ಅರಣ್ಯ ಒತ್ತುವರಿ ಮಾಡಿಕೊಂಡಿರುವ ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ಜಮೀನಿನ ಹಕ್ಕು ಪಡೆಯಲು ಅಥವಾ ಖಾತೆ ಮಾಡಿಕೊಳ್ಳಲು ಎದುರಿಸುತ್ತಿರುವ ಸಮಸ್ಯೆಗಳು ನಿಜಕ್ಕೂ ಗಂಭೀರವಾದವು. ಇದನ್ನು ಗಮನಿಸಿದ ಸರ್ಕಾರ ರೈತರಿಗೆ ಸಿಹಿಸುದ್ದಿ ಕೊಟ್ಟಿದೆ.
Akrama sakrama applications relating to agriculture land be cleared soon
ನಮ್ಮ ಡಿ. ಕೆ ಶಿವಕುಮಾರ್ ಅವರು ಎಲ್ಲಾ ರೈತರಿಗೆ ಹಕ್ಕು ಪತ್ರ ಮಾಡಿಸಿಕೊಡುವುದಾಗಿ ತಿಳಿಸಿದ್ದಾರೆ. ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಸಹ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಡಿ. ಕೆ. ಶಿವಕುಮಾರ್ ಅವರು ವಿಶೇಷವಾಗಿ ಉಪಮುಖ್ಯ ಮಂತ್ರಿಗಳಾಗಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅರಣ್ಯ ಒತ್ತುವರಿ ಮತ್ತು ಬಡ ರೈತರ ಜಮೀನು ಸಕ್ರಮದ ಬಗ್ಗೆ ಖಾತೆ ಮಾಡಿಸಿಕೊಡುವುದಾಗಿ ತಿಳಿಸಿದ್ದಾರೆ. ಇದು ರೈತರಿಗೆ ತುಂಬ ಸಂತೋಷದ ಸುದ್ದಿ ಎಂದು ಹೇಳಬಹುದಾಗಿದೆ. 3 ಎಕರೆ ಗಿಂತ ಕಡಿಮೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿಮಾಡುತ್ತಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಇದರ ಮುಖ್ಯ ಉದ್ದೇಶ ಬಡ ರೈತರನ್ನು ಪ್ರೋತ್ಸಾಯಿಸುವುದು.
ಯೋಜನೆಯ ಅವಲೋಕನ:-
| ಯೋಜನೆಯ ಹೆಸರು | ರೈತ ಭೂ ಹಕ್ಕು ಪತ್ರ ಭದ್ರತಾ ಯೋಜನೆ |
| ಫಲಾನುಭವಿಗಳು | ಹಕ್ಕು ಪತ್ರವಿಲ್ಲದೆ ಇರುವ ಸಣ್ಣ ಹಾಗು ಅತಿಸಣ್ಣ ರೈತರು |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅಧಿಕೃತ ವೆಬಸೈಟ್ | https://landrecords.karnataka.gov.in/ |
ಈ ಯೋಜನೆಯ ಉದ್ದೇಶ:-
- ಎಲ್ಲಾ ರೈತರಿಗೆ ಅವರ ಕೃಷಿ ಭೂಮಿಗೆ ಸಂಬಂಧಿಸಿದ ಕಾನೂನುಬದ್ದ ಹಕ್ಕು ಪತ್ರ ಒದಗಿಸುವುದು.
- ಹಕ್ಕುಪತ್ರವಿಲ್ಲದ ರೈತರಿಗೆ ಭದ್ರತೆ ಮತ್ತು ಸ್ಥಿರತೆ ನೀಡುವುದು.
- ಭೂಮಿ ಸಂಬಂಧಿತ ವಿವಾದಗಳು ಮತ್ತು ಗೊಂದಲಗಳನ್ನು ಕಡಿಮೆ ಮಾಡುವುದು
- ರೈತರು ಸರ್ಕಾರಿ ಯೋಜನೆಗಳು, ಬ್ಯಾಂಕು ಸಾಲಗಳು ಮತ್ತು ಸಹಾಯಧನಗಳನ್ನು ಸುಲಭವಾಗಿ ಪಡೆಯಲು ನೆರವಾಗುತ್ತವೆ
- ರೈತರು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುವುದು
ಸಂಕ್ಷಿಪ್ತ ಮಾಹಿತಿ:-
ಈ ಯೋಜನೆಯಿಂದ ಸಣ್ಣ ಹಾಗು ಅತಿಸಣ್ಣ ರೈತರಿಗೆ ಸಾಕಷ್ಟು ಪ್ರಯೋಜನವಾಗಲಿದ್ದು. ಕರ್ನಾಟಕ ಸರ್ಕಾರವು ರೈತರು ಅವರ ಜಮೀನಿನ ಮಾಲೀಕತ್ವದ ಹಕ್ಕನ್ನು ಖಚಿತ ಪಡಿಸಲು ಮತ್ತು ಭೂ ವಿವಾದವನ್ನು ತಪ್ಪಿಸಲು ‘ಭೂ ಗ್ಯಾರಂಟಿ ‘ ಅಥವಾ ರೈತ ಭೂ ಹಕ್ಕು ಪತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ರಾಜ್ಯದ ಲಕ್ಷಾಂತರ ಡಿಜಿಟಲ್ ಹಕ್ಕುಪತ್ರ ನೀಡುವ ಗುರಿಯನ್ನು ಹೊಂದಿದೆ. ಇದು ಎಲ್ಲಾ ರೈತರಿಗೆ ಅನ್ವಹಿಸುವುದಿಲ್ಲ ಕೇವಲ 3 ಎಕ್ಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿಮಾಡುತ್ತಿರುವ ರೈತರಿಗೆ ಮಾತ್ರ ಸೀಮಿತವಾಗಿರುತ್ತದೆ.
ಅರ್ಹತಾ ಮಾನದಂಡಗಳು:-
1.ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿ ರೈತರಾಗಿರಬೇಕು
2.ತಮ್ಮ ಕೃಷಿಭೂಮಿಗೆ ಯಾವುದೇ ಹಕ್ಕು ಪತ್ರವಿಲ್ಲದೆ ಇರುವ ರೈತರು ಅಥವಾ ದಾಖಲೆಗಳಲ್ಲಿ ಅಸ್ಪಷ್ಟತೆ ಇರುವವರು ಅರ್ಹರು
3.ಕೃಷಿಯನ್ನು ಮುಖ್ಯ ವೃತ್ತಿಯಾಗಿ ನಡೆಸಿತ್ತಿರುವವರು ಈ ಯೋಜನೆಗೆ ಅರ್ಜಿಸಲ್ಲಿಸಬಹುದು
4.ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆಗಳು ಮತ್ತು ಪುರಾವೆಗಳನ್ನು ಹೊಂದಿರಬೇಕು
5.ಕರ್ನಾಟಕ ಸರ್ಕಾರ ನಿಗದಿ ಪಡಿಸಿರುವ ಇತರೆ ಷರತ್ತುಗಳನ್ನು ಪೂರೈಸಿರಬೇಕು
ಅನುಕೂಲತೆಗಳು:-
ಜಮೀನಿನ ಕಾನೂನುಬದ್ಧ ಮಾಲೀಕತ್ವ:- ಹಕ್ಕುಪತ್ರ ದೊರೆತ ತಕ್ಷಣ ರೈತರ ಆ ಜಮೀನನ ಅಧಿಕೃತ ಮಾಲೀಕರಾಗುತ್ತಾರೆ. ಇದರಿಂದ ಆಸ್ತಿಯ ಮೇಲಿನ ಹಕ್ಕು ಭದ್ರವಾಗುತ್ತದೆ
ಬ್ಯಾಂಕ್ ಸಾಲ ಸ್ವಾಲಭ್ಯ:-ಅಧಿಕೃತ ಹಕ್ಕು ಪತ್ರವನ್ನು ಬ್ಯಾಂಕ್ ಗಳಲ್ಲಿ ಭದ್ರತೆಗಾಗಿ ನೀಡಿ, ಕೃಷಿ ಅಥವಾ ವೈಯಕ್ತಿಕ ಅಭಿವೃದ್ಧಿಗಾಗಿ ಸುಲಭವಾಗಿ ಸಾಲ ಪಡೆಯಬಹುದು
ವಂಚನೆ ಮತ್ತು ಒತ್ತುವರಿ ತಡೆ:-ಬೇರೆಯವರ ಭೂಮಿಯನ್ನು ಒತ್ತುವರಿ ಮಾಡದಂತೆ ಕಾನೂನು ರಕ್ಷಣೆ ಸಿಗುತ್ತದೆ
ಸರ್ಕಾರಿ ಸ್ವಾಲಭ್ಯಗಳ ನೇರ ಲಾಭ:- ಬೆಳೆವಿಮೆ ಮತ್ತು ಬರ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲು ಈ ಎಲ್ಲಾ ದಾಖಲೆಗಳು ಸಹಕಾರಿಯಾಗುತ್ತವೆ.
ವಾಸಸ್ಥಳದ ಹಕ್ಕು:- ತಾವು ವಾಸಿಸುತ್ತಿರುವ ಪ್ರದೇಶದ ಎಲ್ಲಾ ಹಕ್ಕುಗಳು ದೂರೆಯುತ್ತವೆ. ಕಂದಾಯ, ಮನೆ, ಜಮೀನುಗಳ ಮೇಲೆ ಸಂಪೂರ್ಣ ಹಕ್ಕು.
ಭವಿಷ್ಯದ ಭದ್ರತೆ:- ಜಮೀನಿನ ವಿವಾದಗಳನ್ನು ರೈತರು ಮತ್ತು ಅವರ ಮುಂದಿನ ಪೀಳಿಗೆ ಅವರಿಗೆ ಆಸ್ತಿಯ ಹಂಚಿಕೆಗೆ ವರ್ಗಾವಣೆ ಪ್ರಕ್ರಿಯೆ ಸರಳವಾಗುತ್ತದೆ
ಅನಾನುಕೂಲತೆಗಳು:-
- ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು
- ಎಲ್ಲಾ ರೈತರು ಪ್ರತಿಭಟನೆ ಮಾಡಬಹುದು
- ಸರಿಯಾದ ರೀತಿಯಲ್ಲಿ ದಾಖಲೆಗಳು ಸಂಗ್ರಹಿಸುವುದು ಕಷ್ಟವಾಗಬಹುದು
- ಅರ್ಜಿವಿಳಂಬ ಮತ್ತು ತಿರಸ್ಕಾರ ಸಂಭವಿಸಬಹುದು
- ಸಣ್ಣ ಹಾಗು ಅತಿಸಣ್ಣ ರೈತರಿಗೆ ಹಕ್ಕುಪತ್ರ ಸಿಗದೇ ಇರಬಹುದು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:-
- ಆಧಾರ್ ಕಾರ್ಡ್
- ಸಾಗುವಲ್ಲಿ ಚೀಟಿ ಅಥವಾ ಹಳೆಯ ಕ್ರಯ ಪತ್ರ
- ಪಹಣಿ
- ಭೂ ರಹಿತ ಕೃಷಿ ಕಾರ್ಮಿಕ ಪ್ರಮಾಣ ಪತ್ರ
- ಪಾನ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ :-
- ಅಧಿಕೃತ ವೆಬ್ ಸೈಟ್ https://landrecords.karnataka.gov.in/ ಗೆ ಬೇಡಿ ನೀಡಿ ಅರ್ಜಿಸಲ್ಲಿಸಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
- ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಿ
ತೀರ್ಮಾನ :-
ರಾಜ್ಯದ ಲಕ್ಷಾಂತರ ಡಿಜಿಟಲ್ ಹಕ್ಕುಪತ್ರ ನೀಡುವ ಗುರಿಯನ್ನು ಹೊಂದಿದೆ. ಇದು ಎಲ್ಲಾ ರೈತರಿಗೆ ಅನ್ವಹಿಸುವುದಿಲ್ಲ ಕೇವಲ 3 ಎಕ್ಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿಮಾಡುತ್ತಿರುವ ರೈತರಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಪ್ರಸ್ತುತ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಿ








