ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಹಾಗೂ ಅರ್ಜಿ ಸಲ್ಲಿಸಲು ಎಲ್ಲಾ ವಿವಿಧ ಹಂತಗಳನ್ನ ಫಾಲೋ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಡಿಸೆಂಬರ್ 2025.
ಹುದ್ದೆಗಳ ಅವಲೋಕನ :-
| ಸಂಸ್ಥೆಯ ಹೆಸರು | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ ( DHFWS ಕೊಪ್ಪಳ) |
| ಹುದ್ದೆಯ ಹೆಸರು | ನೇತ್ರ ಸಹಾಯಕ |
| ಒಟ್ಟು ಹುದ್ದೆಗಳು | 3 |
| ವೇತನ ಶ್ರೇಣಿ | ತಿಂಗಳಿಗೆ ರೂ. 15,114/- |
| ಅರ್ಹತೆ | ಡಿಪ್ಲೊಮಾ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10-ಡಿಸೆಂಬರ್-2025 |
| ಅಧಿಕೃತ ಜಾಲತಾಣ | koppal.nic.in |
ವೇತನ ಶ್ರೇಣಿ :-
15114 ವೇತನ ನಿಗದಿಪಡಿಸಲಾಗಿದೆ
ಹುದ್ದೆಯ ವಿವರಣೆ :-
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| ನೇತ್ರ ಸಹಾಯಕ | 3 |
ವಿದ್ಯಾರ್ಹತೆ ವಿವರ :-
ಎರಡು ವರ್ಷದ Diploma in Optometry ಅಥವಾ ನೇತ್ರ ಸಹಾಯಕರ (Opthalmic Assistant) ಆಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ NPCB ನಿಯಮಾನುಸಾರ ತರಬೇತಿ ಪಡೆದಿರಬೇಕು.
Computer ಮತ್ತು Internet ಇತ್ಯಾದಿಗಳ ಬಳಕೆಗೆ ಬೇಕಾಗುವ Computer Basic Course ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ :-
ಅರ್ಜಿ ಶುಲ್ಕವಿಲ್ಲ.
ವೇತನ ಶ್ರೇಣಿ :-
ತಿಂಗಳಿಗೆ ರೂ. 15,114/-
ವಯೋಮಿತಿ ವಿವರ :-
ಕನಿಷ್ಠ ವಯೋಮಿತಿ -18 ವರ್ಷ
ಗರಿಷ್ಠ ವಯೋಮಿತಿ – 45 ವರ್ಷ
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಒಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ ಕೊನೆಯದಾಗಿ ಸಬ್ಮಿಟ್ ಮಾಡಿ ಬಂದಿರುವಂತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :-
| ಅಧಿಸೂಚನೆ ದಿನಾಂಕ | 21-11-2025 |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 25/11/2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಇಮೇಲ್ ಮೂಲಕ) | 10-ಡಿಸೆಂಬರ್-2025 |
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :-
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಅಂದತ್ವ ನಿಯಂತ್ರಣ ಕೇಂದ್ರ ಕೊಪ್ಪಳಕ್ಕೆ ರಾಷ್ಟ್ರೀಯ ಅಂದತ್ವ ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇತ್ರ ಸಹಾಯಕರ ಹುದ್ದೆಗಳನ್ನು ನಿಯಮಾವಳಿಗಳ ಪ್ರಕಾರ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಹುದ್ದೆಗಳಿಗೆ 15,114 ವೇತನವನ್ನು ನಿಗದಿಪಡಿಸಲಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 10.12.2025