Chaff Cutter Subsidy : ರೂ 1,08,000/- +90% ಸಹಾಯಧನ : ರೈತರಿಗೆ ಭಾರಿ ಸಂತೋಷದ ಯೋಜನೆ! ಅರ್ಜಿ ಸಲ್ಲಿಸೋದು ಹೇಗೆ?

January 19, 2026 6:05 PM
Chaff Cutter Subsidy

Join WhatsApp

Join Now

Join Telegram

Join Now

ನಮ್ಮಗೆ ಎಷ್ಟೇ ಬೇರೆ ಕೆಲಸಗಳಿದ್ದರು ಬೆಳ್ಳಗೆ ಎದ್ದು ಕೊಟ್ಟಿಗೆಗೆ ಹೋಗಿ ನಮ್ಮ ಮನೆಯ ಸದಸ್ಯರಂತೆ ಇರುವ ದನ ಹಾಗು ಮಕ್ಕಳ ಹಾಗೆ ಪ್ರೀತಿಸುವ ಕಾರುಗಳನ್ನು ಮಾತಾಡಿಸಿಕೊಂಡು ಬಂದರೆ ಮನಸಿಗೆ ಅದೇನೋ ಒಂತರ ಸಂತೋಷ ಸಿಗುತ್ತೆ ಅವುಗಳನ್ನು ಬರಿ ಪ್ರೀತಿ ತೋರಿಸಿದರೆ ಸಾಲದು ಅವುಗಳಿಗೆ ಆಹಾರವು ಸಹ ಬೇಕಾಗುತ್ತದೆ. ಹೌದು ಅಲ್ವಾ ಸರ್ಕಾರವು ಕೃಷಿ ಮತ್ತು ಹೈನುಗಾರಿಕೆಯನ್ನು ಉತ್ತೇಜಿಸುವ ದೃಷಿಯಿಂದ 2026ರ ಸಾಲಿನಲ್ಲಿ ಇದೇ ಮೊದಲ ಬಾರಿ ಬಾರಿ ಮೊತ್ತದ ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರವನ್ನು ಕೊಡ್ತಾ ಇದೆ.

Chaff Cutter Subsidy In Kannada

ಈ ಚಾಫ್ ಕಟ್ಟರ್ ಮಷಿನ್ ನೀವು ಪಡೆದುಕೊಳ್ಳಬೇಕೇ ರೈತರು ತಮ್ಮ ಊರಿನ ಪಶು ಸಂಗೋಪನೆ ಇಲಾಖೆಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಸರ್ಕಾರವು ನಿಗದಿಪಡಿಸಿದ ಅಂತಿಮ ದಿನದೊಳಗಾಗಿ ಅರ್ಜಿಯನ್ನ ಸಲ್ಲಿಸಿದಲ್ಲಿ ಕೇವಲ 15 ದಿನದೊಳಗೆ ನೀವು ಸಹ ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಿ.

ಈ ಯೋಜನೆಯ ಸಂಪೂರ್ಣ ವಿವರ:-

ಕರ್ನಾಟಕ ಸರ್ಕಾರವು ಕೃಷಿ ಮತ್ತು ಹೈನುಗಾರಿಕೆ ಯನ್ನು ಅಭಿವೃದ್ಧಿಕಡೆಗೆ ಕೊಂಡೊಯ್ಯಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಲು ಕರೆಯುವ ಯಂತ್ರ, ಪಶು ವಿಮೆ ಯೋಜನೆ, ಪಶು ಸಾಕಾಣಿಕೆಗೆ ಹಣಕಾಸಿನ ನೆರವು, ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಹೈನುಗಾರಿಕೆ ಕಡೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶವನ್ನು ಹೊಂದಿದೆ.  ಆನ್ಲೈನ್ ಮತ್ತು ಆಫ್ ಲೈನ್ ಅಪ್ಲಿಕೇಶನ್ ಅನ್ನ ಆರಂಭಿಸಿದ್ದು ಇಂದೇ ಅರ್ಜಿ ಸಲ್ಲಿಸಿದರೆ ಹೊಸ ವರ್ಷದ ಪ್ರಾರಂಭದಲ್ಲಿಯೇ ಸರ್ಕಾರದ ಈ ಯೋಜನೆ ಲಾಭವನ್ನು ಪಡೆಯಬಹುದು.

ರೈತರು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿಮ್ಮ ಮನೆಯಲ್ಲಿ ಕೇವಲ ಎರಡು ಅಥವಾ ಮೂರು ಧನ ಇದ್ರೆ ಸಾಕು ನೀವು ಈ ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಬಹುದು. ಯಂತ್ರದ ಮೂಲಕ ಹಸಿ ಹುಲ್ಲು, ಒಣಹುಲ್ಲು, ಮೆಕ್ಕೆಜೋಳ, ಜೋಳದ ಕಡ್ಡಿ ಇವುಗಳನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡುತ್ತದೆ. ಇದು ಜಾನುವಾರುಗಳಿಗೆ ನೀವು ಸುಲಭವಾಗಿ ನೀಡಲಾಗುವಂತಾಗುತ್ತದೆ ಮತ್ತು ಮೇವು ವ್ಯರ್ಥವಾಗುವುದು ಕಡಿಮೆಯಾಗುತ್ತದೆ ಇದರಿಂದಾಗಿ ಸಮಯ ಉಳಿತಾಯ ಮತ್ತು ಮೇವು ವೆಸ್ಟ್ ಆಗುವುದಿಲ್ಲ ಹಾಲು ಉತ್ಪಾದನೆ ಹೆಚ್ಚುತ್ತದೆ. ಹಾಗೆ ಗ್ರಾಮೀಣ ಭಾಗದ ಯಾವುದೋ ಕೆಲಸವನ್ನ ಮಾಡುವುದಕ್ಕಿಂತ ನಿಮ್ಮ ಮನೆಯಲ್ಲಿ ಜಾನುವಾರುಗಳನ್ನು ಸಾಕಾಣಿಕೆ ಮಾಡಿ ಹಾಲು, ಗೊಬ್ಬರ, ಹೀಗೆ ಅನೇಕ ಉತ್ಪಾದನೆಗಳಿಂದ ಸಿಗುವ ಲಾಭವೇ ಹೆಚ್ಚು ಎನ್ನುವುದು ಸರ್ಕಾರದ ನಿಲುವು.

ಈ ಯೋಜನೆ ಸಬ್ಸಿಡಿ ನಿಮಗೂ ಸಿಗುತ್ತದೆಯೇ ಎಂಬ ನಿಮ್ಮ ಗೊಂದಲಕ್ಕೆ ಉತ್ತರ?

ನೀವು ಒಬ್ಬ ರೈತರೇ ಅಥವಾ ಹೈನುಗಾರಿಗೆಯಲ್ಲಿ ತೊಡಗಿಕೊಂಡಿದ್ದೀರಾ? ಹಾಗೆಯೇ ನಿಮ್ಮ ಹೆಸರಿನಲ್ಲಿ ಕೃಷಿ ಜಾಮೀನು ಅಥವಾ ಪಶುಗಳಿದ್ದರೆ ನೀವು ಈ ಯೋಜನೆಯ ಮೂಲಕ ಚಾಫ್ ಕಟ್ಟರ್ ಯಂತ್ರ ವನ್ನು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದು.


ಮುಖ್ಯವಾಗಿ ಗಮನಿಸಿ : ರೈತ ಮಿತ್ರರೇ,,,ಸರ್ಕಾರ ಈ ಒಂದು ಯೋಜನೆಗೆ ಮಾತ್ರ ಸಹಾಯಧನ ನೀಡುತ್ತಿಲ್ಲ ದನದ ಕೊಟ್ಟಿಗೆ ನಿರ್ಮಾಣ, ಕೌ ಮ್ಯಾಟ್, ಹುಲ್ಲು ಕೊಯ್ಯುವ ಯಂತ್ರ, ಪೌಷ್ಟಿಕ ಆಹಾರಗಳು ಹೀಗೆ ವಿವಿಧ ಯೋಜನೆಗಳಿಗೆ ಸಬ್ಸಿಡಿಯನ್ನು ನೀಡುತ್ತಿದ್ದು. ಗ್ರಾಮೀಣ ಭಾಗದ ಜನರು ಇದರ ಉಪಯೋಗ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಸರ್ಕಾರ ಒಂದು ದಿಟ್ಟ ಹೆಜ್ಜೆ ಇಟ್ಟಿದೆ

ಮೇವು ಕತ್ತರಿಸುವ ಯಂತ್ರ ಸಬ್ಸಿಡಿ ಹಣ:-

ಯಾವ ವರ್ಗದವರಿಗೆ ಎಷ್ಟು ಸಹಾಯಧನ ಸಿಗುತ್ತೆ ಎನ್ನುವುದರ ಬಗ್ಗೆ ತಿಳಿಸಿ ಕೊಡ್ತಾ ಹೋಗ್ತೀನಿ ಬನ್ನಿ,,,.

1. ಸಾಮಾನ್ಯ ವರ್ಗ :

  • ಯಂತ್ರದ ಒಟ್ಟು ಬೆಲೆ:- ₹49,000
  • ಸಹಾಯಧನ ಮೊತ್ತ:- ₹15,000/-
  • ಸಬ್ಸಿಡಿ ಪರ್ಸೆಂಟ್:-40% ರಿಂದ 50%

2. ಪರಿಶಿಷ್ಟ ಜಾತಿ ಮತ್ತು ಪಂಗಡ:-

  • ಯಂತ್ರದ ಒಟ್ಟು ಬೆಲೆ:- ₹49,000
  • ಸಹಾಯಧನ ಮೊತ್ತ:- ₹22,000/-
  • ಸಬ್ಸಿಡಿ ಪರ್ಸೆಂಟ್:-50% ರಿಂದ 60%
  • ರೈತರಲ್ಲಿ ಹಣದ ಬಗ್ಗೆ ಯಾವುದೇ ಗೊಂದಲ ಬೇಡ ನೇರವಾಗಿ ಅರ್ಜಿ ಸಲ್ಲಿಸಿದ ರೈತರ “ಬ್ಯಾಂಕ್ ಖಾತೆಗೆ (Direct Benefit Transfer) ವರ್ಗಾವಣೆ” ಆಗುತ್ತದೆ ಮತ್ತು ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಹಣ ವನ್ನ ಸರ್ಕಾರ ನಗದು ನೀಡುವುದಿಲ್ಲ.

ಇದರಿಂದ ರೈತರಿಗಾಗುವ ಲಾಭಗಳೇನು:-

ಹಣದ ವೆಚ್ಚ ಕಡಿಮೆಯಾಗುತ್ತದೆ

  • ಈ ಯಂತ್ರಗಳಿಗೆ ಸಬ್ಸಿಡಿ ಸಿಗುವುದರಿಂದ ಕಡಿಮೆ ಹಣವನ್ನು ವಿನಿಯೋಗಿಸಿ ಉತ್ತಮ ಈ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಬಹುದು.

ಸಮಯ ಶ್ರಮ ಉಳಿತಾಯ

  • ಕೈಯಿಂದ ಮೇವು ಕತ್ತರಿಸುವ ಬದಲು ಯಂತ್ರದ ಸಹಾಯದಿಂದ ಬೇಗ ಬೇಗನೆ ಸುಲಭವಾಗಿ ನೀವು ಕತ್ತರಿಸಬಹುದು ಇದರಿಂದ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ

ಆರೋಗ್ಯ ಸುಧಾರಿಸುತ್ತದೆ

  • ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಜಾನುವಾರುಗಳಿಗೆ ಹಾಕುವುದರಿಂದ ಮೇವು ಸುಲಭವಾಗಿ ಜೀರ್ಣವಾಗುತ್ತದೆ

ಹಾಲಿನ ಇಳುವರಿ ಹೆಚ್ಚಳ

  • ಆಹಾರವು ವ್ಯರ್ಥವಾಗದ ಕಾರಣ ಹಾಲಿನ ಉತ್ಪಾದನೆಯು ಹೆಚ್ಚುತ್ತದೆ

ಯಾರಿಗೆ ಸಿಗಲಿದೆ ಈ ಸೌಲಭ್ಯಗಳು;-

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಮೀಣ ಭಾಗಕ್ಕೆ ಒಳಪಟ್ಟಿರಬೇಕು
  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
  • ನಿಮ್ಮ ಹೆಸರಿನಲ್ಲಿ ಜಮೀನು ಅಥವಾ ಎರಡು ಹೆಮ್ಮೆ ಅಥವಾ ಹಸು ಗಳು ಇರಬೇಕು
  • ಕಡ್ಡಾಯವಾಗಿ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು
  • ನೀವು ಈ ಯೋಜನೆ ಅಡಿ ಈಗಾಗಲೇ ಸಹಾಯಧನ ಪಡೆದಿದ್ದರೆ 2026 ರಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ ಸರ್ಕಾರವೇ ನಿಮ್ಮ ಅರ್ಜಿಯನ್ನ ರಿಜೆಕ್ಟ್ ಮಾಡುತ್ತದೆ.
  • ಕೃಷಿ ಅಥವಾ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರಬೇಕು
  • ಸರ್ಕಾರದಿಂದ ಬರುವ ಹಣವು ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಯಾವುದೇ ರೀತಿಯ ಮಧ್ಯವರ್ತಿಗಳ ಕೈವಾಡ ಇರುವುದಿಲ್ಲ.
  • ಸರ್ಕಾರದ ಈ ಉತ್ತಮ ತೀರ್ಮಾನದಿಂದ ಸಾಕು ಪ್ರಾಣಿಗಳು ಮಳೆ, ಬಿಸಿಲು, ಚಳಿಗೆ, ಒಳಗಾಗದೆ ಉತ್ತಮ ವಾತಾವರಣದಲ್ಲಿ ಬೆಳೆಯುತ್ತವೆ.

ಯೋಜನೆಯ ಅನಾನುಕೂಲ :-

  • ಎಲ್ಲ ವರ್ಗದ ರೈತರಿಗೂ ಒಂದೇ ಪ್ರಮಾಣದ ಸಬ್ಸಿಡಿ ಸಿಗುವುದಿಲ್ಲ ಇದರಿಂದ ರೈತರು ನಿರಾಶೆ ಒಳಗಾಗಬಹುದು
  • ಅರ್ಜಿದಾರರು ಅರ್ಜಿ ಸಲ್ಲಿಸಿದ ಮೇಲೆ ಹಣದ ವರ್ಗಾವಣೆಯು DBT ಮೂಲಕ ವರ್ಗಾವಣೆಯಾಗುವುದರಿಂದ ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ಹಣ ಕೈಗೆ ಸಿಗುವುದಿಲ್ಲ. ಯಾಕೆಂದರೆ ತಾಂತ್ರಿಕ ದೋಷದಿಂದಾಗಿ ಹಣದ ವರ್ಗಾವಣೆ ವಿಳಂಬವಾಗುತ್ತದೆ.
  • ಸಬ್ಸಿಡಿ ಮೊತ್ತ ಗರಿಷ್ಠ ಮಿತಿಯನ್ನು ಹೊಂದಿರುತ್ತದೆ ಇದರಿಂದ ಮಷಿನ್ ತೆಗೆದುಕೊಳ್ಳಲು ಬಡ ರೈತರಿಗೆ ಕಷ್ಟವಾಗಬಹುದು
  • ರೈತರಲ್ಲಿ ಸ್ವಂತ ಜಮೀನು ಇದ್ದರು ರೈತರ ಸ್ವಂತ ಜಮೀನು ಇದ್ದರು ದಾಖಲೆಗಳು ಸರಿಯಾಗಿ ಅವರ ಬಳಿ ಕೆಲವು ಕುಟುಂಬದಲ್ಲಿ ಇರುವುದಿಲ್ಲ ಇಂಥವರು ಈ ಯೋಜನೆಯಿಂದ ವಂಚಿತರಾಗುತ್ತಾರೆ.

ಚಾಪ್ ಕಟ್ಟರ್ ಯಂತ್ರ ಪಡೆಯಲು ಇರಬೇಕಾದ ಪ್ರಮುಖ ದಾಖಲೆಗಳು :

  • ಆಧಾರ್ ಕಾರ್ಡ್
  • ಪಾಸ್ ಬುಕ್
  • ಆರ್ ಟಿ ಸಿ ಸಂಸ್ಥೆ
  • ಪಶು ಸಂಖ್ಯಾ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಟ್ ಫೋಟೋ
  • ಜಾತಿ ಆದಾಯ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ನಿಮ್ಮ ಜಮೀನಿನ ಹಕ್ಕುಪತ್ರ
  • ನೀವು ಯಾವ ಪಶು ಸಾಗುತ್ತಿದ್ದೀರಿ ಎನ್ನುವ ದಾಖಲೆ
  • ಅರ್ಜಿಯ ಫಾರ್ಮ್

ಮೇಲೆ ಕೊಡಲಾದ ಈ ಕೆಲವೇ ಕೆಲವು ದಾಖಲೆಗಳು ನಿಮ್ಮಲ್ಲಿದ್ದರೆ ಈ ಯೋಜನೆಯ ಸಂಪೂರ್ಣ ಲಾಭವನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಗ್ರಾಮೀಣ ಭಾಗದ ಜನರು ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ :-

ರಾಜ್ಯ ಸರ್ಕಾರ ಗ್ರಾಮೀಣವಾಗದ ಜನಸಾಮಾನ್ಯರಿಗೆ ಆನ್ಲೈನ್ ಹಾಗೆ ಆಫ್ಲೈನ್ ಎರಡು ವಿಭಾಗದಲ್ಲಿ ಈ ಯೋಚನೆಗೆ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ.


ಆಫ್ ಲೈನ್ ಮೂಲಕ ಅರ್ಜಿಸಲ್ಲಿಸುವ ವಿಧಾನ:-

  • ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಪಶು ಸಂಗೋಪನೆ ಇಲಾಖೆ ಕಚೇರಿಗೆ ಭೇಟಿ ನೀಡಿ
  • ಅಲ್ಲಿ ಅರ್ಜಿ ಫಾರಂ ಗಳನ್ನು ಪಡೆದು ಕೇಳಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಜೋಡಿಸಿ ಅರ್ಜಿಯನ್ನು ಸಲ್ಲಿಸಿ
  • ಜಮೀನು ದಾಖಲೆ, ಬ್ಯಾಂಕ್ ಖಾತೆ, ಆಧಾರ್ ಪಶು ವಿವರಗಳು ಫೋಟೋ/ಪ್ರಮಾಣಪತ್ರ ಪ್ರತಿಯನ್ನ ನಿಮ್ಮ ಅರ್ಜಿಯೊಂದಿಗೆ ಸೇರಿಸಿ ನಿಮ್ಮ ಗ್ರಾಮದ ಪಶು ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ.
  • ಅಧಿಕಾರಿಗಳ ಪರಿಶೀಲನೆ ಮತ್ತು ಅನುಮೋದನೆಯನ್ನು ಪಡೆಯಿರಿ

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :

  • ರಾಜ್ಯ ಸರ್ಕಾರದ ಕೃಷಿ ಅಥವಾ ಹೈನುಗಾರಿಕೆ ಇಲಾಖೆಯಲ್ಲಿ ಅಧಿಕೃತ ವೆಬ್‌ಸೈಟ್:https://kkisan.karnataka.gov.in/ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಕೇಳಿರುವ ನಂತರ ಅಲ್ಲಿ ಕೇಳಿರುವ ಮೊಬೈಲ್ ನಂಬರ್ ಚಾಪ್ ಕಟರ್ ಮಷೀನ್ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿರಿ
  • ಜಮೀನು, ಪಶು ವಿವರ, ಬ್ಯಾಂಕ್ ಅಥವಾ ಆಧಾರ್ ವಿವರಗಳನ್ನೆಲ್ಲ ಭರ್ತಿ ಮಾಡಿ ನಂತರ ಕೆಳಗೆ ಸಬ್ಮಿಟ್(Submit) ಬಟನ್ ಮೇಲೆ ಪ್ರೆಸ್ ಮಾಡಿ.

ರೈತ ಬಂದವರಿಗೆ ನನ್ನ ಸಲಹೆ :

ಗ್ರಾಮೀಣ ಭಾಗದ ರೈತರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಷ್ಟವಾಗಬಹುದು ಇದರಿಂದ ಸರ್ಕಾರ ಮೂಲಕವೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ ನಿಮ್ಮ ಹತ್ತಿರದ ಪಶುಸಂಗೋಪನೆ ಕೇಂದ್ರ ಮತ್ತು ಕೃಷಿ ಇಲಾಖೆಯಲ್ಲಿ ಹೋಗಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಲಿ ಎಂದು ನನ್ನ ಅಭಿಪ್ರಾಯ.

ಅಂತಿಮ ತೀರ್ಮಾನ :-

ಎಲ್ಲ ವರ್ಗದವರಿಗೂ ಒಂದೇ ರೀತಿಯ ಸಹಾಯಧನ ಸಿಗುತ್ತದೆ. ಆದರೆ ಇದರಿಂದ ಸಾಮಾನ್ಯವರ್ಗದ ಜನಸಾಮಾನ್ಯರಾದ ನಮಗೆ ಸರ್ಕಾರ ಕಡಿಮೆ ಸಹಾಯಧನ ನೀಡುತ್ತದೆ ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಇನ್ನು ಹಲವು ಯೋಜನೆಗಳಿವೆ ಅವುಗಳನ್ನುಯಾವುವು ಇದರ ಬಗ್ಗೆ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅದಕ್ಕೆ ದಾಖಲೆಗಳೊಂದಿಗೆ ನಿಮ್ಮ ಪಶು ಸಂಗೋಪನೆ ಇಲಾಖೆಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ತಲುಪಿಸಿ 15 ದಿನದೊಳಗೆ ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಿ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment