ಸರ್ಕಾರವು ಬಡವರಿಗೆ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಅನುಕೂಲ ವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಸೌಲಭ್ಯ ಪಡೆದುಕೊಂಡಿದ್ದಾರೆ ಅದೇ ನಿಟ್ಟಿನಲ್ಲಿ ಸರ್ಕಾರ 2026ರ ಸಾಲಿನಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಹಾಗು ಮೇಕೆ ಶೇಡ್ ನಿರ್ಮಾಣಕ್ಕೆ ಭರ್ಜರಿ ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಿದೆ. ರೈತರು ತಮ್ಮ ಹತ್ತಿರದ ಪಶು ಪಾಲನಾ ಕಚೇರಿಗೆ ಗ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಸರ್ಕಾರವು ನಿಗದಿಪಡಿಸಿದ ಅಂತಿಮ ದಿನದೊಳಗಾಗಿ ಅರ್ಜಿಯನ್ನ ಸಲ್ಲಿಸಿದರೆ ಮಾತ್ರ ₹2,0,000/-ವರೆಗೆ ಸಹಾಯಧನ ಪಡೆಯಬಹುದು.
ಬದುಕಿನಲ್ಲಿ ಏನಾದರೂ ಸಾಧಿಸಬೇಕು ಸ್ವಂತವಾಗಿ ಕಾಲು ಮೇಲೆ ನಿಲ್ಲಬೇಕು ಯಾವುದಾದರು ಒಂದು ಉದ್ಯೋಗವನ್ನು ಮಾಡಿ ನಮ್ಮ ಕುಟುಂಬದವರನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಷ್ಟೋ ಜನರ ಕನಸಾಗಿರುತ್ತದೆ. ಆದರೆ ಬಂಡವಾಳ ಎಲ್ಲಿದೆ ಎಂಬ ಒಂದೇ ಒಂದು ಪ್ರಶ್ನೆ ನಮ್ಮ ಕನಸನ್ನೇ ಕಮರುವಂತೆ ಮಾಡುತ್ತವೆ. ಮಧ್ಯಮ ವರ್ಗದವರಾಗಿ ಹುಟ್ಟಿದ ಮೇಲೆ ಸಾಲ ಕುಟುಂಬದ ಜವಾಬ್ದಾರಿ ಅಕ್ಕ-ತಂಗಿಯರಿದ್ದಾರೆ ಅವರ ಮದುವೆ ಹಲವು ಯೋಚನೆಗಳು ದಿಕ್ಕು ತೋಚದಂತೆ ಮಾಡುತ್ತವೆ.
ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ:-
ಕರ್ನಾಟಕದ ಗ್ರಾಮೀಣ ಆರ್ಥಿಕತೆಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಪ್ರಮುಖ ಪಾತ್ರ ವಹಿಸುತ್ತದೆ ಹಳ್ಳಿಗಳಲ್ಲಿ ವಾಸಿಸುವ ಸಾವಿರಾರು ಕುಟುಂಬಗಳಿಗೆ ಕುರಿ ಸಾಕಾಣಿಕೆಗೆ ಕೇವಲ ಒಂದು ಉದ್ಯೋಗವಲ್ಲ ಬದಲಿಗೆ ಆದಾಯ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ವಿಶ್ವಾಸಾರ್ಹ ಮೂಲವಾಗಿದೆ. ರೈತರು ವರ್ಷ ವರ್ಷ ಅನಿರೀಕ್ಷಿತವಾಗಿ ಬದಲಾಗುತ್ತಿರುವ ಹವಾಮಾನ ಹೆಚ್ಚುತ್ತಿರುವ ನಿರ್ಮಾಣ ಮತ್ತು ನಿರ್ವಹಣಾ ವೆಚ್ಚಗಳು ಸರಿಯಾದ ಪ್ರಾಣಿ ಆಶ್ರಯ ಕೊರತೆ ಮತ್ತು ರೈತರು ವರ್ಷ ದಿಂದ ವರ್ಷಕ್ಕೆ ಅನಿರೀಕ್ಷಿತವಾಗಿ ಬದಲಾಗುತ್ತಿರುವ ಹವಾಮಾನ ಹೆಚ್ಚುತ್ತಿರುವ ನಿರ್ಮಾಣ ಮತ್ತು ನಿರ್ವಹಣಾ ವೆಚ್ಚಗಳು ಪ್ರಾಣಿ ಆಶ್ರಯ ಕೊರತೆ ಮತ್ತು ರೋಗಗಳ ಅಪಾಯ ಹೆಚ್ಚಾಗುವಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಇದನ್ನೆಲ್ಲಾ ಗಮನಿಸಿದ ಸರ್ಕಾರ ನಿಮ್ಮ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ನೀಡುತ್ತಿರುವ ಒಂದು ಭದ್ರ ಬುನಾದಿಯಾಗಿದೆ.ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಪ್ರದೇಶಕ್ಕೆ ಕಾಲಿಟ್ಟರೆ ಪ್ರತಿಯೊಬ್ಬರ ಮನೆಯಲ್ಲಿ ಕೊಟ್ಟಿಗೆಗಳು, ದನ – ಕರು, ಎಮ್ಮೆ, ಕೋಳಿ, ಹೀಗೆ ಎಲ್ಲಾ ರೀತಿಯ ಸಾಕು ಪ್ರಾಣಿಗಳು ಇರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಎನ್ನುವುದು ಕಣ್ಮರೆಯಾಗುತ್ತಿದೆ.ಇದನ್ನು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಕ್ರಮ ಎನ್ನಬಹುದು.
ಈ ಯೋಜನೆಯ ಪ್ರಮುಖ ವಿವರಗಳು:-
| ಯೋಜನೆ ಹೆಸರು | ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಹಾಯಧನ |
| ಫಲಾನುಭವಿಗಳು | ರೈತರು ಬಿಪಿಎಲ್ ಕಾರ್ಡ್ ಕುಟುಂಬದವರು ಮಹಿಳೆಯರು |
| ಸಹಾಯಧನ | 50% ರಿಂದ 75% |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ ಮೂಲಕ |
ಯೋಜನೆಯ ಬಗ್ಗೆ ಕಿರು ಪರಿಚಯ :-
ಕರ್ನಾಟಕವು ಭಾರತದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಪ್ರಮುಖ ರಾಜ್ಯವಾಗಿದೆ. ಗ್ರಾಮೀಣ ಕುಟುಂಬಗಳ ದೊಡ್ಡ ಜನಸಂಖ್ಯೆ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ದೈನಂದಿನ ಆದಾಯಕ್ಕಾಗಿ ಜಾನುವಾರುಗಳನ್ನು ಅವಲಂಬಿಸಿರುತ್ತಾರೆ. ಸಾಂಪ್ರದಾಯಿಕವಾಗಿ ತೆರೆದ ಕೊಟ್ಟಿಗೆಗಳು ಮತ್ತು ತಾತ್ಕಾಲಿಕ ಗುಡಿಸಲುಗಳು ಗಾಳಿ, ಮಳೆ, ಮತ್ತು ಪ್ರಾಣಿಗಳಿಗೆ ಬರುವ ರೋಗಗಳ ವಿರುದ್ಧ ರಕ್ಷಣೆ ನೀಡುವಲ್ಲಿ ವಿಫಲವಾಗುತ್ತವೆ.
ನಮ್ಮ ಕೇಂದ್ರ ಸರ್ಕಾರವು ಇದನ್ನು ಅರಿತುಕೊಂಡು ಕುರಿ ಮತ್ತು ಮೇಕೆ ಶೆಡ್ ಯೋಜನೆಯನ್ನು ವಿನ್ಯಾಸಗೊಳಿಸಿತು. ರೈತರು ಕೇವಲ ಕೃಷಿಯ ಮೇಲೆ ಮಾತ್ರ ಅವಲಂಬಿತರಾಗದೆ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಉತ್ತಮ ಆದಾಯವನ್ನು ಗಳಿಸಿ ಕುಟುಂಬವನ್ನು ಅಭಿವೃದ್ಧಿಪಡಿಸಲಿ ಎಂಬ ಗುರಿಯನ್ನು ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ
ಮುಖ್ಯವಾಗಿ ಗಮನಿಸಿ : ರೈತ ಮಿತ್ರರೇ ,,, ಕರ್ನಾಟಕ ಸರ್ಕಾರ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ ಆದರೆ ಈ ಯೋಜನೆಯು ಮೇಕೆ ಶೆಡ್ ಕುರಿ ಅಥವಾ ಮೇಕೆ ಸಾಕಾಣಿಕೆಯ ಬಗ್ಗೆ ಮಾತ್ರ ತಿಳಿಸಿಕೊಡುತ್ತದೆ.
ಸಾಲದ ಸುಳಿಯಿಂದ ಹೊರಬರಲು ಇದೊಂದು ಸಿಹಿ ಸುದ್ದಿ:-
ರೈತರು ದೇಶದ ಬೆನ್ನೆಲುಬು ಆದರೆ ರೈತರು ಅಜ್ಜ ಅಜ್ಜಿ ತಂದೆ ತಾಯಿ ಸಾಂಪ್ರದಾಯಕವಾಗಿ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಳೆ ಕೈ ಕೊಟ್ಟರೆ ಬೆಳೆ ಇಲ್ಲ ಹೆಂಗೋ ನೀರು ಸರಿಯಾಗಿ ಹಾಯಿಸಿ ಕಷ್ಟಪಟ್ಟು ಬೆಳೆ ಬಂದರು ಮಧ್ಯವರ್ತಿಗಳ ಕಾಟದಿಂದಾಗಿ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ಇವುಗಳ ನಡುವೆ ರೈತರ ಕಷ್ಟ ಹೇಳತೀರದು ರೈತ ಲಾಭದ ನಿರೀಕ್ಷೆಯಲ್ಲಿ ಬೆಳೆಬೆಳೆಯಲು ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುತ್ತಾನೆ.
ಇದನ್ನು ಮನ ಗಂಡ ಸರ್ಕಾರ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ಕೇವಲ ಕೃಷಿ ಒಂದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಹೈನುಗಾರಿಕೆಯಲ್ಲಿ. ತೊಡಗಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೆ ತಂದು ಬಡ ರೈತರನ್ನು ಪ್ರೊತ್ಸಯಿಸುವ ಮೂಲಕ ಆದಾಯವನ್ನು ಹೆಚ್ಚಿಸಿ ಸಾಲದಿಂದ ಮುಕ್ತಿಕೊಡಿಸುವ ಹಂಬಲ ಸರ್ಕಾರದ್ದು .
ಈ ಯೋಜನೆಯಿಂದ ಸಿಗುವ ಲಾಭಗಳು:-
ಹೊಸದಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಶುರು ಮಾಡಲು ಕುರಿಗಳನ್ನು ಎಲ್ಲಿಂದ ತರುವುದು? ಅವುಗಳಿಗೆ ಆಹಾರದ ವ್ಯವಸ್ಥೆ ಹೇಗೆ? ಅವುಗಳಿಗೆ ಶೆಡ್ ಗಳ ವ್ಯವಸ್ಥೆ ಹೇಗೆ?ಸಾಮಾನ್ಯವಾಗಿ ಈ ಚಿಂತೆ ಎಲ್ಲರಿಗೂ ಇರುತ್ತದೆ ಆದರೆ ಪಶು ಪಾಲನ ಇಲಾಖೆಯಿಂದ ಕೆಲವು ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ ಎಂದು, ಒಂದೊಂದಾಗಿ ನೋಡುತ್ತಾ ಹೋಗೋಣ
1. ಕುರಿ ಮತ್ತು ಮೇಕೆ ಖರೀದಿಗೆ ಸಹಾಯ:
- ಪ್ರತಿ ಕುರಿಯ ಬೆಲೆ:- 5,000 ದಿಂದ 10,000
- ಪ್ರತಿಯೊಬ್ಬ ಫಲಾನುಭವಿಗೆ :-10 ರಿಂದ 20 ಕುರಿಗಳು ಸಿಗುತ್ತವೆ
- ಸರ್ಕಾರದ ಸಬ್ಸಿಡಿ :-60%
2.ಶೆಡ್ ನಿರ್ಮಾಣಕ್ಕೆ ಸಹಾಯಧನ:-
- 1,00,000 ದಿಂದ 1,50,000 ಲಕ್ಷದ ಸಹಾಯಧನ
- ಸಬ್ಸಿಡಿ 50%
3.ಆಹಾರ ಮತ್ತು ವೈದ್ಯಕೀಯ ಸೇವೆ:-
- ಮೊದಲು 6 ತಿಂಗಳ ಆಹಾರಕ್ಕೆ ಸಹಾಯ
- ನಿಯಮಿತ ವ್ಯಾಕ್ಸಿನೇಷನ್ ಮತ್ತು ಚಿಕಿತ್ಸೆ ಉಚಿತ
ಯಾವ ವರ್ಗದವರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ:-
| ವರ್ಗ | ಸಬ್ಸಿಡಿ ಪ್ರಮಾಣ |
| ಸಾಮಾನ್ಯ ವರ್ಗ | 40% ದಿಂದ 50% ವರೆಗೆ |
| SC/ST | 75% |
| OBC/CAT-1 | 50% |
| ಮಹಿಳೆಯರು ಮತ್ತು ಅಂಗವಿಕಲರು | 80% |
ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು:-
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಮೀಣ ಭಾಗಕ್ಕೆ ಒಳಪಟ್ಟಿರಬೇಕು
- ಗ್ರಾಮೀಣ ಪ್ರದೇಶದ ವಾಸಿಯಾಗಿರಬೇಕು
- ರೈತರು ಕೃಷಿಕರು ಕೃಷಿ ಕಾರ್ಮಿಕರು ಸ್ವಯಂ ಉದ್ಯೋಗ ಮಾಡಲು ಬಯಸುವವರು
- ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯವಿರುವುದಿಲ್ಲ
- ಕುರಿ ಅಥವಾ ಮೇಕೆ ಸಾಕಾಣಿಕೆ ಆರಂಭಿಸಲು ಆಸಕ್ತಿ ಹೊಂದಿರಬೇಕು
- ಕಡ್ಡಾಯವಾಗಿ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು
- ನೀವು ಅನೇಕ ಬಾರಿ ಅರ್ಜಿ ಸಲ್ಲಿಸಿದರು ಸರ್ಕಾರದಿಂದ ಕೊಟ್ಟಿಗೆ ನಿರ್ಮಾಣಕ್ಕೆ ಇನ್ನು ಸಹಾಯಧನ ನೀಡಿಲ್ಲ ಯಾಕೆ ? “ಎನ್ನುವ ನಿಮ್ಮ ಪ್ರಶ್ನೆಗೆ ನಿಮ್ಮ ಗೊಂದಲಕ್ಕೆ ನಾನು ತಿಳಿಸುವುದು ಪಿಡಿಓ ಅಥವಾ ಜಿಪಿ ಸಭೆಯಲ್ಲಿ ನಿಮ್ಮ ಅರ್ಜಿಯು ಮಂಜೂರು ಆದಲ್ಲಿ ಮಾತ್ರ ಸಹಾಯಧನ ಪಡೆಯಲು ಸಾಧ್ಯವಾಗುತ್ತದೆ”.
- ನೀವು ಈ ಯೋಜನೆ ಅಡಿ ಈಗಾಗಲೇ ಸಹಾಯಧನ ಪಡೆದಿದ್ದರೆ 2026 ರಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ ಸರ್ಕಾರವೇ ನಿಮ್ಮ ಅರ್ಜಿಯನ್ನ ರಿಜೆಕ್ಟ್ ಮಾಡುತ್ತದೆ.
ಯೋಜನೆಯ ಉದ್ದೇಶ :-
- ಗ್ರಾಮೀಣ ಯುವಕರು ಮತ್ತು ರೈತರಿಗೆ ಸ್ವಯಂ ಉದ್ಯೋಗ ಒದಗಿಸುವುದು
- ಕುರಿ ಮತ್ತು ಮೇಕೆ ಸಾಕಾಣಿಕೆಗಯ ಮೂಲಕ ಹೆಚ್ಚುವರಿ ಆದಾಯ ಸೃಷ್ಟಿ
- ಸಣ್ಣ ರೈತರಿಗೆ ಆರ್ಥಿಕ ಸಹಾಯ ಒದಗಿಸುವುದು
- ಎಲ್ಲ ವರ್ಗದವರಿಗೂ ಒಂದೇ ರೀತಿಯ ಸಹಾಯಧನ ಸಿಗುತ್ತದೆ. ಇದರಿಂದ ಸಾಮಾನ್ಯವರ್ಗದ ಜನಸಾಮಾನ್ಯರಾದ ನಮಗೆ ಸರ್ಕಾರ ಕಡಿಮೆ ಸಹಾಯಧನ ನೀಡುತ್ತದೆ ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ.
- ಹೈನುಗಾರಿಕೆಯನ್ನು ಉತ್ತಮಗೊಳಿಸುವುದು.
- ಮಾಂಸ ಹಾಲು ಮತ್ತು ಉಣ್ಣೆ ಉತ್ಪಾದನೆಯನ್ನು ಹೆಚ್ಚಿಸುವುದು
- ಪಶು ಸಂಖ್ಯೆ ಮತ್ತು ಉತ್ಪಾದಕತೆ ಹೆಚ್ಚಿಸುವುದು
- ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆ ನೀಡುವುದು
- ಪರಿಸರ ಸ್ನೇಹಿ ಹಾಗೂ ದೀರ್ಘಕಾಲಿಕ ಸಾಕಾಣಿಕೆ ವ್ಯವಸ್ಥೆ ನಿರ್ಮಿಸುವುದು
ಯೋಜನೆಯ ಅನಾನುಕೂಲ :-
ಸರ್ಕಾರ ಗ್ರಾಮೀಣ ಭಾಗದ ಜನಸಾಮಾನ್ಯರಗಾಗಿ ತಂದಿರುವ ಈ ಯೋಜನೆಯಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲಗಳು 2026ರಲ್ಲಿ ಕಂಡು ಬರುತ್ತಿವೆ.
- ಬರಗಾಲ ಅಥವಾ ಮಳೆ ಕೊರತೆಯಿಂದಾಗಿ ಆಹಾರದ ಸಮಸ್ಯೆ ಎದುರಾಗಬಹುದು
- ಸಬ್ಸಿಡಿ ಇದ್ದರೂ ಮೊದಲು ಸ್ವಂತ ಹಣ ಅಥವಾ ಸಾಲ ಬೇಕಾಗುತ್ತದೆ
- ಮರಿಗಳ ಮರಣ ಮತ್ತು ದುರ್ಬಲ ಪ್ರಾಣಿಗಳ ಸಾವು ನಷ್ಟಕ್ಕೆ ಕಾರಣವಾಗಬಹುದು
- ದಾಖಲೆ ಪರಿಶೀಲನೆ ಮತ್ತು ಅದನ್ನು ಅನುಮೋದನೆ ಮಾಡಲು ಸಮಯ ಬೇಕಾಗುತ್ತದೆ
- ಮಳೆ ಹವಾಮಾನ ಬದಲಾವಣೆಯಿಂದಾಗಿ ಕುರಿಯ ಮೇಲೆ ಪರಿಣಾಮ ಬೀರುತ್ತದೆ
- ರೈತರಲ್ಲಿ ಸ್ವಂತ ಜಮೀನು ಇದ್ದರು ರೈತರ ಬನಿ ಸ್ವಂತ ಜಮೀನು ಇದ್ದರು ದಾಖಲೆಗಳು ಸರಿಯಾಗಿ ಅವರ ಬಳಿ ಕೆಲವು ಕುಟುಂಬದಲ್ಲಿ ಇರುವುದಿಲ್ಲ ಇಂಥವರು ಈ ಯೋಜನೆಯಿಂದ ವಂಚಿತರಾಗುತ್ತಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಇರಬೇಕಾದ ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್
- ನಿವಾಸ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಪಶು ಸಂಗೋಪನೆ ಆಸಕ್ತಿ ಅಥವಾ ಅನುಭವ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಪಾಸ್ ಪೋರ್ಟ್ ಸೈಜ್ ಫೋಟೋ
ಮೇಲೆ ಕೊಡಲಾದ ಈ ಕೆಲವೇ ಕೆಲವು ದಾಖಲೆಗಳು ನಿಮ್ಮಲ್ಲಿದ್ದರೆ ಈ ಯೋಜನೆಯ ಸಂಪೂರ್ಣ ಲಾಭವನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಗ್ರಾಮೀಣ ಭಾಗದ ಜನರು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ರಾಜ್ಯ ಸರ್ಕಾರ ಗ್ರಾಮೀಣವಾಗದ ಜನಸಾಮಾನ್ಯರಿಗೆ ಆನ್ಲೈನ್ ಹಾಗೆ ಆಫ್ಲೈನ್ ಎರಡು ವಿಭಾಗದಲ್ಲಿ ಈ ಯೋಚನೆಗೆ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ.
ಆಫ್ ಲೈನ್ ಮೂಲಕ ಅರ್ಜಿಸಲ್ಲಿಸುವ ವಿಧಾನ:-
- ನಿಮ್ಮ ಹತ್ತಿರದ ಪಶುಸಂಗೋಪನ ಇಲಾಖೆ ಅಥವಾ ಪಶು ಆಸ್ಪತ್ರೆ ಕೃಷಿ ಕಚೇರಿಗೆ ಭೇಟಿ ನೀಡಿ
- ಕಚೇರಿಗೆ ಸಂಬಂಧಿಸಿದ ಸಿಬ್ಬಂದಿಯ ಬಳಿ ಅಂದರೆ ಕುರಿ ಮೇಕೆ ಸಾಕಾಣಿಕೆ ಸಹಾಯಧನ ಮತ್ತು ಶೆಡ್ ನಿರ್ಮಾಣಕ್ಕೆ ಸಹಾಯಧನ ಪಡೆಯುವ ಅರ್ಜಿಯನ್ನ ಕೇಳಿ ಪಡೆಯಿರಿ
- ಅರ್ಜಿ ಎಲ್ಲಿ ಕೇಳಿರುವ ಕೆಲವೊಂದು ನಿಮ್ಮ ದಾಖಲಾತಿಯನ್ನು ಭರ್ತಿ ಮಾಡಿ
- ನಂತರ ಜಮೀನು ದಾಖಲೆ, ಬ್ಯಾಂಕ್ ಖಾತೆ + ಆಧಾರ್ ಪಶು ವಿವರಗಳು ಫೋಟೋ/ಪ್ರಮಾಣಪತ್ರ ಪ್ರತಿಯನ್ನ ಲಗತ್ತಿಸಿ
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :
- ಕರ್ನಾಟಕ ಪಶು ಸಂಗೋಪನ ಇಲಾಖೆ ಅಧಿಕೃತ ವೆಬ್ ಸೈಟ್ https://ahvs.karnataka.gov.in/ ಗೆ ಭೇಟಿ ನೀಡಿ
- ಸ್ಕೀಮ್ ಸರ್ವಿಸ್ ಆನ್ಲೈನ್ ಅಪ್ಲಿಕೇಶನ್ ವಿಭಾಗವನ್ನು ತೆರೆಯಿರಿ
- ಶಿಪ್ ಅಂಡ್ ಗೋಟ್ ಫಾರ್ಮಿಂಗ್ ಸ್ಕೀಮ್ ವಿಭಾಗವನ್ನು ಆಯ್ಕೆ ಮಾಡಿ
- ನಂತರ ಅಲ್ಲಿ ಕೇಳಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಬಳಸಿ ಲಾಗಿನ್ ಆಗಿ
- ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ
- ಕೊನೆಯದಾಗಿ ನಿಮ್ಮ ಅರ್ಜಿ ಸಲ್ಲಿಕೆ ಯಾಗಿರುವುದರ ಸ್ಥಿತಿಯನ್ನು ನೋಡಲು ಟ್ರ್ಯಾಕ್ ಅಪ್ಲಿಕೇಶನ್ (“Track Application”) ನಲ್ಲಿ ನೋಡಿ.
ರೈತ ಬಂದವರೇ ನಿಮಗೊಂದುಪ್ರಮುಖ ಸೂಚನೆ :–
ಗ್ರಾಮೀಣ ಭಾಗದ ಹಳ್ಳಿ ಜನರಿಗೆ ಸಾಮಾನ್ಯರಿಗೆ ಈ ಡಿಜಿಟಲ್ ಮೂಲಕ ಅರ್ಜಿ ಸಲ್ಲಿಸುವುದು ಕಷ್ಟವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ನೀವು ನಿಮ್ಮ ಹತ್ತಿರದಲ್ಲಿರುವ ಪಶುಸಂಗೋಪನೆ ಇಲಾಖೆ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಅಲ್ಲಿ ಇರುವ ಅಧಿಕಾರಿಗಳನ್ನು ಬೇಟಿಯಾಗಿ ಅರ್ಜಿಯನ್ನು ಸಲ್ಲಿಸುವ ಕ್ರಿಯೆಯನ್ನ ಸರಳಗೊಳಿಸಿಕೊಳ್ಳಿ.
ಅಂತಿಮ ತೀರ್ಮಾನ :-
ಅನೇಕ ಗ್ರಾಮೀಣ ಭಾಗದ ಹಳ್ಳಿಯ ಜನರು ನಮ್ಮ ಊರಲ್ಲಿಯೇ ವರ್ಷಕ್ಕೆ ಹಲವಾರು ಸರ್ಕಾರಿ ಯೋಜನೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಇದುವರೆಗೂ ನಮ್ಮಿಂದ ಯಾವುದೇ ಒಂದು ಸರ್ಕಾರದ ಯೋಜನೆಗಳನ್ನ ಪಡೆಯಲು ಸಾಧ್ಯವಾಗಲಿಲ್ಲ ಅನ್ನುವ ನಿಮ್ಮ ಚಿಂತೆಗೆ ಇದೀಗ ಹೊಸ ವರ್ಷದ ಜನವರಿಯಲ್ಲಿ ಕುರಿ ಮತ್ತು ಮೇಕೆ ಶೆಡ್ ನಿರ್ಮಾಣಕ್ಕೆ ಸಹಾಯಧನ ನೀಡಲು ಆನ್ಲೈನ್ ಮತ್ತು ಆಫ್ ಲೈನ್ ಅಪ್ಲಿಕೇಶನ್ ಅನ್ನ ಆರಂಭಿಸಿದ್ದು ಇಂದೇ ಅರ್ಜಿ ಸಲ್ಲಿಸಿದರೆ ಸರ್ಕಾರದ ಈ ಯೋಜನೆ ಲಾಭವನ್ನು ಪಡೆಯಬಹುದು.









