ನಮಸ್ಕಾರ ಸ್ನೇಹಿತರೆ, ನೀವೇನಾದರೂ ಮನೆಯಲ್ಲೇ ಕುಳಿತು ಸ್ವಂತವಾಗಿ ಉದ್ಯೋಗ ಮಾಡಬೇಕು ಎಂದು ಬಯಸುತ್ತಿದ್ದೀರಾ? ತಮ್ಮ ಕುಟುಂಬದ ಮೇಲಿರುವ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬೇಕು ಎನ್ನುವ ಆಸೆ ನಿಮಗಿದೆಯಾ? ಹಾಗಿದ್ದರೆ ಈ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ನಿಮಗೊಂದು ಸುವರ್ಣಾವಕಾಶ ಸಿಕ್ಕಿದೆ.
Free Electric Sewing Machine In Kannada
ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಕುಶಲಕರ್ಮಿ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆಯಂತ್ರವನ್ನು (Free Electric Sewing Machine)ನೀಡಲು ಮುಂದಾಗಿದೆ. ಈಗಾಗಲೇ ಎರಡು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಉಚಿತ ಹೊಲಿಗೆಯಂತ್ರ (Free Electric Sewing Machine) ಪಡೆದುಕೊಳ್ಳಲು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಕೂಡ ನಿಗದಿ ಪಡಿಸಲಾಗಿದೆ. ನೀವೇನಾದರೂ ಈ ಎರಡು ಜಿಲ್ಲೆಗೆ ಸೇರಿದ್ದರೆ, ಇಂದೇ ಅರ್ಜಿ ಸಲ್ಲಿಸಿ.
ಮಹಿಳೆಯರಿಗೆ ಉಚಿತ ವಿದ್ಯುತ್ ಹೊಲಿಗೆ ಯಂತ್ರ – ಇಂದೇ ಅರ್ಜಿ ಹಾಕಿ!
ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರ ಪಡೆದುಕೊಳ್ಳಲು ಅರ್ಹವಾದ ಆ ಎರಡು ಜಿಲ್ಲೆಗಳು ಯಾವುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಎನ್ನುವುದರ ಬಗ್ಗೆ ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಇದೇ ರೀತಿಯ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ. ನಂತರದ ದಿನಗಳಲ್ಲಿ ನಿಮ್ಮ ಜಿಲ್ಲೆಗಳಿಗೂ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರವನ್ನು (Free Electric Sewing Machine) ಪಡೆಯಲು ಅರ್ಜಿ ಆಹ್ವಾನಿಸಿದರೆ, ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಈ ವೆಬ್ಸೈಟ್ ನೆರವಾಗಬಹುದು.
ಯೋಜನೆಯ ಕಿರು ಚಿತ್ರಣ:
| ಇಲಾಖೆ | ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ |
| ಅನುಷ್ಠಾನ ಗೊಳಿಸಿದ ಸಂಸ್ಥೆ | ಜಿಲ್ಲಾ ಕೈಗಾರಿಕಾ ಕೇಂದ್ರ |
| ಯೋಜನೆಯ ಹೆಸರು | ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳು ವಿತರಣಾ ಯೋಜನೆ |
| ಅರ್ಹ ಫಲಾನುಭವಿಗಳು | ಗ್ರಾಮೀಣ ಭಾಗದ ಮಹಿಳೆಯರು |
| ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ | ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರ (Free Electric Sewing Machine) |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
ಯೋಜನೆಯ ಬಗ್ಗೆ:
ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಜಿಲ್ಲಾ ಕೈಗಾರಿಕಾ ಕೇಂದ್ರದ ಅಡಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆಯಂತ್ರವನ್ನು ಉಚಿತವಾಗಿ ನೀಡಲು ಮುಂದಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸುವ ಹಾಗೂ ಆಧುನೀಕೃತ ಹೊಲಿಗೆಯಂತ್ರವನ್ನು ಬಳಸಿಕೊಂಡು ಮಹಿಳೆಯರ ಉದ್ಯೋಗವನ್ನು ಸುಲಭಗೊಳಿಸುವ ಉದ್ದೇಶವನ್ನು ಹೊಂದಿದೆ.
ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳು ವಿತರಣಾ ಯೋಜನೆಯಡಿಯಲ್ಲಿ ಈಗಾಗಲೇ ಬಳ್ಳಾರಿ ಹಾಗೂ ಧಾರವಾಡ ಈ ಎರಡು ಜಿಲ್ಲೆಗಳಿಗೆ ಉಚಿತ ಹೊಲಿಗೆಯಂತವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ನಂತರ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೂ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ರಾಜ್ಯ ಸರ್ಕಾರದ ಈ ಯೋಜನೆಯ ಮುಖ್ಯ ಗುರಿ:
1. ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ:
ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರವನ್ನು ನೀಡುವ ಮೂಲಕ ತಮ್ಮ ಮನೆಯಲ್ಲೇ ಸ್ವಂತ ಉದ್ಯೋಗವನ್ನು ಮಾಡುವ ಅವಕಾಶವನ್ನು ಕಲ್ಪಿಸಿ, ಮನೆಯಲ್ಲೇ ಕುಳಿತು ಬಟ್ಟೆಗಳನ್ನು ಹೊಲಿದು ಹಣವನ್ನು ಗಳಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ.
2. ಬಡತನ ನಿರ್ಮೂಲನೆ:
ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಕುಟುಂಬಗಳಿಗೆ ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗವನ್ನು ಕಲ್ಪಿಸುವ ಮೂಲಕ ಸ್ಥಿರ ಆದಾಯವನ್ನು ಗಳಿಸುವಂತೆ ಮಾಡಿ ಬಡತನ ನಿರ್ಮೂಲಗೆ ಒಳ್ಳೆಯ ಮಾರ್ಗವನ್ನು ಸೃಷ್ಟಿಸಿದೆ.
3. ಗುಣಮಟ್ಟದ ಹೊಲಿಗೆಗೆ ಒತ್ತು ನೀಡುವುದು:
ಸರ್ಕಾರವು ಈ ಯೋಜನೆಯಡಿಯಲ್ಲಿ ಆಧುನೀಕೃತ ಹೊಲಿಗೆಯಂತ್ರವನ್ನು ನೀಡುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಬಟ್ಟೆಗಳನ್ನು ಹೊಲಿಯಲು ಹಾಗೂ ಹೊಲಿಗೆಯ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವಂತೆ ಮಾಡುವುದು.
4. ಕುಶಲಕರ್ಮಿಗಳಿಗೆ ಬೆಂಬಲ ನೀಡುವುದು:
ಈಗಾಗಲೇ ಬಟ್ಟೆ ಹೊಲಿಯುವ ಕೌಶಲ್ಯವನ್ನು ಹೊಂದಿರುವ ಹಾಗೂ ಬಟ್ಟೆ ಹೊಲಿಯುವ ಕುರಿತು ತರಬೇತಿಯನ್ನು ಪಡೆದಿರುವ ಕುಶಲಕರ್ಮಿ ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರವನ್ನು ನೀಡುವ ಮೂಲಕ ಅವರಿಗೆ ಬೆಂಬಲ ಒದಗಿಸುವುದು.
ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸಿಗುವ ಲಾಭವೇನು?
- ಹಣದ ಉಳಿತಾಯ:
ಗ್ರಾಮೀಣ ಭಾಗದ ಮಹಿಳೆಯರು ಈ ಒಂದು ಯೋಜನೆಯಡಿಯಲ್ಲಿ ಭಾರಿ ಮೊತ್ತದ ವಿದ್ಯುತ್ ಚಾಲಿತ ಹೊಲಿಗೆಯಂತವನ್ನು ಯಾವುದೇ ಹಣವನ್ನು ಪಾವತಿ ಮಾಡದೇ ಸಂಪೂರ್ಣ ಉಚಿತವಾಗಿ ಪಡೆದುಕೊಳ್ಳುವುದರಿಂದ ಯಾವುದೇ ಹಣವನ್ನು ಹೂಡಿಕೆ ಮಾಡದೇ ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ.
- ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಹಕಾರಿ:
ಮಹಿಳೆಯರು ಯಾವುದೇ ಒಂದು ವಸ್ತುಗಳನ್ನು ಖರೀದಿಸಿದರೆ ಹಣಕ್ಕಾಗಿ ತಮ್ಮ ಕುಟುಂಬದ ಯಜಮಾನನ ಮುಂದೆ ಕೈ ಚಾಚುವ ಬದಲು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ತಮ್ಮ ಕುಟುಂಬದ ಸದಸ್ಯರ ಮೇಲೆ ಅವಲಂಬಿತರಾಗದೆ ಸ್ವತಂತ್ರರಾಗಿ ಜೀವನವನ್ನು ನಡೆಸಬಹುದಾಗಿದೆ.
- ಸಮಯದ ಜೊತೆಗೆ ಶ್ರಮದ ಉಳಿತಾಯ:
ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡು ಆಧುನೀಕೃತ ವಿದ್ಯುತ್ ಚಾಲಿತ ಹೊಲಿಗೆಯಂತ್ರವನ್ನು ಪಡೆದುಕೊಳ್ಳುವುದರಿಂದ, ಕಡಿಮೆ ಸಮಯದಲ್ಲಿ ಹೆಚ್ಚಿನ ಬಟ್ಟೆಗಳನ್ನು ಹೋಲಿಯಬಹುದು ಹಾಗೂ ಮೋಟಾರ್ ಗಳ ಮೇಲೆ ಯಂತ್ರ ಅವಲಂಬಿತವಾಗಿರುವುದರಿಂದ ಹೆಚ್ಚಿನ ದೈಹಿಕ ಶ್ರಮದ ಅಗತ್ಯ ಇರುವುದಿಲ್ಲ.
- ಜೀವನ ನಡೆಸಲು ಭದ್ರ ಬುನಾದಿ:
ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರವನ್ನು (Free Electric Sewing Machine) ಪಡೆದುಕೊಳ್ಳುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಬಟ್ಟೆಗಳನ್ನು ಹೊಲಿಯುವ ಮೂಲಕ ದುಪ್ಪಟ್ಟು ಆದಾಯವನ್ನು ಗಳಿಸಿ ತಮ್ಮ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು ಹಾಗೂ ಇದರಿಂದಾಗಿ ಶಾಶ್ವತ ಜೀವನೋಪಾಯವನ್ನು ಕಂಡುಕೊಳ್ಳಬಹುದು.
ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹವಾದ ಎರಡು ಜಿಲ್ಲೆಗಳು ಯಾವುದು?
ಈಗಾಗಲೇ ಎರಡು ಜಿಲ್ಲೆಗಳಿಗೆ ಉಚಿತ ಹೊಲಿಗೆಯಂತ್ರ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆ ಎರಡು ಜಿಲ್ಲೆಗಳು ಸೇರಿರುವ ಅರ್ಹ ಮತ್ತು ಆಸಕ್ತ ಮಹಿಳೆಯರು ಕೆಳಗೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
- ಧಾರವಾಡ ಜಿಲ್ಲೆಗೆ ಸೇರಿದ ಮಹಿಳೆಯರು 20-02-2026 ರೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
- ಬಳ್ಳಾರಿ ಜಿಲ್ಲೆಗೆ ಸೇರಿದ ಮಹಿಳೆಯರು 15-03-2026 ರೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರ ಪಡೆದುಕೊಳ್ಳಲು ಅರ್ಹರಾದ ಫಲಾನುಭವಿಗಳು ಯಾರು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಬಟ್ಟೆ ಹೊಲಿಯುವ ಕೌಶಲ್ಯ ಹೊಂದಿರಬೇಕು.
- ಅರ್ಜಿದಾರರು ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಗೆ ಸೇರಿದ ಗ್ರಾಮೀಣ ಭಾಗದ ಮಹಿಳೆಯರಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ಹಾಗೂ ಗರಿಷ್ಟ 50 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ₹98,000 ಮೀರಿರಬಾರದು.
| ಇಲ್ಲಿ ಗಮನಿಸಿ: ” ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹಿಂದೆ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಉಚಿತ ಹೊಲಿಗೆಯಂತ್ರ ಪಡೆದುಕೊಂಡಿದ್ದರೆ, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಲ್ಲ.” |
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ವಾಸಸ್ಥಳ ದೃಢೀಕರಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ಪೋರ್ಟ್ ಅಳತೆಯ ಫೋಟೋ
- ಹೊಲಿಗೆ ತರಬೇತಿ ಪ್ರಮಾಣಪತ್ರ
- ವಯಸ್ಸಿನ ಪುರಾವೆ
- ಇತರೆ ದಾಖಲೆಗಳು
| ಮುಖ್ಯ ಸೂಚನೆ: ” ನೀವೇನಾದರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ, ನೀವು ಕಡ್ಡಾಯವಾಗಿ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಹೊಲಿಗೆ ತರಬೇತಿಯನ್ನು (Free Electric Sewing Machine) ಪಡೆದು ತರಬೇತಿ ಪ್ರಮಾಣಪತ್ರವನ್ನು ಹೊಂದಿರಬೇಕು. ಇಲ್ಲವೇ ಕುಶಲಕರ್ಮಿ ದೃಢೀಕರಣ ಪತ್ರವನ್ನು ಹೊಂದಿರಬೇಕು.” |
ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಿಗೆ ಸೇರಿದ್ದರೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಈ ಕೆಳಗೆ ನೀಡಿರುವ ವಿಧಾನಗಳ ಮೂಲಕ ಆನ್ಲೈನ್ ನಲ್ಲಿ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ https://sevasindhuservices.karnataka.gov.in/ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ಫೋನ್ ನಂಬರ್ ಹಾಗೂ ಒಟಿಪಿ ಬಳಸಿ ಲಾಗಿನ್ ಆಗಿ.
- ಲಾಗಿನ್ ಆದ ನಂತರ ಜಿಲ್ಲಾ ಕೈಗಾರಿಕಾ ಕೇಂದ್ರ ಎಂದು ಟೈಪ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು:
- ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
- ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರಕ್ಕೆ (Free Electric Sewing Machine) ಸಂಬಂಧಿಸಿದ ಅರ್ಜಿ ಫಾರ್ಮ್ ಅನ್ನು ಪಡೆದುಕೊಳ್ಳಿ.
- ನಂತರ ಅರ್ಜಿ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿಮಾಡಿ.
- ಅರ್ಜಿ ಫಾರ್ಮ್ ನೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ.
ಕೊನೆಯ ನುಡಿ:
ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರವನ್ನು (Free Electric Sewing Machine) ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವರ್ಷದಲ್ಲಿ ಸದ್ಯಕ್ಕೆ ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಎರಡು ಜಿಲ್ಲೆಗಳಿಗೆ ಮಾತ್ರ ತಾನೆ ಉಚಿತ ಹೊಲಿಗೆಯಂತ್ರವನ್ನು (Free Electric Sewing Machine) ಪಡೆಯಲು ಅವಕಾಶ ಅಂತ ಈ ಮಾಹಿತಿಯನ್ನು ತಿಳಿದುಕೊಳ್ಳದೆ ಇರಬೇಡಿ. ಈಗ ಸದ್ಯಕ್ಕೆ ಎರಡು ಜಿಲ್ಲೆಗಳಿಗೆ ಈ ಅವಕಾಶ ಇರಬಹುದು ನಂತರದ ದಿನಗಳಲ್ಲಿ ನಿಮ್ಮ ಜಿಲ್ಲೆಗಳಿಗೂ ಅವಕಾಶ ಸಿಗುತ್ತದೆ . ಎಲ್ಲಾ ಜಿಲ್ಲೆಯ ಅರ್ಹ ಫಲಾನುಭವಿಗಳು ಒಂದೇ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಮಾಹಿತಿ ನಿಮಗೆ ಇವಾಗ ಅವಶ್ಯಕತೆಗೆ ಬರದಿದ್ದರೂ ನಂತರದ ದಿನಗಳಲ್ಲಿ ಉಪಯುಕ್ತವಾಗಬಹುದು.
ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ ಎರಡು ಜಿಲ್ಲೆಗಳ ಮಹಿಳೆಯರು ಇಂದೇ ಅರ್ಜಿ ಸಲ್ಲಿಸುವುದು ಉತ್ತಮ. ನಂತರ ದಿನಗಳಲ್ಲಿ ಅರ್ಜಿ ಸಲ್ಲಿಸಲು ತಾಂತ್ರಿಕ ಸಮಸ್ಯೆ ಉಂಟಾಗಬಹುದು.
ಇತರೆ ಪ್ರಮುಖ ಲಿಂಕುಗಳು:
- Labour Pension : ರೂ2000/- ಯಾರೆಲ್ಲ ಮಾಡಿಸಿಲ್ಲವೋ ಇಂದೇ ಮಾಡಿಸಿ : ಹೇಗೆ ಗೊತ್ತಾ ಸಿಂಪಲ್!
- PM Vishwakarma : ₹15,000 ಸಹಾಯಧನ! ಪಿಎಂ ವಿಶ್ವಕರ್ಮ ಟೈಲರಿಂಗ್ ಮಷಿನ್ ಸ್ಕೀಮ್ ! ಭರ್ಜರಿ ಆನ್ಲೈನ್ ಅಪ್ಲಿಕೇಶನ್ !
- Free Tarpaulin : ರೈತರಿಗೆ ಉಚಿತ ಟಾರ್ಪಲ್ ವಿತರಣೆ.! ಆಫ್ ಲೈನ್ ಮತ್ತು ಆನ್ ಲೈನ್ ಅರ್ಜಿ!
- PMAY : ಪ್ರಧಾನ ಮಂತ್ರಿ ಆವಾಸ್ ಯೋಜನೆ 42,345 ಉಚಿತ ಮನೆಗೆ ಅರ್ಜಿ! Apply Now









