ಕರ್ನಾಟಕ ರಾಜ್ಯದಲ್ಲಿ ಹಲವಾರು ವಸತಿ ಯೋಜನೆಗಳಿದ್ದರೂ ಬಡವರು ಸೇರಿದಂತೆ ನಿವೃತ್ತರು ಲಕ್ಷಾಂತರ ಕುಟುಂಬಗಳು ಸ್ವಂತ ಮನೆಯ ಸುಖಕ್ಕಾಗಿ ಇನ್ನೂ ಕಾಯುವಂತಾಗಿದೆ.
Housing Crisis in Karnataka 37 lakh families left homeless
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಟ್ಟಿಗೆ ಸೇರಿಸಿ ರಾಜ್ಯದಲ್ಲಿ ಒಟ್ಟು 37,48,766 ಕುಟುಂಬಗಳಿಗೆ ಇನ್ನೂ ಮನೆಯ ಭಾಗ್ಯ ದೊರಕಿಲ್ಲ ಇದರಲ್ಲಿ 17,31,633 ಕುಟುಂಬಗಳಿಗೆ ನಿವೇಶನಗಳೆ ಇನ್ನೂ ದೊರಕಿಲ್ಲ. ಇದು ನಮ್ಮ ರಾಜ್ಯದ ದುಸ್ಥಿತಿಯ ಯೋಜನೆಗಳ ಪರಿಣಾಮಕಾರಿತ್ವದ ಮೇಲೆ ಗಂಭೀರ ಪ್ರಶ್ನೆಗಳು ಹುಟ್ಟು ಹಾಕುವಂತಿವೆ. ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.
ವಸತಿ ಯೋಜನೆಗಳ ಹೆಸರಿನಲ್ಲಿ ಮಾತ್ರ?
ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪ್ರಧಾನಮಂತ್ರಿ ಅವಾಸ್ ಯೋಜನೆ, ರಾಜೀವ್ ಗಾಂಧಿ ಅವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ ,ಇಂದಿರಾ ಆವಾಸ್ ಯೋಜನೆ ,ದೇವರಾಜ ಅರಸು ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ನಿರ್ಮಲಾ ನಗರ ವಸತಿ ಯೋಜನೆ, ಸೇರಿದಂತೆ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ.
ಆದರೆ ಇದೀಗ ಈ ಯೋಜನೆಗಳ ಗುರಿ ಮುಟ್ಟುವ ಹಾಗೂ ಅನುಷ್ಠಾನವನ್ನು ಕೈಗೊಳ್ಳುವ ನಡುವೆ ಬೃಹತ್ ಅಂತರ ಕಂಡು ಬಂದಿದೆ ಬಡವರಿಗೆ ಸ್ವಂತ ಸೂರು ಕಲ್ಪಿಸುವಂತಹ ಯೋಜನೆಯನ್ನು ಯಾವ ಸರ್ಕಾರಗಳು ಇದುವರೆಗೆ ಸಂಪೂರ್ಣವಾಗಿ ಮಾಡಿಲ್ಲ,
ಇನ್ನು ಮುಂದಾದರೂ ಈ ಒಂದು ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿ ಬಡವರಿಗೆ ಸೂಕ್ತವಾಗಿ ಸೂರನ್ನ ಕಲ್ಪಿಸಿ ಕೊಡುತ್ತಾರ ಎಂದು ಕಾಡು ನೋಡಬೇಕಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಬೇಡಿಕೆಯ ಹರಹು
| ಭಾಗ | ನಿವೇಶನ ರಹಿತರು | ಮನೆ ರಹಿತರು |
|---|---|---|
| ಗ್ರಾಮೀಣ | 7,03,976 | 17,14,946 |
| ನಗರ | 10,27,657 | 3,02,187 |
ಗ್ರಾಮೀಣ ಪ್ರದೇಶಗಳಲ್ಲಿ ಮನೆ ರಹಿತ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ ನಗರಗಳಲ್ಲಿ ನಿವೇಶನ ರಹಿತ ಸಂಖ್ಯೆಯು ಕೂಡ ಹೆಚ್ಚಾಗಿದೆ ಅಂಕಿ ಅಂಶಗಳು ಎರಡು ಪ್ರದೇಶಗಳಲ್ಲಿ ವಸತಿ ಸೌಲಭ್ಯದ ಕೊರತೆ ಹೇಗೆ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದೆ ಎಂಬುವುದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಿದೆ.
ಈ ಮಾಹಿತಿಯನ್ನು ನೋಡುತ್ತಿದ್ದರೆ ಹಲವಾರು ಯೋಜನೆಗಳು ಸರ್ಕಾರದಿಂದ ಜಾರಿಯಾದರೂ ಕಾರ್ಯರೂಪಕ್ಕೆ ಸರಿಯಾಗಿ ಬಂದಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಯೋಜನೆಗಳು: ಅನುಮೋದನೆ ಮತ್ತು ನಿಜಾಂಶ:-
ರಾಜ್ಯ ಸರ್ಕಾರ 3,27,747 ಮನೆಗಳಿಗೆ ಅನುಮೋದನೆ ನೀಡಿದೆ ಎಂಬ ದಾಖಲೆ ಇದೆ. ಆದರೆ, ಇವುಗಳಲ್ಲಿ ಇಲ್ಲಿಯವರೆಗೆ 9,839 ಮನೆಗಳು ಮಾತ್ರ ಪೂರ್ಣಗೊಂಡಿವೆ.
46,540 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದೇ ಸಮಯದಲ್ಲಿ, 2,70,977 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲೇ ಇಲ್ಲ. ಹೀಗಾಗಿ, ಅನುಮೋದನೆ ಮತ್ತು ನೈಜ ಅನುಷ್ಠಾನದ ನಡುವಿನ ಅಂತರ ಹೆಚ್ಚು ತೀವ್ರವಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸ್ವಂತ ಸೂರಿಲ್ಲ :-
ಹೌದು ಸ್ವಾತಂತ್ರ ಬಂದು 75 ವರ್ಷಗಳಾದರೂ ಸಾಮಾನ್ಯ ಜನರಿಗೆ ಹಾಗೂ ಬಡವರಿಗೆ ಒಂದು ಸೂರ್ಯನ ಕಟ್ಟಿಕೊಳ್ಳುವ ಭಾಗ್ಯ ಇನ್ನೂ ಸಿಕ್ಕಿಲ್ಲ ರಾಜ್ಯದಲ್ಲಿ 37.48 ಲಕ್ಷ ಕುಟುಂಬಗಳಿಗೆ ಸೂರಿಲ್ಲ ಎಂಬುದು ನೋವಿನ ಸಂಗತಿ ಆಗಿದೆ ಅವರ ಮೂಲಭೂತ ಹಕ್ಕಿನಿಂದ ವಂಚಿಸಿದಂತೆ ಎಂದು ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಸಂಚಾಲಕರು ಹೇಳಿದ್ದಾರೆ.
ಮುಕ್ತಾಯದ ಗಮನ:-
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನ ಜಾರಿಗೆ ತಂದರು ಸಹ ವಸತಿ ಯೋಜನೆಗಳು ಉದ್ದೇಶಪೂರ್ವಕವಾಗಿ ನಿಧಾನ ಗತಿಯಲ್ಲಿ ಸಾಗುತ್ತಿವೆ ಈ ನಿಧನ ಗತಿಯಿಂದಾಗಿ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಒಂದು ಚೂರು ಕಲ್ಪಿಸಲು ಸಮಸ್ಯೆ ಉಂಟಾಗಿದೆ ಈ ಸಮಸ್ಯೆಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿ ತಿಳಿಯಬೇಕಾಗಿದೆ.
ಯಾವುದೇ ಒಂದು ಯೋಜನೆ ಅಡಿಯಲ್ಲಿ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಒಂದು ಸೂರನ್ನ ಕಲ್ಪಿಸುವಂತಹ ಸರ್ಕಾರದ ಯೋಜನೆಗಳು ಸರಿಯಾಗಿ ಜಾರಿಗೆ ಬರದಿರುವ ಕಾರಣ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಇನ್ನು ಮುಂದಾದರೂ ಈ ಯೋಜನೆಯ ಮೂಲಕ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಮನೆಯಲ್ಲದವರಿಗೆ ಸೂರ್ಯನ ಕಲ್ಪಿಸಿ ಕೊಡುತ್ತಾರ ಎನ್ನುವುದು ಕಾದು ನೋಡಬೇಕಾಗಿದೆ.










