JSY : ₹1500/- ಗರ್ಭಿಣಿ ಮಹಿಳೆಯರಿಗೆ ಪ್ರೋತ್ಸಾಹ ಧನ ಜನನಿ ಸುರಕ್ಷಾ ಯೋಜನೆ! ಅರ್ಜಿ ಸಲ್ಲಿಸುವುದು ಹೇಗೆ!

February 13, 2026 7:25 AM

ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಮಹಿಳೆಯರು ಸುರಕ್ಷಿತ ಹೆರಿಗೆ ಸೇವೆಗಳ ಕೊರತೆಯಿಂದಾಗಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ತಾನೇ ಜನಿಸಿದ ನವಜಾತ ಶಿಶುಗಳ ಮರಣ ಪ್ರಮಾಣವು ಸಹ ಸವಾಲಿನ ವಿಷಯವಾಗಿದೆ. ಇದನ್ನು ಮನಗಂಡ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ಸಹಾಯಧನ ನೀಡಿ ಅವರನ್ನು ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜನನಿ ಸುರಕ್ಷಾ ಯೋಜನೆಯನ್ನು(JSY) ರೂಪಿಸಿದೆ.

JSY – Janani Suraksha Yojane

Join WhatsApp

Join Now

Join Telegram

Join Now

ಈ ಯೋಜನೆಯ ಈ ಯೋಜನೆಯಿಂದಾಗಿ ತಾಯಂದಿರಿಗೆ ಏನೆಲ್ಲ ಪ್ರಯೋಜನಗಳಿವೆ? ಸರ್ಕಾರದಿಂದ ಸಿಗುವ ಆರ್ಥಿಕ ಲಾಭವೆಷ್ಟು? ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಎಲ್ಲ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ,,,

ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಗರ್ಭಿಣಿ ಮಹಿಳೆಯರು ಆರ್ಥಿಕ ಅಸಮಾನತೆಯ ಕಾರಣದಿಂದ ಆರ್ಥಿಕ ಅಸಮಾನತೆ ಕಾರಣದಿಂದಾಗಿ ಸೂಕ್ತವಾದ ವೈದ್ಯಕೀಯ ಆರೋಗ್ಯಯಿಂದ ವಂಚಿತರಾಗುತ್ತಿದ್ದಾರೆ. ಹಳ್ಳಿ ಭಾಗದ ಹಾಗೂ ಬಡ ಕುಟುಂಬಗಳಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವು ಇನ್ನೂ ಆತಂಕಕಾರಿಯಾಗಿದೆ ತಾಯಂದಿರ ಆರೋಗ್ಯ ಕಾಪಾಡುವುದು ಕೇವಲ ಕುಟುಂಬದ ಜವಾಬ್ದಾರಿ ಅಷ್ಟೇ ಅಲ್ಲ ಸಮಗ್ರ ಸಮಾಜದ ಮತ್ತು ರಾಷ್ಟ್ರದ ಜವಾಬ್ದಾರಿ ಆಗಿದೆ ಆರೋಗ್ಯಕರ ತಾಯಿ ಆರೋಗ್ಯಕರ ಸಮಾಜ ಎಂಬ ಮೂಲತತ್ವದ ಆದರದ ಮೇಲೆ ಕೇಂದ್ರ ಸರ್ಕಾರ ಜನನಿ ಸುರಕ್ಷಾ ಯೋಜನೆಯನ್ನು(JSY) ಜಾರಿಗೆ ತಂದಿದೆ.


ಏನಿದು ಜನನಿ ಸುರಕ್ಷಾ ಯೋಜನೆ?

ರಾಷ್ಟ್ರೀಯ ಆರೋಗ್ಯ ಮಿಷನ್ ನಡೆಯಲಿ ಸುರಕ್ಷಿತ ತಾಯ್ತನದ ಮಧ್ಯಸ್ಥಿಕೆಯಾಗಿದೆ ಬಡ ಗರ್ಭಿಣಿಯರಲ್ಲಿ ಮಹಿಳೆಯರು ಹೆರಿಗೆಯನ್ನು ತಾಯಿ ಮತ್ತು ನವಜಾತ ಶಿಶುಗಳ ಮರಣವನ್ನು ಕಡಿಮೆ ಮಾಡುವ ಉದ್ದೇಶದಿಂದ 12 ಎಪ್ರಿಲ್ 2025 ರಂದು ಗೌರವ ಗೌರವಾನ್ವಿತ ಪ್ರಧಾನಮಂತ್ರಿಯವರು ಈ ಯೋಜನೆಯನ್ನು ಜಾರಿಗೆ ತಂದರು.

ಗರ್ಭಿಣಿಯರಿಗೆ ಆರ್ಥಿಕ ನೆರವು ಒದಗಿಸಿ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೂ ಸಮಾನವಾಗಿ ಆರೋಗ್ಯಕರ ಸೌಲಭ್ಯ ಒದಗಿಸುವುದು ಇದರ ಗುರಿಯಾಗಿದೆ ಅಷ್ಟೇ ಅಲ್ಲದೆ ಬಡ ಕುಟುಂಬದ ಮಹಿಳೆಯರು ಖರ್ಚಿನ ಚಿಂತೆ ಇಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಿಶ್ಚಿಂತೆಯಿಂದ ಹೆರಿಗೆ ಮಾಡಿಸಿಕೊಳ್ಳಬಹುದು

ಯೋಜನೆಯ ಮುಖ್ಯ ಅಂಶಗಳು:-

ಆರ್ಥಿಕ ಸಹಾಯ

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆಯ ಪಾವತಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಇದು ಸುರಕ್ಷಿತ ಹೆರಿಗೆ ಹಣಕಾಸಿನ ನೆರವು ನೀಡುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.

ರಾಜ್ಯವಾರು ವರ್ಗೀಕರಣ

ಕಡಿಮೆ ಕಾರ್ಯಕ್ಷಮತೆಯ ರಾಜ್ಯಗಳು:- ಉತ್ತರ ಪ್ರದೇಶ ಉತ್ತರಕಾಂಡ ಬಿಹಾರ ಮಧ್ಯಪ್ರದೇಶ ಛತೀಸ್ ಗಡ ಅಸ್ಸಾಂ ರಾಜಸ್ಥಾನ್ ಒಡಿಸ್ಸಾ ಜಮ್ಮು ಅಂಡ್ ಕಾಶ್ಮೀರ್

ಹೆಚ್ಚು ಕಾರ್ಯಕ್ಷಮತೆ ರಾಜ್ಯಗಳು:- ಕರ್ನಾಟಕ ಕೇರಳ ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣ ಇತ್ಯಾದಿ ರಾಜ್ಯಗಳು

ಸುರಕ್ಷಿತ ಹೆರಿಗೆ ಆದ್ಯತೆ

ಈ ಯೋಜನೆಯ ಮುಖ್ಯ ಗುರಿ ಎಂದರೆ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರಿಗೆ ಮನೆಯಲ್ಲಿ ಹೆರಿಗೆ ಮಾಡಿಸುವುದನ್ನು ತಪ್ಪಿಸಿ ಸರ್ಕಾರಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದನ್ನು ಪ್ರೋತ್ಸಾಹಿಸುವುದು ಇದರಿಂದ ತಾಯಿ ಮತ್ತು ನವಜಾತ ಶಿಶುವಿನ ಮರಣ ಪ್ರಮಾಣವನ್ನು ತಪ್ಪಿಸುವುದು

“ತಾಯಿಯ ಕನಸು, ಮಗುವಿನ ಭವಿಷ್ಯ, ಕುಟುಂಬದ ನೆಮ್ಮದಿ – ಸರ್ಕಾರದ ಪ್ರೋತ್ಸಾಹದಿಂದ ಸಾಧ್ಯವಾಗುತ್ತದೆ”.

ಈ ಯೋಜನೆ ಕೇವಲ ಹಣಕಾಸಿನ ಪೂರೈಕೆ ಅಲ್ಲ, ಇದು ಮಾನವೀಯತೆ, ಪ್ರೀತಿ, ಮತ್ತು ಸಮಾಜದ ಜವಾಬ್ದಾರಿ. ತಾಯಿಯ ಪ್ರತಿ ಹೆಜ್ಜೆ, ಮಗುವಿನ ಮೊದಲ ನಗು, ಕುಟುಂಬದ ಸಂತೋಷ – ಎಲ್ಲವನ್ನೂ ಬೆಂಬಲಿಸುವ ರಾಜ್ಯದ ನಿರ್ಧಾರ, ಪ್ರತಿಯೊಬ್ಬ ಕುಟುಂಬದ ಜೀವನದಲ್ಲಿ ಬೆಳಕಿನ ಕಿರಣವಾಗಿ ಪ್ರಕಾಶಿಸುತ್ತದೆ.

ಯೋಜನೆಯ ಪರಿಚಯ :-

ಯೋಜನೆಯ ಹೆಸರುಜನನಿ ಸುರಕ್ಷಾ ಯೋಜನೆ (JSY)
ಜಾರಿಗೆ ತಂದ ಇಲಾಖೆಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ
ಫಲಾನುಭವಿಗಳುಬಡ ರೇಖೆಗಿಂತ ಕೆಳಗಿನ ಕುಟುಂಬದ ಗರ್ಭಿಣಿ ಮಹಿಳೆಯರು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ಮಹಿಳೆಯರು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವರು
ಸಹಾಯಧನ ಮೊತ್ತಗ್ರಾಮೀಣ ಪ್ರದೇಶ – ₹1,400 (ತಾಯಿಗೆ) + ₹600 (ಆಶಾ ಕಾರ್ಯಕರ್ತೆ) ನಗರ ಪ್ರದೇಶ – ₹1,000 (ತಾಯಿಗೆ) + ₹200 (ಆಶಾ ಕಾರ್ಯಕರ್ತೆ)
ಉದ್ದೇಶಸುರಕ್ಷಿತ ಹೆರಿಗೆಗೆ ಉತ್ತೇಜನ ನೀಡುವುದು, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವುದು, ಗರ್ಭಿಣಿಯರಿಗೆ ಆರ್ಥಿಕ ಸಹಾಯಧನ ಆರ್ಥಿಕ ಸಹಾಯ ನೀಡುವುದು

JSY ಯೋಜನೆಯ ಮುಖ್ಯ ಉದ್ದೇಶ (Purpose) :-

  • ಗರ್ಭಾವಸ್ಥೆ ಮತ್ತು ಹೆರಿಗೆ ಸಮಯದಲ್ಲಿ ಸಂಭವಿಸುವ ಅಪಾಯಗಳನ್ನು ತಪ್ಪಿಸಿ ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು
  • ಜನನದ ನಂತರ ಶಿಶುಗಳ ಸುರಕ್ಷತೆ ಮತ್ತು ಆರೈಕೆ ಖಚಿತಪಡಿಸಿ ನವಜಾತ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು
  • ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಿ ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆಗೆ ಪ್ರೋತ್ಸಾಹ ನೀಡುವುದು
  • ಹೆರಿಗೆ ಸಂಬಂಧಿತ ವೆಚ್ಚದ ಭಾರವನ್ನು ಕಡಿಮೆ ಮಾಡಿ ಬಡ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವುದು
  • ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರನ್ನು ಆರೋಗ್ಯ ಕೇಂದ್ರಗಳಿಗೆ ಸಂಪರ್ಕಿಸಿ ಗ್ರಾಮೀಣ ಮತ್ತು ದೂರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸುಲಭಗೊಳಿಸುವುದು

ಕರ್ನಾಟಕದಲ್ಲಿ ಜನನಿ ಸುರಕ್ಷಾ ಯೋಜನೆ (JSY) :-

ಭಾರತದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮುಂದುವರೆದ ರಾಜ್ಯಗಳಲ್ಲಿ ಸೇರಿರುವ ಕಾರಣ ರಾಜ್ಯವನ್ನು ಹೆಚ್ಚು ಕಾರ್ಯಕ್ಷಮ ರಾಜ್ಯವಾಗಿ ಪರಿಗಣಿಸಲಾಗಿದೆ JSY ಯೋಜನೆಯ ಮುಖ್ಯ ಉದ್ದೇಶ ತಾಯಿ ಮತ್ತು ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಿ ಗ್ರಾಮೀಣ ಭಾಗದ ಗರ್ಭಿಣಿ ತಾಯಂದರಿಗೆ ಸುರಕ್ಷಿತ ಹೆರಿಗೆ ಮಾಡಲು ನೆರವಾಗುತ್ತದೆ.

ಕರ್ನಾಟಕ ಜೆ ಎಸ್ ವೈ ಸೌಲಭ್ಯಗಳು ಬಡ ಕುಟುಂಬಗಳ ಗರ್ಭಿಣಿಯರಿಗೆ (JSY) ಆಸ್ಪತ್ರೆ ಹೆರಿಗೆಗೆ ಆರ್ಥಿಕ ನೆರವು ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡುವುದು ಮನೆಯಲ್ಲಿ ಹೆರಿಗೆ ಆದರೆ 500 ನಗರ ಆಸ್ಪತ್ರೆಯಲ್ಲಿ ಹೆರಿಗೆ ಆದರೆ 600 ಗ್ರಾಮೀಣ ಆಸ್ಪತ್ರೆಯಲ್ಲಿ ಆದರೆ 700, ಖಾಸಗಿ ಆಸ್ಪತ್ರೆಯಲ್ಲಿ ಸಿಚರೀನ್ ಶಾಸ್ತ್ರ ಚಿಕಿತ್ಸೆಗೆ 1500 ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡುವುದು.

ಈ ಯೋಜನೆ ಇತರೆ ಪ್ರಮುಖ ಅಂಶಗಳು:-

ಆಶಾ ಕಾರ್ಯಕರ್ತೆಯರ ಪಾತ್ರ:-

ಜನನಿ ಸುರಕ್ಷಾ ಯೋಜನೆಯ (JSY) ಯಶಸ್ಸಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಸೇತುವೆಯಂತೆ ಕೆಲಸ ನಿರ್ವಹಿಸುತ್ತಾರೆ. ಗರ್ಭಿಣಿಯರನ್ನು ಗುರುತಿಸಿ ನೋಂದಣಿ ಮಾಡುವುದು ಅವರಿಗೆ ಬೇಕಾಗುವ ದಾಖಲೆಗಳನ್ನು ಒದಗಿಸಲು ಸಹಾಯ ಮಾಡುವುದು ಸುರಕ್ಷಿತ ಹೆರಿಗೆಗೆ ಅನುಕೂಲವಾಗುವಂತೆ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ ಹಣಕಾಸಿನ ನೆರವು ನೀಡುವುದು. ಹೆರಿಗೆ ನಂತರ ತಾಯಿ ಮಗುವಿನ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು ಪೋಲಿಯೋ ಲಸಿಕೆ ಪೌಷ್ಟಿಕತೆ ಹಾಗೂ ಆರೋಗ್ಯ ಮಾರ್ಗದರ್ಶನ ನೀಡುವುದು.

ಜನನಿ ಶಿಶು ಸುರಕ್ಷಾ ಕಾರ್ಯಕ್ರಮ;-

ಜನನಿ ಸುರಕ್ಷಾ ಯೋಜನೆ ಭಾಗವಾದ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಗರ್ಭಿಣಿಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ತಗಲುವ ವೆಚ್ಚವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಗರ್ಭಿಣಿಯರಿಗೆ ಉಚಿತ ಹೆರಿಗೆ ಔಷಧಿ ಪರೀಕ್ಷೆಗಳು ಆಹಾರ ಆಸ್ಪತ್ರೆ ಶುಲ್ಕಗಳಿಂದ ವಿನಾಯಿತಿ ಸೇರಿದಂತೆ ಹಲವಾರು ಉಚಿತ ಸೇವೆಗಳನ್ನು ಒದಗಿಸುತ್ತದೆ.

ನವಜಾತ ಶಿಶುಗಳ ಆರೈಕೆ:-

ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳಿಗೆ 30 ದಿನದ ವರೆಗಿನ ಉಚಿತ ಚಿಕಿತ್ಸೆ ಔಷಧಿಗಳು ರೋಗ ನಿರ್ಣಯ ರಕ್ತ ಬಳಕೆದಾರರ ಶುಲ್ಕಗಳಿಂದ ವಿನಾಯಿತಿ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಹೋಗಲು ಮತ್ತು ಮನೆಗೆ ಹಿಂದಿರುಗಲು ಸಾರಿಗೆ ವೆಚ್ಚವನ್ನು ಬರಿಸುತ್ತದೆ

ಫಲಾನುಭವಿಗಳು;-

  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು
  • ಗ್ರಾಮೀಣ ಪ್ರದೇಶದ ಗರ್ಭಿಣಿ ಮಹಿಳೆಯರು
  • ಹಿಂದುಳಿದ ಮತ್ತು ಆರ್ಥಿಕ ದುರ್ಬಲ ವರ್ಗದ ಮಹಿಳೆಯರು
  • ಸರ್ಕಾರಿ ಆಸ್ಪತ್ರೆ ಅಥವಾ ಮಾನ್ಯತೆ ಪಡೆದ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಮಹಿಳೆಯರು 19 ವರ್ಷದ ಮೇಲ್ಪಟ್ಟ ಗರ್ಭಿಣಿ ಮಹಿಳೆಯರು

ಅಗತ್ಯ ದಾಖಲೆಗಳು :-

  • ಆಧಾರ್ ಕಾರ್ಡ್
  • ಬಿಪಿಎಲ್ ರೇಷನ್ ಕಾರ್ಡ್
  • ತಾಯಿ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆರೋಗ್ಯ ಕರ್ನಾಟಕ ಕಾರ್ಡ್
  • ವಿಳಾಸ ದೃಢೀಕರಣ
  • ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ:-

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿಶುಲ್ಕ ವಿರುವುದಿಲ್ಲ ಅರ್ಹ ಗರ್ಭಿಣಿ ಮಹಿಳೆಯರು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಅಥವಾ ಸ್ಥಳೀಯ ಆಶಾ ಕಾರ್ಯಕರ್ತೆಯರ ಮೂಲಕ ಅರ್ಜಿ ಸಲ್ಲಿಸಬಹುದು. ಹಣಕಾಸಿನ ನೆರವು ಸಾಮಾನ್ಯವಾಗಿ ಹೆರಿಗೆ ನಂತರ ಆಸ್ಪತ್ರೆಯಲ್ಲಿ ನೇರವಾಗಿ ವಿತರಿಸಲಾಗುತ್ತದೆ ಕರ್ನಾಟಕದ ಬಡ ಹಾಗೂ ಹಿಂದುಳಿದ ವರ್ಗದ ಗರ್ಭಿಣಿಯರಿಗೆ ಒಂದು ಆಸರೆಯಾಗಿದೆ ಆಸ್ಪತ್ರೆ ಹೆರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವ ಗುರಿ ಹೊಂದಿರುವ ಪ್ರಮುಖ ಯೋಜನೆಯಾಗಿದೆ

ನನ್ನ ಕೊನೆಯ ಮಾತು:-

ಗರ್ಭಿಣಿ ತಾಯಂದಿರು ಹೆರಿಗೆಯ ನೋವಿನ ಸಮಯದಲ್ಲಿ ತಮ್ಮ ನವಜಾತ ಶಿಶುಗಳ ಬಗ್ಗೆ ಚಿಂತಿಸುವುದು ಬೇಡ ತಾಯಂದಿರಿಗೆ ಆರೋಗ್ಯಕರ ಪರಿಸರವನ್ನು ರೂಪಿಸಿ ನವಜಾತ ಶಿಶುಗಳ ಯೋಗ ಕ್ಷೇಮವನ್ನು ಕಾಯ್ದುಕೊಳ್ಳುವಳ್ಳಿ ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ಬಡ ಮತ್ತು ಮಾಧ್ಯಮ ವರ್ಗದ ಕುಟುಂಬದವರು ಸರ್ಕಾರಿ ಆಸ್ಪತ್ರೆಯನ್ನು ನಂಬಿ ಬರುತ್ತಾರೆ

ಆದರೆ ಈಗ ಹಣ ಕೊಡದೆ ಯಾವ ಕೆಲಸವು ಆಗುವುದಿಲ್ಲ ಹಣ ಕೊಡದೆ ಇದ್ರೆ ಗರ್ಭಿಣಿಯರನ್ನು ಮುಟ್ಟುವುದು ಇಲ್ಲ ಆ ರೀತಿಯ ವ್ಯವಸ್ಥೆ ಬಂದಿದೆ ಅದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದ್ದು ಈ ಯೋಜನೆ ಮೂಲಕ ಬಡ ಮತ್ತು ಮಧ್ಯಮ ವರ್ಗದ ಗರ್ಭಿಣಿಯರಿಗೆ ತುಂಬಾ ಅನುಕೂಲವಾಗಿದ್ದು ನೀವು ಈ ಯೋಜನೆಗೆ ಅರ್ಹರಾಗಿದ್ದಾರೆ ನೊಂದಾಯಿಸಿಕೊಳ್ಳಿ

ಇತರೆ ಪ್ರಮುಖ ಲಿಂಕುಗಳು:-

JSY

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment