
ನಮಸ್ಕಾರ ಸ್ನೇಹಿತರೆ, ನೀವೇನಾದರೂ ಬಿ.ಎಡ್ ಕೋರ್ಸ್ ಗೆ ಜಾಯಿನ್ ಆಗ್ಬೇಕು ಅಂತಿದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್! ಕೇವಲ ಒಂದೇ ವರ್ಷದಲ್ಲಿ ಬಿ.ಎಡ್ ಕೋರ್ಸ್ ಅನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಒಂದು ವರ್ಷದ ಬಿ.ಎಡ್ ಕೋರ್ಸ್ ಅನ್ನು ಪುನರಾರಂಭಿಸಲು ರಾಷ್ಟೀಯ ಶಿಕ್ಷಕರ ಶಿಕ್ಷಣ ಮಂಡಳಿಯು ನಿರ್ಧರಿಸಿದ್ದು, 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಇದು ಅನ್ವಯವಾಗಲಿದೆ.
NCTE B.Ed plan Changing in kannada
2026-27 ನೇ ಸಾಲಿನಲ್ಲಿ 2 ವರ್ಷದ ಬಿ.ಎಡ್ ಕೋರ್ಸ್ ಗಳು ಚಾಲ್ತಿಯಲ್ಲಿ ಇರಬಹುದಾ? 1 ವರ್ಷದ ಬಿ.ಎಡ್ ಕೋರ್ಸ್ ಎಲ್ಲರಿಗೂ ಅನ್ವಯವಾಗುತ್ತದೆಯೋ? ಕೇವಲ ಒಂದು ವರ್ಷದ ಬಿ.ಎಡ್ ಕೋರ್ಸ್ ಪಡೆದುಕೊಳ್ಳಲು ಏನೆಲ್ಲಾ ಅರ್ಹತೆ ಹೊಂದಿರಬೇಕು? ಎನ್ನುವ ಬಗ್ಗೆ ಕೆಳಗಿನ ಹಂತದಲ್ಲಿ ಮಾಹಿತಿಯನ್ನು ಪಡೆದುಕೊಳ್ಳೋಣ.
ಇದೇ ರೀತಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಾರ್ಥಿವೇತನ, ಶಿಕ್ಷಣ ವ್ಯವಸ್ಥೆಯಲ್ಲಾದ ಮಹತ್ವದ ಬದಲಾವಣೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ.
ಹೈಲೈಟ್ಸ್:
| 1. ಕೇವಲ ಒಂದು ವರ್ಷದಲ್ಲಿ ಬಿ.ಎಡ್ ಕೋರ್ಸ್ ಪೂರ್ಣಗೊಳಿಸಲು ಅವಕಾಶ. 2. ಒಂದು ವರ್ಷದ ಬಿ.ಎಡ್ ಕೋರ್ಸ್ 2026-27 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಾರಿ. 3. NCTE ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಈ ಕೋರ್ಸ್ ಪಡೆಯಲು ಅವಕಾಶ. |
ಶಿಕ್ಷಣ ವ್ಯವಸ್ಥೆಯಲ್ಲಾದ ಮಹತ್ವದ ಬದಲಾವಣೆ ಕುರಿತು:
ರಾಷ್ಟೀಯ ಶಿಕ್ಷಕರ ಶಿಕ್ಷಣ ಮಂಡಳಿಯು ಶಿಕ್ಷಕರ ತರಬೇತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಒಂದು ವರ್ಷದ ಬಿ.ಎಡ್ ಕೋರ್ಸ್ ಅನ್ನು ಜಾರಿಗೆ ತಂದಿದೆ. ಸುಮಾರು ಹತ್ತು ವರ್ಷಗಳ ನಂತರ 1 ವರ್ಷದ ಬಿ.ಎಡ್ ಕೋರ್ಸ್ ಕಾರ್ಯಕ್ರಮವನ್ನು ಪರಿಚಯಿಸುವ ಮೂಲಕ ಶಿಕ್ಷಕರ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ.
ಈ ಮಹತ್ವದ ಬದಲಾವಣೆಯು ರಾಷ್ಟೀಯ ಶಿಕ್ಷಣ ನೀತಿಗೆ ಅನ್ವಯಿಸಲಿದೆ. ಈ ಮಹತ್ವದ ಬದಲಾವಣೆಯು 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಅನ್ವಯವಾಗಲಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಶಿಕ್ಷಕ ವೃತ್ತಿಯನ್ನು ಸುಲಭಗೊಳಿಸಲು ಹಾಗೂ ಕಡಿಮೆ ಸಮಯದಲ್ಲಿ ವೃತ್ತಿಪರ ಅರ್ಹತೆ ಪಡೆದುಕೊಳ್ಳಲು ಇದನ್ನು ರೂಪಿಸಲಾಗಿದೆ.
2026-27 ನೇ ಸಾಲಿನಲ್ಲಿ ಎರಡು ವರ್ಷದ ಬಿ.ಎಡ್ ಕೋರ್ಸ್ ಚಾಲ್ತಿಯಲ್ಲಿ ಇರುತ್ತದೆಯೋ? ಇಲ್ಲವೋ?
ಈ ಒಂದು ವಿಷಯದ ಕುರಿತು ಗೊಂದಲ ಬೇಡ ಏಕೆಂದರೆ, 2026-27 ನೇ ಸಾಲಿನಲ್ಲೂ ಕೂಡ ಎರಡು ವರ್ಷದ ಬಿ.ಎಡ್ ಕೋರ್ಸ್ ಚಾಲ್ತಿಯಲ್ಲಿರುತ್ತದೆ.
ಮೂರು ವರ್ಷದ ಪದವಿ ಮುಗಿಸಿದ ವಿದ್ಯಾರ್ಥಿಗಳು ಎರಡು ವರ್ಷದ ಬಿ.ಎಡ್ ಕೋರ್ಸ್ ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗುತ್ತದೆ.
1 ವರ್ಷದ ಬಿ.ಎಡ್ ಕೋರ್ಸ್ ಎಲ್ಲರಿಗೂ ಅನ್ವಯವಾಗುತ್ತದೆಯೇ?
ಎಲ್ಲಾ ವಿದ್ಯಾರ್ಥಿಗಳು 1 ವರ್ಷದ ಬಿ.ಎಡ್ ಕೋರ್ಸ್ ಅನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಕೇವಲ ಕೆಲವು ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅವರು ಯಾರೆಂದರೆ ,
- ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು 1 ವರ್ಷದ ಬಿ.ಎಡ್ ಕೋರ್ಸ್ ಪಡೆಯಲು ಅರ್ಹರಾಗಿರುತ್ತಾರೆ.
- 4 ವರ್ಷದ ಆನರ್ ಡಿಗ್ರಿ ಪೂರ್ಣಗೊಳಿಸಿದವರು 1 ವರ್ಷದ ಬಿ.ಎಡ್ ಕೋರ್ಸ್ ಪಡೆಯಲು ಅರ್ಹರಾಗಿರುತ್ತಾರೆ.
NCTE ಈ ಕೋರ್ಸ್ ಜಾರಿಗೊಳಿಸುವುದರ ಮುಖ್ಯ ಉದ್ದೇಶ:
1. ಸಮಯದ ಉಳಿತಾಯ:
ಸ್ನಾತಕೋತ್ತರ ಪದವಿ ಪಡೆದಿರುವವರು ಈಗಾಗಲೇ ತಮ್ಮ ವಿಷಯದಲ್ಲಿ ಹೆಚ್ಚಿನ ಪ್ರಾವೀಣ್ಯತೆ ಪಡೆದುಕೊಂಡಿರುತ್ತಾರೆ. ಅಂತಹವರಿಗೆ ಕೇವಲ ಒಂದು ವರ್ಷದಲ್ಲಿ ಬಿ.ಎಡ್ ಕೋರ್ಸ್ ಅನ್ನು ಮುಗಿಸುವ ಮೂಲಕ ಸಮಯವನ್ನು ಉಳಿಸಬಹುದಾಗಿದೆ.
2. ಉತ್ತಮ ಗುಣಮಟ್ಟದ ಶಿಕ್ಷಣ:
ಒಂದು ವರ್ಷದ ಬಿ.ಎಡ್ ಕೋರ್ಸ್ ನಲ್ಲಿ ಆಧುನಿಕ ಬೋಧನಾ ಪದ್ಧತಿ, ಮಕ್ಕಳ ಮನೋವಿಜ್ಞಾನ ಮತ್ತು ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
3. ಗುಣಮಟ್ಟದ ಶಿಕ್ಷಕರ ನೇಮಕಾತಿ:
ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಸುಲಭವಾಗಿ ಶಿಕ್ಷಕ ವೃತ್ತಿಗೆ ನೇಮಕಗೊಳ್ಳುವಂತೆ ಪ್ರೇರೇಪಿಸುವುದು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಲು ಅವಕಾಶವನ್ನು ಕಲ್ಪಿಸುವ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸುವುದು.
4. ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:
ಎರಡು ವರ್ಷದ ಬಿ.ಎಡ್ ಕೋರ್ಸ್ ಅನ್ನು ಒಂದು ವರ್ಷಕ್ಕೆ ಕಡಿಮೆ ಮಾಡಿರುವುದರಿಂದ ಎಕ್ಸಾಮ್ ಫೀಸ್, ಕಾಲೇಜ್ ಫೀಸ್ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ವೆಚ್ಚಗಳು ಕಡಿಮೆಯಾಗುತ್ತದೆ. ಇದರಿಂದ ಶೈಕ್ಷಣಿಕ ಖರ್ಚು ಕಡಿಮೆಯಾಗುತ್ತದೆ.
ಒಂದು ವರ್ಷದ ಬಿ.ಎಡ್ ಕೋರ್ಸ್ ಪಡೆದುಕೊಳ್ಳಲು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳು:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಆನರ್ ಡಿಗ್ರಿ ಅಥವಾ ಸ್ನಾತ್ತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳು ಪದವಿಯಲ್ಲಿ ಶೇಕಡಾ 45% ಅಂಕವನ್ನು ಗಳಿಸಿರಬೇಕು.
- ಸಾಮಾನ್ಯವರ್ಗದ ಅಭ್ಯರ್ಥಿಗಳು ಪದವಿಯಲ್ಲಿ ಶೇಕಡಾ 50% ಅಂಕವನ್ನು ಗಳಿಸಿರಬೇಕು.
| ವಿಶೇಷ ಸೂಚನೆ: “ಅಭ್ಯರ್ಥಿಗಳು NCTE ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮಾತ್ರ ಒಂದು ವರ್ಷದ ಬಿ.ಎಡ್ ಕೋರ್ಸ್ ಅನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.” |
ಒಂದು ವರ್ಷದ ಬಿ.ಎಡ್ ಕೋರ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
2026-27 ನೇ ಸಾಲಿನಲ್ಲಿ ಈ ಕೋರ್ಸ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- NCTE ಮಾನ್ಯತೆ ಪಡೆದ ಕಾಲೇಜುಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಿಮ್ಮ ಇಮೇಲ್ ಐಡಿ ಹಾಗೂ ಫೋನ್ ನಂಬರ್ ಬಳಸಿ ರಿಜಿಸ್ಟೇಷನ್ ಮಾಡಿಕೊಳ್ಳಿ.
- ನಂತರ ವೈಯಕ್ತಿಕ ವಿವರ, ಆನರ್ ಡಿಗ್ರಿ ಅಥವಾ ಸ್ನಾತ್ತಕೋತ್ತರ ಪದವಿಯಲ್ಲಿ ಪಡೆದ ಅಂಕವನ್ನು ನಮೂದಿಸಿ.
- ನಂತರ ಪಾಸ್ ಪೋರ್ಟ್ ಅಳತೆಯ ಫೋಟೋ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪದವಿ ಅಂಕಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
| ಮುಖ್ಯ ಮಾಹಿತಿ: “ನೀವು ಈ ಕೋರ್ಸ್ ಪ್ರವೇಶ ಪಡೆಯಲು ಅರ್ಹರಾಗಬೇಕಾದರೆ, ರಾಷ್ಟೀಯ ಪರೀಕ್ಷಾ ಸಂಸ್ಥೆ ನಡೆಸುವ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.” |
ಅಂತಿಮ ಮಾತು:
ಒಂದು ವರ್ಷದ ಬಿ.ಎಡ್ ಕೋರ್ಸ್ ಗಳು 2026-27 ನೇ ಶೈಕ್ಷಣಿಕ ವರ್ಷದಲ್ಲಿ ಚಾಲ್ತಿಯಲ್ಲಿ ಬರಲಿದ್ದು, ಎರಡು ವರ್ಷದ ಬಿ.ಎಡ್ ಕೋರ್ಸ್ ಹಾಗೂ ಒಂದು ವರ್ಷದ ಬಿ.ಎಡ್ ಕೋರ್ಸ್ ಎರಡು ಚಾಲ್ತಿಯಲ್ಲಿ ಇರುತ್ತದೆ.
ಮೂರು ವರ್ಷದ ಪದವಿ ಪೂರ್ಣಗೊಳಿಸಿದವರು ಎರಡು ವರ್ಷದ ಬಿ.ಎಡ್ ಕೋರ್ಸ್ ಅನ್ನು ಪಡೆದುಕೊಂಡರೆ ಸ್ನಾತ್ತಕೋತ್ತರ ಹಾಗೂ ಆನರ್ ಪದವಿ ಪೂರ್ಣಗೊಳಿಸಿದವರು ಒಂದು ವರ್ಷದ ಬಿ.ಎಡ್ ಕೋರ್ಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ನೀವೇನಾದರೂ ಒಂದು ವರ್ಷದ ಬಿ.ಎಡ್ ಕೋರ್ಸ್ ಅನ್ನು ಪಡೆಯಲು ಅರ್ಹರಾಗಿದ್ದರೆ, ಕೋರ್ಸ್ ಗೆ ಸೇರುವ ಮೊದಲು ಆ ವಿಶ್ವವಿದ್ಯಾಲಯ ಅಥವಾ ಕಾಲೇಜು NCTE ಇಂದ ಮಾನ್ಯತೆ ಪಡೆದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಹಾಗೂ ಕಡಿಮೆ ಸಮಯದಲ್ಲಿ ನೀವು ಶಿಕ್ಷಕರಾಗುವ ಕನಸ್ಸನ್ನು ನನಸ್ಸು ಮಾಡಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Free Electric Sewing Machine: ಮಹಿಳೆಯರಿಗೆ ಉಚಿತ ವಿದ್ಯುತ್ ಹೊಲಿಗೆಯಂತ್ರ – ಇಂದೇ ಅರ್ಜಿ ಹಾಕಿ!
- Labour Pension : ರೂ2000/- ಯಾರೆಲ್ಲ ಮಾಡಿಸಿಲ್ಲವೋ ಇಂದೇ ಮಾಡಿಸಿ : ಹೇಗೆ ಗೊತ್ತಾ ಸಿಂಪಲ್!
- PM Vishwakarma : ₹15,000 ಸಹಾಯಧನ! ಪಿಎಂ ವಿಶ್ವಕರ್ಮ ಟೈಲರಿಂಗ್ ಮಷಿನ್ ಸ್ಕೀಮ್ ! ಭರ್ಜರಿ ಆನ್ಲೈನ್ ಅಪ್ಲಿಕೇಶನ್ !
- Free Tarpaulin : ರೈತರಿಗೆ ಉಚಿತ ಟಾರ್ಪಲ್ ವಿತರಣೆ.! ಆಫ್ ಲೈನ್ ಮತ್ತು ಆನ್ ಲೈನ್ ಅರ್ಜಿ!






