
ಕರ್ನಾಟಕದಲ್ಲಿ ಬಡ ಮತ್ತು ಗೃಹರಹಿತ ವರ್ಗದವರಿಗೆ ಮನೆಗಳನ್ನು ಒದಗಿಸುವ ಒಂದು ಮುಖ್ಯ ಗುರಿಯನ್ನು ಇಟ್ಟುಕೊಂಡು ಸರ್ಕಾರ ಆಶ್ರಯ ವಸತಿ ಯೋಜನೆಯನ್ನು ಜಾರಿಗೆ ತಂದಿದೆ. ಅದೆಷ್ಟೋ ಜನರ ಕನಸು ನಮ್ಮದೊಂದು ಸ್ವಂತ ಮನೆ ಇರಬೇಕು ಎಂಬುದು ಆದರೆ ಬಡತನ, ನಿರುದ್ಯೋಗ, ಅನಕ್ಷರತೆಹೀಗೆ ಹಲವು ಕಾರಣಗಳಿಂದ ಸಾಧ್ಯವಾಗಿರುವುದಿಲ್ಲ.
Ashraya Yojana:-
ಈ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಯಲ್ಲಿ ಒಂದಾಗಿದೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಸಹ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದುಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಆಶ್ರಯ ವಸತಿ ಯೋಜನೆಯು ಎಲ್ಲರೂ ಒಂದೇ ಬಡವ ಶ್ರೀಮಂತ ಎನ್ನುವ ಭಾವನೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ. ಈ ಯೋಜನೆಗೆ ಬಸವ ಯೋಜನೆ ಎಂದು ಕರೆಯಲ್ಪಡುವಕರ್ನಾಟಕ ರಾಜ್ಯದ ಉತ್ತಮ ಯೋಜನೆಯಾಗಿದೆ ಇದರ ಮುಖ್ಯ ಉದ್ದೇಶ ಬಡವರು ಮತ್ತು ವಸತಿ ಇಲ್ಲದವರನ್ನು ಪ್ರೋತ್ಸಾಯಿಸುವುದು.

ಕೆಲ ಸಮಯದಲ್ಲಿ ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ಬ್ಯಾಂಕುಗಳ ಮೂಲಕ ಸಾಲ ಪಡೆದು ಮನೆಗನ್ನು ಕಟ್ಟಿಕೊಳ್ಳುತ್ತಾರೆ ಇದರಿಂದ ಅವರಿಗೆ ಆರ್ಥಿಕ ಹೊರೆಯಾಗಬಹುದು. ಈ ಎಲ್ಲಾ ಉದ್ದೇಶವನ್ನು ಮುಂದಿಟ್ಟುಕೊಂಡು ಸರ್ಕಾರ ಕೈಕೊಂಡಿರುವ ಯೋಜನೆ.
ಆಶ್ರಯ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾದ ಅಗತ್ಯವಾದ ದಾಖಲೆಗಳು, ಅರ್ಹತಾ ಮಾನದಂಡ ಈ ಎಲ್ಲಾ ಮಾಹಿತಿಗಳನ್ನು ಕೆಳಗಿನ ಹಂತದಲ್ಲಿ ನೀಡಲಾಗಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಮಾಧ್ಯಮ . ನೆಟ್ ಗೆ ಭೇಟಿ ನೀಡಿ.
ಯೋಜನೆಯ ಅವಲೋಕನ:-
| ಯೋಜನೆಯ ಹೆಸರು | ಆಶ್ರಯ ವಸತಿ ಯೋಜನೆ(Ashraya Yojana) |
| ಫಲಾನುಭವಿಗಳು | ಬಡತನ ರೇಖೆಗಿಂತ ಕೆಳಗಿರುವ ವರ್ಗದವರು ಮತ್ತು ಯಾವುದೇ ಮನೆ ಇಲ್ಲದೆ ಇರುವ ಕುಟುಂಬದವರು |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಸಹಾಯಧನ ಮೊತ್ತ | ₹1.5 ಲಕ್ಷ ದಿಂದ ₹2 ಲಕ್ಷ |
| ಅಧಿಕೃತ ವೆಬಸೈಟ್ | https://ashraya.karnataka.gov.in/ |
ಸಂಕ್ಷಿಪ್ತ ಮಾಹಿತಿ:-
ಆಶ್ರಯ ವಸತಿ ಯೋಜಯು (Ashraya Yojana)1991-92 ರಲ್ಲಿ ಪ್ರಾರಂಭವಾಯಿತು. ಇದರ ಪ್ರಮುಖ ಉದ್ದೇಶ ವಸತಿ ರಹಿತ ಬಡ ಕುಟುಂಬಗಳಿಗೆ ಆರ್ಥಿಕ ನೆರವುನೀಡು ಪಕ್ಕಾ ಮನೆಗಳನ್ನು ಒದಗಿಸುವುದು. ಈ ಯೋಜನೆಗೆ2000 ಇಸವಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಎಂದು ಮರುನಾಮಕರಣ ಮಾಡಲಾಯಿತು ಬಡವರು ಸೂರು ಇಲದೆ ಮಳೆ ಗಾಳಿ ಬಿಸಿಲಿನಲ್ಲಿ ಕಷ್ಟ ಪಡುವುದನ್ನು ಕಂಡು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತು.
ಈ ನಿಮವು ಡಾ.ಬಿ. ಆರ್ ಅಂಬೇಡ್ಕರ್ ಯೋಜನೆ, ದೇವರಾಜ್ ಅರಸು ಯೋಜನೆ ಹೀಗೆ ಹಲವು ಯೋಜನೆಯನ್ನು ನಿರ್ವಹಿಸುತ್ತದೆ. ಕರ್ನಾಟಕದಲ್ಲಿ 2026 ಮುಗಿಯುವುದರ ಒಳಗೆ ಪ್ರತಿ ಕುಟುಂಬದವರು ಸ್ವಂತ ಮನೆಯನ್ನು ಹೊಂದಿರಬೇಕು ಎಂಬುದು ಈ ಯೋಜನೆಯ ಬಹುದೊಡ್ಡ ಕನಸಾಗಿದೆ.
ಕರ್ನಾಟಕದಲ್ಲಿ ಎಲ್ಲರೂ ಮನೆಗಳನ್ನು ಹೊಂದಿ ಹೊಂದಿರಬೇಕು ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸ್ವಂತ ಮನೆ ಇಲ್ಲದಿರುವವರಿಗೆ ಸೂರು ಕೊಡುವುದು ಇದರ ಪ್ರಮುಖ ಉದ್ದೇಶವಾಗಿದೆ ಹಾಗೂ ಸ್ವಂತ ಜಾಗ ಅಥವಾ ನಿವೇಶನ ಹೊಂದಿರುವವರು ಬಡವರು ಬಡವರಿಗೆ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ಸಹಾಯಧನ ನೀಡುವುದು ಮತ್ತು ಇದರಿಂದಾಗಿ ಯಾವುದೇ ರೀತಿಯ ಸಂಕಷ್ಟವಿಲ್ಲದೆ ಮನೆ ಕಟ್ಟಿಸಿಕೊಳ್ಳಬಹುದು
ಯೋಜನೆಯ ಉದ್ದೇಶ:-
1.ಕೈಗೆಟಕುವ ದರದಲ್ಲಿ ವಸತಿ :-
- ಬಡ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಅಥವಾ ಸರ್ಕಾರದ ಸಹಾಯಧನದೊಂದಿಗೆ ಮನೆಗಳನ್ನು ನಿರ್ಮಿಸಲು ಆರ್ಥಿಕ ನೆರವು ನೀಡುವುದು.
2.ಎಲ್ಲರಿಗೂ ಸೂರು ಒದಗಿಸುವುದು:-
- ಕರ್ನಾಟಕದಲ್ಲಿ ವಸತಿರಹಿತವಾಗಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮತ್ತು ಕಡಿಮೆ ವರ್ಗದ ಗುಂಪಿನವರಿಗೆ ಸೂರು ಒದಗಿಸುವುದು ಪ್ರಮುಖ ಗುರಿಯಾಗಿದೆ.
3.ಗ್ರಾಮೀಣ ಮತ್ತು ನಗರ ವಸತಿ ಕೊರತೆ ನೀಗಿಸುವುದು:-
- ಬಸವ ವಸತಿಯೋಜನೆ,ಅಂಬೆಟ್ಕರ್ ನಿವಾಸ ಯೋಜನೆ ಮತ್ತು ವಾಜಪೇಯಿ ನಗರ ವಸತಿ (Ashraya Yojana) ಯೋಜನೆಗಳ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಸತಿ ಅಗತ್ಯತೆಗಳನ್ನು ಪೂರೈಸುವುದು.
4.ಪಾರದರ್ಶಕತೆ :-
- ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ತಲುಪಿಸಿ, ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವುದು
5.ಜೀವನ ಮಟ್ಟ ಸುಧಾರಣೆ :-
- ಗುಡಿಸಲು ಮತ್ತು ಕಚ್ಚಾಮನೆಗಳಲ್ಲಿ ವಾಸಿತ್ತಿರುವ ಬಡ ಕುಡುಂಬಗಳಿಗೆ ಸುಸ್ಥಿರವಾದ ಸುರಕ್ಷಿತವಾದ ಪಕ್ಕಾ ಮನೆಗಳನ್ನು ಒದಗಿಸುವ ಮೂಲಕ ಅವರ ಜೀವನಮಟ್ಟ ಮತ್ತು ಘನತೆಯನ್ನು ಹೆಚ್ಚಿಸುವುದು.
ಅನುಕೂಲತೆಗಳು:-
ಬಡ ಕುಟುಂಬಗಳಿಗೆ (Ashraya Yojana) ಸ್ವಂತ ಸೂರು ಸಿರ್ಮಿಸಿಕೊಳ್ಳಲು ಸರ್ಕಾರದಿಂದ ₹1.5 ಲಕ್ಷದಿಂದ ₹2 ಲಕ್ಷದ ವರೆಗೆಗಿನ ಹಣಸಹಾಯವು ದೊಡ್ಡ ಮಟ್ಟದ ಆರ್ಥಿಕ ನೆರವು ನೀಡುತ್ತದೆ.
ಈ ಸಹಾಯಧನವು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಬರುವುದರಿಂದ ಮಧ್ಯವರ್ತಿಗಳ ಕೈ ಸೇರದೆ ಫಲಾನುಭವಿಗ ಖಾತೆಗೆ ಜಮಾವಾಗುತ್ತದೆ.
Ashraya Yojana ಕಚ್ಚಾ ಹಾಗು ಗುಡಿಸಲಿನಲ್ಲಿ ವಾಸಿಸುತ್ತಿರುವ ಬಡವರಿಗೆ ಸುರಕ್ಷಿತವಾದ ವಾಸಸ್ಥಳ ಮತ್ತು ಮೂಲಭೂತ ಸೌಕರ್ಯಗಳು ಸ್ವಚ್ಛತೆ ಉತ್ತಮ ರೀತಿಯ ಅರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಈ ಯೋಜನೆಗಳ ಮೂಲಕ ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಸುಲಭವಾಗಿ ಸಾಲ ಪಡೆಯಬಹುದು
ತಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಈ ಯೋಜನೆಯು ಮುಖ್ಯವಾಗಿದೆ.
ಬಡ ಕುಟುಂಬಗಳಿಗೆ ಸ್ವಂತ ಮನೆಯಿಂದಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ವೃದ್ಧಿಯಾಗುತ್ತದೆ.
ಅನಾನುಕೂಲತೆಗಳು:-
- ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು
- ಸಹಾಯದನ ಹಂತ ಹಂತವಾಗಿ ಬಿಡುಗಡೆಯಾಗುವುದರಿಂದ ಸಮಯದ ವಿಳಂಬವಾಗಿ ಕೆಲಸವನ್ನು ಅರ್ಧಕ್ಕೆ ಕೈ ಬಿಡಬಹುದು(Ashraya Yojana)
- ಸಹಾಯಧನ ತುಂಬಾ ಕಡಿಮೆ ಇರುವುದರಿಂದ ಈಗಿನ ಸಿಮೆಂಟ್ ಇಟ್ಟಿಗೆ ಮರಳು ಹೀಗೆ ಇವುಗಳ ಬೆಲೆ ತುಂಬ ದುಬಾರಿ ಯಾಗಿರುವುದರಿಂದ ಮನೆ ನಿರ್ಮಿಸುವುದು ಕಷ್ಟಕರ ಸಾಧ್ಯತೆ
- ಸರಿಯಾದ ರೀತಿಯಲ್ಲಿ ದಾಖಲೆಗಳು ಸಂಗ್ರಹಿಸುವುದು ಕಷ್ಟವಾಗಬಹುದು
- ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳನ್ನು ಆಯ್ಕೆಮಾಡುವ ಸಂದರ್ಭದಲ್ಲಿ ರಾಜಕೀಯ ಪಕ್ಷಪಾತ ನಡೆಯುವ ಸಾಧ್ಯತೆ ಇರುತ್ತದೆ
- ಅನೇಕ ಮಾಧ್ಯಮ ವರ್ಗದ ಬಡವರು ಹಲವು ಷರತ್ತು ಗಳಿಂದ ಹೊರಗುಳಿಯುತ್ತಾರೆ
- ಅನೇಕ ರಾಜಕಾರಣಿಗಳು ಲಂಚ ತೆಗೆದುಕೊಂಡು ಬಡವನ್ನು ಶೋಷಣೆಗೆ ಒಳಪಡಿಸುತ್ತಾರೆ
ನಿಮಗೆ ಎಷ್ಟು ಸಹಾಯದ ಸಿಗುತ್ತೆ ಹಣ:-
| ಅರ್ಜಿದಾರರ ವರ್ಗ | ಪ್ರದೇಶ | ಸಹಾಯಧನ |
| ಸಾಮಾನ್ಯ ವರ್ಗ | ಗ್ರಾಮೀಣ | ₹1,20,000 |
| ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ | ಗ್ರಾಮೀಣ | ₹1,75,000 |
| ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ | ನಗರ | ₹2.00.000/- |
ಅರ್ಹತಾ ಮಾನದಂಡಗಳು Ashraya Yojana:-
1.ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
2.ಅರ್ಜಿದಾರರ ಹೆಸರಿನಲ್ಲಿ ಅಥವಾ ಅವರ ಕುಟುಂಬದವರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಯಾವುದೇ ಸ್ವಂತ ಮನೆ ಇರಬಾರದು.
3.ಬಿ . ಪಿ . ಎಲ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಾಗಿರ ಬೇಕು.
4.ಅರ್ಜಿದಾರರು ಈ ಹಿಂದೆ ಸರ್ಕಾರದಿಂದ ಯಾವದೇ ಮನೆಯನ್ನು ಪಡೆದಿರಬಾರದು. ಮನೆ ನಿರ್ಮಿಸಿಕೊಳ್ಳಲು ಇದೆ ಮೊದಲ ಅರ್ಜಿಯಾಗಿರಬೇಕು.
5.ಕರ್ನಾಟಕ ಸರ್ಕಾರ ನಿಗದಿ ಪಡಿಸಿರುವ ಇತರೆ ಷರತ್ತುಗಳನ್ನು ಪೂರೈಸಿರಬೇಕು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:-
- ಆಧಾರ್ ಕಾರ್ಡ್
- ವಾಸಸ್ಥಳ ದೃಡೀಕರಣ ಪತ್ರ
- ನಿವೇಶನದ ದಾಖಲೆಗಳು
- ಪಾನ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ :-
- ಅಧಿಕೃತ ವೆಬ್ ಸೈಟ್ ಗೆ https://ashraya.karnataka.gov.in/ ಬೇಡಿ ನೀಡಿ ಅರ್ಜಿಸಲ್ಲಿಸಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
- ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ತೀರ್ಮಾನ :-
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ (Ashraya Yojana) ಬಗ್ಗೆ ಕೆಲವೇ ಕೆಲವು ಜನಸಾಮನ್ಯರಿಗೆ ಮಾತ್ರವೇ ತಿಳಿದಿದೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸಲು ನಮ್ಮದೊಂದು ಉದ್ದೇಶ. ಸಮಾಜದಲ್ಲಿ ಹಿಂದುಳಿದ ವರ್ಗದವರಿಗೆ ಸುರೂ ಕಲ್ಪಿಸುವ ಮೂಲಕ ಗುಡಿಸಲು ಮುಕ್ತ ರಾಜ್ಯವನ್ನು ನಿರ್ಮಿಸಲು ಸರ್ಕಾರ ತೆಗೆದುಕೊಂಡ ಕ್ರಮವಾಗಿದ.
ಕೆಲ ಸಮಯದಲ್ಲಿ ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ಬ್ಯಾಂಕುಗಳ ಮೂಲಕ ಸಾಲ ಪಡೆದು ಮನೆಗನ್ನು ಕಟ್ಟಿಕೊಳ್ಳುತ್ತಾರೆ ಇದರಿಂದ ಅವರಿಗೆ ಆರ್ಥಿಕ ಹೊರೆಯಾಗಬಹುದು ಇದರಿಂದ ಹಲವು ಸಮಸ್ಯೆಗನ್ನು ಎದುರಿಸಬೇಕಾಗುತ್ತದೆ ನೀವು ಈ ಯೋಜನೆಗೆ ಅರ್ಜಿಸಲ್ಲಿ ಸರ್ಕಾರದಿಂದ ವಸತಿ ಭಾಗ್ಯವನ್ನು ಪಡೆದುಕೊಳ್ಳಿ.
ವಸತಿ ರಹಿತ ಮತ್ತು ಅತ್ಯಂತ ಕನಿಷ್ಠ ಸೌಕರ್ಯವಿರುವ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಪರಿಸರಸ್ನೇಹಿ ಹಾಗೂ ಸುಸ್ಥಿರವಾದ ಪಕ್ಕ ಮನೆಗಳನ್ನು ನಿರ್ಮಿಸುವುದು (Ashraya Yojana)ಈ ಯೋಜನೆಯ ಮೂಲ ಗುರಿಯಾಗಿದೆ.
| ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ಕಾರ್ಯಾಲಯ ಅಥವಾ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು. |
ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು:-
ಬಿಪಿಎಲ್ ಕುಟುಂಬಗಳು ಗೃಹರಹಿತ ವರ್ಗದವರು ಆರ್ಥಿಕ ದುರ್ಬಲ ವರ್ಗದವರು ಸ್ವಂತ ಮನೆ ಇಲ್ಲದವರಿಗೆ ಈ ಯೋಜನೆ ಮನೆಯ ಪ್ರಯೋಜನ ಸಿಗುತ್ತದೆ
ಈ ಯೋಜನೆ ಅಡಿ ಮನೆ ಕಟ್ಟಲು ಸಹಾಯಧನ ನೀಡಲಾಗುತ್ತದೆ ನಿವೇಶನ ಇಲ್ಲದವರಿಗೆ ಸರ್ಕಾರವು ಕಾಲಕಾಲಕ್ಕೆ ಹಂಚುವ ನಿವೇಶನ ಯೋಜನೆಗಳ ಅಡಿಯಲ್ಲಿ ಮೊದಲು ಸೈಟ್ ಪಡೆದು ನಂತರ ಮನೆಗೆ ಅರ್ಜಿ ಸಲ್ಲಿಸಬಹುದು
ಈ ಯೋಜನೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಎರಡಕ್ಕೂ ಅನ್ವಯವಾಗುತ್ತದೆ.
ಇತರೆ ಪ್ರಮುಖ ಲಿಂಕ್ ಗಳು:-
ಕುರಿ ಸಾಕಾಣಿಕೆ ಮತ್ತು ಶೆಡ್ ನಿರ್ಮಾಣಕ್ಕೆ 2 ಲಕ್ಷ ಸಹಾಯಧನ! ಕರ್ನಾಟಕ ಸರ್ಕಾರದ ಭರ್ಜರಿ ಕೊಡುಗೆ
PM Vishwakarma : ₹15,000 ಸಹಾಯಧನ! ಪಿಎಂ ವಿಶ್ವಕರ್ಮ ಟೈಲರಿಂಗ್ ಮಷಿನ್ ಸ್ಕೀಮ್ ! ಭರ್ಜರಿ ಆನ್ಲೈನ್ ಅಪ್ಲಿಕೇಶನ್ !










