
ಭಾರತೀಯ ಸೇನೆಯು2026 ನೇ ಸಾಲಿನಲ್ಲಿ ಅಗ್ನಿವೀರ್ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು ದೇಶಾದ್ಯಂತ ಬರೋಬ್ಬರಿ 25000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ದೇಶ ಸೇವೆಯ ಕನಸು ಹೊತ್ತ ಯುವಕ ಯುವತಿಯರಿಗೆ ಒಂದು ದೊಡ್ಡ ವೇದಿಕೆ ರೂಪಿಸಿದೆ. ಕೇವಲ 8 ತರಗತಿ ಪಾಸ್ ಆದರೆ ಸಾಕು ನಿಮಗೂ ಸಿಗುತ್ತೆ Indian Army ಯಲ್ಲಿ ಉದ್ಯೋಗ.
Indian Army job 2026 in kannada
ಹೌದು ಎಂಟನೇ ತರಗತಿಯಲ್ಲಿ ಉತ್ತೀರ್ಣರಾದವರಿಂದ ಹಿಡಿದು ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದು. ಭಾರತದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿಇದ್ದಾಗಿದ್ದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಒಂದು ಉತ್ತಮವಾದ ಕೆಲಸ ಮಾಡಬೇಕು ಉತ್ತಮವಾದ ಸಂಬಳ ತೆಗೆದುಕೊಳ್ಳಬೇಕು ಅಷ್ಟೇ ಅಲ್ಲದೆ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಸಮಾಜದಲ್ಲಿ ಘನತೆ ಗೌರವ ಹೆಚ್ಚಿಸಿಕೊಂಡು ಎಲ್ಲರಂತೆ ಬದುಕು ಕಟ್ಟಿಕೊಳ್ಳಬೇಕು ಎಂಬುದು ಹಲವು ಯುವಕ ಯುವತಿಯರ ಅಸೆ ಆದರೆ ತಾವು ಓದಿದ ವಿದ್ಯಾಭ್ಯಾಸಕ್ಕೆ ಸರಿಯಾದ ಯಾವುದೇ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಅಲೆದಾಡುತಿರುತ್ತಾರೆ. ಅಂತ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶ ಒದಗಿ ಬಂದಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಮಾಧ್ಯಮ.ನೆಟ್ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 13 ಫೆಬ್ರವರಿ ಕೊನೆಯ ದಿನಾಂಕ 1 ಏಪ್ರಿಲ್ 2026 ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ಸಂಪೂರ್ಣವಾಗಿ ಕೆಳಗೆ ಕೊಡಲಾಗಿರುತ್ತದೆ ನಿಗದಿಪಡಿಸಿದ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಯ ಹೈಲೆಟ್ಸ್ :-
| ಸಂಸ್ಥೆಯ ಹೆಸರು | ಭಾರತೀಯ ಸೇನೆ (Indian Army) |
| ಹುದ್ದೆಯ ಹೆಸರು | ಅಗ್ನಿವೀರ್ (Agniveer – GD, Technical, Clerk, Tradesman ಹೀಗೆ ಇನ್ನಿತರ ಹುದ್ದೆಗಳು) |
| ಹುದ್ದೆಯ ಸಂಖ್ಯೆ | 25,000 ಹುದ್ದೆಗಳು |
| ಉದ್ಯೋಗ ಸ್ಥಳ | ಭಾರತದ್ಯಾಂತ |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 13 ಫೆಬ್ರವರಿ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 1 ಎಪ್ರಿಲ್ 2026 |
ಹುದ್ದೆಗಳ ಬಗ್ಗೆ ವಿವರ :-
2026 ನೇ ಸಾಲಿನಲ್ಲಿ ಬಂದೇ ಬಿಟ್ಟಿದೆ ಇಂಡಿಯನ್ ಆರ್ಮಿ ಕಡೆಯಿಂದ ಭರ್ಜರಿ ನೇಮಕಾತಿ. ಇದೆ ಮೊದಲ ಬಾರಿ ಬರೋಬ್ಬರಿ ಸಾವಿರಾರು ಹುದ್ದೆಗಳನ್ನ ಭರ್ತಿ ಮಾಡಲು ಇಲಾಖೆ ಸಜ್ಜಾಗಿರುವಂತದ್ದು. ಈ ಕೆಳಗೆ ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
- ಅಗ್ನಿವೀರ್ ಟ್ರೇಡ್ಸ್‌ಮನ್ (8th Pass) Target Defence Academy
- ಅಗ್ನಿವೀರ್ ಟ್ರೇಡ್ಸ್‌ಮನ್ (10th Pass)
- ಅಗ್ನಿವೀರ್ ಜನರಲ್ ಡ್ಯೂಟಿ (GD)
- ಮಹಿಳಾ ಮಿಲಿಟರಿ ಪೊಲೀಸ್ (Women Military Police)
- ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್ / ಕ್ಲರ್ಕ್ (Office Assistant / Clerk) Sarkari Result
- ಅಗ್ನಿವೀರ್ ತಾಂತ್ರಿಕ (Technical) Testbook
ಒಟ್ಟು ಹುದ್ದೆಗಳ ವಿವರ :-
ಆತ್ಮೀಯ ಸ್ನೇಹಿತರೆ ಇಂಡಿಯನ್ ಆರ್ಮಿಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿರುವಂತದ್ದು. ಸುಮಾರು 25 ಸಾವಿರ ಹುದ್ದೆಗಳ ಭರ್ತಿ 2026 ನೇ ಸಾಲಿನಲ್ಲಿ ನಡೆಯುತ್ತಿದೆ. ಅವುಗಳಲ್ಲಿ ಯಾವ ಯಾವ ಹುದ್ದೆಗಳು ಎಷ್ಟೆಷ್ಟು ಇದೆ ಎನ್ನುವುದರ ಸ್ಪಷ್ಟವಾದ ಮಾಹಿತಿ ಕೆಳಗಿದೆ.
- ಅಗ್ನಿವೀರ್ ಜನರಲ್ ಡ್ಯೂಟಿ (GD)17,000+
- ಅಗ್ನಿವೀರ್ ತಾಂತ್ರಿಕ (Technical) 3,000+
- ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್/ಕ್ಲರ್ಕ್ 2,500+
- ಅಗ್ನಿವೀರ್ ಟ್ರೇಡ್ಸ್‌ಮನ್ (10th & 8th) 2,000+
- ಮಹಿಳಾ ಮಿಲಿಟರಿ ಪೊಲೀಸ್ (WMP) 500+
ಅರ್ಜಿ ಸಲ್ಲಿಸಲು ಪೂರ್ಣಗೊಳಿಸಿರಬೇಕಾದ ವಿದ್ಯಾರ್ಹತೆ :-
- ಯಾವುದೇ ಒಂದು ಹುದ್ದೆಗಳನ್ನು ಪಡೆಯಲು ವಿದ್ಯಾರ್ಥಿಗಳಲ್ಲಿ ಕನಿಷ್ಠ ಎಸ್ ಎಸ್ ಎಲ್ ಸಿ, ಪದವಿ ವಿದ್ಯಾರ್ಹತೆಗಳು ಖಂಡಿತವಾಗಿಯೂ ಇರಲೇಬೇಕು, ಅದೇ ರೀತಿ ಈ ಇಂಡಿಯನ್ ಆರ್ಮಿ ಹುದ್ದೆಗಳಿಗೆ ಯಾವ ರೀತಿಯಲ್ಲಿ ನೋಟಿಫಿಕೇಶನ್ ಮೂಲಕ ವಿದ್ಯಾರ್ಥಿ ಬಂದಿದೆ ಎನ್ನುವುದರ ಸ್ಪಷ್ಟ ವಿವರಣೆ ಹೀಗಿದೆ.
- ಅಗ್ನಿವೀರ್ ಜನರಲ್ಲಿ ಡೆಪ್ಯುಟಿ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯನ್ನು ಪಾಸ್ ಆಗಿರಬೇಕು. ಹಾಗೆಯೇ ಕನಿಷ್ಠ 45% ಒಟ್ಟು ಅಂಕಗಳು ಅದರಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33% ಇರಬೇಕು.
- ಅಗ್ನಿವೀರ್ ತಾಂತ್ರಿಕ ಅಂದರೆ ಟೆಕ್ನಿಕಲ್ ಹುದ್ದೆಗಳಿಗೆ ಅಭ್ಯರ್ಥಿಗಳು ಸೆಕೆಂಡ್ ಪಿಯುಸಿ ಪಾಸ್ ಆಗಿರಬೇಕು. ಹಾಗೆ ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ 50% ಆದರೂ ಒಟ್ಟು ಅಂಕಗಳು ಇರಬೇಕು. ಪ್ರತಿಯೊಂದು ವಿಷಯದಲ್ಲಿ ಅಭ್ಯರ್ಥಿಗಳು ಕನಿಷ್ಠ 40% ಹೊಂದಿದರೆ ಸಾಕು.
- ಅಗ್ನಿ ಆಫೀಸ್ ಅಸಿಸ್ಟೆಂಟ್ ಅಂದರೆ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ ಸೆಕೆಂಡ್ ಪಿಯುಸಿ, ಯಾವುದೇ ಸೇಮ್ ನಲ್ಲಿ ಕನಿಷ್ಠ 60% ಒಟ್ಟು ಅಂಕವನ್ನು ಹೊಂದಿರಬೇಕು. ಹಾಗೆಯೇ ಪ್ರತಿ ಸೆಮಿಸ್ಟರ್ ನಲ್ಲಿ ಕನಿಷ್ಠ 50% ಇರಬೇಕೆಂದು ನೋಟಿಫಿಕೇಶನ್ ಬಂದಿದೆ. English ಮತ್ತು Maths/Accounts/Book Keeping ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ ಇದ್ದಾರೆ ಒಳ್ಳೆಯದು.
- ಅಗ್ನಿವೀಸ್ ಟ್ರೇಡ್ಸ್ ಮ್ಯಾನ್ ಹೋದೆಗಳಿಗೆ ನೀವು ಅರ್ಜಿಯನ್ನು ಹಾಕಲು ಬಯಸಿದರೆ ಸ್ನೇಹಿತರೆ 10ನೇ ತರಗತಿ ಪಾಸ್ ಆಗಿರಬೇಕು.ಇನ್ನು ಕೆಲವು ಹುದ್ದೆಗಳಿಗೆ ಕೇವಲ ಎಂಟನೇ ತರಗತಿ ಪಾಸ್ ಆಗಿದ್ದರೆ ಸಾಕು ಹಾಗೆ ಪ್ರತಿಯೊಂದು ವಿಷಯದಲ್ಲಿ ನೀವು ಕನಿಷ್ಠ 35% ಆದರೂ ಅಂಕವನ್ನ ಗಳಿಸಿರಬೇಕು.
- ಮಹಿಳಾ ಮಿಲಿಟರಿ ಪೊಲೀಸ್ (WMP) ಹುದ್ದೆಗಳಿಗೆ ಮಹಿಳೆಯರು ಹತ್ತನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಕನಿಷ್ಠ 45% ಒಟ್ಟು ಅಂಕಗಳನ್ನು ಹೊಂದಿರಬೇಕು. ಅಷ್ಟೇ ಅಲ್ಲದೆ ಪ್ರತಿಯೊಂದು ವಿಷಯದಲ್ಲಿ ಮಹಿಳೆಯರು ಕನಿಷ್ಠವಾದರೂ 35% ಕಡ್ಡಾಯವಾಗಿ ಹೊಂದಿರಲೇಬೇಕು.
ವಯೋಮಿತಿ :-
ಯಾವುದೇ ಹುದ್ದೆಯಾಗಿರಲಿ ಅತಿ ಮುಖ್ಯವಾಗಿ ವಯೋಮಿತಿಯು ತನ್ನದೇ ಆದ ಪಾತ್ರವನ್ನ ನಿರ್ವಹಿಸುತ್ತದೆ. ಇಂಡಿಯನ್ ಆರ್ಮಿ ಅಗ್ನಿವೀರ್ ಹುದ್ದೆಗಳಲ್ಲಿ ಯಾವ ರೀತಿ ವಯೋಮಿತಿಯನ್ನ ಕೊಟ್ಟಿದ್ದಾರೆ ? ನೀವು ಅರ್ಜಿ ಸಲ್ಲಿಸಬಹುದೇ ? ಎಂದು ಇಲ್ಲಿ ತಿಳಿಯಿರಿ.
- GD, Technical, Clerk, Tradesman, WMP ಈ ಎಲ್ಲ ಹುದ್ದೆಗಳಿಗೂ ಇಲಾಖೆ ಕನಿಷ್ಠ ಅಭ್ಯರ್ಥಿಗಳ ವಯಸ್ಸು ; 17½ ವರ್ಷ ನೀಡಿದೆ.
- ಹಾಗೆ ಗರಿಷ್ಠ 21 ವರ್ಷ ವರ್ಷದೊಳಗಿನ ಯುವಕ ಯುವತಿಯರು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ವಯೋಮಿತಿ ಸಡಿಲಿಕೆ :-
ಸಾಮಾನ್ಯವಾಗಿ ಯಾವುದೇ ರೀತಿಯ ವಯೋಮಿತಿ ಸಡಿಲಿಕೆಯನ್ನ ಇಲ್ಲಿಅಂದರೆ ವರ್ಗಗಳಿಗೆ ನೀಡಿಲ್ಲ. ಆದರೆ ಕೆಲವು ವಿಶೇಷ ನೇಮಕಾತಿ ವರ್ಷದಲ್ಲಿ ಸರ್ಕಾರದ ನಿರ್ಧಾರದಿಂದ ತಾತ್ಕಾಲಿಕವಾಗಿ ಗರಿಷ್ಠ ವಯೋಮಿತಿ ಹೆಚ್ಚಾಗಬಹುದು.
ಅಗ್ನಿವೀರ್ ಫಿಜಿಕಲ್ ಮಾನದಂಡಗಳು :-
Running : 1.6 ಕಿಲೋಮೀಟರ್ ರನ್ನಿಂಗ್ ಇರುತ್ತದೆ ಅಂದರೆ ಸುಮಾರು ಒಂದು ಮೈಲಿ ಅಷ್ಟು. ಅಭ್ಯರ್ಥಿಗಳು ರನ್ನಿಂಗ್ ಮಾಡಬೇಕು ಹಾಗೆ ಈ ಓಟವನ್ನ ನೀವು 5 ನಿಮಿಷ 30 ಸೆಕೆಂಡ್ ಒಳಗೆ ಮುಗಿಸಿದರೆ ಹೆಚ್ಚಿನ ಅಂದರೆ ಸುಮಾರು 60 ಅಂಕಗಳು ಸಿಗುತ್ತದೆ.
Push-up : ಪುಶ್ ಅಪ್ ನೆಲಕ್ಕೆ ಕೈ ಇಟ್ಟು ದೇಹವನ್ನು ಮೇಲೇಳಿಸಿ ಕೆಳಗೆ ಮಾಡಬೇಕು ಮತ್ತು ಹತ್ತು ಮಾಡಿದರೆ ಹೆಚ್ಚು ಅಂಕ ಸಿಗುತ್ತದೆ ಹಾಗೆಯೇ ಮಾಡಿದರೆ ಅರ್ಹತೆ ಇರುವುದಿಲ್ಲ ಆ ಅಭ್ಯರ್ಥಿಯನ್ನ ಮುಂದಿನ ಇದೆ ಇದೇ ಹಂತ ಕೊನೆಯದಾಗಿರುತ್ತದೆ.
Chin-ups : ಕಬ್ಬಿಣದ ಕಂಬವನ್ನು ಹಿಡಿದು ದೇಹವನ್ನು ಮೇಲಕ್ಕೆ ಎತ್ತುವುದು ಹಾಗೆ ಕನಿಷ್ಠ ಆರು ಬಾರಿ ಮಾಡಬೇಕು. ಹೆಚ್ಚು ಮಾಡಿದರೆ ಹೆಚ್ಚಿನ ಅಂಕ ಆ ಅಭ್ಯರ್ಥಿಗೆ ಸಿಗುತ್ತದೆ.
9 ಅಡಿ ಡಿಚ್ : ಅಭ್ಯರ್ಥಿಗಳು ಯಾವುದೇ ಭಯವಿಲ್ಲದೆ 9 ಅಡಿ ಅಗಲದ ಗುಂಡಿಯನ್ನು ಜಿಗಿದು ದಾಟಬೇಕು ಇದು ಕೇವಲ ಪಾಸ್ ಪೇನ್ ಮಾತ್ರ ಅಂಕ ಕೊಡುವುದಿಲ್ಲ ಆದರೆ ಬೇಕು
Height : ಸಾಮಾನ್ಯವಾಗಿ 170cm ಹೈಟ್ ಇರಬೇಕು ಸ್ವಲ್ಪ ಕಡಿಮೆ ಹೈಟ್ ಕೇಳಿದರು ಕೇಳಬಹುದು.
- ಟ್ರೇಡ್ಸ್ಮ್ಯಾನ್ ಹುದ್ದೆಗಳಿಗೆ ಸುಮಾರು 168 ಸೆಂಟಿಮೀಟರ್ ಹೈಟ್ ಇರಬೇಕು.
- ಹಾಗೆಯೇ ಮಹಿಳಾ ಮಿಲಿಟರಿ ಪೊಲೀಸ್ ಗಳಿಗೆ ಸುಮಾರು 162 ಸೆಂಟಿಮೀಟರ್ ಹೈಟ್ ಅಲ್ಲ ನೋಟಿಫಿಕೇಶನ್ ನಲ್ಲಿ ತಿಳಿಸಿದ್ದಾರೆ.
Weigh : ಎತ್ತರ ಮತ್ತು ವಯಸ್ಸಿನ ಅನುಗುಣವಾಗಿ ಆರೋಗ್ಯಕರ ಪ್ರಮಾಣ ಪರಿಗಣಿಸಲಾಗುತ್ತದೆ (Medical Standards)
ಎದೆ (Chest) ಪುರುಷರಿಗೆ :- ಕನಿಷ್ಠ 77 ಸೆಂ.ಮೀ., ವಿಸ್ತರಣೆ (Expansion) 5 ಸೆಂ.ಮೀ. ಅಗತ್ಯ ಜೊತೆಗೆ ಶಕ್ತಿ ಮತ್ತು ಉಸಿರಾಟ ಸಾಮರ್ಥ್ಯ ಪರೀಕ್ಷೆಗೆ ಸಹಾಯ.
ಇಲ್ಲಿ ಗಮನಿಸಿ : ಅಗ್ನಿವೀಕ್ ಹುದ್ದೆಗೆ ಆಯ್ಕೆ ಮಾಡಲು ದೈಹಿಕ ಆರೋಗ್ಯ ಶಕ್ತಿ ಮತ್ತು ಫಿಟ್ನೆಸ್ ಬಹಳಷ್ಟು ಮುಖ್ಯವಾಗುತ್ತದೆ ದೈಹಿಕ ಮಾನದಂಡಗಳು ಕೇವಲ ಎತ್ತರವಲ್ಲ ಶಕ್ತಿಯುಳ್ಳ ಮತ್ತು ಚುರುಕಾದ ದೇಹವನ್ನ ದೃಢಪಡಿಸುತ್ತವೆ.
ವೇತನದ ವಿವರ :-
ಬಹಳಷ್ಟು ಅಭ್ಯರ್ಥಿಗಳು ಒಂದು ಕೆಲಸವನ್ನ ಗಿಟ್ಟಿಸಿಕೊಳ್ಳುವ ಮೊದಲು ಹಾಗೆಯೇ ಅರ್ಜಿ ಸಲ್ಲಿಸುವ ಮೊದಲು ಅತಿ ಮುಖ್ಯವಾಗಿ ಗಮನಿಸುವ ಅಂಶವೇನೆಂದರೆ, ನಾವು ಈ ಹುದ್ದೆಗೆ ಆಯ್ಕೆಯಾದರೆ ತಿಂಗಳಿಗೆ ನಮಗೆಷ್ಟು ವೇತನ ಸಿಗುತ್ತದೆ ಎನ್ನುವ ವಿಷಯ. ಈ ವಿಚಾರ ನಿಮಗೆ ಅರ್ಥವಾಗಲೇ ಬೇಕೆಂದು ಚಾರ್ಟ್ ಮೂಲಕ ವೇತನದ ವಿವರವನ್ನು ತಿಳಿಸಲಾಗಿದೆ.
| ಹುದ್ದೆ | ವೇತನ | ಇತರೆ ಭತ್ಯೆ |
|---|---|---|
| ಅಗ್ನಿವೀರ್ ಜನರಲ್ ಡ್ಯೂಟಿ ಹುದ್ದೆಗಳಿಗೆ (GD) | ~31,000 – 35,000 | ಬೇಸಿಕ್ ಪೇ + ಮಿಲಿಟರಿ ಭತ್ಯೆ + ಹೆಚ್ಚುವರಿ |
| ಅಗ್ನಿವೀರ್ ತಾಂತ್ರಿಕ ಹುದ್ದೆಗಳಿಗೆ (Technical) | ~31,000 – 37,000 | ತಾಂತ್ರಿಕ ಹುದ್ದೆಗೆ ಹೆಚ್ಚುವರಿ ಭತ್ಯೆ |
| ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್ / ಕ್ಲರ್ಕ್ ಹುದ್ದೆಗಳಿಗೆ | ~28,000 – 32,000 | ಕಊಂಟರ್/ಕ್ಲರ್ಕ್ ಕೆಲಸಕ್ಕೆ ಅನುಗುಣ |
| ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ (10th & 8th) | ~25,000 – 30,000 | ಹಸ್ತಕೌಶಲ್ಯ ಹುದ್ದೆಗಳಿಗೆ ಹೊಂದಿಕೆ |
| ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಳಿಗೆ (WMP) | ~31,000 – 35,000 | ಪುರುಷ GD ವೇತನಕ್ಕೆ ಸಮಾನ |
ಅರ್ಜಿ ಶುಲ್ಕ :-
ಅಭ್ಯರ್ಥಿಗಳು ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಮುಂದಾದರೆ ಬಹಳಷ್ಟು ಉತ್ತಮ ಅವಕಾಶಗಳು ಈ ಬಾರಿ ನಿಮಗೆ ಸಿಗುತ್ತವೆ.
- ಏನೆಂದರೆ, ಪುರುಷರಿಗೆ ಕೇವಲ ₹250/- ನಷ್ಟು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ
- SC / ST /PwBD / ಮಹಿಳಾ ಅಭ್ಯರ್ಥಿಗಳು: ₹0 (ರಿಯಾಯಿತಿ / ಉಚಿತ)
ಪ್ರಮುಖ ದಿನಾಂಕ :-
- 2026 27ನೇ ಸಾಲಿನ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಗೆ ನೀವು ಅರ್ಜಿಯನ್ನು ಸಲ್ಲಿಸಲು ಬಯಸಿದರೆ 13 ಫೆಬ್ರವರಿ 2026 ರಿಂದ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.
- 1 ಏಪ್ರಿಲ್ 2026 ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲಾಖೆ ಗಡುವನ್ನ ಕೊಟ್ಟಿದೆ.
ಅರ್ಜಿ ಸಲ್ಲಿಸುವ ವಿಧಾನ :-
- ಮೊದಲಿಗೆ ಅಭ್ಯರ್ಥಿಗಳು ಭಾರತೀಯ ಸೇನಾ ಅಧಿಕೃತ ವೆಬ್ ಸೈಟ್ joinindianarmy.nic ಭೇಟಿ ನೀಡಿ

- ನಂತರ ಬಳಕೆದಾರರ ಐಡಿ ಹಾಗೆ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿಕೊಳ್ಳಿ.
- ಹಾಗೆ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಅಪ್ಲೋಡ್ ಮಾಡಿ
- ನಿಮ್ಮ ವರ್ಗಕ್ಕೆ ಯಾವ ರೀತಿಯ ಅರ್ಜಿ ಶುಲ್ಕ ಅನ್ವಯವಾಗುತ್ತದೆಯೋ ಅದನ್ನ ಪಾವತಿ ಮಾಡಿ
- ನಂತರದಲ್ಲಿ ಅರ್ಜಿಯನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿ
- ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಫಾರಂ ಅನ್ನ ಡೌನ್ಲೋಡ್ ಮಾಡಿಟ್ಟುಕೊಳ್ಳಿ.
ಹುದ್ದೆಯ ಇತರೆ ಲಿಂಕುಗಳು :-
| ಆನ್‌ಲೈನ್ ನೋಂದಣಿ | ಇಲ್ಲಿ ಕ್ಲಿಕ್ |
| ರ‍್ಯಾಲಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು | ಇಲ್ಲಿ ಕ್ಲಿಕ್ |
| ಅರ್ಜಿದಾರರ ಲಾಗಿನ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |







