Mini Tractor Subsidy Scheme : ರೂ 3.50,000/- ಲಕ್ಷ ಮೌಲ್ಯ : ಹೊಸ ಟ್ರ್ಯಾಕ್ಟರ್ ಖರೀದಿಗೆ 90% ಸಬ್ಸಿಡಿ.!

January 17, 2026 7:47 AM
Mini Tractor Subsidy Scheme

ನೀವು ನಿರೀಕ್ಷಿಸದ ಯೋಜನೆ.. ದಿನದಿಂದ ದಿನಕ್ಕೆ ಕೆಲಸಕ್ಕೆ ಆಳು ಸಿಗದ ಕಾರಣ ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬೇಡಿಕೆ ಹೆಚ್ಚಾಗಿದೆ ಕಾರ್ಮಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲು ಒತ್ತು ನೀಡಿದ್ದಾರೆ.

Mini Tractor Subsidy Scheme in Kannada

Join WhatsApp

Join Now

Join Telegram

Join Now

ಆದರೆ ಕೃಷಿ ಉಪಕರಣಗಳು ತುಂಬಾ ದುಬಾರಿಯಾಗುವ ಕಾರಣ ರೈತರು ಕೃಷಿ ಯಂತ್ರೋಪಕರಣ ಖರೀದಿಸಲು ಸರ್ಕಾರವೇ ಸಹಾಯಧನ ನೀಡುತ್ತಿದೆ ಇದಕ್ಕಾಗಿಕೃಷಿಯಂತ್ರೀಕರಣ ಯೋಜನೆಯನ್ನು ಜಾರಿ ಮಾಡಲಾಗಿದೆ ಈ ಯೋಜನೆ ಅಡಿಯಲ್ಲಿ ರೈತರಿಗೆ ಏನೆಲ್ಲ ಸಹಾಯಧನ ಸಿಗಲಿದೆ? ಎಷ್ಟು ಸಬ್ಸಿಡಿ ಸಿಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ.

ರೈತರು ಕೃಷಿ ಕಾರ್ಯಗಳನ್ನು ಸುಲಭಗೊಳಿಸಲು ಮತ್ತು ಯಾಂತ್ರಿಕರಣವನ್ನುಉತ್ತೇಜಿಸುವ ಯೋಜನೆ ಇದಾಗಿದ್ದು ಮಿನಿ ಟ್ರಾಕ್ಟರ್ ಖರೀದಿಸಲು ಸರ್ಕಾರ 90% ಸಬ್ಸಿಡಿ ಹಣವನ್ನು ನೀಡುವ ಮೂಲಕ ರೈತರನ್ನುಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದ ಯೋಜನೆಯಾಗಿದೆ ಅರ್ಹ ಫಲಾನುಭವಿಗಳು ಇಂದಿನಿಂದ ಅರ್ಜಿ ಪ್ರಾರಂಭವಾಗಿದ್ದು ಎಲ್ಲಾ ರೈತರು ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ರೈತರಿಗೆ ಮಿನಿ ಟ್ರ್ಯಾಕ್ಟರ್ ಖರೀದಿಗೆ 90% ಸಬ್ಸಿಡಿ ಸಹಾಯಧನ:

ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಮ್ಮ ವೆಬ್ ಸೈಟ್ ಮಾಧ್ಯಮ.ನೆಟ್ ನಲ್ಲಿ ಕಾಣಬಹುದು. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.


ವಿವರವಾದ ಮಾಹಿತಿ:

ಕೃಷಿ ಯಂತ್ರೋಪಕರಣಗಳನ್ನು ರೈತರು ಖರೀದಿಸಲು ಸಾಧ್ಯವಾಗದೇ ಇರುವುದರಿಂದ ಸರ್ಕಾರವು ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ ಇದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಕೃಷಿಯಲ್ಲಿ ಅಭಿವೃದ್ಧಿ ಹೊಂದಲಿ ಎಂಬ ದೃಷ್ಟಿಕೋನವನ್ನು ಸರ್ಕಾರ ಹೊಂದಿದೆ.

ಯಾವ ಯಾವ ಯಂತ್ರೋಪಕರಣಗಳಿಗೆ ಅನುಗುಣವಾಗಿ ಶೇಕಡ 60 ಶೇಕಡ 50 ಮತ್ತು ಶೇಕಡಾ 40 ಶೇಕಡಾ 90% ರಷ್ಟು ಸಹಾಯಧನ ನೀಡಲಾಗುವುದು ಇದಕ್ಕಾಗಿ ರೈತ ಬಾಂಧವರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿ ಯಂತ್ರೋಪಕರಣಗಳನ್ನು

ಕೃಷಿಯಲ್ಲಿ ಯಂತ್ರೋಪಕರಣಗಳ ಅಗತ್ಯತೆಗಳು

ನಾವು ನೋಡುತ್ತಿರುವ ಹಾಗೆ ನಮ್ಮ ದೇಶದಲ್ಲಿ ಹಲವಾರು ರೈತರು ಕೃಷಿ ಕೆಲಸವನ್ನು ಮುಖ್ಯ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ರೈತರ ಬದುಕಿನಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಕೃಷಿ ಭೂಮಿಯನ್ನು ಹದಗೊಳಿಸಲು ಅಗತ್ಯವಾದ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದೆ ಸಾಲದ ಸುಳಿಗೆ ಸಿಲುಕುವುದನ್ನು ಕಾಣಬಹುದು. ಈ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ.

ಮೊದಲು ಹೊಲ ಉಳುಮೆ ಮಾಡಲು ಹೆಚ್ಚು ದಿನಗಳ ಕಾಲ ಬೇಕಾಗುತ್ತಿತ್ತು ಆದರೆ ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ ಗಳನ್ನು ಬಳಸಿ ಕೆಲವೇ ಗಂಟೆಗಳಲ್ಲಿ ಕೆಲಸವನ್ನು ಮುಗಿಸಬಹುದು ಹಾಗಾಗಿ ರೈತರಿಗೆ ಮುಂದಿನ ಬೆಳೆ ಹಾಕಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ ರೈತರು ಸಮಯದ ಉಳಿತಾಯವನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಅಳು ಹುಡುಕುವುದು ತುಂಬ ಕಷ್ಟವಾಗಿದೆ ಬಿತ್ತನೆ ಕೊಯ್ಲು ಇತ್ಯಾದಿ ಕೆಲಸ ಮಾಡಲು ಯಂತ್ರವನ್ನು ಬಳಸುವುದರಿಂದ ಕಾರ್ಮಿಕರ ಮೇಲೆ ಅವಲಂಬನೆ ಕಡಿಮೆ ಮಾಡಬಹುದು ರೈತರ ಆರೋಗ್ಯ ಹದಗೆಟ್ಟರೆ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ ಯಂತ್ರಗಳನ್ನು ಬಳಸುವುದರಿಂದ ಎಲ್ಲಾ ಸಮಯದಲ್ಲಿ ಕೃಷಿಯನ್ನು ಮಾಡಿ ಹೆಚ್ಚಿನ ಆದಾಯವನ್ನುಗಳಿಸಬಹುದು

ಯೋಜನೆಯ ಅವಲೋಕನ:

ಯೋಜನೆಯ ಹೆಸರುಕೃಷಿಯಂತ್ರೀಕರಣ ಯೋಜನೆ
ಅರ್ಹ ಫಲಾನುಭವಿಗಳುರೈತರು
ಒಟ್ಟು ಪ್ರೋತ್ಸಾಹಧನ90% ಸಬ್ಸಿಡಿ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್

ಸಂಕ್ಷಿಪ್ತ ಮಾಹಿತಿ :

ಕೃಷಿ ಎಂದಿಗೂ ಸುಲಭದ ವೃತ್ತಿ ಆಗಿರಲಿಲ್ಲ ಅನಿರೀಕ್ಷಿತ ಮಳೆ ಮತ್ತು ಹೆಚ್ಚುತ್ತಿರುವ ಆಮದು ಮತ್ತು ರಫ್ತುಗಳ ವೆಚ್ಚಗಳಿಂದ ಹಿಡಿದು ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಬೆಳೆಗಳ ಏರಿಳಿತದಿಂದಾಗಿ ರೈತರ ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸುತ್ತಿದ್ದಾರೆ ಅದರಲ್ಲೂ ರೈತರ ಮಕ್ಕಳಿಗೆ ಮಾಡುವೆ ಆಗಲು ಹೆಣ್ಣು ಕೂಡ ಸಿಗುತ್ತಿಲ್ಲ ಕೆಲಸ ಮಾಡಬೇಕಾಗುತ್ತದೆ ಎಂಬ ದೃಷ್ಟಿಯಿಂದಾಗಿ ರೈತರ ಮಕ್ಕಳಿಗೆ ಯಾರು ಕೂಡ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಆಧುನಿಕ ಕೃಷಿ ಯಂತ್ರೋಪಕರಣಗಳ ಸಮಯವನ್ನು ಉಳಿಸಿ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರೈತರಗೆ ದೊಡ್ಡ ಮಟ್ಟದ ಬದಲಾವಣೆಯನ್ನು ತರುವ ಉದ್ದೇಶವನ್ನು ಹೊಂದಿದೆ

ಈ ಯೋಜನೆ ಅಡಿಯಲ್ಲಿ ಭಾರಿ ಸಹಾಯಧನ:

ಕೃಷಿ ಇಲಾಖೆಯು ಯಂತ್ರಗಳ ಮೇಲೆ ಹೆಚ್ಚಿನ ಸಬ್ಸಿಡಿ ನೀಡುವುದರಿಂದ ರೈತರಿಗೆ ಆಧುನಿಕ ಕೃಷಿ ಉಪಕರಣಗಳ ಲಭ್ಯವಾಗುವಂತೆ ಮಾಡುವುದು ಕೃಷಿ ಉತ್ತೇಜಿಸಲು ಸಹಾಯಕವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 90% ವರೆಗೆ ಸಹಾಯಧನ ಪಡೆಯಬಹುದು. ಹಿಂದುಳಿದ ವರ್ಗದ ರೈತರು ಮತ್ತು ಸಾಮಾನ್ಯ ವರ್ಗದ ರೈತರು ಅನೇಕ ಯಂತ್ರಗಳ ಮೇಲೆ 50% ಸಬ್ಸಿಡಿ ಪಡೆಯಬಹುದು.

ಇದು ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ದುಬಾರಿ ಯಂತ್ರಗಳನ್ನು ಕಡಿಮೆ ಬೆಲೆಗಳಲ್ಲಿ ತೆಗೆದುಕೊಳ್ಳಬಹುದು ಹಾಗೂ ಈ ಯಂತ್ರಗಳನ್ನು ತೆಗೆದುಕೊಳ್ಳಲು ಹಲವು ರೈತರು ಬ್ಯಾಂಕ್ ಮತ್ತು ಫೈನಾನ್ಸ್ ಗಳ ಮೂಲಕ ಸಾಲವನ್ನು ಪಡೆದು ಸಾಲದ ಸುಲಿಗೆ ಸಿಲುಕಿರುತ್ತಾರೆ ಇದನ್ನು ತಪ್ಪಿಸಲು ರೈತರಿಗೆ ಇದೆ ಜನವರಿಯಿಂದ ಹೊಸ ಅರ್ಜಿ ಬಿಟ್ಟಿದ್ದಾರೆ.

ಈ ಯೋಜನೆಗೆ ಯಾರು ಅರ್ಹರು? ಯಾವುದರ ಮೇಲೆ ಎಷ್ಟು ಸಬ್ಸಿಡಿ ಸಿಗುತ್ತೆ? ಎಂಬ ನಿಮ್ಮ ಪ್ರಶ್ನೆಗೆ? ಉತ್ತರ ಇಲ್ಲಿದೆ ನೋಡಿ!!

ಅರ್ಹ ಫಲಾನುಭವಿಗಳು:

ಜಾಮೀನು ಹೊಂದಿರಬೇಕು:-

ರೈತರು ತಮ್ಮ ಹೆಸರಿನಲ್ಲಿ ಸ್ವಂತ ಜಮೀನಿನನ್ನು ಹೊಂದಿರಬೇಕು ಮತ್ತು ಅದರ ಪಹಣಿ ಚಾಲ್ತಿಯಲ್ಲಿರಬೇಕು.

ನೊಂದಾಯಿತ ರೈತರು:-

ಕರ್ನಾಟಕ ಸರ್ಕಾರದ ಪೋರ್ಟಲ್ ನಲ್ಲಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು.

ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು:-

ಯೋಜನೆಯ ಲಾಭ ಪಡೆಯಲು ಕನಿಷ್ಠ 10 ವರ್ಷದಿಂದ ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು

ಜಾತಿ ಪ್ರಮಾಣ ಪತ್ರ:-

ರೈತರು ಹೆಚ್ಚಿನ ಸಬ್ಸಿಡಿ ಪಡೆಯಲು ಅಧಿಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು

ಈ ಯೋಜನೆಯಿಂದ ಲಭ್ಯವಾಗುವ ಉಪಕರಣಗಳ ಪಟ್ಟಿ

  • ಮಿನಿ ಟ್ರಾಕ್ಟಾರ್
  • ಪವರ್ ಟಿಲ್ಲರ್
  • ಕಲ್ಟಿವೇಟರ್
  • ರೋಟೋವೇಟರ್
  • ಡಿಸ್ಕ್ ಹ್ಯಾರೋ

ವರ್ಗ ಮತ್ತು ಸಬ್ಸಿಡಿ ವಿವರ

ಉಪಕರಣಗಳುಗರಿಷ್ಠ ಮೊತ್ತSC/STಸಾಮಾನ್ಯ ವರ್ಗ
ಮಿನಿ ಟ್ರಾಕ್ಟಾರ್₹3,50,000 – ₹4,50,00090%50%
ಪವರ್ ಟಿಲ್ಲರ್₹1,25,000-₹150,00080%50%
ಕಲ್ಟಿವೇಟರ್₹20,000-₹30,00070%40%
ರೋಟೋವೇಟರ್₹50,000-₹75,00070%50%
ಡಿಸ್ಕ್ ಹ್ಯಾರೋ₹30,000-₹40,00070%40%

ಕೃಷಿಯಂತ್ರೀಕರಣ ಯೋಜನೆಯ ಉದ್ದೇಶ:

  • ಟ್ರ್ಯಾಕ್ಟರ್ ನಂತಹ ದುಬಾರಿ ಯಂತ್ರಗಳನ್ನು ಖರೀದಿ ಮಾಡಲು ಸರ್ಕಾರದಿಂದ 90% ಸಬ್ಸಿಡಿ ನೀಡುವುದರಿಂದ ರೈತರು ಸಾಲದ ಸುಲಿಗೆ ಸಿಲುಕುವುದನ್ನು ತಪ್ಪಿಸುವುದು.
  • ರೈತರು ಕಾರ್ಮಿಕರ ಮೇಲೆ ಅವಲಂಬಿತರಾಗದೆ ತಮ್ಮ ಕೆಲಸವನ್ನು ತಾವೇ ಸುಲಭವಾಗಿ ಮಾಡಿಕೊಳ್ಳಲು ಸಹಾಯಕ ಹಾಗೆ ಕೂಲಿ ಆಳುಗಳು ಸಿಗದೇ ಇರುವ ಕಾರಣ ಕೇಳಿದ ವೇತನ ದಿನದಿಂದ ದಿನಕ್ಕೆ ತುಂಬಾ ಜಾಸ್ತಿ ಆಗುತ್ತಿದೆ ಯಂತ್ರಗಳ ಬಳಕೆ ಇಂದ ಇದನ್ನೆಲ್ಲಾ ತಪ್ಪಿಸಬಹುದು
  • RAITARU ಬಾಡಿಗೆಯ ಟ್ರ್ಯಾಕ್ಟರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ರೈತರು ತಮ್ಮ ಕೆಲಸವನ್ನು ತಾವೇ ನಿರ್ವಹಿಸಿಕೊಳ್ಳಲು ಅನುವುಮಾಡಿಕೊಡುವುದು.
  • ಟ್ರ್ಯಾಕ್ಟರ್ ಸಹಾಯದಿಂದ ಕಡಿಮೆ ಕೂಲಿ ಕೆಲಸದವರಿಂದ ಹೆಚ್ಚಿನ ಭೂಮಿಯನ್ನು ಉಳುಮೆ ಮಾಡಬಹುದಾಗಿದೆ.
  • ರೈತರು ಟ್ರ್ಯಾಕ್ಟರ್ ಸಹಾಯದಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಉಳುಮೆ ಮಾಡಿ ಬೆಳೆಗಳ ಇಳುವರಿ ಹೆಚ್ಚಿಸಿ,ಹೆಚ್ಚಿನ ಆದಾಯವನ್ನು ಗಳಿಸುವಂತೆ ಮಾಡುವುದು.
  • ಕೃಷಿಯನ್ನು ಆಧುನಿಕ ಮತ್ತು ಲಾಭದಾಯಕ ಉದ್ಯಮವನ್ನಾಗಿ ಬಿಂಬಿಸುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.

ಈ ಯೋಜನೆ ರೈತರಿಗೆ ಏಕೆ ಮುಖ್ಯವಾಗಿದೆ:

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನ ಇಂದಿನ ದಿನಗಳಲ್ಲಿ ಅನಿಶ್ಚಿತತೆಯಿಂದ ಬರುವ ಮಳೆ ಹಾಗು ಮಳೆ ಬಂದ ತಕ್ಷಣವೇ ಕೆಲವೇ ದಿನಗಳಲ್ಲಿ ಭೂಮಿಯನ್ನು ಹದಾ ಮಾಡಿ ಬಿತ್ತನೆ ಮಾಡಬೇಕಾಗುತ್ತದೆ ಎತ್ತುಗಳ ಮೂಲಕ ಇದು ಬೇಗನೆ ಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ ಅದರಿಂದ ಟ್ರ್ಯಾಕ್ಟರ್ ಯಂತ್ರಗಳನ್ನು ಬಳಸಿ ಸುಲಭವಾಗಿ ಕೆಲವೇ ದಿನಗಳಲ್ಲಿ ಬಿತ್ತನೆ ಮಾಡಬಹುದು.

ಹಳ್ಳಿ ಭಾಗದ ಜನರು ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ನೀಡಿರುವ ಕಾರಣ ವಲಸೆ ಹೋಗುತ್ತಿರುವ ಕಾರಣ ಕೃಷಿ ಕೆಲಸಕ್ಕೆ ಆಳು ಸಿಗುವುದೇ ದೊಡ್ಡ ಸಮಸ್ಯೆ ಆಗಿದೆ ಅದರ ಜೊತೆ ಆಳುಗಳ ಕೊರತೆಯಿಂದಾಗಿ ಇರುವ ಆಳುಗಳು ಹೆಚ್ಚಿನ ಕೂಲಿಯನ್ನು ಪಡೆಯುತ್ತಿದ್ದಾರೆ ಹಾಗಾಗಿ ರೈತರು ಕಾರ್ಮಿಕರ ಮೇಲೆ ಅವಲಂಬಿತರಾಗದೆ ಯಂತ್ರಗಳನ್ನು ಬಳಸಿ ಕೆಲಸಗಳನ್ನು ಸುಲಭಗೊಳಿಸಲು ಈ ಯೋಜನೆಯಿಂದಾಗಿ ರೈತರು ನಿಶ್ಚಿಂತಾಯಿಂದ ಕೃಷಿ ಮುಂದುವರೆಸಬಹುದು.

ಯೋಜನೆಯ ಪ್ರಯೋಜನ:


  • ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಇರುವುದರಿಂದ, ಸ್ವಂತ ಟ್ರ್ಯಾಕ್ಟರ್ ಹೊಂದುವ ಜನರು ಯಾರಿಗೂ ಅವಲಂಬಿತರಾಗದೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬಹುದು.
  • ಉಳುಮೆ ಮಾಡಲು ಬೇಕಾಗುವ ಅಧಿಕ ಸಮಯವನ್ನು ಟ್ರ್ಯಾಕ್ಟರ್ ನ ಸಹಾಯದಿಂದಾಗಿ ಕಡಿಮೆ ಸಮಯದಲ್ಲಿ ಉಳುಮೆ ಮಾಡಿ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು.
  • ಒಟ್ಟು ಟ್ರ್ಯಾಕ್ಟರ್ ಬೆಲೆಯಲ್ಲಿ ಅರ್ಧದಷ್ಟು ಮೊತ್ತವನ್ನು ಸರ್ಕಾರವೇ ಭರಿಸುವುದರಿಂದ ರೈತರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
  • ಈ ಯೋಜನೆಯಡಿ ಸಬ್ಸಿಡಿಯ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಯಾವುದೇ ಮಧ್ಯವರ್ತಿಗಳ ಸಹಾಯದ ಅವಶ್ಯಕತೆ ಇರುವುದಿಲ್ಲ.
  • ತಮ್ಮ ಸ್ವಂತ ಜಮೀನಿನ ಕೃಷಿ ಕೆಲಸವನ್ನು ಮುಗಿಸಿದ ನಂತರ ಬೇರೆಯವರಿಗೆ ಜಮೀನಿನ ಕೃಷಿ ಕೆಲಸವನ್ನು ಮಾಡಲು ಟ್ರ್ಯಾಕ್ಟರ್ ಗಳನ್ನು ಬಾಡಿಗೆಗೆ ನೀಡುವ ಮೂಲಕ ಇನ್ನಷ್ಟು ಆದಾಯವನ್ನು ಗಳಿಸಬಹುದು.

ಅರ್ಹತಾ ಮಾನದಂಡ: 

  • ಅರ್ಜಿದಾರರು ಭಾರತೀಯ ನಾಗರೀಕರಾಗಿರಬೇಕು.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು 18 ವರ್ಷ ಮೇಲ್ಪಟ್ಟು 60 ದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರರು ಕನಿಷ್ಠ 2 ಎಕ್ಕರೆ ಭೂಮಿಯನ್ನು ಹೊಂದಿರಬೇಕು.
  • ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದುಕೊಂಡಿರಬಾರದು.
  • ಒಂದು ಕುಟುಂಬಕ್ಕೆ ಒಂದೇ ಟ್ರ್ಯಾಕ್ಟರ್ ಸಬ್ಸಿಡಿಯನ್ನು ನೀಡಲಾಗುವುದು.
  • ಮಹಿಳೆಯರಿಗೆ ಮತ್ತು SC/ST ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.
“ಆದಾಯ ತೆರಿಗೆ ಪಾವತಿ ಮಾಡುವವರಿಗೆ ಅಥವಾ ದೊಡ್ಡ ರೈತರಿಗೆ ಈ ಯೋಜನೆಯು ಅನ್ವಹಿಸುವುದಿಲ್ಲ”

ಅಗತ್ಯ ದಾಖಲೆಗಳು: 

ಅರ್ಜಿ ಸಲ್ಲಿಸುವ ಫಲಾನುಭವಿಗಳು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

  • ಆದಾಯ ಪ್ರಮಾಣಪತ್ರ 
  • ಜಾತಿ ಪ್ರಮಾಣಪತ್ರ
  • ಟ್ರ್ಯಾಕ್ಟರ್ ಖರೀದಿ ಪತ್ರ
  • ಆಧಾರ್ ಕಾರ್ಡ್
  • ಭೂ ದಾಖಲೆ
  • ಬ್ಯಾಂಕ್ ಖಾತೆಯ ವಿವರ
  • ಮೊಬೈಲ್ ಸಂಖ್ಯೆ
  • ಪಾಸ್ ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ: 

  • ಅಧಿಕೃತ ವೆಬ್ ಸೈಟ್ https://raitamitra.karnataka.gov.in ಗೆ ಭೇಟಿ ನೀಡಿ
  • ಫಾರ್ಮ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ
  • ಆಧಾರ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಲಾಗಿನ್ ಆಗಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
  • ವೈಯಕ್ತಿಕ ಮತ್ತು ಭೂ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ಸಬ್ಮಿಟ್ ಮಾಡಿ ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.

ತೀರ್ಮಾನ:

ರೈತರಿಗೆ ಮಿನಿ ಟ್ರ್ಯಾಕ್ಟರ್ ಖರೀದಿ ಮಾಡುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ನ ಒಟ್ಟು ಬೆಲೆಯಲ್ಲಿ ರೈತರಿಗೆ 90% ಸಬ್ಸಿಡಿಯನ್ನು ನೀಡುವ ಮೂಲಕ 10% ವೆಚ್ಚವನ್ನು ಮಾತ್ರ ರೈತರು ಕಟ್ಟಬೇಕಾಗುತ್ತದೆ. ಬಡ ಮತ್ತು ಹಿಂದುಳಿದ ವರ್ಗದ ರೈತರಿಗೆ ಇದೊಂದು ಸವರ್ಣಾವಕಾಶ ಅಂತಾನೆ ಹೇಳ್ಬಹುದು ಕರ್ನಾಟಕ ಸರ್ಕಾರದ ಇಂತಹ ಹಲವು ಯೋಜನೆಗಳನ್ನು ಯಾರಿಗೆ ತಂದಿರುವುದರಿಂದ ಆಧುನಿಕ ಕೃಷಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ರೈತರು ಉದ್ಯೋಗಾವಕಾಶವನ್ನು ಒದಗಿಸಿಕೊಡುತ್ತದೆ ಹೊಲಸೆ ಹೋಗುವುದು ತಪ್ಪುತ್ತದೆ ರೈತಮಿತ್ರರೇ ನೀವು ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment