
ನಮಸ್ಕಾರ ಕರ್ನಾಟಕ,,,, 2026 ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ಮನೆ ಇಲ್ಲದ ಜನಸಾಮಾನ್ಯರಿಗೆ ಸಿಕ್ಕೆ ಬಿಡ್ತು ಬಹುದೊಡ್ಡ ಕೊಡುಗೆ !. ನನಗೆ 50 – 60 ವರ್ಷವಾಯಿತು ಇನ್ನೂ ಒಂದು ಸ್ವಂತವಾಗಿ ಮನೆ ಕಟ್ಟಲು ಸಾಧ್ಯವಾಗಲಿಲ್ಲ ಹಾಗೆಯೇ ಇನ್ನೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನಮ್ಮದೆಂತಹ ಪರಿಸ್ಥಿತಿ ಎನ್ನುವ ನಿಮ್ಮ ಕಷ್ಟಕ್ಕೆ ಇದೀಗ ಸರ್ಕಾರ ಬ್ರೇಕ್ ಹಾಕಿದೆ. ಭಾರತದಾದ್ಯಂತ ಒಂದು ಸ್ವಂತ ಮನೆ ಇಲ್ಲದ ಕುಟುಂಬಗಳಿಗೆ ಮತ್ತು ಬಾಡಿಗೆ ಮನೆಯಲ್ಲಿ ತಮ್ಮ ಜೀವನ ಕಳೆಯುತ್ತಿರುವ ಜನಸಾಮಾನ್ಯರ ಕೈ ಹಿಡಿಯಲು ಬಂದು ನಿಂತಿದೆ “ಪಿಎಂ ಆವಾಸ್ ಯೋಜನೆ 2026″.
Pradhan Mantri Awas Yojana In Kannada
ಆತ್ಮೀಯ ಮಿತ್ರರೇ,,, ಇಂದಿನ ಕಾಲದಲ್ಲಿ ಒಂದು ಸ್ವಂತವಾಗಿ ಮನೆ ಕಟ್ಟುವುದು ಸಾಮಾನ್ಯವಾದ ಕೆಲಸ ಅಲ್ಲವೇ ಅಲ್ಲ. ದಿನದಿಂದ ದಿನಕ್ಕೆ ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ, ಹೀಗೆ ಇನ್ನೂ ಅನೇಕ ವಸ್ತುಗಳ ಮೇಲೆ ಅತೀ ಹೆಚ್ಚಾಗಿ ಬೆಲೆ ಏರಿಕೆ ಆಗುತ್ತಲೇ ಇದೆ ಇಂಥ ಒಂದು ಸಂದರ್ಭದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ₹700/-ರಿಂದ ₹800/- ಸಂಬಳ ಪಡೆದು ಮನೆ ಕಟ್ಟುತ್ತೇನೆ ಎನ್ನುವುದು ಕನಸಿನ ಮಾತು ಅಷ್ಟೇ. ಇಂತಹ ಕಷ್ಟವನ್ನ ಮನದಟ್ಟು ಮಾಡಿಕೊಂಡ ಸರ್ಕಾರ ಇದೀಗ ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಭರ್ಜರಿ ₹2.67 ಲಕ್ಷ ಸಹಾಯಧನ ಸರ್ಕಾರದ ಈ ಯೋಜನೆ ಮೂಲಕ ಕೊಡಲು ಮುಂದಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅರ್ಜಿಯನ್ನ ಸಲ್ಲಿಸಿದಲ್ಲಿ ಮಾತ್ರ ಈ ಯೋಜನೆಯ ಲಾಭ ಸಂಪೂರ್ಣವಾಗಿ ನಿಮಗೆ ಸಿಗುತ್ತದೆ.
2026ರ ವೇಳೆಯಲ್ಲಿಯೇ ನಿಮ್ಮ ಸ್ವಂತ ಕನಸಿನ ಮನೆಗೆ ಸರ್ಕಾರದ ಈ ಯೋಜನೆ ಮೂಲಕ ಮುಹೂರ್ತ ಫಿಕ್ಸ್ ಮಾಡಿದೆ !
“ಭಾರತದಲ್ಲಿ ಮನೆ ಇಲ್ಲದೆ ಇರುವ ಮಧ್ಯಮ ವರ್ಗದವರಿಗೆ ಹಾಗೇನೇ ಬಡ ಕುಟುಂಬಗಳಿಗೆ ಒಂದು ಸೂರನ್ನ ಕಲ್ಪಿಸುವುದೇ ಈ ಯೋಜನೆಯ ಬಹುದೊಡ್ಡ ಗುರಿಯಾಗಿದೆ”. ಸರ್ಕಾರವು ಅನೇಕ ವರ್ಷಗಳಿಂದ ಈ ಯೋಜನೆಯನ್ನು ಅತ್ಯಂತ ಸುಂದರವಾಗಿ ನಡೆಸಿಕೊಳ್ಳುತ್ತಾ ಬಂದಿದೆ ಅಂತೆಯೇ ಇದೀಗ 2026 ನೇ ಸಾಲಿನಲ್ಲೂ ಕೂಡ ಮನೆ ಇಲ್ಲದ ಕುಟುಂಬಗಳಿಗೆ ಒಂದು ಸುರನ್ನು ಒದಗಿಸಲೇಬೇಕೆನ್ನುವ ಕೆಲಸಕ್ಕೆ ಕೈ ಹಾಕಿದೆ. ಇಂತಹ ಅನೇಕ ಯೋಜನೆಗಳು ಭಾರತದಲ್ಲಿನ ಪ್ರತಿಯೊಂದು ಬಡ ಕುಟುಂಬಗಳಿಗೂ ತಲುಪಿದರೆ ನಮ್ಮದೊಂದು ಅತ್ಯಂತ ಸುಂದರ ಮತ್ತು ಆರ್ಥಿಕತೆಯಲ್ಲಿ ಯಾವುದೇ ದೇಶಗಳಿಗೆ ಬಿಟ್ಟು ಕೊಡದೆ ಅತ್ಯುತ್ತಮ ಸ್ಥಿತಿಗೆ ಬಂದು ನಿಲ್ಲುತ್ತದೆ.
ಪಿಎಂ ಅವಾರ್ಡ್ ಯೋಜನೆ ಏನಿದು ? ನಿಮಗಿಷ್ಟು ತಿಳಿದಿದೆ ?
ಸ್ನೇಹಿತರೆ ನೀವು ನಮ್ಮ ಭಾರತದಂತ ದೇಶದಲ್ಲಿ ಹುಟ್ಟಿದ ಮೇಲೆ PM ಆವಾಸ್ ಯೋಜನೆ (PMAY) ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಒಂದು ಉತ್ತಮ ಯೋಜನೆಯನ್ನು ನಮ್ಮ ದೇಶದ ಪ್ರತಿಷ್ಠಿತ ಪ್ರಧಾನಮಂತ್ರಿಯವರು ಅಂದರೆ ನರೇಂದ್ರ ಮೋದಿ ಅವರು 2015 ರಲ್ಲಿ ಜಾರಿ ಮಾಡಿದರು. ಇದು ಕೇವಲ ನಗರ ಪ್ರದೇಶಗಳಿಗೆ ಮಾತ್ರ. ಹಾಗೆಯೇ 2016ರಲ್ಲಿ ಗ್ರಾಮೀಣ ಭಾಗದ ಜನಸಾಮಾನ್ಯರು ಕೂಡ ಈ ಯೋಜನೆಯ ಲಾಭ ಪಡೆಯುವಂತೆ ಅನುಕೂಲವನ್ನು ಸಹ ಮಾಡಿಕೊಟ್ಟರು. ನಮ್ಮ ದೇಶದ ನಗರ ಭಾಗ ಹಾಗೆ ಹಳ್ಳಿ ಭಾಗದ ಎಲ್ಲಾ ಜನರು (Housing for All) ಸರಿ ಸಮಾನವಾಗಿ ಜೀವನವನ್ನು ನಡೆಸಬೇಕೆಂಬುವ ಉದ್ದೇಶದಿಂದ ಈ ಒಂದು ಯೋಜನೆಯನ್ನ ಮೋದಿ ಸರ್ಕಾರದ ನೇತೃತ್ವದಲ್ಲಿ ಅನುಷ್ಠಾನಗೊಂಡಿತು.
ಯೋಜನೆಯಿಂದ ಸಿಗುವ ಪ್ರಯೋಜನ :-
- ಮನೆ ಇಲ್ಲದ ಕುಟುಂಬಕ್ಕೆ ಅಥವಾ ಸಣ್ಣದಾಗಿ ಒಂದು ಗುಡಿಸಲಲ್ಲಿ ನೀವು ವಾಸ ಮಾಡುತ್ತಿದ್ದರೆ ಸರ್ಕಾರದಿಂದ ನಿಮಗೆ ಗ್ಯಾರಂಟಿ ಮನೆ ಸೌಭಾಗ್ಯ ಸಿಗುತ್ತದೆ. ಹಾಗೆ ಬಾಡಿಗೆ ಮನೆಯಲ್ಲೂ ವಾಸ ಮಾಡುತ್ತಿದ್ದರೆ ನೀವು ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಸಹಾಯಧನವನ್ನ ಪಡೆದುಕೊಳ್ಳಬಹುದು.
- ನಿಮ್ಮಲ್ಲಿರುವ ಅಲ್ಪಸ್ವಲ್ಪ ಹಣದಿಂದ ಮನೆ ಕಟ್ಟಲೇಬೇಕೆನ್ನುವ ತೀರ್ಮಾನವನ್ನು ಮಾಡಿ ಮನೆ ಕೆಲಸವನ್ನು ಆರಂಭಿಸಿದರೆ, ಸರ್ಕಾರ ನಿಮ್ಮ ನೆರಿಗೆಗಾಗಿ ಈ ಯೋಜನೆ ಮೂಲಕ ಆರ್ಥಿಕ ನೆರವನ್ನ ಒದಗಿಸುತ್ತದೆ.
- ನೀವು ಮನೆ ನಿರ್ಮಾಣಕ್ಕೆ ಪಡೆಯುವ ಸಾಲದ ಮೇಲಿನ ಬಡ್ಡಿಯ ಒಂದು ಭಾಗವನ್ನು ಸರ್ಕಾರವೇ ಪಾವತಿಸುತ್ತದೆ.
- ಈ ಯೋಜನೆ ಮೂಲಕ ನೀವು ಮನೆ ನಿರ್ಮಾಣಕ್ಕೆ ಮಾತ್ರ ಸಹಾಯಧನ ಪಡೆಯುವುದಲ್ಲ. ಶೌಚಾಲಯ, ವಿದ್ಯುತ್, ನೀರು, ಮುಂತಾದ ಮೂಲಭೂತ ಸೌಲಭ್ಯಗಳಿಗೂ ಈ ಯೋಜನೆ ಮೂಲಕ ಸಹಾಯಧನವನ್ನು ಪಡೆಯುತ್ತೀರಾ.
- ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಕುಟುಂಬದ ಮಹಿಳೆಯ ಹೆಸರಿನಲ್ಲಿ ಅರ್ಜಿಯನ್ನು ನೀವು ಸಲ್ಲಿಸಿದರೆ ಸರ್ಕಾರವು ನಿಮಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಹಾಗೆ ಮಹಿಳೆಯ ಹೆಸರಿಗೆ ಸಿಗುವ ಸಾಧ್ಯತೆ ಪುರುಷನ ಹೆಸರಿಗೆ ಸಿಗುವುದಿಲ್ಲ.ಆತ್ಮೀಯರೇ ಇದರ ಬಗ್ಗೆ ಹೆಚ್ಚಿಗೆ ಗೊಂದಲ ಬೇಡ ಇಬ್ಬರ ಹೆಸರಿನಲ್ಲೂ ನೀವು ಅರ್ಜಿಯನ್ನು ಸಲ್ಲಿಸಬಹುದು.
- ಯೋಜನೆಯ ಪ್ರಯೋಜನವನ್ನು ನಗರ ಹಾಗೆ ಹಳ್ಳಿ ಭಾಗದ ಪ್ರತಿಯೊಬ್ಬ ನಾಗರಿಕರು ಪೂರ್ಣ ಪ್ರಮಾಣದ ಲಾಭ ಪಡೆಯಬಹುದು.
- ಭಾರತದಲ್ಲಿನ ಅತ್ಯುತ್ತಮ ರಾಜ್ಯಗಳಲ್ಲಿ ಜಲಸಾಮಾನ್ಯರ ಜೀವನ ಮಟ್ಟ ಸುಧಾರಿಸುತ್ತಾ ಬಂದಂತೆ ಭಾರತ ದೇಶವು ಪ್ರಬುದ್ಧತೆ ಹೊಂದುತ್ತಾ ಬರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಮನೆ ನಿರ್ಮಾಣ ಮಾಡಲೇಬೇಕೆಂದು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ತಮ್ಮ ಮುಂದಿನ ಜೀವನಕ್ಕೆ ಹೊರೆ ಆಗುವುದನ್ನು ಈ ಯೋಜನೆ ತಪ್ಪಿಸುತ್ತದೆ.
- PMAY ಯೋಜನೆ ಅಡಿಯಲ್ಲಿ ಕೇವಲ ಸಹಾಯಧನ ಮಾತ್ರವಲ್ಲದೆ ಮೂಲಭೂತ ಸೌಲಭ್ಯಗಳ ಸಹಾಯವು ಸರ್ಕಾರದಿಂದ ಲಭ್ಯವಾಗುತ್ತದೆ ಹೇಗೆಂದರೆ ಸ್ವಚ್ಛ ಭಾರತ್ ಮಿಷಿನ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹12,000 ಹೆಚ್ಚುವರಿ ಹಣ ಸಿಗುತ್ತದೆ ನೀವು ಇನ್ನು ಸ್ಪಷ್ಟವಾಗಿ ತಿಳಿಯಲು ಬಯಸಿದರೆ ನೀವು ಮನೆ + ಶೌಚಾಲಯ ಎರಡನ್ನು ಒಟ್ಟಿಗೆ ಪಡೆಯುತ್ತೀರಿ.
ಆರ್ಥಿಕ ನೆರವು ಮತ್ತು ನಮಗೆ ಸಿಗುವ ಸಹಾಯಧನ ಎಷ್ಟು ?
ನಾವು ಹಳ್ಳಿ ಭಾಗದವರು ಈ ಯೋಚನೆಯಿಂದ ನಮಗೆ ಸಿಗುವ ಸಬ್ಸಿಡಿ ಎಷ್ಟು ? ನಿಮ್ಮ ಈ ಪ್ರಶ್ನೆಗೆ ಉತ್ತರ ತಿಳಿಸಿಕೊಡುತ್ತೇನೆ ಬನ್ನಿ.
- ಈ ಒಂದು ಯೋಜನೆ ಅಡಿಯಲ್ಲಿ ಅತಿ ಮುಖ್ಯವಾಗಿ ನಾವೆಲ್ಲರೂ ಗಮನಿಸಬೇಕಾದ ಅಂಶವೇನೆಂದರೆ, ಸರ್ಕಾರವು ನೀಡುವ ಆರ್ಥಿಕ ಸಹಾಯಧನ ಅಥವಾ ಸಬ್ಸಿಡಿ.
- ನೀವು ಈಗಾಗಲೇ ನಿಮ್ಮ ಮನೆ ನಿರ್ಮಾಣಕ್ಕೆ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಅದರ ಬಡ್ಡಿ ದರದಲ್ಲಿ ಸರ್ಕಾರವು ತಕ್ಕಮಟ್ಟಿಗೆ ರಿಯಾಯಿತಿಯನ್ನು ನೀಡುತ್ತದೆ.
- ಹಾಗೇನೆ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಸರಿ ಸುಮಾರು 1.2 ಲಕ್ಷ ದಿಂದ 1.3 ಲಕ್ಷ ರೂಪಾಯಿಗಳ ಧನ ಸಹಾಯ ಸಿಗಲಿದ್ದು, ಅದರಲ್ಲಿಯೂ ನಿಮ್ಮ ಮನೆ ಗುಡ್ಡ- ಗಾಡಿನಂತಹ ಪ್ರದೇಶದಲ್ಲಿದ್ದರೆ ಸರ್ಕಾರದಿಂದ ನಿಮಗೆ 1.4 ಲಕ್ಷದವರೆಗೆ ಸಿಗುತ್ತದೆ.
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಈ ಯೋಜನೆ ಹಣ ನೇರವಾಗಿ ಸರ್ಕಾರ್ದಿಂದಲೇ ವರ್ಗಾವಣೆ ಆಗುತ್ತದೆ.
ಗ್ರಾಮೀಣ ಭಾಗದ ಜನರ ಆದಾಯ ಮಿತಿ ಈ ರೂಪದಲ್ಲಿ ಇರಬೇಕಾಗುತ್ತದೆ :
| ವರ್ಗ (Category) | ವಾರ್ಷಿಕ ಆದಾಯ ಮಿತಿ | ಲಭ್ಯವಿರುವ ಸಬ್ಸಿಡಿ (ಗರಿಷ್ಠ) |
| EWS (ಅತಿಶಯ ಕಡಿಮೆ ಆದಾಯ) | ₹0 – ₹1,20,000 | ₹1,20,000 (ಮನೆ ನಿರ್ಮಾಣ/ಖರೀದಿ) |
| LIG (ಕಡಿಮೆ ಆದಾಯ) | ₹1,20,001 – ₹2,40,000 | ₹1,20,000 (ಮನೆ ನಿರ್ಮಾಣ/ಖರೀದಿ) |
ಮುಂದಿನ ಹಂತದಲ್ಲಿ ನಗರ ಪ್ರದೇಶದವರು ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಎಷ್ಟು ಸಬ್ಸಿಡಿ ಸಿಗುತ್ತೆ ತಿಳಿಯುತ್ತಾ ಹೋಗೋಣ ಬನ್ನಿ.
ಪ್ರತಿಯೊಬ್ಬ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲೂ ನಾನು ಒಂದು ಸ್ವಂತವಾಗಿ ಮನೆ ಕಟ್ಟಿಕೊಳ್ಳಬೇಕು ಎನ್ನುವುದರ ಚಿಂತೆ ದಿನನಿತ್ಯ ಕಾಡುತ್ತಲೇ ಇರುತ್ತದೆ 2026ರಲ್ಲಿ ಈ ಚಿಂತೆಗೆ ನೀವು ಗುಡ್ ಬೈ ಹೇಳಲೇಬೇಕು!!..
- ನಗರ ಪ್ರದೇಶದಲ್ಲಿ ಜೀವನವನ್ನು ನಡೆಸುತ್ತಿರುವ ಜನಸಾಮಾನ್ಯರ ವಾರ್ಷಿಕ ಆದಾಯದ ಮೇಲೆ ಈ ಯೋಜನೆಯ ಸಬ್ಸಿಡಿಯು ಸಿದ್ಧವಾಗಿದೆ. ಹಾಗಿದ್ದರೆ ಎಷ್ಟು ಆದಾಯ ಹೊಂದಿರುವ ಕುಟುಂಬವು ಈ ಯೋಜನೆಯ ಲಾಭ ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ ಎನ್ನುವುದರ ಸಂಪೂರ್ಣ ವಿವರವನ್ನು ಈ ಕೆಳಗಿನ ರಚನೆಯ ಮೂಲಕ ತಿಳಿಸಲಾಗಿದೆ.
| ವರ್ಗ (Category) | ವಾರ್ಷಿಕ ಆದಾಯ ಮಿತಿ | ಲಭ್ಯವಿರುವ ಸಬ್ಸಿಡಿ (ಗರಿಷ್ಠ) |
| ಕಡಿಮೆ ಆದಾಯ ವರ್ಗ (LIG) | ₹3 ರಿಂದ ₹6 ಲಕ್ಷ | ₹2.67 ಲಕ್ಷದವರೆಗೆ |
| ಆರ್ಥಿಕವಾಗಿ ದುರ್ಬಲ ವರ್ಗ (EWS) | ₹3 ಲಕ್ಷದವರೆಗೆ | ₹2.67 ಲಕ್ಷದವರೆಗೆ |
| ಮಧ್ಯಮ ಆದಾಯ ವರ್ಗ-1 (MIG-I) | ₹6 ರಿಂದ ₹12 ಲಕ್ಷ | ₹2.35 ಲಕ್ಷದವರೆಗೆ |
| ಮಧ್ಯಮ ಆದಾಯ ವರ್ಗ-2 (MIG-II) | ₹12 ರಿಂದ ₹18 ಲಕ್ಷ | ₹2.30 ಲಕ್ಷದವರೆಗೆ |
“ಸರ್ಕಾರ ಕುಟುಗದ ಮಹಿಳೆಯ ಹೆಸರಿಗೆ ಹೆಚ್ಚಿನ ಆದ್ಯತೆಯನ್ನು ಈ ಯೋಜನೆ ಮೂಲಕ ಕೊಟ್ಟಿರುವುದರಿಂದ ಸಮಾಜದಲ್ಲಿ ಒಬ್ಬ ಸಾಧಾರಣ ಹೆಣ್ಣು ಕೂಡ ಎಲ್ಲರೊಂದಿಗೆ ಸರಿ ಸಮಾನವಾಗಿ ಜೀವನ ನಡೆಸುವುದರ ಜೊತೆಗೆ ಸಮಾಜದಲ್ಲಿ ಮಹಿಳಾ ಸಬಲೀಕರಣಕ್ಕೆ ಸರ್ಕಾರ ನೀಡಿರುವ ಬಹುದೊಡ್ಡ ಕೊಡಿಗೆ ಎಂದರೆ ತಪ್ಪಾಗಲಾರದು”.
ಅರ್ಜಿದಾರರಲ್ಲಿ ಇರಬೇಕಾದ ಪ್ರಮುಖ ಅರ್ಹತೆಗಳು :-
- ಅರ್ಜಿ ಹಾಕುವ ಕುಟುಂಬದಲ್ಲಿ ಪಕ್ಕಾ ಮನೆ ಇರಬಾರದು ಜೊತೆಗೆ ಯಾವುದೇ ಸದಸ್ಯರ ಹೆಸರಲ್ಲಿ ಮನೆ ಇದ್ದಲ್ಲಿ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
- ಈ ಮೇಲೆ ತಿಳಿಸಿರುವ ಆದಾಯದ ಮಿತಿಯಂತೆ ನಿಮ್ಮ ಆದಾಯವು ಇದ್ದಲ್ಲಿ ಈ ಯೋಜನೆಗೆ ಅರ್ಜಿಯನ್ನ ನೀವು ಸಲ್ಲಿಸಬಹುದು. ಆದಾಯ ಹೆಚ್ಚಿಗೆ ಇದ್ದಲ್ಲಿ ನಿಮ್ಮ ಅರ್ಜಿಯನ್ನ ಸರ್ಕಾರ ಕೈಬಿಡುತ್ತದೆ.
- ಇತ್ತೀಚೆಗೆ ಸರ್ಕಾರದಿಂದ ನೀವು ಮನೆ ನಿರ್ಮಾಣಕ್ಕೆ ಸಹಾಯಧನ ಅಥವಾ ಮನೆಯನ್ನ ಸರ್ಕಾರದಿಂದ ನಿಮ್ಮ ಹೆಸರಿಗೆ ಕಳೆದುಕೊಂಡಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
- ನಿಮ್ಮ ಮನೆ ಯಜಮಾನ ಹೆಸರಿನಲ್ಲಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಹೆಚ್ಚಿನ ಲಾಭವನ್ನ ನೀವು ಪಡೆಯುತ್ತೀರಾ ಹಾಗೆ ವಿಧವೆಯರು, ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಹಿಂದುಳಿದ ವರ್ಗದವರಿಗೆ ಈ ಯೋಜನೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ನಮ್ಮಲ್ಲಿ ಇರಬೇಕಾದ ದಾಖಲೆಗಳು ಯಾವುವು ?
- ಆಧಾರ್ ಕಾರ್ಡ್
- ವೋಟರ್ ಐಡಿ ಅಥವಾ ಪಾನ್ ಕಾರ್ಡ್ ಅಥವಾ ಡಿಎಲ್
- ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ
- ಸ್ವಂತ ಮನೆ ಇಲ್ಲದಿರುವುದನ್ನು ಸಾಬೀತುಪಡಿಸುವ ದಾಖಲೆ
- ಜಾತಿ ಪ್ರಮಾಣಪತ್ರ
- ನೀವು ಗ್ರಾಮೀಣ ಭಾಗದ ಅರ್ಜಿದಾರರಾದಾದರೆ ನಿಮ್ಮ ತೋಟ ಜಮೀನಿನ ದಾಖಲಾತಿ ಕೇಳಲಾಗುತ್ತದೆ
- ನಗರ ಭಾಗದ ಅರ್ಜಿದಾರರಾದಾದರೆ ಪ್ಲಾಟ್ ಅಥವಾ ಇತರೆ ಸ್ವಂತ ಜಾಗದ ದಾಖಲಾತಿ ಕೇಳಲಾಗುತ್ತದೆ
- ಮಹಿಳೆ ಅಥವಾ ಪುರುಷರ ಬ್ಯಾಂಕ್ ಖಾತೆಯ ವಿವರ
- ಐ ಎಫ್ ಎಸ್ ಸಿ ಮತ್ತು ಖಾತೆ ಸಂಖ್ಯೆ
- ಅರ್ಜಿ ಸಲ್ಲಿಸಬೇಕೆಂದು ಬಯಸುವ ಸದಸ್ಯರ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಪ್ರತಿ
ಅರ್ಜಿ ಸಲ್ಲಿಸುವ ಪ್ರಮುಖ ವಿಧಾನ :-
ಮೋದಿ ಜಿ ನೇತೃತ್ವದ ಸರ್ಕಾರವು ಸಾಮಾನ್ಯವಾಗಿ ತಮ್ಮ ಮನೆ ನಿರ್ಮಾಣದ ಕನಸನ್ನ ಆದಷ್ಟು ಬೇಗ ನೆರವೇರಿಸಿಕೊಳ್ಳಲು ಆನ್ಲೈನ್ ಹಾಗೆ ಆಫ್ಲೈನ್ ಎರಡೂ ವಿಭಾಗದಲ್ಲೂ ಅರ್ಜಿ ಸಲ್ಲಿಸುವ ಅನುಕೂಲವನ್ನು ಮಾಡಿಕೊಟ್ಟಿದೆ.
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
- ಗ್ರಾಮೀಣ ಭಾಗದವರು ಆಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ ಹಾಗೇನೆ ನಗರ ಭಾಗದ ಅರ್ಜಿದಾರರು ನಗರ ಪ್ರದೇಶದಲ್ಲಿ ಮನೆ ಮತ್ತು ನಗರಾಭಿವೃದ್ಧಿ ಸಂಬಂಧಿತ ಎಲ್ಲಾ ಯೋಜನೆಗಳನ್ನು ನಿರ್ವಹಿಸುವ ಸರ್ಕಾರಿ ಕಚೇರಿ ಗಳಲ್ಲಿ ಅರ್ಜಿ ಸಲ್ಲಿಸಬೇಕಿಹುತ್ತದೆ.
- ಮೊದಲು ಅರ್ಜಿದಾರರು ನೀವು ಗ್ರಾಮೀಣ ಭಾಗದವರಾಗಿದ್ದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಹಾಗೆ ನಗರ ಭಾಗದವರಾದರೆ ನಗರ ಅಥವಾ ಮನೆ ಯೋಜನೆ ಕಚೇರಿಯಲ್ಲಿ ಫಾರಂ ಅನ್ನ PMAY ಫಾರ್ಮ್ ಪಡೆದುಕೊಳ್ಳಿ.
- ನಂತರ ಕುಟುಂಬದ ವಿವರ ಆದಾಯದ ಮಾಹಿತಿ ನೀವು ಯಾರ ಹೆಸರಿನಲ್ಲಿ ಅರ್ಜಿ ಸಲ್ಲಿಸುತ್ತೀರಾ ಅವರ ಹೆಸರು ಜಮೀನಿನ ಅಥವಾ ನೀವು ಇರುವ ಸ್ಥಳದ ವಿವರ ಪಾಸ್ಪೋರ್ಟ್ ಸೈಜ್ ಫೋಟೋ ಯಾವ ವರ್ಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಸರಿಯಾಗಿ ಸೂಚಿಸಬೇಕು.
- ನಂತರ ಅಗತ್ಯ ದಾಖಲೆಗಳು ಅಂದರೆ ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಥವಾ ವೋಟರ್ ಐಡಿ, ಆದಾಯ ಪ್ರಮಾಣ ಪತ್ರ, ಸ್ವಂತ ಮನೆ ಇಲ್ಲದ ದಾಖಲೆ, ಜಮೀನು ಅಥವಾ ಬ್ಯಾಂಕ್ ಖಾತೆ ವಿವರ ಇವೆಲ್ಲವನ್ನೂ ಸರಿಯಾಗಿ ಭರ್ತಿ ಮಾಡಿ ಅರ್ಜಿಯನ್ನ ನಿಮಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ/ನಗರ ಅಥವಾ ಮನೆ ಯೋಜನೆ ಕಚೇರಿ ಸಿಬ್ಬಂದಿಗೆ ಕೊಟ್ಟರೆ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ಅಪ್ಲೋಡ್ ಮಾಡುತ್ತಾರೆ.
- ನೀವು ಸರ್ಕಾರಕ್ಕೆ ಕಳುಹಿಸಿದ ಅರ್ಜಿ ನಮೂನೆಯನ್ನು ಪರಿಶೀಲಿಸಿ ನಂತರ ಕೆಲವೇ ದಿನಗಳಲ್ಲಿ ನಿಮ್ಮ ಹೆಸರಿಗೆ ಮನೆ ನಿರ್ಮಾಣಕ್ಕೆ ಸರ್ಕಾರದ ಮೂಲಕ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯನ್ನು ಮಾಡುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :-
ಆತ್ಮೀಯರೇ ನೀವು ಡಿಜಿಟಲ್ ಪ್ರಕ್ರಿಯೆ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈ ಕೆಳಗಿನ ಹಂತಗಳನ್ನ ಅನುಸರಿಸಬೇಕಾಗುತ್ತದೆ.
- ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ : https://pmaymis.gov.in ಮೇಲೆ ಕ್ಲಿಕ್ ಮಾಡಿ.
- “Citizen Assessment” ಅಥವಾ “New Registration” ಆಯ್ಕೆ ಮಾಡಿ
- ನಂತರದಲ್ಲಿ ಯಾರ ಹೆಸರಿನಲ್ಲಿ ಸಲ್ಲಿಸುತ್ತೀರೋ ಅವರ ಹೆಸರು(ಮಹಿಳಾ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಈ ಯೋಜನೆಯಿಂದ ನೀವು ಹೆಚ್ಚಿನ ಲಾಭವನ್ನ ಪಡೆಯುತ್ತೀರಾ ನೆನಪಿನಲ್ಲಿಡಿ) ವಯಸ್ಸು ಹಾಗೆ ನಿಮ್ಮ ವರ್ಷದ ಆದಾಯದ ವರ್ಗ, ಸ್ಥಳ ಜಮೀನು ಅಥವಾ ಪ್ಲಾಟ್ ವಿವರ ಮತ್ತು ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಹಾಗೆಯೇ ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಸ್ವಂತ ಮನೆ ಇನ್ನು ಇಲ್ಲದಿರುವುದರ ಪ್ರಮಾಣ ಪತ್ರ ಬ್ಯಾಂಕ್ ಖಾತೆ ವಿವರ ಈ ಎಲ್ಲ ದಾಖಲೆಗಳ ಪ್ರತಿಯನ್ನ ಅಪ್ಲೋಡ್ ಮಾಡಬೇಕಾಗುತ್ತದೆ.
- ನೀವು ಭರ್ತಿ ಮಾಡಿದ ಅರ್ಜಿಯು ಸರಿ ಇದೆಯೇ ಎಂದು ಪರಿಶೀಲನೆ ನಡೆಸಿ ನಂತರ ಸಬ್ಮಿಟ್(Submit) ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮಗೆ ಸಿಗುವ (ಪ್ರಧಾನ ಮಂತ್ರ ಅವಾಸ್ ಯೋಜನೆ ಅರ್ಜಿ) ಸಂಖ್ಯೆಯನ್ನು (Application Number) ಬರೆದಿಟ್ಟುಕೊಳ್ಳಿ ಅಥವಾ ಸ್ಕ್ರೀನ್ ಶಾಟ್ ಹೊಡೆದಿಟ್ಟುಕೊಳ್ಳಿ.
| ಪ್ರಮುಖ ಸೂಚನೆ : 2026 ನೇ ಸಾಲಿನಲ್ಲಿ ಪ್ರದಾನ ಮಂತ್ರಿ ಆವಾಸ್ ಯೋಜನೆಯು ಆನ್ಲೈನ್ ಹಾಗೆ ಆಫ್ಲೈನ್ ಅಪ್ಲಿಕೇಶನ್ ಇಂದಿನಿಂದ ಆರಂಭವಾಗಿದ್ದು ಮನೆ ಇಲ್ಲದ ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಸರ್ಕಾರ ನಿಗದಿಪಡಿಸಲಾದ ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿದಲ್ಲಿ ಮಾತ್ರ ನೀವು ಈ ವರ್ಷದಲ್ಲಿ ನಿಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನ ನೇರವೇರಿಸಿಕೊಳ್ಳಬಹುದು. ಇನ್ನು ನೀವು ತಡ ಮಾಡಿದರೆ ಈ ಯೋಜನೆ ನಿಮ್ಮ ಕೈ ತಪ್ಪುವ ಸಾಧ್ಯತೆ ಬಹಳಷ್ಟು ಇವೆ. ಹಾಗೆ ಭಾರತದ ಪ್ರತಿಯೊಂದು ರಾಜ್ಯದಲ್ಲಿರುವ ಜನಸಾಮಾನ್ಯರು ಇಂತಹ ಅನೇಕ ಯೋಜನೆಗಳ ಲಾಭವನ್ನು ಪಡೆಯುವುದರಿಂದ ದೇಶದ ಉತ್ತಮ ಆರ್ಥಿಕತೆಗೆ ಇದು ಒಂದು ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. |
ಸಮಾರೋಪ :-
ಕೇಂದ್ರ ಸರ್ಕಾರದ ಪಿಎಂ ಅವಾಸ್ ಯೋಜನೆ 2026 ಬಡ ಹಾಗು ಮಾಧ್ಯಮ ವರ್ಗದ ಕುಟುಂಬಗಳ ಭವಿಷ್ಯ ಕಟ್ಟುವ ಒಂದು ಮಹತ್ವದ ಸರ್ಕಾರಿ ಯೋಜನೆಯಾಗಿದೆ. ಈ ಮೇಲೆ ತಿಳಿಸಿರುವ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿದುಕೊಂಡಿದ್ದೀರಾ ಎಂದು ನಾನು ಭಾವಿಸುತ್ತೇನೆ. ಹಾಗೆ 2026 ನೇ ವರ್ಷದಲ್ಲಿ ಯಾದರೂ ಈ ಯೋಜನೆಗೆ ಅರ್ಜಿ ಸಲ್ಲಿರುವ ಅಂತಿಮ ದಿನಾಂಕ ಬರುವುದರೊಳಗಾಗಿ ಯೋಜನೆಗೆ ಅರ್ಜಿ ಸಲ್ಲಿಸಿ ಮನೆ ಕಟ್ಟುವ ಕನಸನ್ನ ನನಸಾಗಿಸಿಕೊಳ್ಳಿ.










