ಭಾರತದಲ್ಲಿ ಕೃಷಿ ಕೇವಲ ಉದ್ಯೋಗವಲ್ಲ ಅದು ಲಕ್ಷಾಂತರ ಜನರ ಜೀವನ ಶೈಲಿಯಾಗಿದೆ. ರೈತರನ್ನು ರೈತರನ್ನು ಬೆಂಬಲಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವಕಾಂಕ್ಷಿಯ ಯೋಜನೆಯಾದ ಕೃಷಿ ಸಿಂಚಾಯಿ ಯೋಜನೆಯನ್ನು (PMKSY) ಜಾರಿಗೆ ಬಂದಿದೆ ಈ ಯೋಜನೆ ಅಡಿ ಕೃಷಿ ಭೂಮಿಗೆ ಹನಿ ನೀರಾವರಿ ವ್ಯವಸ್ಥೆ ಮತ್ತು ತುಂತುರು ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ರೈತರಿಗೆ ಪ್ರೋತ್ಸಾಹ ಧನ ನೀಡುತ್ತದೆ.
ರೈತಮಿತ್ರರೇ ಈಗ ತುಂಬ ಬಿಸಿಲು ಶುರುವಾಗಿದೆ ತೋಟದಲ್ಲಿ ಹಿಂಗಾರು ಶುರುವಾಗಿದೆ ಎಲ್ಲಾ ವುದುರುತ್ತಿವೆ ನೀರಾವರಿ ಸೌಲಭ್ಯ ಇಲ್ಲವೆಂದು ಚಿಂತೆ ಮಾಡುತ್ತಿದ್ದೀರಾ? ನಿಮ್ಮ ಕೃಷಿ ಭೂಮಿಯಲ್ಲಿ ತೆರೆದ ಕಾಲುವೆ ನೀರಾವರಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ನೀರು ಪೋಲಾಗುತ್ತಿದೀಯಾ? ಇದರಿಂದಾಗಿ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಉಂಟಾಗುತ್ತಿದೀಯಾ? ಹಾಗಿದ್ದರೆ ಇನ್ನು ನಿಮಗೆ ಈ ವಿಷಯದ ಕುರಿತು ಚಿಂತೆ ಬೇಡ.
PMKSY In Kannada
“ನೀರು ಇದ್ದರೆ ಕೃಷಿ ಕೃಷಿ ಇದ್ದರೆ ಬದುಕು” ಈ ನಿಮ್ಮ ಕೃಷಿ ಭೂಮಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಒದಗಿಸಲು ಸರ್ಕಾರವು ಸಬ್ಸಿಡಿ ಸಹಾಯಧನವನ್ನು ನೀಡುತ್ತಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಈಗಾಗಲೇ ಸಾಕಷ್ಟು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ನೀವು ಅರ್ಜಿ ಸಲ್ಲಿಸಲು ಬಯಸುವಿರಾ ಹಾಗಾದರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ

ಈ ಒಂದು ಲೇಖನದಲ್ಲಿ ಈ ಯೋಜನೆಯಡಿಯಲ್ಲಿ ಎಷ್ಟು ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದು? ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು? ಎನ್ನುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ನೀವೇನಾದರೂ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕೆಂದಿದ್ದರೆ ಇಂದೇ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ರೈತರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಬಗೆಗಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ.
ಯೋಜನೆಯಹೈಲೆಟ್ಸ್ :-
| ಯೋಜನೆಯ ಹೆಸರು | ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY) |
| ರೈತರಿಗೆ ಸಿಗುವ ಲಾಭ | ಸ್ಪ್ರಿಂಕ್ಲರ್ ಅಳವಡಿಸಲು 90% ವರೆಗೆ ಸಬ್ಸಿಡಿ |
| ಫಲಾನುಭವಿಗಳು | ಎಲ್ಲ ರೈತರು ಸಣ್ಣ ಮತ್ತು ಅತಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
| ಯೋಜನೆಯ ಉದ್ದೇಶ | ಕೃಷಿಯಲ್ಲಿ ಆಧುನಿಕ ನೀರಾವರಿ ಸೌಲಭ್ಯವನ್ನು ಒದಗಿಸುವುದು ಮತ್ತು ನೀರಿನ ಉಳಿತಾಯ |
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ:-
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪ್ರತಿ ಹನಿಗೂ ಹೆಚ್ಚಿನ ಬೆಳೆ ಎಂಬ ಯೋಜನೆಯನ್ನು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಲಯದ ರೈತ ಕಲ್ಯಾಣ ಇಲಾಖೆಯು ಜುಲೈ 1 2018 ರಂದು ಈ ಯೋಜನೆಯನ್ನು ಪ್ರಾರಂಭಿಸಿತು ಈ ಯೋಜನೆಯುಮುಖ್ಯವಾಗಿ ಸೂಕ್ಷ್ಮ ನೀರಾವರಿ ಹನಿ ತುಂತುರು ನೀರಾವರಿ ವ್ಯವಸ್ಥೆಯ ಮೂಲಕ ಕೃಷಿಮಟ್ಟದಲ್ಲಿ ನೀರಿನ ಬಳಕೆ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದೊಂದಿಗೆ ಜಾರಿಯಾದ ಮಹತ್ತರ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಆಧುನೀಕೃತ ನೀರಾವರಿ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಮುಂದಿಟ್ಟುಕೊಂಡು ರೂಪಿತವಾದ ಯೋಜನೆಯಾಗಿದೆ.
ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಸಾಕಷ್ಟು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನೀರುಣಿಸಲು ಮಳೆ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಮಳೆ ನೀರನ್ನೇ ಅವಲಂಬಿತರಾಗಿರುವ ರೈತರಿಗೆ ಬೇಸಿಗೆ ಕಾಲಗಳಲ್ಲಿ ನೀರಿನ ಅಭಾವದಿಂದಾಗಿ ಹೆಚ್ಚಿನ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಇದನ್ನು ಗಮನಿಸಿದ ಸರ್ಕಾರವು ರೈತರ ಕೃಷಿ ಭೂಮಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ರೈತರು ತಮ್ಮ ಕೃಷಿ ಭೂಮಿಗೆ ತುಂತುರು ನೀರಾವರಿ (Sprinkler) ಮತ್ತು ಹನಿ ನೀರಾವರಿ (Drip) ಅಳವಡಿಸಲು ಭಾರಿ ಮೊತ್ತದ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಕೃಷಿ ಸಿಂಚಾಯಿ ಯೋಜನೆಯ ಉದ್ದೇಶ:-
1.ಉತ್ಪಾದಕತೆ ಹೆಚ್ಚಳ:-
- ಹನಿ ನೀರಾವರಿ ಮತ್ತು ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ನೇರವಾಗಿ ಬೇರುಗಳಿಗೆ ನೀಡಬಹುದು ಇದರಿಂದಾಗಿ ನೀರಿನ ವ್ಯರ್ಥ ಕಡಿಮೆಯಾಗಿ ಬೆಳೆ ಉತ್ತಮವಾಗಿ ಬೆಳೆಯುತ್ತವೆ. ಹಾಗೆಯೆ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಸಿಗುವುದರಿಂದ ವೇಗವಾಗಿ ಬೆಳವಣಿಗೆ ಆಗುತ್ತದೆ ನೀರಿನ ಸಮರ್ಪಕ ಬಳಕೆಯಿಂದ ಬೆಳೆ ಉತ್ಪಾದನೆ, 20% ರಿಂದ 50 ಪರ್ಸೆಂಟ್ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಇದರಿಂದಾಗಿ ರೈತರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ
2.ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸುವುದು:-
- ರೈತರಿಗೆ ಆಧುನಿಕ ನೀರಾವರಿ ವ್ಯವಸ್ಥೆಗಳು ಅಳವಡಿಸಲು ಸಬ್ಸಿಡಿ ನೀಡಲಾಗುತ್ತದೆ ಕೃಷಿ ಭೂಮಿಗೆ ನಿಯಮಿತವಾಗಿ ಮತ್ತು ಸಮರ್ಪಕವಾಗಿ ನೀರು ಒದಗಿಸಲು ಸಹಾಯ ಮಾಡುತ್ತದೆ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಕೃಷಿ ಮಾಡಲು ಅವಕಾಶ ಸಿಗುತ್ತದೆ ಅವಲಂಬನೆ ಕಡಿಮೆಯಾಗುತ್ತದೆ ಎಲ್ಲಾ ಬೆಲೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತದೆ
3.ನೀರಿನ ಉಳಿತಾಯ ಮಾಡುವುದು:-
- ಹನಿ ನೀರಾವರಿ ವವ್ಯಸ್ಥೆ ಮಾಡುವುದರಿಂದ ನೀರು ನೀರು ವ್ಯರ್ಥವಾಗದೆ ಬೇರೆಗಳಿಗೆ ತಲುಪಿ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಮತ್ತು ಬೆಳೆಗಳು ವೇಗವಾಗಿ ಬೆಳೆಯುತ್ತವೆ ನೀರನ್ನು ಉಳಿತಾಯ ಮಾಡಬುದು.
4. ಕೃಷಿ ಚಟುವಟಿಕೆಯನ್ನು ಆಧುನೀಕರಿಸುವುದು:
- ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ರೈತರಿಗೆ ತುಂತುರು ಹಾಗೂ ಹನಿ ನೀರಾವರಿಯಂತಹ ಆಧುನೀಕೃತ ನೀರಾವರಿ ಸೌಲಭ್ಯವನ್ನು ಅಳವಡಿಸಲು 45% ಇಂದ 90% ವರೆಗೆ ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಕೃಷಿ ಚಟುವಟಿಕೆಯನ್ನು ಅದೋನೀಕರಿಸಲು ಉತ್ತೇಜನವನ್ನು ನೀಡುವುದು.
5. ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದು:
- ರೈತರಿಗೆ ಈ ಒಂದು ಯೋಜನೆಯಡಿಯಲ್ಲಿ ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಳೆ ನೀರಿನ ಮೇಲಿನ ಅವಲಂಬನೆಯನ್ನು ತಪ್ಪಿಸಿ ವರ್ಷಕ್ಕೆ ಒಂದು ಬೆಳೆಗಳನ್ನು ಬೆಳೆಯುವ ಬದಲು 2-3 ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡುವುದು.
6. ನೀರಿನ ಸುರಕ್ಷಿತ ಬಳಕೆ ಪ್ರೋತ್ಸಾಹ ನೀಡುವುದು:
ರೈತರಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಲು ಉತ್ತೇಜನ ನೀಡುವ ಮೂಲಕ ನೀರಿನ ಪೋಲಾಗುವಿಕೆಯನ್ನು ತಡೆಗಟ್ಟಬಹುದಾಗಿದೆ.
ಕೃಷಿ ಸಿಂಚಾಯಿ ಯೋಜನೆ ಯಿಂದಾಗಿ ಅಳವಡಿಸಬಹುದುನೀರಾವರಿ ವ್ಯವಸ್ಥೆಗಳು:-
- ತುಂತುರು ನೀರಾವರಿ ವ್ಯವಸ್ಥೆ(Sprinkler Irrigation) :- ಈ ವ್ಯವಸ್ಥೆಯನ್ನು ಅಳವಡಿಸುವುದರಿಂದ ಮಳೆಯಂತೆ ನೀರನ್ನು ಸಿಂಪಡಿಸಬಹುದು ಸಮತಟ್ಟಾದ ಮತ್ತು ಅಸಮ ತಟ್ಟಾದ ಜಮೀನಿಗೆ ಜಮೀನಿಗೂ ಇದು ಸೂಕ್ತವಾಗಿದೆ ಧಾನ್ಯ ಮೇವು ಮತ್ತು ತರಕಾರಿ ಬೆಲೆಗೆ ಇದು ತುಂಬಾ ಉಪಯುಕ್ತವಾಗಿದೆ
- ಹನಿ ನೀರಾವರಿ ವ್ಯವಸ್ಥೆ:- ನೀರನ್ನು ನೇರವಾಗಿ ಬೆಲೆಗಳ ಬೇರಿಗೆ ಹನಿ ಹನಿ ರೂಪದಲ್ಲಿ ಒದಗಿಸುವುದರಿಂದ ನೀರಿನ ಉಳಿತಾಯ ಹೆಚ್ಚಾಗುತ್ತದೆ ಹಣ್ಣು ತರಕಾರಿ ತೋಟಗಾರಿಕೆ ಬೆಳೆಗಳಿಗೆ ಇದು ಅತ್ಯುತ್ತಮ ವ್ಯವಸ್ಥೆಯಾಗಿದೆ ನೀರು ವ್ಯರ್ಥವಾಗದೆ ಪೂರೈಕೆ ಆಗುತ್ತದೆ
- ಮೈಕ್ರೋ ನೀರಾವರಿ ವ್ಯವಸ್ಥೆ:- ಕಡಿಮೆ ನೀರಿನಲ್ಲಿ ಹೆಚ್ಚು ಪರಿಣಾಮಕಾರಿ ನೀಡಬರಿ ವ್ಯವಸ್ಥೆ ಇದಾಗಿದ್ದು ನೀರಿನ ವ್ಯರ್ಥ ಕಡಿಮೆ ಮಾಡುತ್ತದೆ ಆಧುನಿಕ ಕೃಷಿಗೆ ಇದು ಸೂಕ್ತವಾಗಿದೆ
- ಪೈಪ್ ಲೈನ್ ನೀರಾವರಿ ವ್ಯವಸ್ಥೆ:- ಕಾಲುವೆಗಳ ಬದಲು ಪೈಪ್ ಮೂಲಕ ನೀರು ಸಾಗಿಸಲಾಗುತ್ತದೆ ನೀರಿನ ನಷ್ಟ ಕಡಿಮೆ ಆಗುತ್ತದೆ ನೀರನ್ನು ಸುಲಭವಾಗಿ ಹೊಲಕ್ಕೆ ತಲುಪಿಸಲು ಈ ವ್ಯವಸ್ಥೆ ಅನುಕೂಲವಾಗಿದೆ
- ರನ್ ಗನ್ ನಿರಾವರಿ ವ್ಯವಸ್ಥೆ :- ದೊಡ್ಡ ಪ್ರದೇಶಗಳಿಗೆ ನೀರು ಸಿಂಪಡಿಸಲು ಬಳಸಲಾಗುತ್ತದೆ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶಕ್ಕೆ ನೀಡುವುದು ಬೆಳೆಗಳಿಗೆ ಇದು ಉಪಯುಕ್ತವಾದ ವ್ಯವಸ್ಥೆಯಾಗಿದೆ
ತುಂತುರು ಹಾಗೂ ಹನಿ ನೀರಾವರಿಯನ್ನು ಅಳವಡಿಸಲು ರೈತರಿಗೆ ಸಿಗುವ ಸಬ್ಸಿಡಿ ಪ್ರೋತ್ಸಹಧನ ಎಷ್ಟು?
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ (PMKSY) ವಿವಿಧ ವರ್ಗಗಳ ರೈತರಿಗೆ ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯವನ್ನು ಅಳವಡಿಸಲು ಬೇರೆ ಬೇರೆ ಸಬ್ಸಿಡಿ ಸಹಾಯಧನವನ್ನು ಸರ್ಕಾರವು ನೀಡುತ್ತಿದ್ದು, ಅದಕ್ಕೆ ಸಂಬಂಧಿಸಿದ ವಿವರ ಈ ಕೆಳಕಂಡಂತಿದೆ.
- ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅಳವಡಿಸಲು ಸರ್ಕಾರದಿಂದ 55% ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಸಾಮಾನ್ಯ ವರ್ಗದ ರೈತರು ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅಳವಡಿಸಲು ಸರ್ಕಾರದಿಂದ 45% ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳುತ್ತಾರೆ.
- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಗಳ ರೈತರಿಗೆ ತಮ್ಮ ಕೃಷಿ ಭೂಮಿಗೆ ತುಂತುರು ನೀರಾವರಿ ಹಾಗೂ ಹನಿ ನೀರಾವರಿಯನ್ನು ಅಳವಡಿಸಲು ಸರ್ಕಾರದಿಂದ 90% ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ರೈತರು ಕೇವಲ 10% ಹಣವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು:
- ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ರೈತರು ಯೋಜನೆಗೆ ಅರ್ಹರಾಗಿರುತ್ತಾರೆ
- ಕರ್ನಾಟಕದ ಕಾಯಂ ನಿವಾಸಿರೈತರು.
- ರೈತರ ತಮ್ಮ ಒಟ್ಟು ಭೂಮಿಯಲ್ಲಿ ಐದು ಹೆಕ್ಟೇರ್ ಭೂಮಿಗೆ ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಕಳೆದ 7 ವರ್ಷಗಳಲ್ಲಿ ಯಾವುದೇ ಸರ್ಕಾರದಿಂದ ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ ಸಬ್ಸಿಡಿ ಸಹಾಯಧನವನ್ನು ಪಡೆದುಕೊಂಡಿರಬಾರದು.
- ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರು ಸೇರಿದಂತೆ ಎಲ್ಲಾ ವರ್ಗದ ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಕೃಷಿ ಸಿಂಚಾಯಿ ಯೋಜನೆಯಿಂದಾಗಿ ರೈತರಿಗೆ ಸಿಗುವ ಪ್ರಯೋಜನಗಳು:
1.ಆಧುನಿಕ ನೀರಾವರಿ ತಂತ್ರಜ್ಞಾನ ಬಳಕೆ:-
ರೈತರಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಬಳಸಲು ಅವಕಾಶ ಸಿಗುತ್ತದೆ ನೀರನ್ನು ನೇರವಾಗಿ ಬೆಳೆಗಳ ಬೇರುಗಳಿಗೆ ನೀಡುವುದರಿಂದ ಈ ದಿನ ಬಳಕೆ ದಕ್ಷತೆ ಹೆಚ್ಚುತ್ತಾರೆ ನೀರಿನ ವ್ಯಕ್ತ ಕಡಿಮೆಯಾಗಿ ಮತ್ತು ಹೆಚ್ಚು ಪ್ರದೇಶಕ್ಕೆ ನೀರು ಒದಗಿಸಬಹುದು
2. ವಿವಿಧ ಬೆಳೆಗಳನ್ನು ಬೆಳೆಯಲು ಪ್ರೋತ್ಸಹ:-
ಕಡಿಮೆ ನೀರಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹವಾಗುತ್ತದೆ ಮಳೆಯನ್ನೇ ನಂಬಿ ಸುಮ್ಮನೆ ಕೂರದೆ ಈ ತುಂತುರು ನೀರಾವರಿ ವ್ಯವಸ್ಥೆಯಿಂದಾಗಿ ತರಕಾರಿಗಳು ತೋಟಗಾರಿಕಾ ಬೆಳೆಗಳು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು ಅವಕಾಶ ಸಿಗುತ್ತದೆ
3. ನೀರಿನ ಉಳಿತಾಯ:
ರೈತರು ತಮ್ಮ ಕೃಷಿ ಭೂಮಿಗೆ ಕಾಲುವೆ ನೀರಿನಂತಹ ಸಾಂಪ್ರದಾಯಿಕ ನೀರಾವರಿ ಸೌಲಭ್ಯದ ಬದಲು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯವನ್ನು ಅಳವಡಿಸುವ ಮೂಲಕ ನೀರಿನ ವ್ಯರ್ಥವನ್ನು ತಡೆದು ಶೇಕಡಾ 40% ಇಂದ 70% ನೀರನ್ನು ಉಳಿತಾಯ ಮಾಡಬಹುದು.
4. ಬೆಳೆಗಳ ಇಳುವರಿ ಹೆಚ್ಚಳ:
ರೈತರು ತಮ್ಮ ಕೃಷಿ ಭೂಮಿಗೆ ತುಂತುರು ಹಾಗೂ ಹನಿ ನೀರಾವರಿಯನ್ನು ಅಳವಡಿಸುವುದರಿಂದ ನೀರು ನೇರವಾಗಿ ಬೆಳೆಗಳಿಗೆ ಹೋಗಿ ಬೆಳೆಗೆ ಅಗತ್ಯವಾಗುವಷ್ಟು ನೀರು ನಿರಂತರವಾಗಿ ಸಿಗುವುದರಿಂದ ಬೆಳೆಗಳ ಇಳುವರಿಯೂ ಹೆಚ್ಚುತ್ತದೆ. ಇದರಿಂದಾಗಿ ರೈತರ ಆದಾಯವು ವೃದ್ಧಿಯಾಗುತ್ತದೆ.
5. ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವ ಚಿಂತೆ ಇಲ್ಲ:
ರೈತರು ತಮ್ಮ ಕೃಷಿ ಭೂಮಿಗೆ ತುಂತುರು ಹಾಗೂ ಹನಿ ನೀರಾವರಿ ಅಳವಡಿಸುವುದರಿಂದ ತಮ್ಮ ಕೃಷಿ ಭೂಮಿಗೆ ಗಂಟೆ ಗಟ್ಟಲೆ ನೀರನ್ನು ಉಣಿಸಲು ಕಾರ್ಮಿಕರಿಗೆ ಜವಾಬ್ದಾರಿ ವಹಿಸುವ ಅಗತ್ಯ ಇರುವುದಿಲ್ಲ. ಇದರಿಂದಾಗಿ ಕಾರ್ಮಿಕರ ಕೂಲಿ ಹಣವನ್ನು ಉಳಿತಾಯ ಮಾಡಬಹುದು.
6. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು:
ರೈತರು ತಮ್ಮ ಕೃಷಿ ಭೂಮಿಗೆ ತುಂತುರು ಹಾಗೂ ಹನಿ ನೀರಾವರಿಯನ್ನು ಅಳವಡಿಸುವ ಮೂಲಕ ನೀರು ಅಲ್ಲಲ್ಲಿ ನಿನ್ನುವುದಿಲ್ಲ. ಇದರಿಂದಾಗಿ, ಮಣ್ಣಿನ ಮೇಲ್ಪದರವು ಕೊಚ್ಚಿ ಹೋಗುವುದಿಲ್ಲ ಹಾಗೂ ಮಣ್ಣು ಚೌಳು ಆಗುವುದಿಲ್ಲ. ಬದಲಾಗಿ ಮಣ್ಣು ಹೆಚ್ಚಿನ ಫಲವತ್ತತೆಯಿಂದ ಕೂಡಿರುತ್ತದೆ.
ಮಳೆಯ ಅವಲಂಬನೆಗೆ ಮುಕ್ತಿ:
ಇಂದಿಗೂ ದೇಶದ ಲಕ್ಷಾಂತರ ಮಧ್ಯಮ ವರ್ಗದ ಬಡ ರೈತರು ಮಳೆ ಆಧಾರಿತ ಕೃಷಿಯಲ್ಲಿ ತೊಡಗಿದ್ದಾರೆ ಇದರಿಂದ ಪ್ರತಿ ಹಂಗಾಮ ಬೆಳೆ ವೈಫಲ್ಯದ ಭೀತಿ ಕಾಡುತ್ತಿದೆ PMKSY ಈ ಸಮಸ್ಯೆಗೆ ಪರಿಹಾರ ನೀಡುತ್ತಿದೆ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳ ಮೂಲಕ ಕಡಿಮೆ ನೀರಿನಿಂದಲೂ ಬೆಳೆಗಳಿಗೆ ಅಗತ್ಯ ತೇವಾಂಶ ಒದಗಿಸಿ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಕುಟುಂಬಕ್ಕೆ ಇದು ನೆರವಾಗುತ್ತದೆ ಇದರಿಂದ ಬರಗಾಲದ ಸಮಯದಲ್ಲಿಯೂ ಬೆಳೆ ಉಳಿಯುವ ಸಾಧ್ಯತೆ ಹೆಚ್ಚುತ್ತದೆ
| ಇಲ್ಲಿ ಗಮನಿಸಿ: “ರೈತರೇ, ನೀವೇನಾದರೂ ಗುತ್ತಿಗೆ ಪಡೆದುಕೊಂಡಿರುವ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರೆ, ನೀವು ಕೂಡ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿದ್ದೀರಿ.” |
ರೈತರು ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ?
ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತವನ್ನು ಫಾಲೋ ಮಾಡಿ.
- ರಾಜ್ಯ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ https://pmksy.gov.in/ ಗೆ ಭೇಟಿ ನೀಡಿ.
- ನಂತರ, ಸರ್ಚ್ ಬಾಕ್ಸ್ ನಲ್ಲಿ ಫಾರ್ಮರ್ಸ್ ರಿಜಿಸ್ಟ್ರೇಷನ್ ವಿಭಾಗವನ್ನು ಆಯ್ಕೆಮಾಡಿ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ನೋಂದಣಿ ಪೂರ್ಣಗೊಳಿಸಿ.
- ನಂತರ ನಿಮ್ಮ ಜಮೀನಿನ ವಿವರ ಹಾಗೂ ಹನಿ ಅಥವಾ ತುಂತುರು ನೀರಾವರಿಯಲ್ಲಿ ಯಾವ ನೀರಾವರಿ ಸೌಲಭ್ಯ ಬೇಕು ಎಂಬುದನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:-
- ಅರ್ಜಿ ಸಲ್ಲಿಸುವ ರೈತರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.
- ನಂತರ, ಅಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
- ನಂತರ, ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಅಗತ್ಯ ದಾಖಲೆಗಳು:
ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳೆಂದರೆ,
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ ಪೋರ್ಟ್ ಅಳತೆಯ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಜಮೀನಿನ ಪಹಣಿ
- ಹಾಗೂ ಇನ್ನಿತರ ದಾಖಲೆಗಳು
- ನೀರಿನ ಮೂಲದ ಕುರಿತು ದೃಢೀಕರಣ ಪತ್ರ
- FRUITS ID
ಅಂತಿಮವಾಗಿ:
ಭಾರತದಲ್ಲಿ ಕೃಷಿಯನ್ನುಬಹುಪಾಲು ಮಳೆಯ ಮೇಲೆಯೇ ಅವಲಂಬಿತವಾಗಿದೆ ಮಳೆ ಕೈಕೊಟ್ಟರೆ ಬೆಳೆ ನಾಶ ರೈತನ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗಾಗಿ ಮಹತ್ವದ ಯೋಜನೆ ಯಾದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ರೂಪಿಸಿದ್ದು ಸಾಕಷ್ಟು ರೈತರಿಗೆ ಈ ಯೋಜನೆಯಡಿಯಲ್ಲಿ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ನೀವೇನಾದರೂ ಈ ಯೋಜನೆಯಡಿಯಲ್ಲಿ ಉತ್ತಮ ಹಾಗೂ ಆಧುನೀಕೃತ ಹನಿ ಅಥವಾ ತುಂತುರು ನೀರಾವರಿ ಅಳವಡಿಸಲು ಸಹಾಯಧನವನ್ನು ಪಡೆದುಕೊಳ್ಳಬೇಕೆಂದಿದ್ದರೆ ಇಂದೇ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಕೃಷಿ ಭೂಮಿಯನ್ನು ಆಧುನೀಕರಿಸಿ ಕಡಿಮೆ ಶ್ರಮ ಹಾಗೂ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಗಳಿಸಿರಿ
ಗಮನಿಸಿ:- ಹಲವು ರೈತರಿಗೆ ಈ ಸಿಂಚಾಯಿ ಯೋಜನೆ ಬಗ್ಗೆ ಸರಿಯಾದ ಮಾಹಿತಿ ತಿಳಿದಿಲ್ಲವಾದರೆ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಹೋಗಿ ಅಧಿಕಾರಿಗಳ ಬಳಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಉತ್ತರ :-ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಎಲ್ಲಾ ರೈತರು ಅರ್ಹರಾಗಿರುತ್ತಾರೆ
ಉತ್ತರ :- ರೈತರ ವರ್ಗ ಮತ್ತು ರಾಜ್ಯದ ನಿಯಮದ ಪ್ರಕಾರ ಸುಮಾರು 55% ರಿಂದ 90% ವರೆಗೆ ಸಬ್ಸಿಡಿ ಸಿಗುತ್ತದೆ
ಉತ್ತರ :-ಹನಿ ನೀರಾವರಿ ತುಂತುರು ನೀರಾವರಿ ಮೈಕ್ರೋ ಇರಿಗೇಶನ್ ವ್ಯವಸ್ಥೆಗಳಿಗೆ ಸಬ್ಸಿಡಿ ಸಿಗುತ್ತದೆ
ಇತರೆ ಪ್ರಮುಖ ಲಿಂಕುಗಳು:-
PM Vishwakarma : ₹15,000 ಸಹಾಯಧನ! ಪಿಎಂ ವಿಶ್ವಕರ್ಮ ಟೈಲರಿಂಗ್ ಮಷಿನ್ ಸ್ಕೀಮ್ ! ಭರ್ಜರಿ ಆನ್ಲೈನ್ ಅಪ್ಲಿಕೇಶನ್ !
Free Electric Sewing Machine: ಮಹಿಳೆಯರಿಗೆ ಉಚಿತ ವಿದ್ಯುತ್ ಹೊಲಿಗೆಯಂತ್ರ – ಇಂದೇ ಅರ್ಜಿ ಹಾಕಿ!
Labour Pension : ರೂ2000/- ಯಾರೆಲ್ಲ ಮಾಡಿಸಿಲ್ಲವೋ ಇಂದೇ ಮಾಡಿಸಿ : ಹೇಗೆ ಗೊತ್ತಾ ಸಿಂಪಲ್!









