Kukkuta Sanjeevini : ರೂ4.5 ಲಕ್ಷ ಸಹಾಯಧನ : ಕುಕ್ಕುಟ ಸಂಜೀವಿನಿ ಯೋಜನೆ – ಸರಳ ಅರ್ಜಿ ಪ್ರಕ್ರಿಯೆ!

February 14, 2026 6:58 AM

ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಕಾರಣದಿಂದಾಗಿ ಕುಕುಟ ಸಂಜೀವಿನಿ (Kukkuta Sanjeevini) ಎಂಬ ಅದ್ಭುತ ಯೋಜನೆಯನ್ನು ನಮ್ಮ ಸರ್ಕಾರ ರೂಪಿಸಿದೆ ಪಶು ಸಂಗೋಪನೆ ಮತ್ತು ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯ ಮೂಲಕ ಕೋಳಿ ಸಾಕಾಣಿಕೆ ಮತ್ತು ಶೆಡ್ ಗೆ ಸಹಾಯಧನ ನೀಡಲಾಗುತ್ತಿದೆ.

Kukkuta Sanjeevini In Kannada

Join WhatsApp

Join Now

Join Telegram

Join Now

ಮಹಿಳೆಯರು ಕೇವಲ ಹಣವನ್ನು ಅವರಿವರು ಕೊಡುವ ಹಣವನ್ನು ನಂಬಿ ಏನು ಕೆಲಸ ವಿಲ್ಲದೆ ಕೂರುವ ಬದಲು ತಾವೇ ಸ್ವಂತ ಉದ್ಯಮ ಶುರು ಮಾಡಿ ಕೈ ತುಂಬಾ ಸಂಪಾದಿಸಲಿ ಎಂದು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ ಇದು ನಿಜಕ್ಕೂ ಗ್ರಾಮೀಣ ಭಾಗದ ಮಹಿಳೆಯರ ಪಾಲಿಗೆ ಸಂಜೀವಿಧಿಯೇ ಆಗಿದೆ

ಮುಖ್ಯವಾಗಿ 2026 ನೇ ಸಾಲಿನಲ್ಲಿ ಇದೇ ಮೊದಲ ಬಾರಿ ಅಂದರೆ ಫೆಬ್ರವರಿ ತಿಂಗಳಲ್ಲಿ ಆನ್ಲೈನ್ ಅಪ್ಲಿಕೇಶನ್ ಆರಂಭಿಸಿರುವಂತದ್ದು ಸ್ವಂತ ಉದ್ಯೋಗದ ಕನಸು ಕಾಣುವ ಮಹಿಳೆಯರಿಗೆ ಇದು ವರದಾನವಾಗಿದೆ

ಈ ಯೋಜನೆಯ ಮೂಲಕ ಉಚಿತ ಕೋಳಿ ಮರಿಗಳು ಕೋಳಿ ಶೆಡ್ ನಿರ್ಮಾಣಕ್ಕೆ ಸಹಾಯಧನ ತರಬೇತಿ ಮತ್ತು ಖಚಿತ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆಮಹಿಳೆಯರು ಮನೆಯಲ್ಲಿಯೇ ಕೋಳಿ ಸಾಕಾಣಿಕೆಯ ಮುಖಾಂತರ ಆದಾಯವನ್ನು ಗಳಿಸಬೇಕು ಹಾಗೆ ಗ್ರಾಮೀಣ ಭಾಗದಲ್ಲಿ ಇರುವ ರೈತರ ಮಕ್ಕಳು ಅಥವಾ ರೈತರು ಇನ್ನಿತರೆ ಕೃಷಿ ಜೊತೆಗೆ ಕೋಳಿ ಸಾಕಾಣಿಕೆಯ ಕೃಷಿಯನ್ನು ಆರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬೇಕೆನ್ನುವ ಉದ್ದೇಶದಿಂದ ಸರ್ಕಾರ ಯೋಜನೆಯನ್ನ ಅನುಷ್ಠಾನ ಗೊಳಿಸಿರುವಂತದ್ದು.

ಏನಿದು ಕುಕುಟ ಸಂಜೀವಿನಿ ಯೋಜನೆ:-

ಆತ್ಮೀಯರೇ ನಿಮಗೆಷ್ಟು ಗೊತ್ತಿದೆ ಈ ಕುಕುಟ ಯೋಜನೆಯ (Kukkuta Sanjeevini) ಬಗ್ಗೆ, ಯಾವಾಗಲಾದರೂ ಈ ಯೋಚನೆಯ ಲಾಭವನ್ನು ಪಡೆದಿದ್ದೀರ ?

ಒಕ್ಕೂಟ ಸಂಜೀವಿನಿ ಯೋಜನೆ 2024 25ರ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಘೋಷಿಸಲಾದ ಒಂದು ಪ್ರಮುಖ ಯೋಜನೆಯಾಗಿದ್ದು ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣಕ್ಕೆ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಮೀಸಲಾಗಿದೆ. ಕೋಳಿ ಸಾಕಾಣಿಕೆ ಮಾಡಲು ಹೆಚ್ಚು ಜಾಗದ ಅವಶ್ಯಕತೆ ಇರುವುದಿಲ್ಲ ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಉದ್ಯಮ ಶುರು ಮಾಡಬಹುದು ಸರಿಯಾದ ತರಬೇತಿ ಹೊಂದಿದ್ದರೆ ಉತ್ತಮ ರೀತಿಯ ಆದಾಯವು ಸಹ ಸಿಗುವುದು


ಪಶು ಸಂಗೋಪನ ಇಲಾಖೆಯ ವತಿಯಿಂದ ನಾಟಿ ಕೋಳಿಗಳನ್ನು ವಿತರಿಸಲಾಗುತ್ತದೆ ಮತ್ತುಆರ್ಥಿಕ ನೆರವು ನೀಡಲಾಗುತ್ತದೆ ಅಷ್ಟೇ ಅಲ್ಲದೆ ಪ್ರತಿ ಸಂಘಕ್ಕೆ 25,000 ನೀಡಲಾಗುತ್ತದೆ ಗ್ರಾಮಗಳು ಇದರ ಲಾಭ ಪಡೆದಿವೆ. ಈ ಯೋಜನೆಯ ಕೇವಲ ಕೋಳಿ ಸಾಕಾಣಿಕೆಯನ್ನು ಉಪಯೋಗಿಸುವುದಷ್ಟೇ ಅಲ್ಲದೆ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವುದು ಗೌರವಾನ್ವಿತ ಬದುಕನ್ನು ಕಟ್ಟಿಕೊಡುವ ಹಂಬಲ ಸರ್ಕಾರದ್ದು

ಯೋಜನೆಯ ಕಿರು ಚಿತ್ರಣ:

ಯೋಜನೆಯ ಹೆಸರು ಕುಕುಟ ಸಂಜೀವಿನಿ ಯೋಜನೆ (Kukkuta Sanjeevini)
ಅರ್ಜಿ ಸಲ್ಲಿಸಲು ಅರ್ಹರಾದ ಅಭ್ಯರ್ಥಿಗಳುಗ್ರಾಮೀಣ ಭಾಗದ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು
ಫಲಾನುಭವಿಗಳು ಪಡೆಯುವ ಸೌಲಭ್ಯಉಚಿತ ನಾಟಿ ಕೋಳಿ ಮರಿಗಳು ಕೋಳಿ ಶೆಡ್ ನಿರ್ಮಾಣಕ್ಕೆ ಸಹಾಯಧನ ಖಚಿತ ಮಾರುಕಟ್ಟೆ ವ್ಯವಸ್ಥೆ
ಅರ್ಜಿ ಸಲ್ಲಿಸುವ ವಿಧಾನಆಫ್ ಲೈನ್ ಮತ್ತು ಆಫ್ ಲೈನ್

ಯೋಜನೆ ಪ್ರಮುಖ ಗುರಿ :-

  • ಸ್ವಾವಲಂಬನೆ ರೈತರು ಕೇವಲ ಬೆಳೆ ಬೇಸಾಯಗಳ ಆಧಾರಿತ ಕೃಷಿಯನ್ನ ನಂಬಿ ಬದುಕದೆ ವರ್ಷಪೂರ್ತಿ ಒಂದು ರೀತಿಯಲ್ಲಿ ಸ್ಥಿರವಾದ ಆದಾಯ ತರುವ ನಾಟಿ ಕೋಳಿ ಸಾಕಾಣಿಕೆಯಂತಹ ಕಸುಬಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯಾ ಪ್ರಮುಖ ಗುರಿಯಾಗಿದೆ.
  • ಸಣ್ಣ ಮತ್ತು ಅತಿ ಸಣ್ಣ ರೈತರು:- ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಗ್ರಾಮೀಣ ಕುಟುಂಬಗಳಿಗೆ ಪ್ರೋಟೀನ್ ಯುಕ್ತ ಮೊಟ್ಟೆ, ಮಾಂಸ ಪೌಷ್ಟಿಕತೆಯನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶ.
  • ದೀರ್ಘಕಾಲದವರೆಗೆ ಹೊಸ ಉದ್ಯೋಗವನ್ನು ಮುಂದುವರಿಸಲು ಅವಕಾಶ ಕೇವಲ ಹಣಕಾಸಿನ ನೆರವು ನೀಡುವುದಕ್ಕಿಂತ ಹೆಚ್ಚಾಗಿ ರೈತರ ಜಮೀನಿನಲ್ಲಿ ಒಂದು ಸುಸ್ಸರ್ಜಿತವಾದ ಕೋಳಿ ಎಂಬ ಕಾಯಂ ಆಸ್ತಿಯನ್ನು ಹುಟ್ಟಿ ಹಾಕುವುದು ಹಾಗೆ ಇದು ರೈತರು ದೀರ್ಘಕಾಲದವರೆಗೆ ಹೊಸ ಉದ್ಯೋಗವನ್ನು ಮುಂದುವರಿಸಲು ಅವಕಾಶ ಯೋಜನೆಯಿಂದ ಸಿಕ್ಕಂತಾಗುತ್ತದೆ.
  • ವಲಸೆ ತಪ್ಪಿಸುವುದು:-ಇಂದಿನ ದಿನಗಳಲ್ಲಿ ಹಳ್ಳಿಯಲ್ಲಿರುವಂತಹ ಯುವಕರು ತಮ್ಮ ರೈತಪಿ ಕೆಲಸವನ್ನು ಬಿಟ್ಟು ಉದ್ಯೋಗವನ್ನು ಹುಡುಕಿ, ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದನ್ನು ಮನಗಂಡ ಸರ್ಕಾರ ಇದನ್ನ ತಪ್ಪಿಸಲೇಬೇಕೆಂದು ಸ್ವಂತ ಜಮೀನಿನಲ್ಲಿಯೇ ಲಾಭದಾಯಕ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
  • ರೈತರು ಮತ್ತು ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಮೂಲ ನಿರ್ಮಿಸುವುದು

ಈ ಯೋಜನೆ ಮೂಲಕ ಏನೆಲ್ಲ ಸೌಲಭ್ಯಗಳು ಸಿಗುತ್ತವೆ:-

ಉಚಿತ ನಾಟಿಕೋಳಿ ಮರಿಗಳು;-

ಉದ್ಯಮ ಶುರು ಮಾಡಲು ಯಾವುದೇ ಬಂಡವಾಳದ ಅವಶ್ಯಕತೆ ಬರುವುದಿಲ್ಲ ಯಾಕೆಂದರೆ ನಾಟಿ ಕೋಳಿ ಮರಿಗಳನ್ನು ಪೂರೈಸಲಾಗುತ್ತದೆ ಇದರಿಂದಾಗಿ ಮಹಿಳೆಯರು ಗಂಡ ಅಥವಾ ಕುಟುಂಬದವರ ಹತ್ತಿರ ಯಾವುದೇ ಹಣ ಕೇಳಿ ಅವಳನ್ನು ಕೀಳಾಗಿ ಕಾಣುವ ಅವಶ್ಯಕತೆ ಬರುವುದಿಲ್ಲ.

ಕೋಳಿ ಶೆಡ್ ನಿರ್ಮಾಣಕ್ಕೆ ಸರ್ಕಾರದ ನೆರವು:-

ಕೋಳಿ ಸಾಕಾಣಿಕೆಗೆ ಸರಿಯಾದ ರೀತಿಯ ಶೆಡ್ ಇಲ್ಲದಿದ್ದರೆ ಕೋಳಿಗಳು ಮಳೆ ಚಳಿಯಿಂದಾಗಿ ಮರಣ ಹೊಂದಬಹುದು ಉದ್ಯಮ ಯಶಸ್ವಿಯಾಗಿ ಸಾಗಲು ಸಾಧ್ಯವಾಗುವುದಿಲ್ಲ ಅದನ್ನು ಗಮನಹರಿಸಿ ಸರ್ಕಾರ

  • 500 ಕೋಳಿಗಳಿಗೆ ಶಡ್ ನಿರ್ಮಾಣಕ್ಕೆ 4.5 ಲಕ್ಷ ಸಹಾಯಧನ
  • 1000 ಕೋಳಿಗಳಿಗೆ 10 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡುತ್ತಿದೆ

ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ಧನ;-

ಪ್ರತಿ ಸಂಘಕ್ಕೆ ಸುಮಾರು 25,000/- ವರೆಗೆ ಆರ್ಥಿಕ ನೆರವು ನೀಡುತ್ತದೆ. ಕೋಳಿ ಸಾಕಾಣಿಕೆ ಆರಂಭಿಸಲು ಪ್ರಾಥಮಿಕ ವೆಚ್ಚಕ್ಕೆ ಇದು ಸಹಾಯವಾಗುತ್ತದೆ ಸಂಘದ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸಲು ಈ ಯೋಜನೆ ಮುಖ್ಯವಾಗಿದೆ ಅಷ್ಟೇ ಅಲ್ಲದೆ ಈ ಮೂಲಕ ಸ್ವಸಹಾಯ ಸಂಘಗಳು ಒಟ್ಟಾಗಿ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸಬಹುದು.

ಖಚಿತ ಮಾರುಕಟ್ಟೆ ವ್ಯವಸ್ಥೆ:-

ಸಾಕಿದ ಕೋಳಿಗಳನ್ನು ಮಾರಾಟ ಮಾಡಲು ಸರ್ಕಾರವೇ ಖಚಿತ ಮಾರುಕಟ್ಟೆ ಸಂಪರ್ಕವನ್ನು ಒದಗಿಸುತ್ತದೆ ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ಉತ್ತಮ ದರ ಸಿಗುತ್ತದೆ ಮಾರುಕಟ್ಟೆ ಸಂಪರ್ಕ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಮಹಿಳೆಯರಿಗೆ ಆದಾಯದ ಭದ್ರತೆ ಒದಗಿಸುತ್ತದೆ ಇದರಿಂದಾಗಿ ಮಹಿಳೆಯರು ಆತ್ಮವಿಶ್ವಾಸದಿಂದ ಹಾಗೂ ನಿತ್ಯಂತತೆಯಿಂದ ಕೋಳಿ ಸಾಕಾಣಿಕೆ ಆರಂಭಿಸಬಹುದು.

ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನ:-

ಕೋಳಿ ಸಾಕಾಣಿಕೆಯ ಸರಿಯಾದ ವಿಧಾನಗಳ ಕುರಿತು ಸರ್ಕಾರವೇ ತರಬೇತಿ ನೀಡುತ್ತದೆ ಆಹಾರ ಆರೈಕೆ ಮತ್ತು ಆರೋಗ್ಯದ ನಿವಾರಣೆ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ಕೊಡುತ್ತದೆ ರೋಗ ನಿಯಂತ್ರಣ ಮತ್ತು ಲಸಿಕೆ ಕುರಿತು ಮಾರ್ಗದರ್ಶನ ಪಶು ವೈದ್ಯಕೀಯ ಸೇವೆಗಳ ಸಹಾಯ ಇದರ ಮೂಲಕ ಮಹಿಳೆಯರು ವೈಜ್ಞಾನಿಕವಾಗಿ ಕೋಳಿ ಸಾಕಾಣಿಕೆ ಮಾಡಿ ಉತ್ತಮ ಲಾಭ ಗಳಿಸಬಹುದು.

ಯಾವುದೇ ರಿಸ್ಕ್ ಇಲ್ಲದೆ ಹೆಚ್ಚಿನ ಆದಾಯ:-

ಯೋಜನೆಯ ಪ್ರಮುಖ ವಿಶೇಷತೆ ಏನೆಂದರೆ ಮಹಿಳೆಯರು ಯಾವುದೇತಲೆ ಬಿಸಿಯಿಲ್ಲದೆ ಸ್ಥಿರ ಹಾಗೂ ಉತ್ತಮ ಆದಾಯ ಗಳಿಸಬಹುದು ಸರ್ಕಾರವೇ ನಾಟಿ ಕೋಳಿ ಮರಿಗಳನ್ನು ಕೊಡುವುದರಿಂದ ಯಾವುದೇ ರೀತಿಯ ಪ್ರಾರಂಭಿಕ ವೆಚ್ಚ ಇರುವುದಿಲ್ಲ ಸ್ವಂತ ಹಣ ಹಾಕುವಾಗ ಅಗತ್ಯ ಕಡಿಮೆ ಇರುತ್ತದೆ ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡುವ ಮೂಲಕ ತಪ್ಪುಗಳ ಸಾಧ್ಯತೆ ಕಡಿಮೆ ಇರುತ್ತದೆ ಗೌರ್ಮೆಂಟ್ ಪಶು ವೈದ್ಯಕೀಯ ಸೇವೆ ನೋಡಿಕೊಳ್ಳುವುದರಿಂದ ರೋಗ ರೋಗಗಳಿಂದ ರಕ್ಷಣೆ ಕೋಳಿ ಸಾಕಿದರೆ ಮೊಟ್ಟೆಯಲ್ಲಿ ಮಾರಾಟ ಮಾಡುವುದು ಹೇಗೆ ಎಂಬ ಭಯ ಬೇಡ ನಿಮ್ಮ ಕೋಳಿ ಇಡುವ ಮೊಟ್ಟೆಯನ್ನು ಸರ್ಕಾರವೇ ಖರೀದಿಸುತ್ತದೆ ಇದರಿಂದ ಯಾವುದೇ ಸಾರಿಗೆ ವೆಚ್ಚ ಇರುವುದಿಲ್ಲ.

ಈ ಯೋಜನೆಗೆ ಯಾರು ಅರ್ಜಿ ಹಾಕಬಹುದು:-

  • ಗ್ರಾಮೀಣ ಭಾಗದ ಮಹಿಳೆಯರು
  • ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು
  • ಸಣ್ಣ ಮತ್ತು ಅಲ್ಪಸ್ವಲ್ಪ ಭೂಮಿ ಹೊಂದಿದ ರೈತ ಮಹಿಳೆಯರು
  • ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ ಹೊಂದಿರುವ ಮಹಿಳೆಯರು
  • ಬಡತನ ರೇಖೆಗಿತ ಕೆಳಗಿರುವ ಮಹಿಳೆಯರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರು
  • ತಮ್ಮ ಮನೆಯಲ್ಲೇ ಉದ್ಯಮ ಆರಂಭಿಸಲು ಬಯಸುವವರು
ಗಮನಿಸಿ:- ಈ ಯೋಜನೆ ಬಗ್ಗೆ ನಿಮಗೆ ಯಾವುದಾದರೂ ಗೊಂದಲಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೆ ಸರ್ಕಾರದ ಅಧಿಕೃತ ಪಶು ಸಂಗೋಪನೆ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಊರಿನ ಪಶು ಇಲಾಖೆಗೆ ಹೋಗಿ ಅಧಿಕಾರಿಗಳ ಬಳಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ

ಅಗತ್ಯ ದಾಖಲೆಗಳು :-

  • ಕೋಳಿ ಶೆಡ್ ನಿರ್ಮಾಣಕ್ಕೆ ಇರುವ ಜಾಗದ ದಾಖಲೆ ಅಥವಾ ಪಹಣಿ
  • ರೇಷನ್ ಕಾರ್ಡ್ (BPL ಇದ್ದರೆ ಉತ್ತಮ)
  • ಬ್ಯಾಂಕ್ ಪಾಸ್ ಬುಕ್ ನಕಲು (ಆಧಾರ್ ಲಿಂಕ್ ಆಗಿರಬೇಕು)
  • ಜಾತಿ ಪ್ರಮಾಣ ಪತ್ರ (SC/ST ಇದ್ದರೆ)
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಮೊಬೈಲ್ ನಂಬರ್ (ಸಂಪರ್ಕಕ್ಕಾಗಿ)
  • ಆಧಾರ್ ಕಾರ್ಡ್

ಕುಕುಟ ಸಂಜೀವಿನಿ ಯೋಜನೆ – 2026, ಅರ್ಜಿ ಸಲ್ಲಿಸುವ ವಿಧಾನ :-

ಈ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಭಾಗದಲ್ಲೂ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ, ಹಾಗಿದ್ರೆ ಹೇಗೆ ಅರ್ಜಿ ಸಲ್ಲಿಸೋದು ಈ ಕೆಳಗೆ ತಿಳಿತಾ ಹೋಗೋಣ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ಬಯಸುವಿರಾ?

  • ನಿಮ್ಮ ಸಮೀಪದ ಪಶು ವೈದ್ಯಕೀಯ ಆಸ್ಪತ್ರೆ ಅಥವಾ ಪಶು ಸಂಗೋಪನ ಇಲಾಖೆ ಕಚೇರಿಗೆ ಭೇಟಿ ನೀಡಿ
  • ಕುಕುಟ ಸಂಜೀವಿನಿ ಯೋಜನೆ ಅರ್ಜಿದ ನಮೂನೆಯನ್ನು ಪಡೆಯಿರಿ
  • ಹೆಸರು, ವಿಳಾಸ, ಆಧಾರ್ ಕಾರ್ಡ್ ಸಂಖ್ಯೆ ಭರ್ತಿ ಮಾಡಿ
  • ಜಮೀನು ದಾಖಲೆ (RTC / ಪಹಣಿ) ಜೊತೆ ಸಲ್ಲಿಸಿ
  • ಬ್ಯಾಂಕ್ ಖಾತೆ ವಿವರ (IFSC, ಖಾತೆ ಸಂಖ್ಯೆ) ನೀಡಿರಿ
  • ಅಗತ್ಯ ದಾಖಲೆಗಳು ಜೊತೆಗೆ ನೀಡಿ
  • ಶೆಡ್ ಗಾತ್ರ ಮತ್ತು ಕೋಳಿಗಳ ಸಂಖ್ಯೆ ನಮೂದಿಸಿ
  • ಪಂಚಾಯತ್ ಸಿಬ್ಬಂದಿ ನಿಮ್ಮ ಮಾಹಿತಿ ಪರಿಶೀಲಿಸುತ್ತಾರೆ ಹಾಗೆ ಪಶುವೈದ್ಯಾಧಿಕಾರಿ / ಪಂಚಾಯತ್ ಇಂಜಿನಿಯರ್ ಶೆಡ್ ಸ್ಥಳ ಪರಿಶೀಲನೆ ಮಾಡುತ್ತಾರೆ
  • ನಂತರ ಅನುಮೋದನೆ ಸಿಕ್ಕಿ, ನೀವು ಷಡ್ ನಿರ್ಮಾಣ ಪ್ರಾರಂಭ ಮಾಡಬಹುದು

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:

  • ಕರ್ನಾಟಕ ಸರ್ಕಾರದ ಪಶು ಸಂಗೋಪನ ಇಲಾಖೆಯ ಅಧಿಕೃತ ಪೋರ್ಟಲ್ ಅಥವಾ ಸೇವಾ ಕೇಂದ್ರ ಪೋರ್ಟಲ್ ವಿಭಾಗವನ್ನು ಆಯ್ಕೆ ಮಾಡಿ
  • ಕುಕ್ಕುಟ ಸಂಜೀವಿನಿ ಯೋಜನೆ (Kukkuta Sanjeevini) 2026 ಲಿಂಕ ಮೇಲೆ ಕ್ಲಿಕ್ ಮಾಡಿ ಬ್ಯಾಂಕ್ ವಿವರಗಳು ಅಲ್ಲಿ ಕೇಳಿರುವ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ
  • ಹಾಗೆ ಸರಿಯಾಗಿ ನಿನ್ನ ಜಮೀನಿನ ಆರ್ ಟಿ ಸಿ ನಮೂದಿಸುವುದರ ಜೊತೆಗೆ ಬ್ಯಾಂಕ್ ಖಾತೆ ವಿವರವನ್ನು ಅಂದರೆ ಐ ಎಫ್ ಐ ಸಿ ಮತ್ತು ಖಾತೆ ಸಂಖ್ಯೆಯನ್ನ ಸರಿಯಾಗಿ ಫಾರಂನಲ್ಲಿ ಭರ್ತಿ ಮಾಡಿ.
  • ನಂತರದಲ್ಲಿ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಜಾತಿ ಪ್ರಮಾಣ ಪತ್ರ ಅಥವಾ ಬಿಪಿಎಲ್ ಕಾರ್ಡ್ ಸ್ಕ್ಯಾನ್ ಮಾಡಿಟ್ಟುಕೊಂಡು ಅಗತ್ಯ ದಾಖಲೆಗಳೊಂದಿಗೆ ಅಪ್ಲೋಡ್ ಮಾಡಿ.
  • ನೀವು ಕೋಳಿ ಶೆಡ್ ಅನ್ನು ನಿರ್ಮಿಸಲು ಗಾತ್ರ, ಕೋಳಿಗಳ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
  • ಮನೆಯಲ್ಲಿ ನೀವು ಬರ್ತಿ ಮಾಡಲಾದ ಎಲ್ಲಾ ಮಾಹಿತಿಗಳು ಸರಿ ಇದೆಯೇ ಎಂದು ಪರಿಶೀಲನೆ ನಡೆಸಿ ಸಬ್ಮಿಟ್ ಬಟನ್ ಮೇಲೆ ಪ್ರೆಸ್ ಮಾಡಿ.
  • ತಿರುಗಿ ದಿನದಲ್ಲಿ ನಿಮ್ಮ ಅರ್ಜಿಯು ಅನುಮೋದನೆಗೊಂಡ ನಂತರ ನಿಮ್ಮ ಊರಿನ ಸ್ಥಳೀಯ ಅಧಿಕಾರಿಗಳು ಬಂದು ನಿರ್ಮಾಣ ಮಾಡುವ ಪರಿಶೀಲನೆ ಮಾಡುತ್ತಾರೆ, ನಂತರ ಹಣ ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.

ನನ್ನ ಕೊನೆಯ ಮಾತು :-

ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಮತ್ತು ಸ್ವಸಹಾಯ ಸಂಘಗಳ ಅಭಿವೃದ್ಧಿಗೆ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು. ಅತಿ ಕಡಿಮೆ ಜಾಗದಲ್ಲಿ ಈ ಉದ್ಯಮವನ್ನು ಶುರುಮಾಡಬಹುದು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸಬಹುದು ಸಮಾಜದಲ್ಲಿ ಗೌರವ ಕುಟುಂಬದ ಜವಾಬ್ದಾರಿ ಉತ್ತೇಜಿಸುವ ಕುಕುಟ ಸಂಜೀವಿನಿ ಯೋಜನೆಯನ್ನು ರೂಪಿಸಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇದರ ಲಾಭ ಪಡೆದುಕೊಳ್ಳಿ.

ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು:

ಕುಕುಟ ಸಂಜೀವಿನಿ ಯೋಜನೆ ಎಂದರೇನು?

ಗ್ರಾಮೀಣ ಪ್ರದೇಶದ ಮಹಿಳೆರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಅಥವಾ ಸಂಘಗಳಿಗೆ ಕೋಳಿ ಸಾಕಾಣಿಕೆ ಮೂಲಕ ಸ್ವಂತ ಉದ್ಯಮವನ್ನು ಶುರು ಮಾಡಲು ಸರ್ಕಾರ ರೂಪಿಸಿದಂತ ಒಂದು ಅತ್ಯುತ್ತಮವಾದ ಯೋಜನೆ ಇದಾಗಿದೆ

ಶೆಡ್ ನಿರ್ಮಾಣಕ್ಕೆ ಎಷ್ಟು ಸಹಾಯಧನ ನೀಡಲಾಗುತ್ತದೆ?

500 ಕೋಳಿಗಳಿಗೆ – ₹4.5 ಲಕ್ಷವರೆಗೆ

1000 ಕೋಳಿಗಳಿಗೆ – ₹10 ಲಕ್ಷವರೆಗೆ ಪ್ರೋತ್ಸಾಹಧನ

ಯಾರು ಅರ್ಜಿ ಹಾಕಬಹುದು?

ಮಹಿಳಾ ಸ್ವಾಸಾಯ ಸಂಘದ ಸದಸ್ಯರು ಗ್ರಾಮೀಣ ಮಹಿಳೆಯರು ಸಣ್ಣ ಅಥವಾ ಅಲ್ಪ ಸಣ್ಣ ಭೂಮಿ ಹೊಂದಿರುವ ರೈತ ಮಹಿಳೆಯರು ಬಿಪಿಎಲ್ ಕುಟುಂಬಸ್ಥರು ಹಾಗೆ ಮನೆಯಲ್ಲಿ ಉದ್ಯಮವನ್ನು ಶುರು ಮಾಡೋ ಬಯಸುವವರು

ಗ್ರಾಮೀಣ ಪ್ರದೇಶದ ಮಹಿಳೆರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಅಥವಾ ಸಂಘಗಳಿಗೆ ಕೋಳಿ ಸಾಕಾಣಿಕೆ ಮೂಲಕ ಸ್ವಂತ ಉದ್ಯಮವನ್ನು ಶುರು ಮಾಡಲು ಸರ್ಕಾರ ರೂಪಿಸಿದಂತ ಒಂದು ಅತ್ಯುತ್ತಮವಾದ ಯೋಜನೆ ಇದಾಗಿದೆ

ಇತರೆ ಪ್ರಮುಖ ಸರ್ಕಾರಿ ಹುದ್ದೆಗಳ ಲಿಂಕುಗಳು:-

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment