆದಾಯವು ಒಂದುವರೆ ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು
ಹಿಂದುಳಿದ ವರ್ಗದವರು:- ಬಡತನದಲ್ಲಿರುವ ಹಿಂದುಳಿದ ವರ್ಗದ ಮಹಿಳೆಯರು ಸರ್ಕಾರದಿಂದ ಹೊಲಿಗೆಯಂತ್ರವನ್ನು ಪಡೆಯಬಹುದು
ವಿಧವೆ ಮಹಿಳೆಯರು:- ಗಂಡ ಇಲ್ಲದೆ ಬದುಕಲು ಯಾರ ಸಹಾಯವು ಇಲ್ಲದೆ ಒಬ್ಬಂಟಿ ಜೀವನ ನಡೆಸುತ್ತಿರುವ ಮಹಿಳೆಯರು
ಖಾಯಂ ನಿವಾಸಿಗಳು:- ಕಡ್ಡಾಯವಾಗಿ ಕರ್ನಾಟಕದ ನಿವಾಸಿಯಾಗಿರಬೇಕು
ರೇಷನ್ ಕಾರ್ಡ್:- ಪಿಎಲ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಆರ್ಯರಾಗಿರುತ್ತಾರೆ
ವಿಶೇಷ ಆದ್ಯತೆ:-ದಿವ್ಯಂಗ ಮಹಿಳೆಯರು ಏಕ ಪೋಷಕರು ಎಸ್ಸಿ ಎಸ್ಟಿ ಒಬಿಸಿ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ
ಅರ್ಜಿದಾರರು ಈಗಾಗಲೇ ಹೊಲಿಗೆ ಯಂತ್ರವನ್ನು ಹೊಂದಿರಬಾರದು ಅಥವಾ ಇದೇ ರೀತಿಯಾದ ಯೋಜನೆಯಿಂದ ಲಾಭವನ್ನು ಪಡೆದಿರಬಾರದು ಇಂಥವರು ಈ ಯೋಜನೆಗೆ ಅರ್ಹತೆಯನ್ನು ಹೊಂದಿರುತ್ತಾರೆ
ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಹೊಲಿಗೆ ತರಬೇತಿ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್
- ಜನನ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಪಾಸ್ಪೋರ್ಟ್ ಸೈಜ್ ಫೋಟೋ
- ವಿಶೇಷ ದಾಖಲೆಗಳು ಅಂದರೆ ವಿಧವಾ ಪ್ರಮಾಣ ಪತ್ರ ದಿವ್ಯಂಗತ್ವ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಈ ಯೋಜನೆಯ ಪ್ರಯೋಜನಗಳು
ಮಹಿಳೆಯರು ಬೇರೆಯವರ ಹತ್ತಿರ ಕೆಲಸಕ್ಕೆ ಹೋಗುವ ಬದಲು ಮನೆಯಲ್ಲೇ ಸ್ವಂತ ಉದ್ಯೋಗವನ್ನು ಪ್ರಾರಂಭಮಾಡಿ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಾಯಕ
ಈ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಅಥವಾ 15 ಸಾವಿರದವರೆಗೆ ಆರ್ಥಿಕ ಸಹಾಯವನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ
ಇದರ ಜೊತೆಗೆ ಇನ್ನೊಂದು ಮುಖ್ಯವಾಗಿ ನೋಡಬಹುದಾಗಿದೆ 15 ದಿನಗಳ ಉಚಿತ ತರಬೇತಿ ಜೊತೆಗೆ ಹೊಲಿಗೆ ಮತ್ತು ಟೈಲರಿಂಗ್ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು
ಮಹಿಳೆಯರು ಸಣ್ಣ ಪುಟ್ಟ ಖರ್ಚುಗಳಿಗಾಗಿ ಅಥವಾ ಕುಟುಂಬದ ಅವಶ್ಯಕತೆಗಳಿಗಾಗಿ ಹಣ ಸಂಪಾದಿಸಲು ಇದು ತುಂಬಾ ಸಹಕಾರಿಯಾಗುತ್ತದೆ
ಮನೆ ಕೆಲಸಗಳನ್ನು ಮುಗಿಸಿದ ನಂತರ ಸಿಗುವ ಬಿಡುವಿನ ಸಮಯದಲ್ಲಿ ಹೊಲಿಗೆ ಕೆಲಸ ಮಾಡಬಹುದು ಇದು ಮನೆಯ ಜವಾಬ್ದಾರಿಗಳ ಜೊತೆಗೆ ಆದಾಯವನ್ನು ಗಳಿಸುವ ಉತ್ತಮ ಮಾರ್ಗವಾಗಿದೆ
ಮಾಸಿಕ ಎರಡು ಸಾವಿರದಿಂದ ಹದಿನೈದು ಸಾವಿರದವರೆಗೆ ಹೆಚ್ಚುವರಿ ಆದಾಯವನ್ನು ಈ ಒಂದು ಮಾಡಬಹುದು ಮಾಸಿಕ ಸಾಲ ಮತ್ತು ಸಬ್ಸಿಡಿ ಅವಕಾಶಗಳು ಈ ಒಂದು ಬಿಸಿನೆಸ್ ಗೆ ಸಿಗುವಂತದ್ದು
ಈ ಯೋಜನೆಯ ಪರಿಣಾಮ:-
ಈ ಯೋಜನೆಯು ದೀರ್ಘಕಾಲದಲ್ಲಿ ಸಮಾಜಕ್ಕೆ ಮಹತ್ತರ ಪ್ರಯೋಜನ ತರುತ್ತದೆ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ದೊರೆತು ಕುಟುಂಬದ ಆದಾಯ ಹೆಚ್ಚುತ್ತದೆ ಒಮ್ಮೆ ಹೋಳಿಗೆ ಕೆಲಸದಲ್ಲಿ ಪರಿಣಿತಿ ಪಡೆದರೆ ಸುತ್ತ ಮುತ್ತಲಿನ ಮಹಿಳೆಯರಿಗೂ ತರಬೇತಿ ಕೊಡುವ ಮೂಲಕ ಅದರಲ್ಲೂ ಸಹ ಹಣವನ್ನುಗಳಿಸಿ ಕುಟುಂಬವನ್ನು ಅಭಿವೃದ್ಧಿ ಮಾಡಬಹುದು. ಹಾಗು ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಗೌರವ ದೊರೆಯುತ್ತದೆ.
ತರಬೇತಿ ಹೇಗಿರುತ್ತೆ?
- ಮಹಿಳೆಯರಿಗೆ ಅವರು ಆಯ್ಕೆ ಮಾಡಿಕೊಂಡ ಸೆಂಟರ್ನಲ್ಲಿ ಹೋಗಿ ತರಬೇತಿಯನ್ನ ಪಡೆಯಬೇಕಾಗುತ್ತದೆ ಯೋಜನೆಯ ಅಂಗವಾಗಿ ನೀಡಲಾಗಿರುವ ಅಂತಹ ಉಚಿತ ತರಬೇತಿ ಹೊಲಿಗೆ ಮತ್ತು ಟೈಲರಿಂಗ್ ಕ್ಷೇತ್ರದಲ್ಲಿ ಮಹಿಳೆಯರನ್ನ ಕೌಶಲ್ಯ ಪೂರ್ಣವಾಗಿ ಮಾರ್ಪಡಿಸುವಂತಹ ಉದ್ದೇಶದಿಂದ ಉಚಿತ ತರಬೇತಿ ನೀಡಲಾಗುತ್ತಿದೆ
- ವಿವಿಧ ಹಂತಗಳಲ್ಲಿ ಈ ಒಂದು ಯೋಜನೆಗೆ ಟ್ರೈನಿಂಗ್ ಅನ್ನು ಕೊಡಲಾಗುತ್ತೆ.
- ಪ್ರಾರಂಭಿಕ ಹಂತದಲ್ಲಿ ಒಂದರಿಂದ ಎರಡು ದಿನಗಳ ಕಾಲ ಮಷೀನ್ ಬಿಡಿ ಭಾಗಗಳ ಬಗ್ಗೆ ಪರಿಚಯವನ್ನು ಮಾಡಿಕೊಡಲಾಗುತ್ತೆ ಅದಾದ ನಂತರ ಮಷೀನ್ ಯಾವ ರೀತಿ ಬಳಸಬೇಕು ಹಾಗೆ ಯಾವ ರೀತಿ ದಾರವನ್ನ ಸೂಜಿಗೆ ಹಾಕಬೇಕು ಹೀಗೆ ಎಲ್ಲವನ್ನ ತಿಳಿಸಿಕೊಡಲಾಗುತ್ತೆ.
- ಎರಡನೇ ಹಂತದಲ್ಲಿ ಸರಳ ಹೊಲಿಗೆ ಮತ್ತು ಕಣ್ಣು ಹೊಲಿಗೆ ಪ್ಯಾಶನ್ ಹೊಲಿಗೆ ಮತ್ತು ಡಿಸೈನ್ ಬಟ್ಟೆ ಕತ್ತರಿಸುವಂತಹ ವಿಧಾನದ ಬಗ್ಗೆ ಟ್ರೈನಿಂಗ್ ಕೊಡಲಾಗುತ್ತೆ.
- 9 ರಿಂದ 13 ದಿನಗಳ ಅವಧಿಯಲ್ಲಿ ಸೀರೆ ಬ್ಲೌಸ್ ವಿನಿ ಫಾರಂ ತಯಾರಿಕೆ ಪರದೆ ಕವರ್ ಹಾಗೆ ದೋಷಗಳನ್ನು ಸರಿಪಡಿಸಿಕೊಳ್ಳಲು ಇಷ್ಟು ಅವಕಾಶವನ್ನು ನೀಡಲಾಗುತ್ತೆ.
- ಸ್ವಂತ ಉದ್ಯಮ ಪ್ರಾರಂಭಿಸಲು ತಂತ್ರಗಳು ಗ್ರಾಹಕರನ್ನು ಆಕರ್ಷಿಸುವ ವಿಧಾನ ವೆಬ್ಸೈಟ್ ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಮಾರುಕಟ್ಟೆಯನ್ನು ಯಾವ ರೀತಿ ಡೆವೆಲಪ್ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಇಲ್ಲಿ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಗೆ ಆನ್ಲೈನ್ ಮತ್ತೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ವೆಬ್ ಸೈಟ್ ಗೆ ಭೇಟಿ ನೀಡಿ https://sevasindhuservices.karnataka.gov.in/ ಅರ್ಜಿ ಸಲ್ಲಿಸಿ,
ಈ ಮೇಲ್ ಐಡಿ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ
ಅರ್ಜಿಯಲ್ಲಿ ಕೇಳಲಾಗುವ ಸ್ವಾವ ವಿವರಗಳು ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಅಲ್ಲಿ ಲಾಗಿನ್ ಆಗಬೇಕು ಲಾಗಿನ್ ಆಗಿ ಅರ್ಜಿ ಫಾರ್ಮನ್ನ ಭರ್ತಿ ಮಾಡಬೇಕು ಅದನ್ನ ದೃಡಿಕರಿಸಿದ ನಂತರ ಸಬ್ಮಿಟ್ ಹಚ್ಚಿದರೆ ನಿಮ್ಮ ಅರ್ಜಿ ಆನ್ಲೈನ್ ಮುಖಾಂತರ ಸಲ್ಲಿಕೆ ಆಗುತ್ತೆ.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಗ್ರಾಮ ಪಂಚಾಯಿತಿ ಮಹಿಳಾ ಮತ್ತು ಬಾಲ ವಿಕಾಸ ಕಾರ್ಯಾಲಯಕ್ಕೆ ಭೇಟಿ ನೀಡಬೇಕು
ನಂತರ ಅಲ್ಲಿ ಅರ್ಜಿ ಫಾರಂ ಅನ್ನ ಅಲ್ಲಿ ಪಡಿಬೇಕು
ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು
ದಾಖಲೆಗಳ ಪ್ರತಿಗಳನ್ನು ಜೋಡಿಸಿ ಸಲ್ಲಿಕೆ ಪೂರ್ಣಗೊಂಡ ಫಾರ್ಮ್ ಅನ್ನು ಅದೇ ಕಾರ್ಯದಲ್ಲಿ ಮತ್ತೆ ಕೊಡಬೇಕು.
ವಿತರಣೆ ಯಾವ ರೀತಿ ಇರುತ್ತೆ
ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿ ನಿಮ್ಮ ಒಂದು ದಾಖಲೆಗಳು ಎಲ್ಲವೂ ಸರಿಯಾಗಿದ್ದರೆ ನೀವು ಅರ್ಹರಾಗಿದ್ದರೆ ನಿಮ್ಮ ಒಂದು ಅರ್ಜಿಯನ್ನ ಇಲ್ಲಿ ಮುಂದಿನ ಹಂತಕ್ಕೆ ತಲುಪಿಸಲಾಗುತ್ತದೆ ನಂತರ ಹೊಲಿಗೆ ಯಂತ್ರವು ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ನಿಮ್ಮ ಹೆಸರಿಗೆ ಬರುತ್ತವೆ
ಅಂತಿಮ ತೀರ್ಮಾನ
ಕರ್ನಾಟಕದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಿ ಅವರಿಗೆ ಸ್ವ ಉದ್ಯೋಗವನ್ನು ಸೃಷ್ಟಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಈ ಯೋಜನೆಯನ್ನ ಸರ್ಕಾರ ರೂಪಿಸಿರುವಂಥದ್ದು ಉಚಿತ ಹೊಲಿಗೆ ಯಂತ್ರ ಹಾಗು ಉಚಿತ ತರಬೇತಿಯ ಜೊತೆಗೆ ಮಹಿಳೆಯರನ್ನ ತಮ್ಮ ಮನೆಯಿಂದಲೇ ಒಂದು ಉದ್ಯೋಗವನ್ನು ಪ್ರಾರಂಭಿಸಲಿ ಎಂಬ ಉದ್ದೇಶವನ್ನ ಇಟ್ಟುಕೊಂಡು ಇಲ್ಲಿ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿರುವಂಥದ್ದು.








