Free Tarpaulin : ರೈತರಿಗೆ ಉಚಿತ ಟಾರ್ಪಲ್ ವಿತರಣೆ.! ಆಫ್ ಲೈನ್ ಮತ್ತು ಆನ್ ಲೈನ್ ಅರ್ಜಿ!

January 31, 2026 6:11 AM
Free Tarpaulin : ರೈತರಿಗೆ ಉಚಿತ ಟಾರ್ಪಲ್ ವಿತರಣೆ.! ಆಫ್ ಲೈನ್ ಮತ್ತು ಆನ್ ಲೈನ್ ಅರ್ಜಿ!

Join WhatsApp

Join Now

Join Telegram

Join Now

ರೈತರಿಗೆ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೃಷಿ ಇಲಾಖೆ ಇಂದ ಸಬ್ಸಿಡಿ ದರದಲ್ಲಿ ಟಾರ್ಪಲ್ (tarpaulin subsidy) ಸಿಗ್ತಾ ಇದೆ. ರೈತರು ಈ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಮಾರುಕಟ್ಟೆಗೆ ಹೋಗಿ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡುತ್ತಾರೆ ಆದರೆ ಈಗ ಅತಿ ಕಡಿಮೆ ಸಬ್ಸಿಡಿದರದಲ್ಲಿ ಉತ್ತಮ ಗುಣಮಟ್ಟದ ಟಾರ್ಪಲ್ ಸಹಾಯಧನದೊಂದಿಗೆ ಲಭ್ಯವಾಗಲಿದೆ.

Free Tarpaulin Subsidy In Kannada

ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಅಥವಾ ಕೆಲವೋಮ್ಮೆ ಸಂಪೂರ್ಣ ಉಚಿತವಾಗಿ ಟಾರ್ಪಲ್ ವಿತರಣೆ (Free Tarpaulin) ಮಾಡಲಾಗುತ್ತಿದೆ. ಇರದಿಂದಾಗಿ ಬಡ ಹಾಗು ಸಣ್ಣ ವರ್ಗದ ರೈತರಿಗೆ ತುಂಬ ಸಹಕಾರಿಯಾಗಲಿದ್ದು. ತಾವು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಮಳೆ ಬಿಸಿಲಿನಿಂದ ಕಾಪಾಡಿಡಿಕೊಳ್ಳಲು ಮತ್ತು ಅಡಿಕೆ ಕಾಲು ಮೆಣಸು ಇವುಗಳನ್ನು ಒಣಗಿಸಿಕೊಳ್ಳಲು ನಮ್ಮಗಾಗಿ ಕಷ್ಟ ಪಡುತ್ತಿರುವ ನಮ್ಮ ದೇಶದ ಬೆನ್ನೆಲುಬಾದ ರೈತರಿಗೆ ಕೃಷಿ ಇಲಾಖೆ ಆಸರೆಯಾಗುತ್ತಿದೆ.

ಈ ಯೋಜನೆಯ ಮೂಲಕ ನಿಮಗೂ ಲಾಭ ಸಿಗುತ್ತದೆಯೇ? ಎಷ್ಟು ಸಬ್ಸಿಡಿ ಸುಗುತ್ತದೆ? ಉಪಯೋಗವೇನು? ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಯೋಜನೆಯ ವಿವರ:-

ಯೋಜನೆಯ ಹೆಸರು ಉಚಿತವಾಗಿ ಟಾರ್ಪಲ್ ವಿತರಣೆ (Free Tarpaulin)
ರಾಜ್ಯ ಕರ್ನಾಟಕ
ಫಲಾನುಭವಿಗಳು ಕರ್ನಾಟಕದ ನೋಂದಾಯಿತ ರೈತರು
ಅರ್ಜಿ ಸಲ್ಲಿಸುವ ವಿಧಾನ ಆಫ್ ಲೈನ್ ಮತ್ತು ಆನ್ ಲೈನ್

ಕರ್ನಾಟಕ ರಾಜ್ಯದ ರೈತರಿಗೆ ಉಚಿತವಾಗಿ ಟಾರ್ಪಲಿನ್ ವಿತರಣೆ (Free Tarpaulin)ಮಾಡಲಾಗುತ್ತಿದ್ದು ರೈತರಿಗೆ ಇದೊಂದು ಸಂತಸದ ಸುದ್ದಿಯಾಗಿದೆ ಕೆಲವೊಂದು ಜಿಲ್ಲೆಗಳಲ್ಲಿ ಈ ಯೋಜನೆ ಇದೀಗ ಜಾರಿಯಲ್ಲಿದ್ದು ಇನ್ನೂ ಸಾಕಷ್ಟು ಜಿಲ್ಲೆಗಳಿಗೆ ಈ ಯೋಜನೆಯ ವಿಸ್ತರಿಸಲು ಸರ್ಕಾರ ಮುಂದಾಗಿದೆ ಹಾಗಾಗಿ ರೈತರು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.

ರೈತರಿಗೆ ಟಾರ್ಪಲ್ ಏಕೆ ಬೇಕು?

ರೈತರಿಗೆ ಸಾಲ ಮಾಡಿ ಹಗಲು ರಾತ್ರಿ ಎನ್ನದೆ ದುಡಿಮೆ ಮಾಡಿ ಉತ್ತಮ ಇಳುವರಿ ತೆಗೆದು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನದಿಂದಾಗಿ ಮಳೆ ಬಂದು ಬೆಳೆಗಳು ಹಾನಿಗೊಳಗಾದರೆ ಅದನ್ನು ಉಳಿಸಿಕೊಳ್ಳಲು ಮರುಕಟ್ಟಿಗೆ ಹೋಗಿ ಅವರು ಕೇಳಿದಷ್ಟು ಹಣವನ್ನು ಸಾಲ ಮಾಡಿ ಆದರೂ ಕೊಟ್ಟು ಟಾರ್ಪಲ್ (Free Tarpaulin)ಅನ್ನು ಖರೀದಿಮಾಡಿಕೊಂಡು ಬರುತ್ತಾರೆ. ಕೆಲವೊಂದು ಸರಿ ಹಣದ ಕೊರತೆಯಿಂದಾಗಿ ಬಡ ರೈತರು ಬೆಳೆಗಳು ನಾಶವಾಗುತ್ತವೆ ಅದನ್ನೆಲ್ಲ ಅರಿತುಕೊಂಡ ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.


ಟಾರ್ಪಲ್ ಗಳ ಉಪಯೋಗ:-

ಬೆಲೆ ರಕ್ಷಣೆ:-ಕಟ್ಟವು ಮಡಿದ ಬೆಳೆಗಳನ್ನು ಹಣ್ಣು ತರಕಾರಿ ಭತ್ತ ಇವುಗಳನ್ನು ಅಚಾನಕ್ಕಾಗಿ ಬರುವ ಮಳೆಯಿಂದ ರಕ್ಷಿಸಲು.

ಸಾರಿಗೆ ಭದ್ರತೆ:- ಲಾರಿ ಟ್ರಾಕ್ಟಾರ್ ಬೆಳೆಗಳನ್ನು ಸಾಗಿಸುವಾಗ ಯಾವುದೇ ಹನಿ ಆಗದಂತೆ ಮುಚ್ಚಲು ಬಳಸಲಾಗುತ್ತದೆ

ಕೋಳಿ ಫಾರಂ:-ಕೋಳಿ ಸಾಕಾಣಿಕೆ ಮತ್ತು ಕೋಳಿ ಮರಿ ರಕ್ಷಿಸಿಕೊಳ್ಳಲು ಬೇಕಾಗುತ್ತದೆ

ಕೃಷಿ ಹೋಂಡಾ ನಿರ್ಮಿಸಲು:- ಇದು ಹೊಂಡದಲ್ಲಿ ನೀರು ಲೀಕ್ ಆಗದಂತೆ ತಡೆದು ಮಳೆ ನೀರು ಅಥವಾ ಪಂಪ್ ಸೆಟ್ ನೀರನ್ನು ದೀರ್ಘಕಾಲ ಉಳಿಸಲು ಸಹಾಯಮಾಡುತ್ತದೆ.

ತಾತ್ಕಾಲಿಕ ಶೆಡ್ ನಿರ್ಮಾಣ:- ಅತಿ ಕಡಿಮೆ ಸಮಯದಲ್ಲಿ ಜಾನುವಾರುಗಳಿಗೆ ಅಥವಾ ಕೃಷಿ ಯಂತ್ರೋಪಕರಣಗಳಿಗೆ ಶೆಡ್ ನಿರ್ಮಿಸಿಕೊಳ್ಳಲು

ಸಮಾರಂಭಗಳಲ್ಲಿ;- ಮದುವೆ, ಗೃಹಪ್ರವೇಶ, ಸಮಯದಲ್ಲಿ ಉಪಯೋಗ.

ಕೃಷಿ ಟಾರ್ಪಲ್ ಎಂದರೆ ಕೃಷಿ ಕ್ಷೇತ್ರಗಳಿಗೆ ಬಳಸುವಂತಹ ಟಾರ್ಪಲ್ ಇದಾಗಿದೆ ಭಾರತ ಮತ್ತು ಏಷ್ಯಾ ಉಪಖಂಡದ ದೇಶಗಳು ಕೃಷಿಯ ಮೇಲೆ ಅತಿ ಹೆಚ್ಚು ಆರ್ಥಿಕವಾಗಿ ಗಮನಹರಿಸುವುದರಿಂದ ರೈತರು ಕೃಷಿಯ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ.

ಯಾರಿಗೆ ಎಷ್ಟು ಸಹಾಯದ ದೊರೆಯುತ್ತದೆ:-

SC/ST ರೈತರು :-

  • ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ 90% ಲಭ್ಯವಿದೆ
  • ಟಾರ್ಪಾಲಿನ ನಿಗದಿತ ಬೆಲೆಯಲ್ಲಿ ಕೇವಲ 10% ಹಣ ಪಾವತಿಸಿದರೆ ಸಾಕು

ಸಾಮಾನ್ಯ ವರ್ಗದ ರೈತರು:-

  • ಇತರೆ ಯಲ್ಲ ವರ್ಗದ ರೈತರಿಗೆ ಶೇಕಡಾ 50% ಸಬ್ಸಿಡಿ ದರದಲ್ಲಿ ಲಭ್ಯವಿದೆ.
  • ಮಾರುಕಟ್ಟೆಯ ಬೆಲೆಗೆ ಗುಣಮಟ್ಟದ ಟಾರ್ಪಲ್ (Free Tarpaulin) ಸಿಗುತ್ತದೆ

ಈ ಕೆಳಗೆ ಹೆಚ್ಚಾಗಿ ಎಲ್ಲಿ ಟಾರ್ಪಲ್ಗಳನ್ನ ಬಳಕೆ ಮಾಡಲಾಗುತ್ತದೆ ಅನ್ನುವಂತಹ ವಿವರವನ್ನು ನೀಡಲಾಗಿದ್ದು ಈ ಎಲ್ಲಾ ವಿವರಗಳನ್ನು ರೈತರು ಓದಿಕೊಂಡು ತಾವು ಸಹ ಯೋಜನೆಯ ಲಾಭವನ್ನು ಪಡೆಯಬಹುದು

ರೈತರಿಗೆ ಟಾರ್ಪಲಿಂಗ್ ಬಳಕೆ:-

ರೈತರು ತಾವು ಬೆಳೆದಂತ ಬೆಳೆಗಳನ್ನ ಮಳೆ, ಗಾಳಿ ,ಬೆಳಕು ಹಾಗೂ ಧೂಳಿನಿಂದ ರಕ್ಷಿಸಿಕೊಳ್ಳಲು ಟಾರ್ಪಲ್ ಗಳ ಮೊರೆ ಹೋಗುತ್ತಾರೆ. ಅಷ್ಟೇ ಅಲ್ಲದೆ ಈ ಟಾರ್ಪಲ್ (Free Tarpaulin)ಬಳಸುವುದರಿಂದ ನೀರಿನ ಶೇಖರಣೆಯನ್ನು ಮಾಡಬಹುದು ಹಾಗೂ ಕೃಷಿ ಹೊಂಡದಲ್ಲಿ ಸಹ ಈ ಟಾರ್ಪಲ್ ಗಳ ಬಳಸುವುದರಿಂದ ನೀರಿನ ಕೊರತೆಯನ್ನು ನೀಗಿಸಬಹುದು ಹಾಗೂ ಇನ್ನೂ ಸಾಕಷ್ಟು ಕ್ಷೇತ್ರದಲ್ಲಿ ರೈತರಿಗೆ ಈ ಟಾರ್ಪಲಿನ್ ತುಂಬಾನೇ ಉಪಯುಕ್ತವಾಗಲಿದ್ದು ಒಂದು ರೀತಿಯಲ್ಲಿ ಹೇಳುವುದಾದರೆ ಟಾರ್ಪಲ್ ರೈತರ ಒಂದು ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು.

ಟಾರ್ಪಲಿನ್ ಸಹಾಯಧನ ಯೋಜನೆಯ ಮುಖ್ಯ ಗುರಿ:-

  • ರೈತರ ಆರ್ಥಿಕ ಬಾರ ಕಡಿಮೆ ಮಾಡುವ ಜೊತೆಗೆ
  • ಬೆಳೆ ನಷ್ಟ ತಡೆಯುವುದು
  • ಕೃಷಿ ಯಂತ್ರೋಪಕರಣಗಳಲ್ಲಿ
  • ಕಡಿಮೆ ವೆಚ್ಚದಲ್ಲಿ ಒಳ್ಳೆಯ ಟಾರ್ಪಲ್ ಬಡ ರೈತರಿಗೆ ಸಿಗುವಂತೆ ಮಾಡುವುದು
  • ಬೆಳೆಗಳ ರಕ್ಷಣೆ ಹಾಗೂ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವುದು ನಂತರ
  • ಕೃಷಿ ಹೊಂಡ ನಿರ್ಮಾಣ ಮಾಡಿ ನೀರಿನ ಸದ್ಬಳಕೆ ಮಾಡುವುದು

ಈ ಯೋಜನೆಯ ಫಲಾನುಭವಿಗಳು:-

ನಿವಾಸಿ ರೈತ:- ಕರ್ನಾಟಕದ ನಿವಾಸಿ ರೈತರ ಆಗಿರಬೇಕು

ನೋಂದಾಯಿತ ರೈತರು:-ಕೃಷಿ ಇಲಾಖೆಯಲ್ಲಿ ನೊಂದಾಯಿತ ರೈತರು

ಸಣ್ಣ ಮತ್ತು ಅತಿ ಸಣ್ಣ ರೈತರು;- ಇವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ

ಈ ಹಿಂದೆ ಯಾವುದೇ ಯೋಜನೆಯನ್ನು ಪಡೆದಿಲ್ಲದಿರುವ ರೈತರು

ಭೂಮಿಯನ್ನು ಹೊಂದಿರುವವರು:- ಭೂಮಿಯನ್ನು ಹೊಂದಿರುವಂತ ರೈತರು ಅಥವಾ ಲೀಜಿನಲ್ಲಿ ಪಡೆದಿರುವಂತ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು

ಟಾರ್ಪಲಿನ್ ಗಾತ್ರ:-

ವಿವರಗಾತ್ರ
ಅಗಲ6 ಮೀಟರ್
ಉದ್ದ8 ಮೀಟರ್
ಬಣ್ಣ ಕಪ್ಪು, ಹಳದಿ, ನೀಲಿ,

ಅರ್ಜಿ ಸಲ್ಲಿಸಲು ಕೇಳಲಾಗುವ ದಾಖಲೆಗಳು :

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಹಣಿ
  • ಮೊಬೈಲ್ ನಂಬರ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಟಾರ್ಪಲ್ ವಿತರಣೆಯ ವಿಧಾನ:-

  • ಮೊದಲು ಅರ್ಜಿ ಪರಿಶೀಲನೆ ಮತ್ತು ಅರ್ಹತೆ ದೃಡೀಕರಣ
  • ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆಧ್ಯತೆ.
  • ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರದ ಮೂಲಕ ಆಯ್ಕೆ ಮಾಡಲಾಗುತ್ತದೆ
  • ಕೆಲವೊಮ್ಮೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ರೈತರು ತಮ್ಮ ತಾಲೂಕು ಕೃಷಿ ಅಧಿಕಾರಿಯನ್ನ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯಿಂದ ಉಚಿತವಾಗಿ ಟಾರ್ಪಲ್ ಪಡೆಯಬಹುದು.

ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಇತರೆ ಸೌಲಭ್ಯಗಳು:-

  • ರಸ ಗೊಬ್ಬರ ಮತ್ತು ಜೈವಿಕ ಗೊಬ್ಬರ ಸಹಾಯಧನ
  • ನೀರಾವರಿ ಸೌಲಭ್ಯಗಳು
  • ಬೆಳೆವಿಮೆ ಯೋಜನೆ
  • ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸೇರಿದಂತೆ
  • ದುರಸ್ತಿಗೆ ತರಬೇತಿ
  • ಪಶು ಸಂಗೋಪನೆಗೆ ಸಹಾಯಧನ ಯೋಜನೆಗಳು
  • ಸಣ್ಣ ಕೃಷಿ ಉದ್ಯಮಕ್ಕೆ ಪ್ರೋತ್ಸಾಹ
  • ಸಬ್ಸಿಡಿ ದರದಲ್ಲಿ ಬೀಜಗಳ ವಿತರಣೆ

ಟಾರ್ಪಲಿನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-

ಆಫ್ ಲೈನ್:-

  • ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ
  • ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಅಗತ್ಯ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು
  • ಅಲ್ಲಿ ಕೊಟ್ಟಿರುವಂತಹ ಅರ್ಜಿ ಫಾರ್ಮನ್ನ ಭರ್ತಿ ಮಾಡಿ
  • ದಾಖಲೆಗಳನ್ನ ಲಗತ್ತಿಸಿ
  • ಸ್ವೀಕೃತಿ ಪಡೆದುಕೊಳ್ಳಿ

ಆನ್ ಲೈನ್ :-

  • ಕರ್ನಾಟಕದ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ https://kkisan.karnataka.gov.in/ಗೆ ಭೇಟಿ ನೀಡಿ
  • ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ ಡಿ ಹಾಕಿ ಲಾಗಿನ್ ಆಗಿ
  • ನಂತರ ಅಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  • ಎಲ್ಲ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ ಅಪ್ಲೋಡ್ ಮಾಡಿ

ಈಗ ಆಹ್ವಾನಿಸಲು ಅವಕಾಶ ನೀಡಿರುವ ಜಿಲ್ಲೆಗಳು:-

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ ಮತ್ತು ಧಾರವಾಡ ದಲ್ಲಿ

ಇತರೆ ಜಿಲ್ಲೆಗಳಿಗೆ ಈ ಅನುದಾನ ಲಭ್ಯವದಲ್ಲಿ ರೈತರು ಈ ಲಾಭವನ್ನು ಪಡೆದುಕೊಳ್ಳಬಹುದು

ರೈತರಿಗೆ ವಿಶೇಷ ಮಾಹಿತಿ :

ರೈತರಿಗೆ ಉಚಿತ ಟಾರ್ಪಲ್ ಗಳಿಗೆ (Free Tarpaulin) ಹೆಚ್ಚಾಗಿ ಬೇಡಿಕೆಯನ್ನು ಹೆಚ್ಚಾಗಿ ಮಾಡುತ್ತಿದ್ದು ಈ ಯೋಜನೆಗೆ ಅನುದಾನ ಲಭ್ಯವಾದಲ್ಲಿ ಮಾತ್ರ ಉಚಿತವಾಗಿ ಟಾರ್ಪಲ್ ವಿತರಣೆ ಮಾಡಲಾಗುತ್ತೆ

  • ಈ ಯೋಜನೆ ಬಿಟ್ಟ ನಂತರ ತಡ ಮಾಡದೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ
  • ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಯ ವಿವಿಧ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

ಅಂತಿಮ ಮಾತು:-

ಕರ್ನಾಟಕ ಸರ್ಕಾರ ರೈತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಲವು ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ ತಿಳಿದಿರುವುದಿಲ್ಲ. ನಮ್ಮ ವೆಬ್ ಸೈಟ ಮೂಲಕ ಎಲ್ಲ ರೈತರಿಗೂ ತಿಳಿಯಲ್ಲಿ ಎಂಬ ಸಣ್ಣ ಪ್ರಯತ್ನ ನಿಮಗೂ ಉಚಿತ ಟಾರ್ಪಲ್ (Free Tarpaulin)ಬೇಕಾದರೆ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆ ಗೆ ಬೇಡಿ ನೀಡಿ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯಿಂದ 50% ರಿಂದ 90% ವರೆಗೆ ಸಬ್ಸಿಡಿ ಸಹಾಯಧನ ಕೂಡ ಸಿಗಲಿ ಸಾಮಾನ್ಯ ಹಾಗೂ ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಈ ಯೋಜನೆಯ ಅವಕಾಶ ದೊರೆಯಲಿದೆ , ಈ ಯೋಜನೆಯ ಅವಕಾಶವನ್ನು ಸದುಪಯೋಗವನ್ನ ರೈತರು ಪಡಿಸಿಕೊಳ್ಳಲು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.

ಇತರೆ ಪ್ರಮುಖ ಲಿಂಕ್ ಗಳು:

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment