
ನಮಸ್ಕಾರ ಸ್ನೇಹಿತರೆ… ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಾಡಲು ರಾಜ್ಯದ ಲಕ್ಷಾಂತರ ಕಾರ್ಮಿಕರ ಹಿತ ದೃಷ್ಟಿಯಿಂದ ಹಲವಾರು ಆರ್ಥಿಕ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಮುಖ್ಯವಾಗಿ ವೃದ್ಯಾಪ್ಯದಲ್ಲಿ ಆಸರೆಯಾಗುವ ಮಾಸಿಕ ಪಿಂಚಣಿ ಮತ್ತು ಕಾರ್ಮಿಕರ ಮರಣದ ನಂತರ ಅವರ ಕುಟುಂಬಕ್ಕೆ ಆಸರೆಯಾಗುವ ಕುಟುಂಬ ಪಿಂಚಣಿ (Labour Pension) ಸೌಲಭ್ಯಗಳು ಇಲ್ಲಿವೆ.
labour pension scheme In Kannada
ಕುಟುಂಬದಲ್ಲಿ ದುಡಿಯುವ ವ್ಯಕ್ತಿಗೆ 60 ವರ್ಷಗಳು ತುಂಬಿದ ಸಂದರ್ಭದಲ್ಲಿ ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದೆ. ಒಂದು ವೇಳೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಮೃತ ಪಟ್ಟ ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗೆ ಈ ಪಿಂಚಣಿಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಇನ್ನಿತರ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.
ನೀವು ಕಟ್ಟಡ ಕಾರ್ಮಿಕರಾಗಿದ್ದು ಈ ಯೋಜನೆಯ ಬಗ್ಗೆ ತಿಳಿದುಕೊಂಡಿಲ್ಲವೇ? ಇನ್ನು ಮಂಡಳಿಯಲ್ಲಿ ನೋಂದಾಡಣಿ ಮಾಡಿಕೊಂಡಿಲ್ಲವೇ? ಹಾಗಾದರೆ ಈ ಯೋಜನೆಯ ಲಾಭ ಪಡೆಯುವುದು ಹೇಗೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ ಬನ್ನಿ.
ಏನಿದು ಕಟ್ಟಡ ಕಾರ್ಮಿಕರ ಪಿಂಚಣಿ ಯೋಜನೆ:-
ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರಾಗಿ ಜಾರಿಗೆ ತಂದಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಪಿಂಚಣಿ ಮತ್ತು ಕಲ್ಯಾಣ ಯೋಜನೆ ಎಂದು ಕರೆಯಲಾಗುತ್ತದೆ ಈ ಯೋಜನೆಯಲ್ಲಿ ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರು 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ₹3,000 ಪಿಂಚಣಿಯನ್ನು (Labour Pension0 ಪಡೆಯಬಹುದು. ಅಷ್ಟೇ ಅಲ್ಲದೆ ಅವರು ಮರಣದ ನಂತರ ಕುಟುಂಬದ ನಿರವರ್ಹಣೆ ಕಷ್ಟವಾಗುತ್ತದೆ ಅದನ್ನು ಗಮನಿಸಿ ಸರ್ಕಾರ ಈ ಯೋಜನೆಯ ಮೂಲಕ ಪತಿ ಅಥವಾ ಪತ್ನಿ 1500 ಗಳ ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ
ಹೌದು ಸ್ನೇಹಿತರೆ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಮತ್ತು ರೈತರು ತಮ್ಮ ಈ ಯೋಜನೆಯ ಲಾಭ ಪಡೆಯಬಹುದು ಹಾಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಕಾರ್ಮಿಕ ಲೈಫ್ ಸೆಕ್ಯೂರ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ನೀವು ಇದರ ಅನುಕೂಲ ಪಡೆದುಕೊಳ್ಳಿ.
ಯೋಜನೆಯ ವಿವರ:-
| ಯೋಜನೆ ಹೆಸರು | ಕಟ್ಟಡ ಕಾರ್ಮಿಕರ ಪಿಂಚಣಿ ಯೋಜನೆ |
| ಫಲಾನುಭವಿಗಳು | ಲೇಬರ್ ಕಾರ್ಡ್ ಹೊಂದಿದವರು |
| ಸಹಾಯಧನ | ಮಾಸಿಕ ₹3000 |
| ಅರ್ಹರಾಜ್ಯ | ಕರ್ನಾಟಕ |
ಈ ಯೋಜನೆಯಿಂದಾಗಿ ಸಿಗುವ ಲಾಭಗಳು:-
- ತಿಂಗಳಿಗೆ 3000 ಪಿಂಚಣಿ ಸಿಗುತ್ತೆ:- ಪಿಂಚಣಿ ಸಿಗುತ್ತೆ ನೀವು ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು ನಿಮಗೆ ಅರವತ್ತು ವರ್ಷ ಮೇಲ್ಪಟ್ಟಿದ್ದರೆ ಕಾರ್ಮಿಕರಾಗಿದ್ದಾರೆ ನಿಮಗೆ ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು ₹3000 ಪಿಂಚಣಿ ನೀವು ಬದುಕಿರುವವರೆಗೂ ಬರುತ್ತದೆ.
- ಕುಟುಂಬ ಪಿಂಚಣಿ:- ಲೇಬರ್ ಕಾರ್ಡ್ ಹೊಂದಿದ ಫಲಾನುಭವಿ ದುರಾದೃಷ್ಟ ಮೃತ ಪಟ್ಟರೆ ಅಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಅಥವಾ ಕಾರ್ಮಿಕರ ಪತ್ನಿ ಗೆ ತಿಂಗಳಿಗೆ ₹1,500 ಪಿಂಚಣಿ ಸಿಗುತ್ತೆ
- ಮಕ್ಕಳ ಶಿಕ್ಷಣಕ್ಕೆ ಸಹಾಯಧನ:- ಕರ್ನಾಟಕ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಯಿಂದ ಇವರ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತದೆ
- ದುರ್ಬಲತೆ ಪಿಂಚಣಿ ಪಡೆಯಬಹುದು:- ಈ ಒಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಯಾವುದೇ ಸಂದರ್ಭದಲ್ಲಿ ಅಪಘಾತ ಅಥವಾ ಕೆಲಸ ಮಾಡುವಂತಹ ಸಂದರ್ಭದಲ್ಲಿ ಪೆಟ್ಟು ಮಾಡಿಕೊಂಡರೆ ಅಥವಾ ಅಂಗವಿಕಲತೆ ಉಂಟಾದರೆ ಅಂತಹ ಸಂದರ್ಭದಲ್ಲಿ ತಿಂಗಳಿಗೆ ₹2000 ಪಿಂಚಣಿ ನೀಡಲಾಗುತ್ತದೆ ಅಷ್ಟೇ ಅಲ್ಲದೆ ಆಸ್ಪತ್ರೆ ಖರ್ಜಿಗಾಗಿ 2 ಲಕ್ಷ ರೂಪಾಯಿ ವರೆಗೂ. ಈ ಒಂದು ಯೋಜನೆ ಮೂಲಕ ಸಹಾಯಕ ಪಡೆಯಬಹುದು.
ಇತರೆ ಕೊಡುಗೆಗಳು:-
- ಕಾರ್ಮಿಕರ ಮಕ್ಕಳ ಮದುವೆಗೆ :- ₹50,000 ಸಹಾಯಧನ ಪಡೆಯಬಹುದು
- ತಾಯಿ ಲಕ್ಷ್ಮಿ ಬಾಂಡ್ ಯೋಜನೆಯ:- ಮೂಲಕ ಹೆರಿಗೆಯ ಸಮಯದಲ್ಲಿ ಮೊದಲ ಎರಡು ಮಕ್ಕಳ ಹೆರಿಗೆಗೆ ಸರ್ಕಾರದಿಂದ ₹50,000 ಆರ್ಥಿಕ ನೆರವು ಸಿಗುತ್ತದೆ.
- ಕಲಿಕಾ ಭಾಗ್ಯ :- ಲೇಬರ್ ಕಾರ್ಡ್ ಹೊಂದಿದ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿವರ್ಷ ₹2000 ಇಂದ ₹30,000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
- ಟೂಲ್ ಕಿಟ್ಕೆ:- ಲಸಕ್ಕೆ ಬೇಕಾಗಿರುವ ಸಲಕರಣೆಯ ಕಿಟ್ಟನ್ನು ಅಥವಾ ಟೂಲ್ ಕಿಟ್ ಪಡೆಯಲು 20 ಸಾವಿರ ವರೆಗೆ ಸಹಾಯಧನ ನೀಡಲಾಗುತ್ತದೆ
- ಅಂತ್ಯಕ್ರಿಯ:- ಅಥವಾ ಮರಣದ ಸಂದರ್ಭದಲ್ಲಿ ಸರ್ಕಾರದಿಂದ ₹4000 ಸಹಾಯ ಸಹಾಯಧನ ಸಿಗುತ್ತದೆ ಹಾಗೂ ಒಂದು ಕುಟುಂಬಕ್ಕೆ ₹71,000 ಸಹಾಯಧನ ಅಥವಾ ಪರಿಹಾರ ಈ ಯೋಜನೆ ಮೂಲಕ ಪಡೆದುಕೊಳ್ಳಬಹುದು
ಅರ್ಹತಾ ಮಾನದಂಡಗಳು:-
- ಅರ್ಜಿದಾರರು ಕಟ್ಟಡ ನಿರ್ಮಾಣದ ಕಾರ್ಮಿಕರಾಗಿರಬೇಕು
- ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು
- 60 ವರ್ಷ ಪೂರ್ಣಗೊಳಿಸುವ ಮೊದಲು ಕನಿಷ್ಠ ಮೂರು ವರ್ಷಗಳ ಕಾಲ ನಿರಂತರವಾಗಿ ಮಂಡಳಿಯ ಫಲಾನುಭವಿ ಆಗಿರಬೇಕು
- ಕರ್ನಾಟಕದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತರಾಗಿರಬೇಕು
- ಕನಿಷ್ಠ 60 ವರ್ಷ ಮೇಲ್ಪಟ್ಟಿರಬೇಕು
- ವರ್ಷಕ್ಕೆ ಕನಿಷ್ಠ 90 ದಿನಗಳ ಕಾಲ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿರಬೇಕು
- ಕುಟುಂಬದ ಸದಸ್ಯರ ಹೆಸರುಗಳು ಬೋರ್ ದಾಖಲೆಗಳಲ್ಲಿ ಸೇರಿಸಿರಬೇಕು
- ಮತ್ತುಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ಲಿಂಕ್ ಆಗಿರಬೇಕು
ಕಾರ್ಮಿಕರ ಪಿಂಚಣಿ ಯೋಜನೆಯ ಅನುಕೂಲತೆಗಳು:-
- ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ:-ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿಯ ನಂತರ ಯಾವುದೇ ಸಂಬಳ ಇರುವುದಿಲ್ಲ ಈ ಯೋಜನೆಯು 60 ವರ್ಷದ ನಂತರ ಪ್ರತಿ ತಿಂಗಳು 3000 ಖಚಿತ ಪಿಂಚಣಿ ನೀಡುವ ಮೂಲಕ ಅವರು ಗೌರವಯುತ ನೆಮ್ಮದಿಯ ಜೀವನವನ್ನು ನಡೆಸಬಹುದು.
- ಕುಟುಂಬಕ್ಕೆ ಆಸರೆ:-ಒಂದು ವೇಳೆ ಪಿಂಚಣಿ ಪಡೆಯುತ್ತಿರುವಾಗದೆ ಫಲಾನುಭವಿ ಮರಣ ಹೊಂದಿದರೆ. ಅವರ ಪತ್ನಿಯ ಅಥವಾ ಪತಿಗೆ ಶೇಕಡ 50 ಪರ್ಸೆಂಟ್ ಅಷ್ಟು ಪ್ರತಿ ತಿಂಗಳು ಈ ಸಹಾಯಧನ ಸಿಗುತ್ತದೆ ಇದು ಕಾರ್ಮಿಕರ ಕುಟುಂಬಕ್ಕೆ ರಕ್ಷಣೆ ಆಗುತ್ತದೆ.
- ಸುಲಭ ಹಣ ಹಿಂಪಡೆಯುವ ಅವಕಾಶ:- ಯಾವುದೇ ಕಾರಣಕ್ಕೆ ನೀವು ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಲು ಬಯಸಿದರೆ ನೀವು ಕಟ್ಟಿದ ಹಣವನ್ನು ಅಲ್ಪ ಪ್ರಮಾಣದ ಬಡ್ಡಿ ಯೊಂದಿಗೆ ವಾಪಸ್ ಪಡೆಯಬಹುದು ನಿಮ್ಮ ಹಣ ಎಲ್ಲಿಯೂ ವ್ಯರ್ಥವಾಗುವುದಿಲ್ಲ-
ಅಗತ್ಯ ದಾಖಲೆಗಳು:-
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಲೇಬರ್ ಕಾರ್ಡ್
- ಪಾಸ್ ಬುಕ್
- ವಿಳಾಸ ಪ್ರಮಾಣ ಪತ್ರ
- ಕುಟುಂಬದ ಸದಸ್ಯರ ದಾಖಲೆಗಳು
- ಉದ್ಯೋಗ ಪ್ರಮಾಣ ಪತ್ರ
- ನೋಂದಣಿ ಪ್ರಮಾಣ ಪತ್ರ
- ಜನ್ಮ ಪ್ರಮಾಣ ಪತ್ರ
- ಶಾಲಾ ದಾಖಲೆ
ನೋಂದಣಿ ಮಾಡುವುದು ಹೇಗೆ:-
- ಮೊದಲಿಗೆ ಮಂಡಳಿಯ ಅಧಿಕೃತ ವೆಬ್ಸೈಟ್ https://karbwwb.karnataka.gov.in/ಗೆ ಭೇಟಿ ನೀಡಿ
- ಮತ್ತು ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ರಿಜಿಸ್ಟರ್ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಓಟಿಪಿ ಮೂಲಕ ಪರಿಶೀಲಿಸಿ
- ಲಾಗಿನ್ ಆದ ನಂತರ ಡ್ಯಾಶ್ ಬೋರ್ಡ್ ನಲ್ಲಿರುವ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಕೇಳಲಾದ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿ
- ಎಲ್ಲಾ ದಾಖಲೆಗಳು ಸರಿಯಾಗಿದೆ ಎಂದು ಪರಿಶೀಲಿಸಿ ಅಪ್ಲೋಡ್ ಮಾಡಿ ಮತ್ತು ಸಬ್ಮಿಟ್ ಮಟನ್ ಮತ್ತು ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
ದಯವಿಟ್ಟು ಗಮನಿಸಿ :- ಸ್ನೇಹಿತರೆ ನೀವು ಸಂಪೂರ್ಣವಾಗಿ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರದ ಯಾವುದೇ ಆ ಸೈಬರ್ ಸೆಂಟರ್ ಅಥವಾ ಗ್ರಾಮವನ್ನ ಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಂತಿಮ ತೀರ್ಮಾನ:-
ಬಿಸಿಲು ಮಳೆಎನ್ನದೆ ದುಡಿಯುವ ಈ ವರ್ಗದ ಜನರ ಭವಿಷ್ಯಕ್ಕೆ ಕರ್ನಾಟಕ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೆ ನಮ್ಮ ದೇಶದ ಅಭಿವೃದ್ಧಿಗೆ ಕಟ್ಟಡ ಕಾರ್ಮಿಕರ ಬೆವರು ಮತ್ತು ಶ್ರಮ ಅಡಕೆ ಈ ವರ್ಗದ ಭವಿಷ್ಯಕ್ಕೆ ಭದ್ರತೆ ನೀಡಲು ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಅದ್ಭುತ ಯೋಜನೆಗಳಿಗೆ ಅರ್ಜಿಸಲ್ಲಿಸಿ.
ಈ ಯೋಜನೆ ಮೂಲಕ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರು 60 ವರ್ಷ ಪೂರೈಸಿದ ನಂತರ ಅವರಿಗೆ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು 3000 ಪಿಂಚಣಿ ಹಣವನ್ನು ನೀಡಲಾಗುತ್ತದೆ ಅಷ್ಟೇ ಅಲ್ಲದೆ ಈ ಯೋಜನೆ ಮೂಲಕ ಅವರ ಅಂತ್ಯಕ್ರಿಯೆಗೂ4,000 ಸಹಾಯಧನ ಸಿಗುತ್ತದೆ ಅವರ ಕುಟುಂಬಕ್ಕೂ ಸಹ ಆಸರೆಯಾಗುತ್ತದೆ.










