Vivo Scholarship :  ₹60,000/- ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ! ಇಂದೇ ಅರ್ಜಿ ಸಲ್ಲಿಸಿ

February 21, 2026 5:03 AM
Vivo Scholarship

ವಿದ್ಯಾಭ್ಯಾಸದ ಕನಸು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರುತ್ತದೆ. ಆದರೆ ಕೆಲವೊಮ್ಮೆ ಎದುರಾಗುವ ಆರ್ಥಿಕ ಸಂಕಷ್ಟಗಳು ಆ ಕನಸಿಗೆ ಅಡ್ಡಗೋಡೆಯಂತಾಗುತ್ತವೆ. ಓದಬೇಕು ಏನಾದರೂ ಸಾಧಿಸಬೇಕು ಎಂಬ ಅತ್ಯುತ್ತಮ ಛಲವಿದ್ದರೂ ಮನೆಯ ಪರಿಸ್ಥಿತಿ ಅಥವಾ ಹಣದ ಕೊರತೆಯಿಂದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನೇ ನುಂಗಿ ಹಾಕಿವೆ ಇಂತಹ ಸಂದರ್ಭದಲ್ಲಿ ಒಂದು ಸಣ್ಣ ಸಹಾಯ ದೊಡ್ಡ ಬದಲಾವಣೆಯನ್ನು ತರಬಹುದು. ಅಂತಹ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಹುರುಪು ಮೂಡಿಸಲು ವಿವೋ ಸಂಸ್ಥೆಯುವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ” ನೀಡಲು ಮುಂದಾಗಿದೆ.

Join WhatsApp

Join Now

Join Telegram

Join Now

Vivo Scholarship In Kannada

ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡಿಯಬೇಕು ದೊಡ್ಡ ಮಟ್ಟಕ್ಕೆ ಎಲ್ಲರಂತೆ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಇರುತ್ತದೆ ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಎಂಬುದು ಸಾಧಾರಣ ಕುಟುಂಬಗಳಿಗೆ ದೂರದ ಬೆಟ್ಟದಂತಾಗಿದೆ ಎಂಬ ಆತಂಕ ಎಲ್ಲರಲ್ಲೂ ಇದೆ. ಶಾಲಾ ಕಾಲೇಜುಗಳಲ್ಲಿ ದಿನದಿಂದ ದಿನ ಏರುತ್ತಿರು ಫೀಸ್, ಪಠ್ಯಪುಸ್ತಕಗಳ ಬೆಲೆ, ಹಾಸ್ಟೆಲ್, ಪಿಜಿ ಹಾಗೆಯೇ ಮನೆಯಿಂದ ಕಾಲೇಜಿಗೆ ತೆರಳುವ ಪ್ರಯಾಣದ ಖರ್ಚು ಇವೆಲ್ಲವೂ ಪೋಷಕರನ್ನ ಕಾಡುವ ಅತಿ ದೊಡ್ಡ ಸಮಸ್ಯೆಯಾಗಿದೆ.

ಗಮನಿಸಿ:- ಇದು ವಿದ್ಯಾರ್ಥಿನಿಯರಿಗೆ ಮಾತ್ರ ಲಭ್ಯ ಈಗಾಗಲೇ ಆನ್ಲೈನ್ ಅರ್ಜಿ ಪ್ರಾರಂಭವಾಗಿದ್ದು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಸ್ಕಾಲರ್ಶಿಪ್ ನಿಮ್ಮದಾಗಿಸಿಕೊಳ್ಳಿ

ವಿದ್ಯಾರ್ಥಿಗಳೇ ನಿಮಗೆ ವಿವೋ (Vivo Scholarship) ಸಂಸ್ಥೆಯು ಸ್ಕಾಲರ್ಶಿಪ್ ಬಗ್ಗೆ ತಿಳಿದಿದೆಯೇ ? ಅಥವಾ ಈ ವಿದ್ಯಾರ್ಥಿ ವೇತನವನ್ನು ಪಡೆದಿದ್ದಿರಾ? ಇಂದಿನ ಕಾಲದಲ್ಲಿ ಅನೇಕ ಮಕ್ಕಳು ಇಂತಹ ಉತ್ತಮ ಅಂಶವನ್ನು ಅರಿಯದೆ ಕೇವಲ ವಿವೋ ಕಂಪನಿಯ ಗ್ರಾಹಕರಿಗೆ ಫೋನ್ ಗಳನ್ನ ಮಾತ್ರ ಮಾರಾಟ ಮಾಡುತ್ತವೆ ಎನ್ನುವ ವಿಷಯವನ್ನ ತಿಳಿದಿರುತ್ತಾರೆ.


ನಿಮ್ಮ ಮನೆಯಲ್ಲಿ ಅಥವಾ ಪರಿಚಯದಲ್ಲಿ ಈಗ ತಾನೇ ಕಾಲೇಜು ಮೆಟ್ಟಲೇರಿರುವ ಹೆಣ್ಣು ಮಕ್ಕಳಿದ್ದರೆ ಈ ಮಾಹಿತಿ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು 2026 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ವಿವೋ ಸಂಸ್ಥೆಯು (Vivo Scholarship) ಹೆಣ್ಣು ಮಕ್ಕಳಿಗಾಗಿ 60,000 ವಿದ್ಯಾರ್ಥಿ ವೇತನ ಕೊಡಲು ಅರ್ಜಿಯನ್ನು ಪ್ರಾರಂಭಿಸಿದೆ

ಹಾಗಾಗಿ ನಮ್ಮ ಮಾಧ್ಯಮ.ನೆಟ್ ವೆಬ್ ಸೈಟ್ ನಲ್ಲಿ ಪೋಷಕರಿಗಾಗಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2025-26ನೇ ವರ್ಷದ “ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ” (Vivo Scholarship) ಆನ್ಲೈನ್ ಅರ್ಜಿ ವಿವೊ ಸಂಸ್ಥೆಯು ಆರಂಭಿಸಿರುವುದರ ಬಗ್ಗೆ ಸಂಪರ್ಣವಾಗಿ ಮಾಗಿತಿಯನ್ನ ತಿಳಿಸಲಾಗಿದೆ.

ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ:-

ವಿವೋ ಕನ್ಯಾಜ್ಞಾನ  (vivo KanyaGyaan Scholarship) ವಿದ್ಯಾರ್ಥಿವೇತನವು ವಿವೋ ಇಂಡಿಯಾದ ಒಂದು ಕಾರ್ಯಕ್ರಮವಾಗಿದ್ದು ಇದು ಸಮಾಜದಲ್ಲಿ ಹಿಂದುಳಿದ ವರ್ಗಗಳಿಂದ ಬರುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣ (STEM)” ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಾರ್ಷಿಕ ರೂ 60,000 ವರೆಗೆ ಆರ್ಥಿಕ ನೆರವು ನೀಡಲು ಈ ಪ್ರೋತ್ಸಾಹ ಧನ ಕೊಡಲು ಮುಂದಾಗಿದೆ. vivo KanyaGyaan ಯೋಜನೆಯು ಭಾರತದಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವಂತದ್ದು.

ಅರ್ಜಿ ಸಲ್ಲಿಸುವ ವಿಧ್ಯರ್ಥಿಗಳು ಪ್ರಸ್ತುತ ಪದವಿ ಮೊದಲ ಅಥವಾ ಎರಡನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು ಮತ್ತು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿಕನಿಷ್ಠವಾದರೂ 70% ಅಂಕಗಳನ್ನು ಗಳಿಸಿರುವುದು ಕಡ್ಡಾಯವಾಗಿರುತ್ತದೆ. ಕುಟುಂಬದ ವಾರ್ಷಿಕ ಆದಾಯವು ಸುಮಾರು 5 ಲಕ್ಷಕ್ಕಿಂತ ಕಡಿಮೆ ಇರಬೇಕು ,. ಆಸಕ್ತರು  ಮಾರ್ಚ್ 3 2026 ಕೊನೆಯ ದಿನಾಂಕವಾಗಿರುತ್ತದೆ. ಆನ್ಲೈನ್ ನಲ್ಲಿ ಅರ್ಜಿಯನ್ನು ಸುಲಭವಾಗಿ ಹಾಕಿಕೊಳ್ಳಬಹುದು.

ಸಹಾಯಧನದ ಕಿರುನೋಟ:-

ವಿವರಗಳು (Particulars) ಮಾಹಿತಿ ( Vivo Scholarship Details)
ಯೋಜನೆಯ ಹೆಸರುವಿವೋ ಕನ್ಯಾಜ್ಞಾನ ವಿದ್ಯಾರ್ಥಿವೇತನ 2025-26Vivo Scholarship)
ಪೂರೈಕೆದಾರರ ವಿವರವಿವೋ ಇಂಡಿಯಾ (CSR ಉಪಕ್ರಮ)
ವಿದ್ಯಾರ್ಥಿವೇತನ ಮೊತ್ತವರ್ಷಕ್ಕೆ ₹60,000 (ಗರಿಷ್ಠ 3 ವರ್ಷಗಳವರೆಗೆ)
ಅರ್ಹ ಕೋರ್ಸ್‌ಗಳುSTEM ಪದವಿ (B.E., B.Tech, B.Sc, BCA, ಇತ್ಯಾದಿ)
ಶೈಕ್ಷಣಿಕ ಅರ್ಹತೆ10ನೇ, 12ನೇ ಮತ್ತು ಹಿಂದಿನ ಸೆಮಿಸ್ಟರ್‌ನಲ್ಲಿ ಕನಿಷ್ಠ 70% ಅಂಕ
ಆದಾಯ ಮಿತಿಕುಟುಂಬದ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು
ಯಾರಿಗೆ ಆದ್ಯತೆ?ಸರ್ಕಾರಿ ಮತ್ತು NIRF ಶ್ರೇಯಾಂಕಿತ ಕಾಲೇಜುಗಳ ವಿದ್ಯಾರ್ಥಿನಿಯರು ಅರ್ಹರು
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್
ಕೊನೆಯ ದಿನಾಂಕಮಾರ್ಚ್ 3, 2026

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿವೋ ಸಂಸ್ಥೆಯ ಕೊಡುಗೆ:-

ವಿವೊ ಸಂಸ್ಥೆಯು (Vivo Scholarship)ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಂದುವರಿಸಲು ಸಹಾಯ ಮಾಡಲು ಗಮನ ಹರಿಸುತ್ತಿದೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ 10,000 ದಿಂದ 60,000ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ದಿಟ್ಟ ಹೆಜ್ಜೆನಿಟ್ಟಿ.

ಯೋಜನೆಯ ಉದ್ದೇಶ ಮತ್ತು ವೈಶಿಷ್ಟ್ಯತೆ:-

1.ಸಮಾನ ಶಿಕ್ಷಣದ ಅವಕಾಶ ಒದಗಿಸುವುದು:-

  • ಉನ್ನತ ಶಿಕ್ಷಣದಲ್ಲಿ ಅಂದರೆ ವಿಶೇಷವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ಬೆಳೆಯುವಂತೆ ಮಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ.

2.ಆರ್ಥಿಕ ಅಡೆತಡೆಗಳು:-

  • ಬಡತನವೆಂಬ ಕಾರಣದಿಂದ ಅನೇಕ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದೋ ಒಂದು ಉದ್ಯೋಗವನ್ನ ಹಿಡಿದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನ ನಿಲ್ಲಿಸಿ ವಿದ್ಯಾರ್ಥಿಗಳನ್ನ ಶಿಕ್ಷಣದತ್ತ ಕೊಂಡೊಯ್ಯಲು ಸುಮಾರು 60,000 ದವರೆಗೆ Vivo Scholarship ನೀಡಲು ವಿವೊ ಕಂಪನಿಯು ಮುಂದೆ ಬಂದಿದೆ.

3.ಉದ್ಯೋಗಕ್ಕಾಗಿ ಸಿದ್ಧತೆ:-

  • ಈ ವಿದ್ಯಾರ್ಥಿ (Vivo Scholarship) ವೇತನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಆರ್ಥಿಕ ನೆರವನ್ನು ನೀಡುವುದು ಮಾತ್ರವಲ್ಲದೆ ಉದ್ಯಮ ತಜ್ಞರಿಂದ ತರಬೇತಿ ಹಾಗೂ ಡಿಜಿಟಲ್ ಜಗತ್ತಿಗೆ ಅಗತ್ಯವಾದ ಕೌಶಲ್ಯವನ್ನು ಸಹ ಇದು ಕಲಿಸುತ್ತದೆ.

4.ಮಹಿಳಾ ಸಬಲೀಕರಣಕ್ಕೆ ಉತ್ತೇಜನ:-

  • ಇಂದಿನ ಹೆಣ್ಣುಮಕ್ಕಳು ಕೇವಲ ಹಣದ ಸಮಸ್ಯೆಯಿಂದ ಪಿಯುಸಿ, ಪದವಿ ಮುಗಿಸಿ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಕೈ ಸಲ್ಲುತ್ತಾರೆ. ಅವರನ್ನು ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಿ ಹಾಗೆ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಅಷ್ಟೇ ಅಲ್ಲದೆ ಸಮಾಜದಲ್ಲಿ ಒಬ್ಬ ಉತ್ತಮ ನಾಯಕಿಯರನ್ನಾಗಿ ರೂಪಿಸುವ ಉದ್ದೇಶವನ್ನು ಒಳಗೊಂಡಿದೆ.
ವಿಶೇಷ ಸೂಚನೆ :- ನನ್ನ ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ

ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್(Vivo Scholarship) ಮೊತ್ತ:-

  • ಹತ್ತನೇ ಮತ್ತು Second PUC ವಿದ್ಯಾರ್ಥಿಗಳು:- ₹10,000/- ರದವರೆಗೆ
  • ಡಿಪ್ಲೋಮೋ ಕೋರ್ಸ್ ಗಳ ವಿದ್ಯಾರ್ಥಿಗಳು:- ₹20,000
  • ಪದವಿಕೋರ್ಸ್ ಗಳ ವಿದ್ಯಾರ್ಥಿಗಳು(BA BSc BCom) :- ₹30,000
  • ಪ್ರೊಫೆಷನಲ್ ಕೋರ್ಸ್ ಗಳ ವಿದ್ಯಾರ್ಥಿಗಳು:- ₹60,000

ವಿವೋ ಕನ್ಯಾಜ್ಞಾನ ವಿದ್ಯಾರ್ಥಿವೇತನ ಯಾರಿಗೆಲ್ಲ ಸಿಗುತ್ತದೆ:-

  • ಈ ವಿದ್ಯಾರ್ಥಿ(Vivo Scholarship) ವೇತನವು ಕೇವಲ ಭಾರತದ ಯುವತಿಯರಿಗೆ ಮಾತ್ರ ಸಿಗುತ್ತದೆ
  • ಸರ್ಕಾರೀ ಕಾಲೇಜು ಅಥವಾ National Institutional Ranking Framework (NIRF) ಸಂಸ್ಥೆಯಲ್ಲಿ ಓದುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ.
  • ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಮೊದಲು ಅಥವಾ ಎರಡನೇ ವರ್ಷದ STEM ಪದವಿಗಳನ್ನು ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುವುದಿಲ್ಲ.
  • ಈ ಕೆಳಗೆ ಕೊಡಲಾದ ಅರ್ಹತೆಗಳು ನಿಮ್ಮಲ್ಲಿ ಇದ್ದಲ್ಲಿ ಮಾತ್ರ ಈ ಒಂದು ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಸಲ್ಲಿಸಿ.
  • ಪ್ರಸ್ತುತ ಬಿ.ಇ, ಬಿ.ಟೆಕ್, ಬಿ.ಎಸ್ಸಿ, ಬಿ.ಸಿ.ಎ, ಇತ್ಯಾದಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ
  • SSLC Second PUC ಮತ್ತು ಹಿಂದಿನ ಎಲ್ಲಾ ಸೆಮಿಸ್ಟರ್ನಲ್ಲಿ ಕನಿಷ್ಠ 70% ಅಂಕವನ್ನ ಕಡ್ಡಾಯವಾಗಿ ವಿದ್ಯಾರ್ಥಿನಿ ಹೊಂದಿರಲೇಬೇಕು.
  • ಕುಟುಂಬದ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಥಿಗಳಿಗಾಗುವ ಪ್ರಯೋಜನಗಳು:-

ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಸಿಗುವ ಆರ್ಥಿಕ ಸಹಾಯವು ಅವರ ಶಿಕ್ಷಣದ ಭಾರವನ್ನು ಗಣನೀಯವಾಗಿ ಇಳಿಸುತ್ತದೆ.

  • ವಾರ್ಷಿಕ ಮೊತ್ತ:- ₹60,000 ದಂತೆ ಮೂರು ವರ್ಷಗಳ ಕಾಲ ಒಬ್ಬ ವಿದ್ಯಾರ್ಥಿನಿಗೆ ಒಟ್ಟು ರೂ.1,80,000/- ವರೆಗೂ ಸಹಾಯಧನ (Vivo Scholarship)ಸಿಗುತ್ತದೆ. ಇದು ವಿದ್ಯಾರ್ಥಿಗಳ ಪುಸ್ತಕ ಫೀಸ್ ಸಾರಿಗೆ ವೆಚ್ಚಗಳಿಗೆ ನೆರವಾಗಿ ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ
  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೂ ಸಹ ಬಲಿಷ್ಠವಾದ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬೇಕಾದ ನೆಟ್ವರ್ಕಿಂಗ್ ಮತ್ತು ತರಬೇತಿ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ.
  • ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಹ:– ವಿದ್ಯಾರ್ಥಿಗಳು ಹಣದ ಕೊರತೆಯಿಂದ ಓದು ನಿಲ್ಲಿಸುವ ಪರಿಸ್ಥಿತಿಯನ್ನು ತಪ್ಪಿಸಿ ಉನ್ನತ ಶಿಕ್ಷಣವನ್ನು ಪಡೆಯಲು ಉತ್ತೇಜನ ಸಿಗುತ್ತದೆ ವಿದ್ಯಾರ್ಥಿಗಳೇ ನಿಮ್ಮ ನೀವು ಶಿಕ್ಷಣದ ಬಗ್ಗೆ ಕಂಡ ಕನಸನ್ನ ನೆರವೇರಿಸಿಕೊಳ್ಳಬಹುದು.
  • ತರಬೇತಿ:- ಕನ್ಯಾಜ್ಞಾನ ವಿದ್ಯಾರ್ಥಿ ವೇತನವು ಕೇವಲ ಹಣವಷ್ಟೇ ನೀಡುವುದಿಲ್ಲ. ಒಂದು ಉದ್ಯಮದ ಬಗ್ಗೆ ತಜ್ಞರಿಂದ ಮಾರ್ಗದರ್ಶನವನ್ನು ನೀಡುತ್ತದೆ. ಇದರಿಂದ ವಿದ್ಯಾರ್ಥಿನಿಯರ ಆಧುನಿಕ ವೃತ್ತಿ ಜೀವನಕ್ಕೆ ಬೇಕಾಗುವ ಕೌಶಲ್ಯಗಳನ್ನೆಲ್ಲಪಡೆದುಕೊಳ್ಳಬಹುದು

ಯಾವ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:-

ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಯಿಂದ ವಿವೊ ಸಂಸ್ಥೆ ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ (Vivo Scholarship)ನೀಡಲು ಮುಂದಾಗಿದೆ. ವಿದ್ಯಾರ್ಥಿನಿಯರು ತಮ್ಮ ವ್ಯಾಸಂಗಕ್ಕೆ ಬೇಕಾದ ಆರ್ಥಿಕ ಬೆಂಬಲವನ್ನು ಪಡೆಯುವ ಮೂಲಕ ತಮ್ಮ ಕುಟುಂಬದ ಹಾಗೂ ಸಮಾಜದ ಏಳಿಗೆಗೆ ಕಾರಣವಾಗಲಿ ಎಂಬುದು ಈ ಯೋಜನೆಯ ಆಶಯವಾಗಿದೆ.

  • ಕರ್ನಾಟಕ
  • ಮಹಾರಾಷ್ಟ್ರ
  • ತಮಿಳುನಾಡು
  • ಆಂಧ್ರಪ್ರದೇಶ
  • ತೆಲಂಗಾಣ
  • ಕೇರಳ
  • ದೆಹಲಿ ಇತ್ಯಾದಿ ರಾಜ್ಯಗಳು

ವಿವೋ ಇಂಡಿಯಾ ತನ್ನ vivo For Education ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಅಧಿಕೃತವಾಗಿ ಅಗಸ್ಟ್ 16, 2018 ರಂದು ಆರಂಭಿಸಿತು. ಇದು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಮಾರ್ಟ್ಫೋನ್ ವಿತರಣೆಯ ಮೂಲಕ ಆರಂಭವಾಗಿ ನಂತರ ಹಣಕಾಸಿನ ನೆರವು ನೀಡಲು ಶುರು ಮಾಡಿತು.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:-

  • ಅರ್ಜಿ ಸಲ್ಲಿಸುವ ರೈತರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.
  • ನಂತರ, ಅಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
  • ನಂತರ, ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.

ಈ ವಿದ್ಯಾರ್ಥಿ ವೇತನ ಪಡೆಯಲು ನಿಮಲ್ಲಿ ಇರಬೇಕಾದ ದಾಖಲೆಗಳು(Documents) :-

  1. ಪ್ರವೇಶ ದೃಢೀಕರಣ (ID ಕಾರ್ಡ್ / ಪ್ರವೇಶ ಪತ್ರ)
  2. ಇತ್ತೀಚಿನ ಅಂಕಪಟ್ಟಿ
  3. ಪಾಸ್‌ಪೋರ್ಟ್ ಗಾತ್ರದ ಫೋಟೋ
  4. ಪೋಷಕರ ಆದಾಯ ಪ್ರಮಾಣಪತ್ರ
  5. ಸರ್ಕಾರಿ ಗುರುತಿನ ಚೀಟಿ
  6. ನಾಯಕತ್ವ ಪ್ರಮಾಣಪತ್ರ (ಅಗತ್ಯವಿದ್ದರೆ)
  7. ಬ್ಯಾಂಕ್ ಪಾಸ್‌ಬುಕ್ ಅಥವಾ ರದ್ದಾದ ಚೆಕ್
  8. ಕ್ರೀಡಾ ಪ್ರಮಾಣಪತ್ರ (ಅಗತ್ಯವಿದ್ದರೆ)
  9. ಪೂರ್ಣ ಶುಲ್ಕ ವಿವರ
  10. ಸ್ವಯಂ ದೃಢೀಕರಣ ಘೋಷಣೆ
  11. ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  12. ಅಂಗವೈಕಲ್ಯ ಪ್ರಮಾಣಪತ್ರ (ಅಗತ್ಯವಿದ್ದರೆ)
  13. ಮೊದಲ ತಲೆಮಾರಿನ ಕಲಿಯುವವರ ಘೋಷಣೆ (ಅಗತ್ಯವಿದ್ದರೆ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-

ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ಮೆತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಕೆಳಗೆ ಕೊಡಲಾದ ಕೊನೆಯ ದಿನಾಂಕದ ವಿವರವನ್ನು ತಿಳಿಯಿರಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಮಾರ್ಚ್ 3, 2026

ಅರ್ಜಿ ಸಲ್ಲಿಸುವ ವಿಧಾನ :-

  • ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ ಪಡೆಯಲು ಅಧಿಕೃತ Buddy4Study ವಿದ್ಯಾರ್ಥಿವೇತನ ಪೋರ್ಟಲ್‌ಗೆ ಮೊದಲು ಭೇಟಿ ನೀಡಿ.
  • ಇಮೇಲ್/ಮೊಬೈಲ್/ಗೂಗಲ್ ಖಾತೆಯನ್ನು ಬಳಸಿಕೊಂಡು ಲಾಗಿನ್ ಮಾಡಿ (ಹೊಸ ಬಳಕೆದಾರರು ಸೈನ್ ಅಪ್ ಮಾಡಬೇಕು).
  • ವಿದ್ಯಾರ್ಥಿ ವೇತನ ಪಟ್ಟಿಯಲ್ಲಿ ವಿವೋ ಕನ್ಯಾಜ್ಞಾನ ವಿದ್ಯಾರ್ಥಿವೇತನ 2025-26 ಅರ್ಜಿ ನಮೂನೆಯನ್ನು ಪ್ರಾರಂಭಿಸಿ.
  • ಅರ್ಜಿ ಫಾರ್ಮ್ ನಲ್ಲಿ ವೈಯಕ್ತಿಕ ಮಾಹಿತಿ ಶಿಕ್ಷಣದ ವಿವರ ಕಾಲೇಜಿನ ವಿವರ ಆದಾಯದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  • ಗತ್ಯ ದಾಖಲೆಗಳಾದ ಆಧಾರ್ ಕಾರ್ಡ್ ಮಾರ್ಕ್ಸ್ ಕಾರ್ಡ್ ಅಡ್ಮಿಶನ್ ಲೆಟರ್ ಆದಾಯ ಪ್ರಮಾಣ ಪತ್ರ ಬ್ಯಾಂಕ್ ವಿವರವನ್ನು ಅಪ್ಲೋಡ್ ಮಾಡಿ
  • ನೀವು ಭರ್ತಿ ಮಾಡಲಾದ ಅಪ್ಲಿಕೇಶನ್ ಸರಿ ಇದೆಯೇ ನೋಡಿ.
  • ತಪ್ಪದೆ 3 ಮಾರ್ಚ್ 2026 ರ ಮೊದಲು ಸಲ್ಲಿಸಿ .
  • ಉಲ್ಲೇಖಕ್ಕಾಗಿ ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿ.
  • ಅಂತಿಮ ದಿನಾಂಕ ಮುಗಿದ ಮೇಲೆ ನೀವು ಅರ್ಜಿ ಸಲ್ಲಿಸಲು ಮುಂದಾದರೆ ಅರ್ಜಿ ರಿಜೆಕ್ಟ್ ಆಗುತ್ತದೆ.

ಕೊನೆಯ ಮಾತು:-

ಆರ್ಥಿಕವಾಗಿ ದುರ್ಬಲವಾಗಿರುವ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ದೃಷಿಯಿಂದ ವಿವೋ ಸಂಸ್ಥೆಯುವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ” ನೀಡಲು ಮುಂದಾಗಿದೆ. ವಿವೋ  ಈ ಕಂಪನಿಯು ಚೀನಾದಾಗಿದ್ದರು ಸಹ ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ ನಿರ್ಧಾರವನ್ನು ಈ ಬಾರಿಯೂ ಮಾಡಿದೆ. ಈ ವಿದ್ಯಾರ್ಥಿ ವೇತನ ನೀಡಲು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆ ಅಥವಾ ಸಂದರ್ಶನ ನಡೆಸಲಾಗುತ್ತದೆ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ದೊಳಗೆ ಅರ್ಜಿ ಸಲ್ಲಿಸಿ ಹಣದ ಲಾಭವನ್ನು ಪಡೆಯಿರಿ.

ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು:-

ಉತ್ತರ :- ಆರ್ಥಿಕವಾಗಿ ಹಿಂದುಳಿದ ಮತ್ತು ಪಿಯುಸಿಡಿಪ್ಲೋಮಾ ಡಿಗ್ರಿ ಅಥವಾ ಪ್ರೊಫೆಷನಲ್ ಕೋರ್ಸ್ ಓದುತ್ತಿರುವ ಹೆಣ್ಣು ಮಕ್ಕಳಿಗೆ ಸಿಗುತ್ತದೆ

ಈ ಸ್ಕ್ಲಾರ್ಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 3, 2026

ಉತ್ತರ :- ನೀವು ಸಲ್ಲಿಸಿದ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ನಡೆದ ನಂತರವೇ ಅರ್ಹ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ನ ಮೊತ್ತ ಸಿಗುತ್ತದೆ

ಇತರೆ ಯೋಜನೆಯ ಲಿಂಕುಗಳು :-

ಕುರಿ ಸಾಕಾಣಿಕೆ ಮತ್ತು ಶೆಡ್ ನಿರ್ಮಾಣಕ್ಕೆ 2 ಲಕ್ಷ ಸಹಾಯಧನ! ಕರ್ನಾಟಕ ಸರ್ಕಾರದ ಭರ್ಜರಿ ಕೊಡುಗೆ

PM Vishwakarma : ₹15,000 ಸಹಾಯಧನ! ಪಿಎಂ ವಿಶ್ವಕರ್ಮ ಟೈಲರಿಂಗ್ ಮಷಿನ್ ಸ್ಕೀಮ್ ! ಭರ್ಜರಿ ಆನ್ಲೈನ್ ಅಪ್ಲಿಕೇಶನ್ !

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment