
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ದೊಡ್ಡ ಕನಸು ಇರುತ್ತದೆ ಅದೇನಂದರೆ ತಮ್ಮದೇ ಆದ ಒಂದು ಸ್ವಂತ ಸೂರು ಇರಬೇಕು ಎಂಬುದು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರ ಕಷ್ಟ ಅವರಿಗೆ ಗೊತ್ತಿರುತ್ತದೆ. ಪ್ರತಿ ತಿಂಗಳು ಹಣ ಹೊಂದಿಸುವುದು ಪದೇಪದೇ ಮನೆ ಖಾಲಿ ಮಾಡುವುದು ಇಷ್ಟೆಲ್ಲರ ನಡುವೆ ಮಾಲೀಕನ ಕಿರಿಕಿರಿ ಇವೆಲ್ಲ ಕೇವಲ ಮಾಧ್ಯಮ ವರ್ಗದ ಮತ್ತು ಬಡ ಕುಟುಂಬದವರಿಗೆ ಮಾತ್ರ ತಿಳಿದಿರುತ್ತದೆ. ಆದರೆ ಸರ್ಕಾರ ಇವರಿಗೆ ಒಂದು ಸಂತೋಷದ ಸುದ್ದಿ ನೀಡಿದೆ.
PMAY Online Application in Kannada
ಕರ್ನಾಟಕದ ವಸತಿ ರಹಿತ ಬಡ ಕುಟುಂಬಗಳಿಗೆ ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಸುಮಾರು 42,345 ಮನೆಗಳ ಬೃಹತ್ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಸರ್ಕಾರ ಹಲವು ಯೋಜನೆಯ ಅನುಷ್ಠಾನಕ್ಕೆ ತರುವ ಮೂಲಕ ವಿಶೇಷವಾಗಿ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ.ಇಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ನೀವು ಹೋಗಿ ಲಾಭಪಡೆದುಕೊಳ್ಳಿ.
ಯೋಜನೆಯ ಕಿರು ಪರಿಚಯ:-
ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನುಇಟ್ಟಿದೆ ಪ್ರಧಾನ ಮಂತ್ರಿ ಆವಾಸ್ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾದ ಬರೋಬ್ಬರಿ 42,345 ಮನೆಗಳ ಲೋಕಾರ್ಪಣೆ ಮತ್ತು ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಹಮ್ಮಿಕೊಂಡಿದೆ.
ಇದು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಲ್ಲ ಸಾವಿರಾರು ಕುಟುಂಬಗಳು ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಡವರ್ಗದವರಿಗೆ ಗೃಹಪ್ರವೇಶದ ಭಾಗ್ಯವನ್ನು ಕಲ್ಪಿಸಿಕೊಡುವ ಒಂದು ಮುಖ್ಯ ಯೋಜನೆ. ಬಡ ಜನರಿಗೆ ಸೈಟ್ ತೆಗೆದುಕೊಳುವದೇ ತುಂಬ ಕಷ್ಟ ಅದ್ರಲ್ಲಿ ಸೈಟ್ ತಗೊಂಡು ಮನೆ ಕಟ್ಟುವುದು ತುಂಬ ಕಷ್ಟ ಆಗುತ್ತೆ ಅಲ್ವ ಅದನ್ನು ಮನಗೊಂಡ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ.
ರಾಜ್ಯ ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾದ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ನಿಮ್ಮ ಜಿಲ್ಲೆಯು ಈ ಒಂದು ಯೋಜನೆಯಡಿಯಲ್ಲಿ ಅರ್ಹವಾಗಿದೆಯೇ? ಎನ್ನುವ ಪ್ರೆಶ್ನೆಗೆ ಇಲ್ಲಿದೆ ಉತ್ತರ.
ಮನೆ ಹಂಚಿಕೆಯ ಕುರಿತು ಕಿರು ಪರಿಚಯ:
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಆವಾಸ್ ಯೋಜನೆ |
| ಫಲಾನುಭವಿಗಳು | ಬಡ ಮತ್ತು ಮಾಧ್ಯಮ ವರ್ಗದವರು |
| ಬಿಡುಗಡೆಯಾಗುವ ಒಟ್ಟು ಮನೆಗಳು | 42,345 |
| ಅರ್ಜಿ ಸಲ್ಲಿಸುವ ವಿಧಾನ | ಆನ್ ಲೈನ್ ಮತ್ತು ಆಫ್ ಲೈನ್ |
ಯೋಜನೆ ಮುಖ್ಯಾಂಶಗಳು?
- 48345 ಮನೆಗಳನ್ನು 28 ಜಿಲ್ಲೆಗಳಿರಲಿ ಏಕಕಾಲಕ್ಕೆ ಹಂಚಿಕೆ ಮಾಡಲಾಗುತ್ತದೆ
- ಈ ಮನೆಗಳಲ್ಲಿ 20,312 ಮನೆಗಳನ್ನುSC/ST ವರ್ಗದವರಿಗೆ ಕೊಡಲಾಗುತ್ತದೆ
- ಮತ್ತೆ ಉಳಿದ 22,033 ಮನೆಗಳನ್ನು ಇತರೆ ವರ್ಗದವರಿಗೆ ಹಂಚಿಕೆ ಮಾಡಲಾಗುತ್ತದೆ
- ಒಂದು ಮನೆಯ ಅಂದಾಜು ವೆಚ್ಚ 7.5 ಲಕ್ಷ
- ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಾಯದವಿದಾಗಿದ್ದು. ಫಲಾನುಭವಿಗಳು ಕೇವಲ 1 ಲಕ್ಷ ಮಾತ್ರ ಹಣ ಪಾವತಿಸಬೇಕು.
ಅವಾಜ್ ಯೋಜನೆ ಅಡಿ ಮನೆಯ ನಿರ್ಮಾಣ ಹೇಗೆ:-
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಾರಿಯಾಗುತ್ತಿರುವ ಈ ವಸತಿ ಯೋಜನೆಯು ರಾಜ್ಯದ ಆರ್ಥಿಕ ಮತ್ತು ಹಿಂದುಳಿದ ಕಡಿಮೆ ಆದಾಯದ ಗುಂಪುಗಳಿಗೆ ಕೈಗೆಟಕುವ ದರದಲ್ಲಿ ಸುಸಜ್ಜಿತ ಮನೆಗಳನ್ನು ಒದಗಿಸಿಕೊಡುವ ಮಹತ್ವದ ಯೋಜನೆ, ಈ ಯೋಜನೆ ಅಡಿಯಲ್ಲಿ ಒಂದು ಮನೆಗೆ ಏಳು ಪಾಯಿಂಟ್ ಐದು ಲಕ್ಷ ಖರ್ಚಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ 2.70 ಲಕ್ಷದಿಂದ 3.550 ಲಕ್ಷದವರೆಗೆ ಬಾರಿ ಮೊತ್ತದ ಸಹಾಯಧನವನ್ನು ನೀಡುತ್ತಿವೆ.
ಮನೆಗಳನ್ನು ಪಡೆಯಲು ಅರ್ಹ ಇರುವ ಅಭ್ಯರ್ಥಿಗಳು ಕೇವಲ ಒಂದು ಲಕ್ಷವನ್ನು ಮಾತ್ರ ಕಟ್ಟಬೇಕಾಗುತ್ತದೆ ಇಷ್ಟ ಅಲ್ಲದೆ ಸರ್ಕಾರದ ಮೂಲಭೂತ ಸೌಕರ್ಯಗಳಾದ ರಸ್ತೆ ಸಾರಿಗೆ ಆಸ್ಪತ್ರೆ ಗ್ರಂಥಾಲಯ ನೀರಿನ ವ್ಯವಸ್ಥೆ ಸರ್ಕಾರ ಒದಗಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಛ್ಜಿನ ಆಧ್ಯತೆ
ವಿಶೇಷ ಸೂಚನೆ:-ಅರ್ಜಿ ಸಲ್ಲಿಸುವಾಗ ಫಲಾನುಭವಿಗಳ ಪಟ್ಟಿಯನ್ನು ವೀಕ್ಷಣೆ ಮಾಡುವಾಗ ಸರ್ವರ್ ಸಿಕ್ಕಿಲ್ಲ ಅಂದ್ರೆ ಭಯ ಪಡಬೇಡಿ ಎಲ್ಲ ಅಭ್ಯರ್ಥಿಗಳು ಒಂದೇ ಸಮಯಕ್ಕೆ 10 ರಿಂದ ಸಂಜೆ 6 ಹೆಚ್ಚಾಗಿ ಅರ್ಜಿ ಸಲ್ಲಿಸುವುದರಿಂದ. ವೆಬ್ ಸೈಟ್ ಮೇಲೆ ಒತ್ತಡ ಜಾಸ್ತಿ ಇರುತ್ತದೆ. ರಾತ್ರಿ 8 ಗಂಟೆಯ ನಂತರ ಅಥವಾ ಬೆಳಗ್ಗೆ 6 ಗಂಟೆಯ ಒಳಗೆ ಪರಿಶೀಲಿಸಿ.
ಈ ಯೋಜನೆ ಇದರಿಂದಾಗುವ ಲಾಭಗಳೇನು?
- ಯಾವುದೇ ಮನೆ ಇಲ್ಲದವರಿಗೆ ಸ್ವಂತ ಪಕ್ಕ ಮನೆ ದೊರೆಯುತ್ತದೆ ಸ್ವಂತ ಸೂರು ಸಿಗುತ್ತದೆ
- ಮನೆ ನಿರ್ಮಾಣ ಅಥವಾ ಖರೀದಿಗೆ ಸರ್ಕಾರದ ಆರ್ಥಿಕ ಸಹಾಯಧನ ಲಭ್ಯವಾಗುತ್ತದೆ
- ಮಹಿಳೆಯರ ಹೆಸರಿನಲ್ಲಿ ಮನೆ ನೋಂದಣಿ ಮಾಡುವುದರಿಂದ ಮಹಿಳಾ ಸಬಲೀಕರಣ ಮತ್ತು ಗೌರವ ಸಿಗುತ್ತದೆ
- ಸರ್ಕಾರದಿಂದ ಮೂಲಭೂತ ಸೌಕರ್ಯಗಳಾದ ವಿದ್ಯುತ್ ನೀರು ರಸ್ತೆ ಆಸ್ಪತ್ರೆ ವ್ಯವಸ್ಥೆ ಸಿಗುತ್ತದೆ
- ಕುಟುಂಬಗಳಿಗೆ ಸುರಕ್ಷಿತ ಮತ್ತು ಗೌರವಯುತ ಜೀವನ ಮಾಡಲು ಸಹಕಾರಿಯಾಗುತ್ತದೆ
- ಯಾವುದೇ ಮನೆಗಳಿಗೆ ಬಾಡಿಗೆ ವೆಚ್ಚ ಇಲ್ಲದಿರುವುದರಿಂದ ಆರ್ಥಿಕವಾಗಿ ಸದೃಢರಾಗುತ್ತಾರೆ
- ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ವಸತಿ ಅಭಿವೃದ್ಧಿಗೆ ಉತ್ತೇಜನ
ಹಲವು ಗಣ್ಯರ ಉಪಸ್ಥಿತಿಯಲ್ಲಿಅದ್ದೂರಿ ಸಮಾರಂಭ:-
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಿಸಲಾದ ಮನೆಗಳ ವಿತರಣ ಸಮಾರಂಭವು 2026 ಜನವರಿಯಲ್ಲಿ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಕಾರ್ಯಕ್ರಮವನ್ನು ನೆಡಸಲಾಗುತ್ತಿದೆ ರಾಜ್ಯಾದ್ಯಂತ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಗಲಿದೆ.
ಈ ಅದ್ದೂರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಜಮೀರ್ ಅಹ್ಮದ್ ಹಾಗೂ ಸಂತೋಷ್ ಲಾಡ್ ಈ ಕಾರ್ಯಕ್ರಮದ ಪೂರ್ವ ಸಿದ್ದತೆಯನ್ನು ಮಾಡಿಸುತ್ತಿದ್ದು, ಇವರು ಕೂಡ ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ 3,00,000 ಕ್ಕೂ ಹೆಚ್ಚು ಜನಸಾಮಾನ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ
ಮನೆ ನಿರ್ಮಾಣಕ್ಕೆ ಯಾವ ವರ್ಗದವರಿಗೆ ಎಷ್ಟು ಸಬ್ಸಿಡಿ ದೊರೆಯುತ್ತದೆ?
7.50 ಲಕ್ಷ ಆಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಹೊರೆಯಾಗದಂತೆ ಭಾರಿ ಮೊತ್ತದ ಸಹಾಯಧನವನ್ನು ನೀಡುತ್ತಿವೆ. ಕೇಂದ್ರ ಸರ್ಕಾರವು 1.50 ಲಕ್ಷ ರೂ ಸಹಾಯಧನ ನೀಡುತ್ತಿದ್ದು. ,ಮತ್ತು ರಾಜ್ಯ ಸರ್ಕಾರವು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.20,000 ರೂ ವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 2,ಲಕ್ಷದವರೆಗೆ ಬಾರಿ ಮತದ ಸಹಾಯಧನವನ್ನು ಒದಗಿಸುತ್ತಿದೆ.ಇದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿಕೊಡುತ್ತದೆ ಉಳಿದ ವೆಚ್ಚದಲ್ಲಿ ಫಲಾನುಭವಿಗಳು ಕೇವಲ ಒಂದು ಲಕ್ಷ ರೂ ಮಾತ್ರ ಪಾವತಿಸಿ ಮೂಲಕ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಳ್ಳಬಹುದು
ಯಾವ ವರ್ಗಗಳಿಗೆ ಎಷ್ಟೆಷ್ಟು ಉಚಿತ ಮನೆ?
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಗೆ:- 20,312 ಮನೆಗಳನ್ನು ಬಿಡುಗಡೆಮಾಡಿದೆ.
- ಇತರೆ ವರ್ಗಗಳ ಅರ್ಹ ಫಲಾನುಭವಿಗಳಿಗೆ :- 22,033 ಮನೆಗಳನ್ನ ಹಂಚಿಕೆ ಮಾಡಲಾಗುತ್ತದೆ
- ಏಕಕಾಲಕ್ಕೆ 28 ಜಿಲ್ಲೆಗಳಲ್ಲಿಯೂ ಸಹ ಮನೆಯನ್ನು ಹಂಚಿಕೆ ಮಾಡಲಾಗುವುದು.
ಉಚಿತ ಮನೆ ಪಡೆಯಲು ಅಭ್ಯರ್ಥಿಗಳ ಪಾಲು ?ಮತ್ತು ವಿನ್ಯಾಸ
ಆವಾಸ್ ಯೋಜನೆಯ ಮನೆ ಪಡೆಯಲು ಪ್ರತಿ ಮನೆಯ ಅಂದಾಜು ವೆಚ್ಚ ₹7.5 ಲಕ್ಷ ಮೌಲ್ಯದ್ದಾಗಿದ್ದು, ಅರ್ಹ ಫಲಾನುಭವಿಗಳು ಕೇವಲ ₹1 ಲಕ್ಷ ಹಣವನ್ನು ಪಾವತಿ ಮಾಡಿದರೆ ಸಾಕು ಉಳಿದ ಎಲ್ಲಾ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಭರಿಸುತ್ತದೆ.
- ಸ್ಥಳ:-ಹುಬ್ಬಳ್ಳಿಯ ಮಂಟೂರು ರಸ್ತೆ
- ಈಗಾಗಲೇ ನಿರ್ಮಿಸಿರುವ ಮನೆಗಳು:-ಕೊಳಗೇರಿ ನಿವಾಸಿಗಳಿಗಾಗಿ 1008 ಮನೆಗಳನ್ನು ನಿರ್ಮಿಸಲಾಗಿದೆ .
- ವಿಸ್ತೀರ್ಣ:-ಪ್ರತಿ ಮನೆಯು ಅಂದಾಜು 30 ಚದರ ಮೀಟರ್ ಪ್ರದೇಶವನ್ನು ಹೊಂದಿದ್ದು,
- ವಿನ್ಯಾಸ:_ಒಂದು ಲಿವಿಂಗ್ ರೂಮ್, ಒಂದು ಮಲಗುವ ಕೋಣೆ, ಅಡುಗೆ ಮನೆ ಹಾಗೂ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನಗೃಹಗಳನ್ನೊಳಗೊಂಡಿದೆ. ಎಲ್ಲಾ ಮನೆಗಳು ನೋಡಲು RCC ಫ್ರೇಮ್ಡ್ ಸ್ಟ್ರಕ್ಚರ್ ಮಾದರಿಯಲ್ಲಿದೆ.
ಯಾವ ಜಿಲ್ಲೆಗಳಿಗೆ ಈ ಯೋಜನೆಯ ಲಾಭ ಸಿಗಲಿದೆ:-
ಬೆಂಗಳೂರು, ಮಂಡ್ಯ ಮೈಸೂರ್ ಹಾಸನ ಧಾರವಾಡ ಗದಗ ಹಾವೇರಿ ಉಡುಪಿ, ಇತರೆ ಜಿಲ್ಲೆಗಳು
ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ದಾಖಲೆಗಳು :-
ಇದೇ ತಕ್ಷಣ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ
- ವೋಟರ್ ಐಡಿ
- ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
- ಜಾಗದ ಪಹಣಿ (RTC) ಅಥವಾ ಬಾಡಿಗೆ ಒಪ್ಪಂದದ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ವರ್ಡ್ ಅಳತೆಯ ಫೋಟೋ
- ಜಾತಿ ಪ್ರಮಾಣ ಪತ್ರ
- ಯೋಜನಾ ವರದಿ (Project Report – ಇದು ಬಹಳ ಮುಖ್ಯವಾಗಿರುತ್ತದೆ)
ಅರ್ಜಿಸಲ್ಲಿಸುವುದು ಹೇಗೆ:-
ಈ ಯೋಜನೆಗೆ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
- ಮೊದಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ವೆಬ್ಸೈಟ್ http://ashraya.karnataka.gov.in/ ಗೆ ಭೇಟಿನೀಡಿ.
- Citizen Assessment” ಅಥವಾ ನ್ಯೂ ರಿಜಿಸ್ಟ್ರೇಷನ್ ವಿಭಾಗವನ್ನು ಆಯ್ಕೆ ಮಾಡಿ
- ನಿಮ್ಮ ಮೊಬೈಲ್ ನಂಬರ್ ಇಮೇಲ್ ಅಡ್ರೆಸ್ ಹಾಕಿ ಲಾಗಿನ್ ಮಾಡಿ
- ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಸರಿಯಾಗಿದೆ ಎಂದು ಪರಿಶೀಲಿಸಿ ಸಬ್ಮಿಟ್ ಮಾಡಿ
ಅಂತಿಮ ಮಾತು:-
ರಾಜ್ಯ ಸರ್ಕಾರವು ಹೊಸವರ್ಷದ ಆರಂಭದಲ್ಲಿಯೇ ವಿಶೇಷ ಯೋಜನೆಗಳನ್ನು, ಕೊಡುಗೆಗಳನ್ನು ನೀಡುವ ಮೂಲಕ ಬಡವರಿಗೆ ಆಸರೆಯಾಗಿ ನಿಂತಿದೆ. ಅಂತೆಯೇ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 42,345 ನಿರ್ಮಾಣಗೊಂಡಿರುವ ಮನೆಗಳನ್ನು ಹಂಚಿಕೆ ಮಾಡಲು ಮುಂದಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಸೂರನ್ನು ಪಡೆದುಕೊಳ್ಳಿ.








