Mahila Samriddhi Yojana : ₹1.40 ಲಕ್ಷ ಸಾಲ! ಮಹಿಳೆಯರ ಸ್ವಾವಲಂಬನೆಗೆ ಸರ್ಕಾರದ ಬಂಪರ್ ಕೊಡುಗೆ – ಕೇವಲ 6% ಬಡ್ಡಿ

January 20, 2026 8:03 AM
Mahila Samriddhi Yojana: ₹1.40 lakh loan! Government's bumper contribution to women's self-reliance – just 6% interest About this Beautiful thumbnail in Kannada 16:9 photo of women celebrating in front of a bank with money in their hands and Karnataka government logo and a line of women applying online there and apply now button

Join WhatsApp

Join Now

Join Telegram

Join Now

ಯಾರಿಗೂ ಹೊರೆಯಾಗದೆ ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಅನ್ನುವ ಮಹಿಳೆಯರಿಗೆ ಭಾರತ ಸರ್ಕಾರದಿಂದ ಶುಭಸುದ್ದಿ. ಭಾರತ ಸರ್ಕಾರವು ಸಣ್ಣ ಉದ್ಯಮವನ್ನು ಮಾಡಿ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಎಂದು ಭಾವಿಸುವ ಮಹಿಳೆಯರಿಗೆ ಮಹಿಳಾ ಸಮೃದ್ಧಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು ನೀಡಿ ಅವರ ನೆರವಿಗೆ ನಿಂತಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾ? ಹಾಗಿದ್ದರೆ ಈ ಯೋಜನೆಯ ಬಗ್ಗೆ ಕೆಳಗಿನ ಹಂತದಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಹಿಂದುಳಿದ ವರ್ಗಗಳ ಮಹಿಳೆಯರಿಗೆ ಹಾಗೂ ಆರ್ಥಿಕವಾಗಿ ದುರ್ಬಲರಾದ ಮಹಿಳೆಯರಿಗೆ ಸ್ವಂತ ಉದ್ಯಮವನ್ನು ನಡೆಸಿ, ಸ್ವಾವಲಂಬಿಯಾಗಿ ಜೀವನವನ್ನು ನಡೆಸುವಂತೆ ಮಾಡಲು ನೀಡಿರುವ ಸರ್ಕಾರದ ಸಾಲ ಯೋಜನೆ ಇದಾಗಿದ್ದು, ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯಮವನ್ನು ನಡೆಸುವ ಮಹಿಳೆಯರಿಗೆ ಕೇವಲ 6% ಬಡ್ಡಿ ದರದಲ್ಲಿ ₹1,40,000 ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಮಹಿಳೆಯರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ.

ಯೋಜನೆಯ ವಿಮರ್ಶೆ:

ಯೋಜನೆಯ ಹೆಸರು ಮಹಿಳಾ ಸಮೃದ್ಧಿ ಯೋಜನೆ
ಫಲಾನುಭವಿಗಳು ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರು
ಸಾಲ ಸೌಲಭ್ಯ 6% ಬಡ್ಡಿ ದರದಲ್ಲಿ ₹1,40,000 ಸಾಲ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮತ್ತು ಆಫ್ ಲೈನ್

ಮಹಿಳಾ ಸಮೃದ್ಧಿ ಯೋಜನೆ ಎಂದರೇನು?

ಹಿಂದುಳಿದ ವರ್ಗಗಳ ಮಹಿಳೆಯರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಸಣ್ಣ ಉದ್ಯಮವನ್ನು ಪ್ರಾರಂಭಿಸಲು “ರಾಷ್ಟ್ರಿಯ ಹಿಂದುಳಿದ ವರ್ಗಗಳ ಹಣಕಾಸು ಹಾಗೂ ಅಭಿವೃದ್ಧಿ ನಿಗಮಮ”ದ ಅಡಿಯಲ್ಲಿ ಸಾಲ ನೀಡುವ ಕಿರು ಬಂಡವಾಳ ಯೋಜನೆ ಇದಾಗಿದೆ. ಈ ಯೋಜನೆಯಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.

ಈ ಯೋಜನೆಯನ್ನು ಜಾರಿಗೊಳಿಸಿರುವ ಉದ್ದೇಶವೇನು?

  • ಮಹಿಳೆಯರು ಗುಡಿ ಕೈಗಾರಿಕೆ, ಹೈನುಗಾರಿಕೆಯಂತಹ ಸಣ್ಣ ಪ್ರಮಾಣದ ಉದ್ಯಮವನ್ನು ಪ್ರಾರಂಭಿಸಲು ಬಂಡವಾಳಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವುದಾಗಿದೆ.
  • ಹಿಂದುಳಿದ ವರ್ಗಗಳ ಮಹಿಳೆಯರು ಉದ್ಯೋಗಕ್ಕಾಗಿ ಇತರರ ಮೇಲೆ ಅವಲಂಬಿತರಾಗದೆ, ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಉತ್ತೇಜನವನ್ನು ನೀಡುವುದು.
  • ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವ ಮೂಲಕ ಬಡತನ ನಿರ್ಮೂಲನೆಗೆ ಪಾತ್ರರಾಗುವುದು.
  • ಸ್ವಂತ ಉದ್ಯೋಗವನ್ನು ಮಾಡಲು ಮಹಿಳೆಯರನ್ನು ಪ್ರೇರೇಪಿಸುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅನುವು ಮಾಡಿಕೊಡುವುದು.
  • ಈ ಯೋಜನೆಯಡಿಯಲ್ಲಿ ಕೇವಲ ಸಾಲ ಸೌಲಭ್ಯವನ್ನು ನೀಡುವುದಲ್ಲದೆ, ಮಹಿಳೆಯರಿಗೆ ತಮ್ಮ ಉದ್ಯಮಕ್ಕೆ ಅಗತ್ಯವಾದ ತಾಂತ್ರಿಕ ತರಬೇತಿ ಹಾಗೂ ಮಾರುಕಟ್ಟೆ ಮಾರ್ಗದರ್ಶನವನ್ನು ನೀಡುವ ಮೂಲಕ ಜಾಣ್ಮೆಯಿಂದ ಉದ್ಯಮ ನಡೆಸಲು ಅನುವು ಮಾಡಿಕೊಡುವುದು.

ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳೇನು?

  • ಮಹಿಳೆಯರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ₹1,40,000 ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
  • ಮಹಿಳೆಯರು ಕಡಿಮೆ ಬಡ್ಡಿ ದರದಲ್ಲಿ ಅಂದರೆ 4% ಇಂದ 6% ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
  • ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಸಾಲಕ್ಕೆ ಅರ್ಜಿ ಹಾಕಿದರೆ ₹15,00,000 ದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
  • ಗರಿಷ್ಠ 4 ವರ್ಷಗಳ ಅವಧಿಯಲ್ಲಿ ತ್ರೈಮಾಸಿಕ ಕಂತುಗಳ ಮೂಲಕ ಸಾಲವನ್ನು ಮರುಪಾವತಿಸುವ ಅವಕಾಶವಿರುತ್ತದೆ.
  • ಮಹಿಳೆಯರು ಸಣ್ಣ ಮಟ್ಟದ ಸಾಲಗಳಿಗೆ ಯಾವುದೇ ಆಸ್ತಿ ಭದ್ರತೆಯನ್ನು ಒದಗಿಸುವ ಅಗತ್ಯ ಇರುವುದಿಲ್ಲ.

ಯಾವ ಉದ್ಯಮಗಳಿಗೆ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ?

  • ಹಾಲು ಉತ್ಪಾದನೆ ಹಾಗೂ ಹೈನುಗಾರಿಕೆ
  • ಜೇನು ಸಾಕಾಣಿಕೆ ಹಾಗೂ ರೇಷ್ಮೆ ಕೃಷಿ
  • ಕಿರಾಣಿ ಮತ್ತು ಬಟ್ಟೆ ಅಂಗಡಿ
  • ಹಣ್ಣು ಮತ್ತು ತರಕಾರಿ ವ್ಯಾಪಾರ
  • ಹಪ್ಪಳ, ಸಂಡಿಗೆ ಹಾಗೂ ಉಪ್ಪಿನಕಾಯಿ ತಯಾರಿಕೆ
  • ಮೇಣದ ಬತ್ತಿ ಹಾಗೂ ಅಗರಬತ್ತಿ ತಯಾರಿಕೆ
  • ಸಣ್ಣ ಹೋಟೆಲ್
  • ಬ್ಯೂಟಿ ಪಾರ್ಲರ್
  • ಕೃಷಿ ಆಧಾರಿತ ಉದ್ಯಮಗಳು
  • ಕರಕುಶಲ ವಸ್ತುಗಳ ತಯಾರಿಕೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಿಳೆಯರಾಗಿರಬೇಕು.
  • ಅರ್ಜಿದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಚಿಸಿದಂತೆ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು ₹3 ಲಕ್ಷ ಮೀರಿರಬಾರದು.
  • ಕಡ್ಡಾಯವಾಗಿ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹಿಂದೆ ಸರ್ಕಾರದ ಯಾವುದೇ ಸಾಲ-ಸೌಲಭ್ಯವನ್ನು ಪಡೆದುಕೊಂಡಿರಬಾರದು.
ಇಲ್ಲಿ ಗಮನಿಸಿ: “ಮಹಿಳೆಯರು ಸಾಲವನ್ನು ಪಡೆಯಲು ವೈಯಕ್ತಿಕವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೋಂದಾಯಿತ ಸ್ವಸಹಾಯ ಸಂಘಗಳ ಸದಸ್ಯರಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.”

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಹೊಂದಿರಬೇಕಾದ ಅಗತ್ಯ ದಾಖಲೆಗಳು:

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಿಳೆಯರಾಗಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಪಾಸ್ಪೋರ್ಟ್ ಸೈಟ್ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ
  • ಸ್ವಸಹಾಯ ಸಂಘದ ಸದಸ್ಯತ್ವ ಪ್ರಮಾಣಪತ್ರ
  • ಸಕ್ರಿಯ ಮೊಬೈಲ್ ಸಂಖ್ಯೆ

ಮಹಿಳಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಮತ್ತು ಆಸಕ್ತ ಮಹಿಳೆಯರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :

  • ರಾಷ್ಟ್ರಿಯ ಹಿಂದುಳಿದ ವರ್ಗಗಳ ಹಣಕಾಸು ಹಾಗೂ ಅಭಿವೃದ್ಧಿ ನಿಗಮ ಅಧಿಕೃತ ವೆಬ್ಸೈಟ್ https://nsfdc.nic.in/en/mahila-samriddhi-yojana ಗೆ ಭೇಟಿ ನೀಡಿ.
  • ಆಧಾರ್ ಸಂಖ್ಯೆಯನ್ನು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ.
  • ಅಲ್ಲಿ ನೀಡಿರುವ ನಿಗಮಗಳ ಸಾಲ ಸೌಲಭ್ಯಗಳಲ್ಲಿ ಮಹಿಳಾ ಸಮೃದ್ಧಿ ಯೋಜನೆಯನ್ನು ಆಯ್ಕೆ ಮಾಡಿ.
  • ಅಲ್ಲಿ ಕೇಳಿರುವ ಅಗತ್ಯ ಮಾಹಿತಿಯನ್ನು ಭರ್ತಿಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ, ಗ್ರಾಮೀಣ ಬ್ಯಾಂಕ್ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ,ಅರ್ಜಿ ಪ್ರತಿಯನ್ನು ಪಡೆದುಕೊಂಡು ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ.

ಅಂತಿಮ ತೀರ್ಮಾನ :

ರಾಷ್ಟೀಯ ಹಿಂದುಳಿದ ವರ್ಗಗಳ ಹಣಕಾಸು ಹಾಗೂ ಅಭಿವೃದ್ಧಿ ಇಲಾಖೆಯಡಿಯಲ್ಲಿ ಜಾರಿಗೊಂಡ ಮಹಿಳಾ ಸಮೃದ್ಧಿ ಯೋಜನೆಯ ಲಾಭವನ್ನು ಹಿಂದುಳಿದ ವರ್ಗಗಳ ಮಹಿಳೆಯರು ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಇಂದೇ ಆನ್ಲೈನ್ ಮೂಲಕ ಅಥವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಇತರೆ ಯೋಜನೆಯ ಲಿಂಕುಗಳು :

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment