PM-KISAN : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ | ಹೀಗೆ ಮಾಡಿದ್ರೆ ಪಕ್ಕಾ ಹಣ ಬರುತ್ತೆ!

February 18, 2026 3:15 PM

ನಮಸ್ಕಾರ ರೈತ ಮಿತ್ರರೇ ಅಕ್ಕ ಪಕ್ಕದ ಮನೆಯವರಿಗೆ ಪಿ ಎಂ ಕಿಸಾನ ದುಡ್ಡು ಬಂತು ಆದರೆ ನನಗೆ ಯಾಕ ಇನ್ನು ಬಂದಿಲ್ಲ ಎಂದು ಚಿಂತಿಸುತ್ತಿದ್ದೀರಾ? ಆದರೆ ಈಗ ಆ ಚಿಂತೆಗೆ ಹೇಳಿ ಗುಡ್ ಬಾಯ್ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪಿ ಎಂ ಕಿಸಾನ್ ಯೋಜನೆಯನ್ನು ಅನುಷ್ಠಾನ ಗೊಳಿಸಲಾಯಿತು. ಕಳೆದ 3 ವರ್ಷಗಳಿಂದ ಈ ಕಾರ್ಯಕ್ರಮದ ಮಾರ್ಗದರ್ಶನದಂತೆ ವಾರ್ಷಿಕ 6000 ಹಣ ವನ್ನು ಆರ್ಥಿಕ ನೆರವು ಪಡೆಯುತ್ತಿದ್ದ ಸಣ್ಣ ಮತ್ತು ಅತಿ ಸಣ್ಣ ವರ್ಗದ ರೈತರಿಗೆ ಸ್ಥಗಿತಗೊಳಿಸಲಾಗಿತ್ತು.

Join WhatsApp

Join Now

Join Telegram

Join Now

ಯಾವ ಕಾರಣದಿಂದ ಬಂದಿಲ್ಲ? ಎಷ್ಟು ಹಣ ಬರಬೇಕು? ರಾಜ್ಯ ಮತ್ತು ಕೇಂದ್ರದ ನಡುವೆ ಏನಾಯಿತು ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ,,,

ನಾನು ಎಲ್ಲಾ ದಾಖಲೆಗಳನ್ನು ಕೊಟ್ಟಿದೀನಿ, ಆಧಾರ್ ಲಿಂಕ್ ಆಗಿದೆ, ಆಧಾರ್ ಹಣ ಬಂದಿಲ್ಲ ಎಂದು ಬ್ಯಾಂಕ್ ಗೆ ಮನೆಗೆ ಅಲೆದು ಅಲೆದು ಸುಸ್ತಾಗಿದ್ದೀರಾ? ಹಾಗಾದ್ರೆ ನಿಮಗೆ ಬಂದೆ ಬಿಡ್ತು ಸಿಹಿಸುದ್ದಿ ಬಡ ವರ್ಗದ ರೈತರಿಗೆ ಆಗಿದ್ದ ಅನ್ಯಾಯವನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿವೆ ತಾಂತ್ರಿಕ ಕಾರಣಗಳಿಂದ 22 ನೇ ಕಂತಿನ ಹಣ ರೈತರ ಖಾತೆಗೆ ಜಮೆ ಆಗಿರಲಿಲ್ಲ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳೋಣ

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಈಗಾಗಲೇ ಅಂದರೆ, ನವೆಂಬರ್ 19, 2025 ರಲ್ಲಿ 21 ನೇ ಕಂತಿನ ಹಣವನ್ನು ಮೊದಲ ವಾರದಲ್ಲೇ ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿತ್ತು ಆದರೆ ರೈತರು ಇದೀಗ ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಈ ಹಣದಿಂದ ಮಾಧ್ಯಮ ವರ್ಗದವರಿಗೆ ಹಲವು ರೀತಿಯಲ್ಲಿ ಅನುಕೂಲವಾಗುತ್ತಲಿತ್ತು ಈ ತೋಟದ ಕೆಲಸ ಬೇಸಿಗೆ ಕಾಲ ಶುರುವಾಗಿದೆ ಪೈಪ್ ಲೈನ್ ಮಾಡಲು ಹಲವು ರೀತಿಯ ಸಮಸ್ಯೆ ಗಳಿಗೆಈ ಹಣವನ್ನು ಹೂಡಿಕೆ ಮಾಡುತ್ತಿದ್ದರು ಹೆಚ್ಚಿನ ಹೊಸ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್  ಗೆ ಭೇಟಿ ನೀಡಿ.

ಒಕ್ಕೂಟ ಸಂಜೀವಿನಿ ಯೋಜನೆ 2024 25ರ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಘೋಷಿಸಲಾದ ಒಂದು ಪ್ರಮುಖ ಯೋಜನೆಯಾಗಿದ್ದು ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣಕ್ಕೆ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಮೀಸಲಾಗಿದೆ. ಕೋಳಿ ಸಾಕಾಣಿಕೆ ಮಾಡಲು ಹೆಚ್ಚು ಜಾಗದ ಅವಶ್ಯಕತೆ ಇರುವುದಿಲ್ಲ ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಉದ್ಯಮ ಶುರು ಮಾಡಬಹುದು ಸರಿಯಾದ ತರಬೇತಿ ಹೊಂದಿದ್ದರೆ ಉತ್ತಮ ರೀತಿಯ ಆದಾಯವು ಸಹ ಸಿಗುವುದು


ಯೋಜನೆಯ ಹೈಲೆಟ್ಸ್:

ಯೋಜನೆಯ ಹೆಸರುಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN)
ಅರ್ಹ ಫಲಾನುಭವಿಗಳುಸಣ್ಣ ವರ್ಗದ ರೈತರು
ಪಿಎಂ ಕಿಸಾನ್ 21 ನೇ ಕಂತಿನ ಹಣ ಬಿಡುಗಡೆ ಮಾಡಲಾದ ದಿನಾಂಕನವೆಂಬರ್ 19, 2025
ಇಲ್ಲಿಗೆ ವರೆಗೆ ಬಂದಿರು ಪಿ ಎಂ ಕಿಸಾನ ಒಟ್ಟು ಹಣ 44,000
ಪಿಎಂ ಕಿಸಾನ್ 22 ನೇ ಕಂತಿನ ಹಣ ಬಿಡುಗಡೆ ಮಾಡುವ ದಿನಾಂಕಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಒಟ್ಟು ಸಹಾಯಧನವರ್ಷಕ್ಕೆ ₹6,000

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ (PM-KISAN) ಭಾರತ ಸರ್ಕಾರದ ಕೇಂದ್ರ ವಲಯದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಡಿಸೆಂಬರ್ 2018 ರಂದು ಜಾರಿಗೊಳಿಸಲಾಯಿತು ಇದನ್ನು ಗೌರಾನ್ವಿತ ಪ್ರದನಾಮತಿಗಳು ಫೆಬ್ರವರಿ 2019 ರಂದು ಪ್ರಾರಂಭಿಸಿದರು. ಕೃಷಿ ಸಂಬಂದಿತ ಚಟುವಟಿಕೆಗಳು ದೇಶಿಯ ಅಗತ್ಯತೆಗಳಿಗೆ ಸಂಬಂಧಿತ ವೆಚ್ಚಗಳನ್ನು ಬಗೆಹರಿಸಿಕೊಳ್ಳಲು ಸಹಾಯವಾಗುತ್ತದೆ.

ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ಪ್ರತಿ ವರ್ಷಕ್ಕೆ 3 ಸಮಾನ ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ₹2,000 ದಂತೆ ವರ್ಷಕ್ಕೆ ₹6,000 ದ ವರೆಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಈಗಾಗಲೇ 21 ಕಂತುಗಳ ಹಣವನ್ನು ಬಿಡುಗಡೆ ಮಾಡಿದ್ದು, ಇಲ್ಲಿಯ ವರೆಗೆ ಒಟ್ಟು ₹42,000 ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಇದರಿಂದಾಗಿ ರೈತರಿಗೆ ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಸಂಬಂಧಿತ ವೆಚ್ಚವನ್ನು ಭರಿಸಲು ಸಹಾಯವಾಗಿದೆ

ಗಮನಿಸಿ:- ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಎಂದು ತಿಳಿಯಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಚೆಕ್ ಮಾಡಿ

ಹಣ ಬರದೇ ಇರಲು ಕಾರಣವೇನು?

ಭಾರತದಲ್ಲಿ ಪಿ ಎಂ ಕಿಸಾನ ಯೋಜನೆಯಡಿಯಲ್ಲಿ 7 ಲಕ್ಷ ರೈತರಿಗೆ ಹಣದ ವರ್ಗಾವಣೆ ಸ್ಥಗಿತಕೊಂಡಿತ್ತು ಹಾಗೆಯೆ ಕರ್ನಾಟಕದಲ್ಲಿ 30,000 ಹೆಚ್ಚು ರೈತರಿಗೆ ಹಣ ಬಂದಿರಲಿಲ್ಲ. ನಮಗೆ ತಿಳಿದುಬಂದಿರುವಂತೆ ಇದಕ್ಕೆ ಮುಖ್ಯ ಕಾರಣ

  • e-KYC ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದು:

ಸಾಕಷ್ಟು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿದರೂ ಕೂಡ ಕೆಲವು ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಸಿಗುವ ವಿವಿಧ ಕಂತುಗಳ ಹಣ ಇನ್ನು ಜಮಾ ಆಗಲಿಲ್ಲ ಇದಕ್ಕೆ ಮುಖ್ಯ ಕಾರಣ e-KYC ಮಾಡಿಸದೇ ಇರುವುದಾಗಿದೆ.

  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿರುವುದು:

ರೈತರೇ, ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗದೆ ಇದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರು ತಾಂತ್ರಿಕ ದೋಷಗಳಿದ್ದರೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ.

  • ದಾಖಲೆಗಳನ್ನು ತಪ್ಪಾಗಿ ನೀಡಿರುವುದು:

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ರೈತರು ತಮ್ಮ ಹೆಸರು, ಬ್ಯಾಂಕ್ ಖಾತೆಯ ವಿವರ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ಇನ್ನಿತರೇ ವಿವರಗಳನ್ನು ತಪ್ಪಾಗಿ ದಾಖಲಿಸಿದರೂ ಕೂಡ ಪಿಎಂ ಕಿಸಾನ್ ನ ಹಣ ಜಮಾ ಆಗುವುದಿಲ್ಲ.

  • ನಕಲಿ ಅಥವಾ ಭೂಮಿ ಒಡೆತನದ ಸಮಸ್ಯೆ:

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಸರಿಯಾಗಿ ಅಪ್ಡೇಟ್ ಮಾಡದಿದ್ದರೆ ಪಿಎಂ ಕಿಸಾನ್ ವಿವಿಧ ಕಂತುಗಳ ಹಣ ಜಮಾ ಆಗುವುದಿಲ್ಲ.

ವಿಶೇಷ ಸೂಚನೆ: 

“ನೀವೇನಾದರೂ ಸರ್ಕಾರಿ ಉದ್ಯೋಗದಲ್ಲಿದ್ದು ಅಥವಾ ನೀವು ಹೆಚ್ಚಿನ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದು ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು.”

ರಾಜ್ಯ ಕೃಷಿ ಸಚಿವ ಮತ್ತು ಕೇಂದ್ರ ಕೃಷಿ ಸಚಿವರ ನಡುವೆ ಏನಾಯಿತು?

ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು 2025 ಡಿಸೆಂಬರ್ 17ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲ ಕಳೆದ ವಾರ ದೆಹಲಿಗೆ ಭೇಟಿಯಾಗಿ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಕೂಡಲೇ ಈ ಸಮಸ್ಯೆಯನ್ನು ಪರಿಗಣಿಸಿ ಅವರಿಗೆ ನ್ಯಾಯ ಒದಗಿಸಿ ಕೊಡಿ ಎಂದು ಮನವಿ ಮಾಡಿದ್ದರು.

ಇದಕ್ಕೆ ಕೇಂದ್ರ ಸಚಿವರು ಈಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ರಾಜ್ಯ ಸರ್ಕಾರದ ರಾಜ್ಯ ಸರ್ಕಾರ ನೀಡಿದ ದೃಢ ನಿರ್ಧಾರದ ಆಧಾರದ ಮೇಲೆ 22,000 ಹೆಚ್ಚು ರೈತರನ್ನು 22ನೇ ಕಂತಿನ ಹಣ ಬಿಡುಗಡೆಯ ಲಿಸ್ಟ್ ಗೆ ಸೇರಿಸಲಾಗಿದೆ. ಶೀಘ್ರದಲ್ಲಿ ಈ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಆದರೆ ಉಳಿದ 8,000 ರೈತರಿಗೆ ಅಧಿಕಾರಿಗಳೇ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಅವರ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

PM-KISAN 22 ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎನ್ನುವುದರ ಕುರಿತು ಕೇಂದ್ರ ಸರ್ಕಾರವು ಅಧಿಕೃತ ದಿನಾಂಕವನ್ನು ನಿಗದಿಪಡಿಸಿಲ್ಲ. ಆದರೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಪಿಎಂ ಕಿಸಾನ್ ವಿವಿಧ ಕಂತುಗಳ ಹಣವನ್ನು ಬಿಡುಗಡೆ ಮಾಡುವುದರಿಂದ

ಈ ಹಿಂದೆ ನವೆಂಬರ್ ಅಲ್ಲಿ 21 ನೇ ಕಂತಿನ ಹಣ ಬಿಡುಗಡೆ ಮಾಡಿರುವುದರಿಂದ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ತಿಂಗಳಲ್ಲಿ 22 ನೇ ಕಂತಿನ ಹಣ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈಗಲೇ ನಿಮ್ಮ ಆಧಾರ ಲಿಂಕ ಆಗಿದೆಯಾ ದಾಖಲೆಗಳು ಸರಿಯಾಗಿದೆಯಾ ಎಂದು ಪರಿಶೀಲಿಸಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತೆ ಚೆಕ್ ಮಾಡಿಕೊಳ್ಳಿ.

ಪಿ ಎಂ ಕಿಸಾನ್ ಯೋಜನೆ ಅಡಿ ಹಣ ಪಡೆಯಲು ಯಾರು ಅರ್ಹರು?

  • ಸಣ್ಣ ಮತ್ತು ಅತಿ ಸಣ್ಣ ವರ್ಗದ ರೈತರು
  • ಸ್ವಂತ ಕೃಷಿ ಜಮೀನು ಹೊಂದಿರುವ ರೈತರು
  • ಕುಟುಂಬದ ಹೆಸರಿನಲ್ಲಿ ಜಮೀನು ಹೊಂದಿರುವವರು
  • ಗ್ರಾಮ ಮತ್ತು ನಗರ ಪ್ರದೇಶದ ಕೃಷಿ ಜಮೀನು ಹೊಂದಿದವರು
  • ಜಮೀನು ದಾಖಲೆ(RTC) ನಿಮ್ಮ ಹೆಸರಿನಲ್ಲಿ ಇರಬೇಕು

ಯೋಜನೆಯ ಮುಖ್ಯ ಉದ್ದೇಶ:-

1.ರೈತರಿಗೆ ಆರ್ಥಿಕ ನೆರವು ನೀಡುವುದು:

ಪಿಎಂ ಕಿಸಾನ್ ಸನ್ಮಾನ್ಯ ನಿಧಿ ಯೋಜನೆ ಭಾರತ ಸರ್ಕಾರ ಮಧ್ಯಮ ವರ್ಗದ ರೈತರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ದೃಷ್ಟಿಯಿಂದ ನಾಲ್ಕು ತಿಂಗಳಿಗೆ ಒಮ್ಮೆ ಆರು ಸಾವಿರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಖರ್ಚುಗಳನ್ನು ನಿರ್ವಹಿಸಲು ಸಹಾಯಕವಾಗುತ್ತದೆ

2.ಕೃಷಿಯ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ಸಹಾಯ:

ಬೀಜ ಗೊಬ್ಬರ ಔಷಧಿಗಳು ಇತರೆ ಕೃಷಿ ವೆಚ್ಚಗಳಿಗೆ ಈ ಹಣವು ಸಹಾಯಕವಾಗುತ್ತದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಖರ್ಚುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.ಕೃಷಿ ಕಾರ್ಯಗಳನ್ನು ಸುಲಭವಾಗಿ ನಡೆಸಲು ನೆರವಾಗುತ್ತದೆ

3.ರೈತರ ಆದಾಯವನ್ನು ಹೆಚ್ಚಿಸುವುದು:

ರೈತರ ಆದಾಯವನ್ನು ಹೆಚ್ಚಿಸುವುದು, ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಕೃಷಿಯ ಕೃಷಿ ಚಟುವಟಿಕೆಗಳಿಗಾಗಿ ರೈತರು ಸಾಲದ ಅವಲಂಬನೆಯನ್ನು ಕಡಿಮೆ ಮಾಡುವುದು

4.ರೈತರ ಜೀವನ ಮಟ್ಟ ಸುಧಾರಣೆ:

ಸಣ್ಣ ರೈತರಿಗೆ ನೇರವಾಗಿ ಹಣ ಬ್ಯಾಂಕ್ ಖಾತೆಗೆ ಜಮಯಾಗುವುದರಿಂದ ಯಾವುದೇ ಮಧ್ಯವರ್ತಿಗಳ ಅವಲಂಬನೆ ಇರುವುದಿಲ್ಲ ರೈತರು ಜೀವನದಲ್ಲಿ ಆರ್ಥಿಕ ಭದ್ರತೆಯನ್ನು ನೀಡುತ್ತದೆ

5.ಭ್ರಷ್ಟಾಚಾರ ಕಡಿಮೆ ಮಾಡುವುದು

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ವಿವಿಧ ಕಂತುಗಳ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದಾಗಿ ರೈತರಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಅಥವಾ ಅವರಿಂದ ಆಗುವ ವಂಚನೆಗಳಿಂದ ಪಾರಾಗಬಹುದು. ಈ ವ್ಯವಸ್ಥೆಯು ಹೆಚ್ಚು ಪಾರದರ್ಶಕವಾಗಿದೆ.

ಪಿಎಂ ಕಿಸಾನ್ ಹಣ ಜಮಾ ಆಗಬೇಕಾದರೆ ರೈತರು ಪಾಲಿಸಬೇಕಾದ ವಿವಿಧ ಹಂತಗಳು:

1. e-KYC ಪೂರ್ಣಗೊಳಿಸುವುದು:

ನೀವು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ e-KYC ಪ್ರಕ್ರಿಯೆ ಪೂರ್ಣಗೊಳಿಸಿ.

  • ಆನ್ಲೈನ್ ಮೂಲಕ e-KYC ಪ್ರಕ್ರಿಯೆ ಪೂರ್ಣಗೊಳಿಸುವ ವಿಧಾನ:

ನೀವು ಮೊದಲು ಪಿಎಂ ಕಿಸಾನ್ e-KYC ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ. ನಿಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಂತರ ನಿಮಗೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ e-KYC ಪ್ರಕ್ರಿಯೆ ಪೂರ್ಣಗೊಳಿಸಿ.

2. ಲ್ಯಾಂಡ್ ಸೀಡಿಂಗ್ ಅನ್ನು ಅಪ್ಡೇಟ್ ಮಾಡುವುದು:

ನಿಮ್ಮ ಲ್ಯಾಂಡ್ ಸೀಡಿಂಗ್ ಸ್ಟೇಟಸ್ ನೋ ಎಂದಿದ್ದರೆ, ನಿಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ ಹಾಗೂ ಪಿಎಂ ಕಿಸಾನ್ ID ಗಳೊಂದಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಗ್ರಾಮ ಆಡಳಿತ ಅಧಿಕಾರಿಯನ್ನು ಭೇಟಿ ಮಾಡಿ. ಅಧಿಕಾರಿಗಳು ನಿಮ್ಮ ಭೂ ದಾಖಲೆಗಳನ್ನು ಪರಿಶೀಲಿಸಿ ನಿಮ್ಮ ಲ್ಯಾಂಡ್ ಸೀಡಿಂಗ್ ಸ್ಟೇಟಸ್ ಅನ್ನು ಯಸ್ ಎಂದು ಅಪ್ಡೇಟ್ ಮಾಡುತ್ತಾರೆ. ನಂತರ ನಿಮ್ಮ ಖಾತೆಗೆ ಪಿಎಂ ಕಿಸಾನ್ ಕಂತುಗಳ ಹಣ ಜಮಾ ಆಗುತ್ತದೆ.

3. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ:

ನಿಮ್ಮ ಬ್ಯಾಂಕ್ ಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆಯು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಖಾತೆಗೆ ಪಿಎಂ ಕಿಸಾನ್ ನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಬೇಕಾದರೆ ಇದು ಮುಖ್ಯವಾಗಿದೆ.

ರೈತರಿಗೆ ಕೆಲವು ಟಿಪ್ಸ್ ಗಳು:-

  • ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸಿಕೊಳ್ಳಿ
  • ಸರಿಯಾದ ಬ್ಯಾಂಕ್ ಖಾತೆ ಬಳಸಿ
  • ಆಧಾರ್ ಮತ್ತು ಬ್ಯಾಂಕ್ ಖಾತೆಯಲ್ಲಿ ಪರಿಶೀಲಿಸಿ
  • ಸರಿಯಾದ ಪಹಣಿ ದಾಖಲೆಗಳನ್ನು ನೀಡಿ

ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಹೇಗೆ?

  • ನೀವು ಮೊದಲು ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ https://pmkisan.gov.in/ ಗೆ ಭೇಟಿ ನೀಡಿ.
  • Beneficiary ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
  • ನೋಂದಣಿ ಸಂಖ್ಯೆ ಹಾಗೂ ಫೋನ್ ನಂಬರ್ ಅನ್ನು ನಮೂದಿಸಿ.
  • ನಂತರ ಅಲ್ಲಿರುವ QR ಕೋಡ್ ಅನ್ನು ನಮೂದಿಸಿ.
  • ಅಲ್ಲಿ ನಿಮ್ಮ ಕಂತುಗಳ ವಿವರ ಇರುತ್ತದೆ. ಪಿಎಂ ಕಿಸಾನ್ ನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರೆ ಪೇಮೆಂಟ್ ಸಕ್ಸಸ್ ಫುಲಿ ಎಂದು ಕಾಣಿಸುತ್ತದೆ.

ಕೊನೆಯ ಮಾತು:-

ಸಣ್ಣ ಮತ್ತು ಅತಿ ಸಣ್ಣ ವರ್ಗದ ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ಬೀಜಗಳು ರಸಗೊಬ್ಬರಗಳು ಕೀಟನಾಶಕಗಳು ಇವುಗಳಿಗೆ ಬಳಕೆ ಆಗಲಿ ಎಂಬ ಉದ್ದೇಶದಿಂದ ವರ್ಷ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷಕ್ಕೆ60000 ದಂತೆ ಹಣವನ್ನು ಬಿಡುಗಡೆ ಮಾಡುತ್ತಿದೆ ಸರ್ಕಾರದ ಮುಖ್ಯ ಉದ್ದೇಶ ಕೃಷಿಯನ್ನು ಪ್ರೋತ್ಸಹಿಸಿ ರೈತರು ಸಾಲದ ಸುಳಿಗೆ ಸಿಗುದನ್ನು ತಪ್ಪಿಸುವುದು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎಡರುಸಾವಿರದಂತೆ ಹಣ ಹಾಕುತ್ತಿದ್ದು

ಈಗಾಗಲೇ 21 ಕಂತುಗಳ ಹಣವನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ. 22 ನೇ ಕಂತಿನ ಹಣವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ನೀವು ನಿಮ್ಮ ಆಧಾರ್ ಸಂಖ್ಯೆಯು ಬ್ಯಾಂಕ್ ಗೆ ಲಿಂಕ್ ಆಗಿದಿಯಾ? e-KYC ಪ್ರಕ್ರಿಯೆ ಪೂರ್ಣಗೊಂಡಿದೆಯಾ? ಎಂದು ಖಚಿತ ಪಡೆಸಿಕೊಳ್ಳಿ. ಈ ಪ್ರಕ್ರಿಯೆಗಳು ಪೂರ್ಣಗೊಳ್ಳದೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ.

ಪದೇ ಪದೇ ಕೇಳಲಾಗುವ ಪ್ರಶ್ನೆಗೆಳು:

ಎಷ್ಟು ಕೃಷಿ ಭೂಮಿ ಇದ್ದರು (ಸಣ್ಣ ಮಾಧ್ಯಮ ದೊಡ್ಡ ) ರೈತರು ಈ ಯೋಜನೆಗೆ ಅರ್ಜಿಸಲ್ಲಿಸಬಹುದು ಆದರೆ ಜಮೀನಿನ ಪಹಣಿ ಸರಿಯಾಗಿರಬೇಕು.

ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ದಂತೆ ವರ್ಷಕ್ಕೆ 6000 ಹಣ ರೈತರ ಖಾತೆಗೆ ಜಮಾ ಆಗುತ್ತದೆ

ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ತಿಂಗಳಲ್ಲಿ 22 ನೇ ಕಂತಿನ ಹಣ ಬಿಡುಗಡೆ ಮಾಡುವ ಸಾಧ್ಯತೆಗಳಿವೆ

ನಿಮ್ಮ ಕೆವೈಸಿ ಪೂರ್ಣಗೊಳಿಸಿ ಆದರ್ ಬ್ಯಾಂಕ್ ಲಿಂಕ್ ಆಗಿದೆ ಎಂದು ಚೆಕ್ ಮಾಡಿ ನಿಮ್ಮ ಫೋನ್ ನಲ್ಲಿ ಮೆಸೇಜ್ ಚಕ್ ಮಾಡಿಕೊಳ್ಳಿ

ಇತರೆ ಪ್ರಮುಖ ಲಿಂಕುಗಳು:-

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment