Gruha Lakshmi Scheme : ರೂ 50,000/- ಬದುಕಿಗೆ ದಾರಿದೀಪವಾದ ಗೃಹಲಕ್ಷ್ಮಿ: ಮಹಿಳೆಯ ಸ್ಪೂರ್ತಿದಾಯಕ ಪಯಣ

January 19, 2026 6:10 PM
Gruha Lakshmi Scheme

Join WhatsApp

Join Now

Join Telegram

Join Now

ಪ್ರತಿಯೊಬ್ಬರ ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ, ಕೆಲವೊಬ್ಬರು ಜೀವನವಿಡೀ ಸುಖ ಶಾಂತಿಯನ್ನೇ ನೋಡುತ್ತಾ ಬದುಕುತ್ತಿರುತ್ತಾರೆ. ಆದರೆ ಇನ್ನು ಕೆಲವರು ಒಂದು ದಿನ ಇರಲಿ ಒಂದು ಹೊತ್ತಿನ ಜೀವನವನ್ನು ಸಾಗಿಸಬೇಕಾದರೂ ಕೂಡ ಅದು ಅವರ ಬದುಕಿಗೆ ಸವಾಲಾಗುತ್ತದೆ. ಹೀಗೆ ಈ ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತು ಎಲ್ಲಾ ಮಹಿಳೆಯರುಗೂ ಸ್ಪೂರ್ತಿಯಾಗಿರುವ ಮಹಿಳೆಯ ಕುರಿತಾಗಿದೆ ಈ ಒಂದು ಲೇಖನ.

ನಮ್ಮ ಊರಿನ ಜೀನತ್ ಎನ್ನುವ ಮಹಿಳೆಯೊಬ್ಬರು ಉಪ್ಪಿನಕಾಯಿ ಮಾರಾಟ ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಈ ಒಂದು ಸಾಧನೆಗೆ ನೆರವಾಗಿದ್ದು, ಗೃಹಲಕ್ಷ್ಮಿ ಯೋಜನೆಯಿಂದ ಕೂಡಿಟ್ಟ ಹಣ ಹಾಗೂ ಈ ಹಣದಿಂದ ಖರೀದಿಸಿದ ಸ್ಕೂಟರ್.

Gruha Lakshmi Scheme 2026

ಎಲ್ಲಾ ಮಹಿಳೆಯರಂತೆ ಜೀನತ್ ರವರ ಬದುಕು ಇರಲಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಗಂಡನೊಂದಿಗೆ ವಿಚ್ಛೇದನ ಪಡೆದ ಈ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಸಾಕುವುದು ಬಹಳ ಸವಾಲಾಗಿತ್ತು. ಇಬ್ಬರು ಮಕ್ಕಳ ಪಾಲನೆ, ಅವರ ಶೈಕ್ಷಣಿಕ ಖರ್ಚುಗಳ ಜೊತೆಗೆ ದಿನನಿತ್ಯದ ಖರ್ಚನ್ನು ತಾನೊಬ್ಬಳೇ ನಿಭಾಯಿಸಬೇಕಿತ್ತು.

ವಾಸಿಸಲು ಸ್ವಂತ ಮನೆ ಕೂಡ ಇಲ್ಲದೆ, ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ ಜೀನತ್, ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿ, ಉಪ್ಪಿನ ಕಾಯಿ ಮಾರಾಟ ಮಾಡಲು ಪ್ರಾರಂಭಿಸಿದರು. ಆದರೆ, ಕಾಲ್ನಡಿಗೆಯಲ್ಲೇ ಉಪ್ಪಿನಕಾಯಿ ಮಾರಾಟ ಮಾಡುವುದು ಜೀನತ್ ಗೆ ಬಹಳ ಕಷ್ಟಕರವಾಗುತ್ತಿತ್ತು. ಮಹಿಳೆಯ ಈ ಕಷ್ಟಕರ ಜೀವನಕ್ಕೆ ನೆರವಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದ ಹಣವನ್ನು ಕೂಡಿಟ್ಟು ಖರೀದಿಸಿದ ಸ್ಕೂಟರ್.

ಗೃಹಲಕ್ಷ್ಮಿ ಹಣದಿಂದ ಸ್ಕೂಟರ್ ಖರೀದಿ:

ಜೀನತ್ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ತಮಗೆ ಬಂದ ₹50,000 ಹಣವನ್ನು ಅನಗತ್ಯವಾಗಿ ಖರ್ಚು ಮಾಡದೇ, ಆ ಹಣವನ್ನು ಕೂಡಿಟ್ಟು ₹20,000 ಮೌಲ್ಯದ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಅನ್ನು ಖರೀದಿಸುವ ಮೂಲಕ ಉಪ್ಪಿನಕಾಯಿ ಮಾರಾಟಕ್ಕೆ ಸುಲಭವಾದ ದಾರಿಯನ್ನು ಕಂಡುಕೊಂಡರು. ಮಹಿಳೆಯು ಈ ಒಂದು ಸ್ಕೂಟರ್ ಖರೀದಿಸಿದ್ದರಿಂದ ಸಮಯ ಉಳಿತಾಯದ ಜೊತೆಗೆ ಗ್ರಾಹಕರ ಸಂಖ್ಯೆಯು ಹೆಚ್ಚಾಗಿದೆ ಇದರಿಂದಾಗಿ ಉಪ್ಪಿನ ಕಾಯಿ ಹೆಚ್ಚು ಮಾರಾಟಕ್ಕೂ ಕಾರಣವಾಯಿತು, ಆದಾಯ ಪ್ರಮಾಣವು ಹೆಚ್ಚಾಯಿತು.


ಬದುಕಿಗೆ ಆಧಾರವಾದ ಗೃಹಲಕ್ಷ್ಮಿ ಹಣ:

ಜೀನತ್ ಅವರ ಬದುಕಿಗೆ ಗೃಹಲಕ್ಷ್ಮಿ ಹಣವು ದಾರಿದೀಪವಾಯಿತು. “ನಾನು ಕಳೆದ 7 ತಿಂಗಳಿನಿಂದ ಗೃಹಲಕ್ಷ್ಮಿ ಹಣದಿಂದ ಖರೀದಿಸಿದ ಸ್ಕೂಟರ್ ನಲ್ಲಿ ಉಪ್ಪಿನಕಾಯಿ ವ್ಯಾಪಾರ ಮಾಡುತ್ತಿದ್ದೇನೆ. ಮೊದಲು ವ್ಯಾಪಾರ ಮಾಡಲು ಬಹಳ ಕಷ್ಟಕರವಾಗುತ್ತಿತ್ತು, ಆದರೆ ಈಗ ತುಂಬಾ ಸುಲಭವಾಗಿದೆ. ಎಂದು ಜೀನತ್ ಅವರ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಸ್ಕೂಟರ್ ನಲ್ಲಿ ಮಂತ್ರಿಗಳ ಹಾಗೂ ಸಚಿವರ ಫೋಟೋ:

ಜೀನತ್ ಅವರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದ ಹಣದಿಂದ ಸ್ಕೂಟರ್ ಖರೀದಿಸಿರುವುದರಿಂದ ಈ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ನೆರವನ್ನು ನೀಡಿದ ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸ್ಪೀಕರ್ ಯು.ಟಿ ಖದರ್ ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತಮ್ಮ ಸ್ಕೂಟರ್ ಗೆ ಇವರುಗಳ ಫೋಟೋವನ್ನು ಹಾಕಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಅನೇಕ ಮಹಿಳೆಯರಿಗೆ ನೆರವಾದ ಗೃಹಲಕ್ಷ್ಮಿ ಹಣ:

ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಅನೇಕ ಮಹಿಳೆಯರ ಬದುಕಿಗೆ ಆಧಾರವಾಗಿದೆ. ಅನೇಕ ಮಹಿಳೆಯರು ಮನೆಗೆ ಅಗತ್ಯವಾದ ಗೃಹೋಪಯೋಗಿ ವಸ್ತುಗಳಾದ ರೆಫ್ರಿಜೆರೇಟರ್, ವಾಷಿಂಗ್ ಮಷಿನ್ ಇತರೆ ವಸ್ತುಗಳ್ಳನ್ನು ಖರೀದಿಸಿದರೆ, ಇನ್ನು ಕೆಲವರು ತನ್ನ ಗಂಡನಿಗೆ ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರ ವ್ಯಾಪಾರಕ್ಕೆ ನೆರವಾಗಿದ್ದಾರೆ.

ಇನ್ನು ಕೆಲವರು ಸಣ್ಣ ಪ್ರಮಾಣದ ಉದ್ಯೋಗಗಳನ್ನು ಪ್ರಾರಂಭಿಸಲು ಗುಹಾಲಕ್ಷ್ಮಿ ಹಣವನ್ನು ಬಂಡವಾಳವಾಗಿ ಬಳಕೆ ಮಾಡಿ ಕೊಂಡರೆ, ಇನ್ನು ಕೆಲವರು ಸಣ್ಣ ಉದ್ಯಮ ಪ್ರಾರಂಭಿಸಲು ಅಗತ್ಯವಾದ ಯಂತ್ರೋಪಕರಣಗಳನ್ನು ಖರೀದಿಸಲು ಈ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಮಲ್ಲವ್ವ ಮೇಟಿ ಎನ್ನುವವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವು ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಇತ್ತೀಚಿಗೆ ಗ್ರಂಥಾಲಯವನ್ನು ತೆರೆದಿದ್ದಾರೆ. ಈ ಮಹಿಳೆಯ ಸಮಾಜಮುಖಿ ಕಾರ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.


ಕೊನೆಯ ಮಾತು:

ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಅಪಾರ ಮಟ್ಟದಲ್ಲಿ ನೆರವಾಗುವ ಮೂಲಕ ಈ ಯೋಜನೆಯು ಕಾಂಗ್ರೆಸ್ ಸರ್ಕಾರದ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಎಲ್ಲಾ ಮಹಿಳೆಯರು ಈ ಯೋಜನೆಯಡಿಯಲ್ಲಿ ಬರುವ ಹಣವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೇ ಜೀವನೋಪಾಯಕ್ಕೆ ನೆರವಾಗುವ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಇದು ಈ ಯೋಜನೆಯ ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು.


ಇತರೆ ಯೋಜನೆಯ ಲಿಂಕುಗಳು :

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment