ಗಂಗಾ ಕಲ್ಯಾಣ ಯೋಜನೆ 2026 | Ganga Kalyana Scheme Apply Online 2026 Borewell

January 5, 2026 11:02 AM

ಕರ್ನಾಟಕದ ಬಡ ಮತ್ತು ಕಡಿಮೆ ಜಮೀನು ಹೊಂದಿರುವ ರೈತರಿಗೆ ಆರ್ಥಿಕ ಸಬಲೀಕರಣಕ್ಕೆ ಜಾರಿಗೆ ತಂದಿರುವ ಯೋಜನೆಯೇ “ಗಂಗಾ ಕಲ್ಯಾಣ ಯೋಜನೆ” ಇದು ಒಂದು ಮತ್ವದ ಯೋಜನೆ ಯಾಗಿದ್ದು. ಸಣ್ಣ ಮತ್ತು ಅತಿಸಣ್ಣ ರೈತರ ಬದುಕನ್ನು ಬದಲಿಸುವ ಒಂದು ದೊಡ್ಡ ಯೋಜನೆ ಆಗಿದೆ. ಈ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಸಲು ಸರ್ಕಾರದಿಂದ ₹4,75.000 ಸಹಾಯದ ಸಿಗುತ್ತದೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

Ganga Kalyana Scheme Apply Online 2026

ಕರ್ನಾಟಕದಲ್ಲಿ ಗ್ರಾಮೀಣ ಭಾಗದ ರೈತರು ಮಳೆಯನ್ನೇ ನಂಬಿ ವ್ಯವಸಾಯ ಮಾಡುದುವರಿಂದ ಸರಿಯಾದ ಸಮಯದಲ್ಲಿ ಮಳೆ ಬರದೇ ಹೋದರೆ ಅವರು ಬೆಳೆದ ಬೆಳೆಗಳು ಹಾನಿಗೆ ಒಳಪಡುತ್ತವೆ ಇದರಿಂದಾಗಿ ಅವರು ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇದನ್ನು ತಪ್ಪಿಸಲು ಮತ್ತು ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.

  • ಈ ಯೋಜನೆ ಮೂಲಕ ₹4,75.000 ದವರೆಗೆ ಸಾಲ ಮತ್ತು ಸಬ್ಸಿಡಿಯನ್ನು ಇದರಿಂದ ಸಿಗುತ್ತದೆ. ಇದು ಒಂದು ಅದ್ಬುತ ಯೋಜನೆಯಾಗಿದೆ.
  • ನೀರಾವರಿ ಸೌಲಭ್ಯವಿಲ್ಲದ ರೈತರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ

Udyogini Scheme 2026 In Kannada

ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಇಂತ ಒಂದು ಯೋಜನೆಗಳು ಜನಸಾಮಾನ್ಯರ ನೆರವಿಗಾಗಿ ಜಾರಿ ಬರಬೇಕಿವೆ. ಮಳೆ ಇಲ್ಲವಾದರೆ ರೈತನ ಜೀವನ ತುಂಬ ಕಷ್ಟವಾಗುತ್ತದೆ ಆದರೆ ಸರ್ಕಾರದ ಇಂತಹ ಯೋಜನೆಯಿಂದಾಗಿ ವರ್ಷವಿಡೀ ಕೃಷಿ ಮಾಡಬಹುದು ಇದರಿಂದ ಅವರ ಆರ್ಥಿಕ ಸಂಕಷ್ಟ ಕಡಿಮೆ ಯಾಗುತ್ತದೆ.

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://maadhyama.net/ ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ. ಇಂತಹ ಅಧ್ಭುತ ಯೋಜನೆಯ ಲಾಭ ಪಡೆದುಕೊಳ್ಳಿ

ಯೋಜನೆಯ ಅವಲೋಕನ:(Udyogini Scheme 2026 In Kannada)

ಯೋಜನೆಯ ಹೆಸರು“ಗಂಗಾ ಕಲ್ಯಾಣ ಯೋಜನೆ”
ಅರ್ಹ ಫಲಾನುಭವಿಗಳುಕರ್ನಾಟದಲ್ಲಿನ ಬಡ ಮತ್ತು ಸಣ್ಣ ರೈತರು
ಒಟ್ಟು ಪ್ರೋತ್ಸಾಹಧನರೂ. ₹4,75.000 ದವರೆಗೆ ಸಾಲ ಮತ್ತು ಸಬ್ಸಿಡಿ.
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ ಅರ್ಜಿ
Ganga Kalyana Scheme Apply Online 2026

ಸಂಕ್ಷಿಪ್ತ ಮಾಹಿತಿ:

ಪ್ರತಿಯೊಬ್ಬರೂ ಈ ಒಂದು ಯೋಜನೆಯ ತಿಳಿದುಕೊಳಲೇ ಬೇಕು ಯಾಕಂದ್ರೆ ಇಂತಹ ಅತ್ಯುತ್ತಮ ಯೋಜನೆಗಳನ್ನೂ ಜಾರಿಗೆ ತಂದಿರುವುದು ನಮ್ಮಗೊಂದು ಹೆಮ್ಮೆ ಅಂತಾನೆ ಹೇಳ್ಬಹುದು ಗಂಗಾ ಕಲ್ಯಾಣ ಯೋಜನೆಯು ಪ್ರೆಬ್ರವರಿ 1-1997ರಲ್ಲಿ ಜಾರಿಗೆ ಬಂದಿತು, ಕೆಲವು ವರ್ಷಗಳ ನಂತರ ಕೆಲವೊಂದು ನಿಯಮಗಳಲ್ಲಿಅನೇಕ ಬದಲಾವಣೆಗಳು ಕೂಡ ಕಂಡುಬಂದವು. ಹಲವು ಬಡ ರೈತರಿಗೆ ಪ್ರಮುಖ ಆರ್ಥಿಕ ಆಸರೆಯಾಗಿದೆ ಎಂದರೆ ತಪ್ಪಾಗಲಾರದು.

ಹೌದು ಈ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಕಡಿಮೆ ಭೂಮಿ ಇರುವ ರೈತರಿಗೆ ಈ ಯೋಜನೆಯ ಲಾಭ ಸಿಗುತ್ತದೆ ಉಚಿತ ಬೋರ್ವೆಲ್ ಜೊತೆಗೆ ವಿದ್ಯುತ್ ವ್ಯವಸ್ಥೆ ಮತ್ತು ಪಂಪ್ ಸೆಟ್ ಹಾಕಿಸಿ ಕೊಡಲಾಗುವುದು. ಇದನ್ನು ಮುಖ್ಯವಾಗಿ “ಪರಿಹಾರಾತ್ಮಕ ನೀರಾವರಿ” ಎಂದು ಪರಿಗಣಿಸಲಾಗುತ್ತದೆ. ಅಂದರೆ, ಕಾಲುವೆ ನೀರು ತಲುಪದ ಎತ್ತರದ ಪ್ರದೇಶ ಅಥವಾ ಒಣ ಭೂಮಿ ಹೊಂದಿರುವ ರೈತರಿಗೆ ಇದು ಜೀವನಾಡಿ. ಇಂತಹ ಹಲವು ಯೋಜನೆಗಳು ಇನ್ನು ಹೆಚ್ಚು ಹೆಚ್ಚು ಜಾರಿಗೆ ಬರಬೇಕು ಎಂಬುದು ನನ್ನ ಉದ್ದೇಶ.

ಗಂಗಾ ಕಲ್ಯಾಣ ಯೋಜನೆ” ಹಾಗಾದ್ರೆ ಏನು ? ರೈತರಿಗೆ ಎಷ್ಟು ಸಹಾಯಧನ ದೊರೆಯತ್ತೆ ಹಾಗೆ ಸಬ್ಸಿಡಿ ಎಷ್ಟು ? ಫೋನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ಇವುಗಳ ಬಗ್ಗೆ ?

ನೋಡ್ತಾ ಹೋಗೋಣ ಬನ್ನಿ…

ಏನಿದು ”ಗಂಗಾ ಕಲ್ಯಾಣ ಯೋಜನೆ Ganga Kalyana Scheme Apply Online 2026

ನಮ್ಮ ಕರ್ನಾಟಕ ಸರ್ಕಾರ ಜಾರಿ ತಂದಿರುವ ಯೋಜನೆಯ ಬಗ್ಗೆ ಕೆಲವೇ ಕೆಲವು ಜನಮಾನ್ಯರಿಗೆ ಮಾತ್ರನೇ ತಿಳಿದಿರುತ್ತದೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ನಮ್ಮದೊಂದು ಸಣ್ಣ ಪ್ರಯತ್ನ.

ಗಂಗಾ ಕಲ್ಯಾಣ ಯೋಜನೆ ಎಂಬುದು ನಮ್ಮ ಕರ್ನಾಟಕ ಸರ್ಕಾರದ ಒಂದು ಪ್ರಮುಖ ನೀರಾವರಿ ಯೋಜನೆಯಾಗಿದೆ. ಸರಳವಾಗಿ ಹೇಳುವುದಾದರೆ, ಕೃಷಿ ಭೂಮಿ ಇದ್ದರೂ ನೀರಾವರಿ ಸೌಲಭ್ಯವಿಲ್ಲದ ಬಡ ರೈತರಿಗೆ ಸರ್ಕಾರವೇ ಉಚಿತವಾಗಿ ಅಥವಾ ಹೆಚ್ಚಿನ ಸಬ್ಸಿಡಿಯೊಂದಿಗೆ ಬೋರ್ವೆಲ್ ಕೊರೆಸಿಕೊಡುವ ಪ್ರಮುಖ ಯೋಜನೆಯಾಗಿದೆ.

ನಾನ್ನದೆ ಆದ ಸ್ವಂತ ಮಾತಿನಲ್ಲಿ ಹೇಳುವುದಾದರೆ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಬೆಂಬಲ ಸಿಗಬೇಕು, ಕರ್ನಾಟಕದಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಮಳೆ ಇಲ್ಲದ ಕಾರಣದಿಂದಾಗಿ ನಾಶವಾಗುತ್ತವೆ ಇಂದರಿಂದ ಅವ್ರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂಬದು ಈ ಯೋಜನೆಯ ಉದ್ದೇಶವನ್ನು ಹೊಂದಿದೆ.

Ganga Kalyana Scheme Apply Online 2026
Ganga Kalyana Scheme Apply Online 2026

ಯೋಜನೆಯ ಉದ್ದೇಶ: Ganga Kalyana Scheme Apply Online 2026

  • ಮಳೆಯನ್ನೇ ನಂಬಿ ಕೃಷಿಮಾಡುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಅಥವಾ ತೆರೆದ ಬಾವಿಗಳ ಮೂಲಕ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು
  • ನೀರಾವರಿ ಸೌಲಭ್ಯ ಒದಗಿಸುವ ಮೂಲಕ ರೈತರು ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು ಮತ್ತು ಆ ಮೂಲಕ ಒಟ್ಟಾರೆ ಕೃಷಿ ಇಳುವರಿಯನ್ನು ಹೆಚ್ಚಿಸುವುದು
  • ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಡ ರೈತರ ಆರ್ಥಿಕ ಸ್ಥಿತಿಯನ್ನ ಸುಧಾರಿಸುವುದು ಮತ್ತು ಅವರ ಜೀವನ ಮಟ್ಟವನ್ನು ಮೇಲೆತ್ತುವುದು
  • ಗ್ರಾಮೀಣ ಭಾಗದ ರೈತರಿಗೆ ತಮ್ಮದೇ ಜಮೀನಿನಲ್ಲಿ ಕೆಲಸ ಮತ್ತು ಆದಾಯ ಸಿಗುವಂತೆ ಮಾಡುವುದು ಮತ್ತು ಅವರು ಕೆಲಸಕ್ಕಾಗಿ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸುವುದು
  • ರೈತರಿಗೆ ಪಂಪ್ ಸೆಟ್ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಒದಗಿಸಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡಲು ನೆರವಾಗುತ್ತದೆ

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ಕಾರ್ಯಾಲಯ ಅಥವಾ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು.

ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :- Ganga Kalyana Scheme Apply Online 2026

ಈ ಒಂದು ಯೋಜನೆ ಮೂಲಕ ಎಷ್ಟು ಸಹಾಯಧನ ಸಿಗುತ್ತೆ ಅದರಲ್ಲಿ ಸಬ್ಸಿಡಿ ಎಷ್ಟು ನಿಮ್ಮಗೆನಾದ್ರು ತಿಳಿದಿದಿಯ?

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಿಗುವ ಹಣದ ಮೊತ್ತ ಈ ಕೆಳಗೆ ತಿಳಿಸಿರುತ್ತೇನೆ, ಹಣವನ್ನು ನೇರವಾಗಿ ರೈತರ ಕೈಗೆ ನೀಡುವ ಬದಲಿಗೆ ಘಟಕ ವೆಚ್ಚ ಎಂದು ನಿಗದಿ ಪಡಿಸಿ ಬೋರ್ ವೆಲ್ ಕೊರೆಯಲು ಸಹಾಯದ ಬಗ್ಗೆ ಮಾಹಿತಿ

ಅರ್ಜಿ ದಾರರ ವರ್ಗಪ್ರದೇಶಸಹಾಯಧನ
ಸಾಮಾನ್ಯ ವರ್ಗಗ್ರಾಮೀಣ2.50 ಲಕ್ಷ ವರೆಗೆ ಸಹಾಯಧನ ನೀಡಲಾಗುತ್ತದೆ.
SC/ST Categoryಗ್ರಾಮೀಣ ₹4,75.000 ಸಹಾಯಧನ
SC/ST Categoryನಗರ ₹4,75.000 ಸಹಾಯಧನ
Ganga Kalyana Scheme Apply Online 2026

ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?

2026ರ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯು ₹4,75.000 ಲಕ್ಷದವರೆಗೆ ಸಾಲ ಮತ್ತು ಸಹಾಯಧನ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಕಡ ಖಂಡಿತವಾಗಿ ಅರ್ಹತೆ ಹೊಂದಿರಲೇ ಬೇಕಾಗುತ್ತದೆ.

  • ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು
  • ಸಾಮಾನ್ಯ ವರ್ಗದ ಕುಟುಂಬದ ವಾರ್ಷಿಕ ಆದಾಯ 96,000 ಮೀರಿರಬಾರದು
  • SC/ST ವರ್ಗದ ಕುಟುಂಬದ ವರ್ಷದ ಆದಾಯದ ಮಿತಿ  60,000 ನಿಗದಿತವಾಗಿದೆ.
  • ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 65 ವರ್ಷ ವಯಸ್ಸಿನೊಳಗಿರಬೇಕು.

ಪ್ರಯೋಜನಗಳ ಸಂಕ್ಷಿಪ್ತ ಮಾಹಿತಿ :- Ganga Kalyana Scheme Apply Online 2026

ಸೌಲಭ್ಯ ವಿವರ
ಉಚಿತ ಬೋರ್ ವೆಲ್ ನಿಗದಿತ ಆಳದವರೆಗೆ ಉಚಿತವಾಗಿ ಕೊಳವೆ ಬಾವಿ ಕೊರೆಯಲಾಗುತ್ತದೆ.
ಪಂಪ್ ಸೆಟ್ ವಿತರಣೆ ಗುಣಮಟ್ಟದ ಪಂಪ್ ಸೆಟ್ ಮತ್ತು ಪೈಪ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ವಿದ್ಯುದ್ದೀಕರಣ ಎಸ್ಕಾಂಗಳ ಮೂಲಕ ವಿದ್ಯುತ್ ಕಂಬ ಮತ್ತು ವೈರ್ಗಳನ್ನೂ ಅಳವಡಿಸಿ ಸಂಪರ್ಕನೀಡಲಾಗುತ್ತದೆ
ಉದ್ಯೋಗ ಸೃಷ್ಟಿ ರೈತರು ಕೂಲಿ ಕೆಲಸಕ್ಕೆ ಹೋಗುವ ಬದಲಿಗೆ ತಮ್ಮ ಜಮೀನಲ್ಲಿ ಕೆಲಸ ಮಾಡಿ ಹಲವು ಜನರಿಗೆ ಕೆಲಸ ಕೊಡಬಹುದು
Ganga Kalyana Scheme Apply Online 2026

ಸಬ್ಸಿಡಿ ಮತ್ತು ಕಂತುಗಳ ಲೆಕ್ಕಾಚಾರ

  • ಸಾಮಾನ್ಯ ವರ್ಗ ;- ಅಭ್ಯರ್ಥಿಗಳಿಗೆ 30% ರಷ್ಟು ಸಬ್ಸಿಡಿ ಸಿಗುತ್ತೆ, ಉಳಿದ 70% ರಷ್ಟು ಮೊತ್ತಕ್ಕೆ ಕಂತುಗಳನ್ನು ನಿಗದಿಪಡಿಸಲಾಗುತ್ತದೆ. 

ಬೆಂಗಳೂರು ವಿಭಾಗದ ಜಿಲ್ಲೆಗಳು:-

  • ಒಟ್ಟು ಸಹಾಯಧನ ಬೆಂಗಳೂರು ವಿವಿಧ ಜಿಲ್ಲೆಗಳು 4,25,000 ಸಹಾಯಧನ
  •  ಈ ಯೋಜನೆ ಅಡಿಯಲ್ಲಿ ಒಟ್ಟು ಸಾಲದ ಮೊತ್ತ 50,000
  • ಒಟ್ಟು ಘಟಕ ವೆಚ್ಚ 4,75,000

ಇತರೆ ರಾಜ್ಯಗಳು ಒಟ್ಟು ಸಹಾಯದ:-

  • ಇತರೆ ರಾಜ್ಯಗಳು ಒಟ್ಟು ಸಹಾಯದ 3,25,000/-
  • ಈ ಯೋಜನೆ ಅಡಿಯಲ್ಲಿ ಒಟ್ಟು ಸಾಲದ ಮೊತ್ತ 50,000/-
  • ಒಟ್ಟು ಘಟಕ ವೆಚ್ಚ 3,75,000/-

ಈ ಯೋಜನೆ ಇಂದ ಆಗುವ ಪ್ರಯೋಜನ :- Ganga Kalyana Scheme Apply Online 2026

  • ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯ ಸಿಗುವುದರಿಂದ ರೈತರು ಒಂದೇ ಬೆಳೆಗೆ ಸೀಮಿತವಾಗದೆ, ವರ್ಷಕ್ಕೆ ಎರಡು ಮೂರು ಬೆಳೆಗಳನ್ನು ಬೆಳೆಯಬಹುದು ಇದರಿಂದ ಕೃಷಿ ಆದಾಯ ಹೆಚ್ಚಾಗುತ್ತದೆ.
  • ಕೃಷಿಯಿಂದ ನಿರಂತರ ಆದಾಯ ಬರುವುದರಿಂದ ರೈತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಸಿಗುತ್ತದೆ
  • ಕೇವಲ ಮಳೆ ಆಶ್ರಿತ ಬೆಳೆಗಳ ಬದಲು ವಿವಿಧ ಬಗೆಯ ತೋಟಗಾರಿಕೆ ಬೆಳೆ ತರಕಾರಿಗಳು ಲಾಭದಾಯಕ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಹ
  • ರೈತರು ಉದ್ಯೋಗಕ್ಕಾಗಿ ಬೇರೆ ಬೇರೆ ಪ್ರದೇಶಕ್ಕೆ ಹೋಗುವುದು ತಪ್ಪುತ್ತದೆ ತಮ್ಮ ಜಮೀನಿನಲ್ಲಿ ಉದ್ಯೋಗವನ್ನು ಮಾಡಬಹುದು
  • ಇತರರಿಗೆ ಉದ್ಯೋಗವನ್ನು ಕೊಟ್ಟು ರಾಜನಂತೆ ಬದುಕು ಕಟ್ಟಿಕೊಳ್ಳಬಹುದು ಯಾರ ಮೇಲೆಯೂ ಅವಲಂಬನೆಯಾಗಿದೆ ಸ್ವಾವಲಂಬಿಯಾಗಿ ಬದುಕಬಹುದು
  • ಇಂತಹ ಯೋಜನೆಯಿಂದಾಗಿ ರೈತರ ಆತ್ಮಹತ್ಯೆ ಈ ರೀತಿಯ ಪ್ರಕರಣಗಳು ಅಂತ್ಯವಾಗುತ್ತವೆ

ಯೋಜನೆಯ ಅನಾನುಕೂಲ : Ganga Kalyana Scheme Apply Online 2026

ಈ ಯೋಜನೆಯಿಂದ ಅನುಕ ಕಂಡುಬಂದರೂ ಕೂಡ ಅನಾನುಕೂಲಗಳು ಕೂಡ ಕಂಡುಬರುತ್ತದೆ.

  • ಅರ್ಜಿದಾರರು ಆಯ್ಕೆಯಾಗಿ ಜಮೀನಿನಲ್ಲಿ ಬೋರ್ ವೆಲ್ ಕೊರೆಯುವವರೆಗೆ ವಿದ್ಯುತ್ ಸಂಪರ್ಕವಿಲ್ಲದೆ ಎಷ್ಟೋ ವರ್ಷಗಳು ಕಾಯಬೇಕಾಗುತ್ತದೆ.
  • ತುಂಬ ಆದಾಯ ಕಡಿಮೆ ಆದಾಯದ ಮಿತಿ ಸರ್ಕಾರ ಕೊಟ್ಟಿರುವುದರಿಂದ ಮಾಧ್ಯಮ ವರ್ಗಗ ಅನೇಕ ಅರ್ಹ ರೈತರು ಈ ಯೋಜನೆಯಾ ಲಾಭ ಪಡೆಯಲು ಆಗುವುದಿಲ್ಲ.
  • ಯೋಜನೆ ಅಡಿಯಲ್ಲಿ ಸರ್ಕಾರದಿಂದ ಅರ್ಜಿ ಸೆಲೆಕ್ಟ್ ಆಗಿ ಬ್ಯಾಂಕ್ ನಿಂದ ಸಾಲ ಪಡಿಯೋದು ಹಾಗೆ ಸರ್ಕಾರದ ಸಬ್ಸಿಡಿ ಬಿಡುಗಡೆಯಾಗಲು ತುಂಬ ಕಾಲವಕಾಶ ತೆಗೆದುಕೊಳ್ಳುತ್ತದೆ
  • ಬೋರ್ ವೆಲ್ ಕೊರೆಸಿ ಕೆಲವೋಮ್ಮೆ ನೀರು ಸಿಗದೇ ಹೋದರೆ ಅಥವಾ ಸ್ವಲ್ಪ ಪ್ರಮಾಣದಲ್ಲಿ ನೀರು ಸಿಕ್ಕರೆ ಅದರಿಂದ ರೈತರಿಗೆ ನಿರಾಶೆ

ಅಗತ್ಯ ದಾಖಲೆಗಳು: Ganga Kalyana Scheme Apply Online 2026

ಉಚಿತ ಬೋರ್ ವೆಲ್ ಗೆ ಈ ಕೆಳಗಿನ ಅಗತ್ಯ ದಾಖಲೆ ಗಾಳು ಹೊಂದಿರಬೇಕಾಗುತ್ತದೆ.

  • ಪಹಣಿ (RTC)
  • ವಯಸ್ಸಿನ ದೃಢೀಕರಣ ಪತ್ರ
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ಆಧಾರ್ ಕಾರ್ಡ್
  • ಭಾವಚಿತ್ರ 
  • ನಿವಾಸ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಬೇಕು.
  • ನಂತರ ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಹಾಗೆ ಸಂಬಂಧ ಪಟ್ಟ ಕಚೇರಿಗಳಲ್ಲಿ ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
  • ಅಧಿಕೃತ ವೆಬ್‌ಸೈಟ್ :https://sevasindhu.karnataka.gov.in/sevasindhu/english  ಡೌನ್‌ಲೋಡ್ ಮಾಡುವ ಮೂಲಕ ನೀವು ಅರ್ಜಿಯನ್ನ ಪಡೆಯಬಹುದು.
  • ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
  • ಎಲ್ಲಾ ದಾಖಲೆಗನ್ನು ಅಪ್ ಲೋಡ್ ಮಾಡಿ

Onlin Application

ತೀರ್ಮಾನ:-

ಈ ಯೋಜನೆಯು ಒಂದು ಸರ್ಕಾರದ ಉತ್ತಮ ಯೋಜನೆ ಎಂದು ಹೇಳಬಹುದು ಗಂಗಾ ಕಲ್ಯಾಣ ಯೋಜನೆಯ ಮೂಲಕ ಎಲ್ಲಾ ರೈತರು ಉಚಿತ ಕೊಳವೆಬಾವಿ ಹಾಗು ವಿದ್ಯುತ್ ಮೋಟಾರ್ ಪೈಪ್ ಲೈನ್ ಸೌಲಭ್ಯಗಳನ್ನು ಪಡೆದುಕೊಳ್ಳಿ ರೈತರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಇಂತಹ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವರ ಕುಟುಂಬದವರ ನೆಮ್ಮದಿಗೆ ಕಾರಣವಾಗುತ್ತವೆ. ಈ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಸಲು ಸರ್ಕಾರದಿಂದ ₹4,75.000 ಸಹಾಯದ ಸಿಗುತ್ತದೆ. ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ.ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿತ್ತದೆ ದೇಶದ ಅಭ್ವೃದ್ಧಿಯು ಸಹ ಆಗುತ್ತದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅರ್ಜಿದಾರರು ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಿ..

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment