
ಕರ್ನಾಟಕದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್. ನಮ್ಮ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
PM Ujjwala Scheme In Kannada
ಅದರಲ್ಲೂ ಬಡವರು ಹಾಗೂ ಮಾಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಪರಿಚಯಿಸಿದ ಖ್ಯಾತಿ ಇವರದ್ದು.ಇದು ಯಾವ ಯೋಜನೆ? ಇದರ ಲಾಭವೇನು? ಫಲಾನುಭವಿಗಳು ಯಾರು? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0: ರೂ 300/-ಸಬ್ಸಿಡಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರದಾನ ಮಂತ್ರಿ ಉಜ್ವಲ್ ಯೋಜನೆ 2.0 ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಒಂದು ಮಹತ್ವಕಾಂಕ್ಷಿಯ ಯೋಜನೆಯಾಗಿದೆ ಇದು ಮಹಿಳೆಯರಿಗೆ ಹೋಗೆ ಇಂದ ಉಂಟಾಗುವ ಅರೋಗ್ಯ ಸಮಸ್ಯೆ ಸ್ವಚ್ಛ ಮತ್ತು ಸುರಕ್ಷಿತ ಅಡುಗೆ ಮನೆಯನ್ನು ರೂಪಿಸುವ ರೂಪಿಸುವ ಉದ್ದೇಶವನ್ನು ಹೊಂದಿದೆ
ಅವಲೋಕನಗಳು:-
| ಯೋಜನೆಯ ಹೆಸರು | ಪ್ರದಾನ ಮಂತ್ರಿ ಉಜ್ವಲ್ ಯೋಜನೆ |
| ಫಲಾನುಭವಿಗಳು | ಬಡ ಮತ್ತು ಹಿಂದುಳಿದ ವರ್ಗದ ಕುಟುಂಬಗಳ ಮಹಿಳೆಯರು |
| ರಾಜ್ಯ | ಕರ್ನಾಟಕ |
| ಅಧಿಕೃತ ವೆಬ್ ಸೈಟ್ | https://www.pmuy.gov.in/index.aspx |
ಪ್ರದಾನ ಮಂತ್ರಿ ಉಜ್ವಲ್ ಯೋಜನೆ ಎಂದರೇನು?
ಸ್ನೇಹಿತರೆ ಕೇಂದ್ರ ಸರ್ಕಾರದ ಪಿಎಂ ಉಜ್ವಲ್ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಹಾಗು ಬಡ ರೈತ ಕುಟುಂಬಗಳಿಗಲ್ಲಿ ಹಿಂದುಳಿದ ವರ್ಗದವರು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಹಾಗು ಜೊತೆಗೆ ಕಿಟ್ ಅನ್ನುಒದಗಿಸುವ ಒಂದು ಮಹತ್ವದ ಯೋಜನೆಯಾಗಿದೆ.
ಈ ಯೋಜನೆಯು ಮೊದಲು 2016 ರಲ್ಲಿ ಜಾರಿಗೆ ಬಂದಿದ್ದು ಹಲವಾರು ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಇದು ಸಾಮಾನ್ಯ ವರ್ಗದ ಮಹಿಳೆಯರು ಅಡುಗೆ ಮಾಡಲು ಕಟ್ಟಿಗೆ ಅಥವಾ ಒಣಗಿದ ಸಗಣಿ ಇವುಗಳನ್ನು ಬಳಸುತ್ತಿದ್ದರು ಇದರಿಂದ ಉಂಟಾಗುವ ಹೊಗೆಯಿಂದಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಬೀಳುವ ದುಷ್ಪಾರಿಣಾಮಗಳನ್ನು ತಪ್ಪಿಸಲು ಮತ್ತು ಕಟ್ಟಿಗೆ ಕಡಿದು ಪರಿಸರ ನಾಶ ವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದೆ.
ಅರ್ಹತಾ ಮಾನದಂಡಗಳು:-
- ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ ಗ್ಯಾಸ್ ಅನ್ನು ಕೇವಲ ಮಹಿಳೆಯರ ಹೆಸರಿನಲ್ಲಿ ಮಾತ್ರ ನೀಡಲಾಗುತ್ತದೆ
- ಅರ್ಜಿ ಸಲ್ಲಿಸುವ ಮಹಿಳೆಯರು ಭಾರತದ ನಾಗರಿಕರಾಗಿರಬೇಕು
- ಮೊದಲು ಯಾವುದೇ LPG ಗ್ಯಾಸ್ ಹೊಂದಿರಬಾರದು
- ಅರಣ್ಯ ವಾಸಿಗಳು ಅಥವಾ ಅತ್ಯಂತ ಹಿಂದುಳಿದ ವರ್ಗದ ಕುಟುಂಬಗಳು
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ಪಡೆದುಕೊಂಡಿರುವವರು
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು
- ಕುಟುಂಬದ ವಾರ್ಷಿಕ ಆದಾಯ ನಿಗದಿಪಡಿಸಿದ ಮಿತಿಯೊಳಗಿರಬೇಕು
ಈ ಯೋಜನೆಗೆ ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ
ಪ್ರದಾನ ಮಂತ್ರಿ ಉಜ್ವಲ್ ಯೋಜನೆಯ ಉದ್ದೇಶ:-
- ಮಹಿಳೆಯರ ಹೆಸರಿನಲ್ಲಿ ಗ್ಯಾಸ್ ಸಂಪರ್ಕ ನೀಡುವ ಮೂಲಕ ಅವರ ಘನತೆಯನ್ನು ಹೆಚ್ಚಿಸುವುದು ಮತ್ತು ಮತ್ತು ಮನೆಯಲ್ಲಿ ಯಾವುದಾರೂ ಆರ್ಥಿಕ ನಿರ್ಧಾರ ತೆಗೆದುಕೊಳಲು ಅವರನ್ನು ಸದೃಢಗೊಳಿಸುವುದು.
- ಮಹಿಳೆಯರು ಸಾಂಪ್ರದಾಯಕ ಒಲೆಗಳಲ್ಲಿ ಅಡುಗೆ ಮಾಡುವುದರಿಂದ ಅಡುಗೆ ಮನೆಯಲ್ಲಿ ಬಿಡುಗಡೆಯಾಗುವ ಹೊಗೆ ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತಿತ್ತು.
- ಇದರಿಂದಾಗಿ ನೆಮ್ಮದಿಯ ಜೀವನ ನೆಡೆಸಲು ಸಾಧ್ಯವಾಗುತ್ತಿರಲಿಲ್ಲ ಸರ್ಕಾರ ಇದನ್ನು ಗಮನಿಸಿ ಮಹಿಳೆಯರಿಗೆ ಹೊಗೆ ಮುಕ್ತ ಜೀವನವನ್ನು ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ
- ಅಡುಗೆ ಮಾಡಲು ಸೌದೆಗಳಿಗಾಗಿ ಮರಳನ್ನು ಕಡಿದು ಅರಣ್ಯನಾಶ ಮಾಡುತ್ತಿದ್ದರು ಇದರಿಂದ ಕಾಡುಗಳಿಲ್ಲಿರುವ ಪ್ರಾಣಿ ಪಕ್ಷಿಗಳ ನಾಶವಾಗುತ್ತಿತ್ತು ಮತ್ತು ವಾತಾವರಣದಲ್ಲಿ ಏರುಪೇರು ಆಗುತ್ತಿತ್ತು ಇದನ್ನು ತಪ್ಪಿಸಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ
- ಹಳ್ಳಿ ಭಾಗದ ಮಹಿಳೆಯರು ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೆ ಕೇವಲ ಅಡುಗೆ ಮನೆಗೆ ಸೀಮಿತರಾಗಿರುತ್ತಾರೆ ಹಾಗೆ ಆಗದೆ ಹೆಚ್ಚಿನ ಆದಾಯ ಬರುವ ಕೆಲಸದಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ
ವಯೋಮಿತಿ:-
ಈ ಯೋಜನೆಗೆ ಅರ್ಜಿಸಲ್ಲಿಸಲು ಮಹಿಳೆಯರಿಗೆ 18 ವರ್ಷ ತುಂಬಿರಬೇಕು. ಇದರಿಂದ ಸಿಗುವ ಲಾಭ ಪಡೆದುಕೊಳ್ಳಬಹುದು ಉಚಿತ ಗ್ಯಾಸ್ ಸಿಲೆಂಡರ್ ಮತ್ತು ಕಿಟ್ ಹಾಗು 300 ರೂಪಾಯಿ ಸಬ್ಸಿಡಿ ಹಣ ಸಿಗುತ್ತದೆ
ಈ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಗಳು
ಉಚಿತ ಗ್ಯಾಸ್ ಸಿಲೆಂಡರ್:- ಗ್ಯಾಸ್ ಸಂಪರ್ಕದ ಜೊತೆಗೆ ನೀಡಲಾಗುವ ಮೊದಲ ಸಿಲೆಂಡರ್ 14.2 kg ಉಚಿತವಾಗಿ ನೀಡಲಾಗುತ್ತದೆ. ಪ್ರಥಮ ಬಾರಿ ಯಾವುದೇ ಹಣ ಕಟ್ಟುವ ಅವಶ್ಯಕತೆ ಇರುವುದಿಲ್ಲ ಉಚಿತವಾಗಿ ಸಿಗಿತ್ತದೆ.
ಉಚಿತ ಗ್ಯಾಸ್ ಕಿಟ್:- ಫಲಾನುಭವಿಗಳು ಯಾವುದೇ ಶುಲ್ಕವನ್ನು ಕಟ್ಟದೆ ಸುರಕ್ಷಿತ ಗ್ಯಾಸ್ ಪೈಪ್ ಒಲೆ ಮತ್ತು ರೇಗುಲೇಟರ್ ಸಿಗುತ್ತವೆ
ಉಚಿತ ಗ್ಯಾಸ್ ಒಲೆ:- ಯೋಜನೆ ಅಡಿ ಮೊದಲಬಾರಿ ಗ್ಯಾಸ್ ಪಡೆಯುವಾಗ ಒಂದು ಉತ್ತಮ ಗುಣಮಟ್ಟದ ಗ್ಯಾಸ್ ಒಲೆಯನ್ನು ಉಚಿತವಾಗಿ ನೀಡಲಾಗುತ್ತದೆ
ಸಬ್ಸಿಡಿ ಹಣ:- ಪ್ರತಿ ಬಾರಿ ನೀವು ಸಿಲಿಂಡರ್ ರಿಫೀಲ್ ಮಾಡಿಸಿದಾಗ ಸರ್ಕಾರವು ಸಬ್ಸಿಡಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ
ಉಪಯೋಗ:-
1.ಕಟ್ಟಿಗೆ ಒಲೆಯಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡಲು ತುಂಬ ಸಮಯ ಬೇಕಾಗುತ್ತದೆ ಆದರೆ ಗ್ಯಾಸ್ ಒಲೆ ಯಲ್ಲಿ ಕೆಲವೇ ನಿಮಿಷಗಳಲ್ಲಿ ಅಡುಗೆ ಸಿದ್ದವಾಗುತ್ತದೆ.
2.ಮಹಿಳೆಯರು ಕಟ್ಟಿಗೆಗಾಗಿ ಯಾವುದೇ ಕಾಡು ಮೇಡು ಅಲೆಯುವ ಅವಶ್ಯಕತೆ ಇಲ್ಲ. ಬೇಕಾದ ಅಡುಗೆಯನ್ನು ಕಡಿಮೆ ಸಮಯದಲ್ಲೇ ಮಾಡಿಕೊಳ್ಳಬಹುದು. ಇದರಿಂದ ಸಮಯದ ಉಳಿತಾಯವಾಗುತ್ತದೆ
3.ಕಟ್ಟಿಗೆ ಒಲೆಯಿಂದ ಬರುತ್ತಿದ್ದ ಹೊಗೆಯು ಕಣ್ಣು ಮೂಗು ಮತ್ತು ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರುತಿತ್ತು ಆದ್ರೆ ಈಗ ಅಂತಹ ಸಮಸ್ಯೆಗಳು ಆಗುವುದಿಲ್ಲ
4.ಸಾಮಾನ್ಯ ವರ್ಗದ ಜನರಿಗೆ ಆರ್ಥಿಕ ಹೊರೆ ಕಡಿಮೆ ಆಗುತ್ತದೆ ಹೊಸ ಗ್ಯಾಸ್ ಖರೀದಿಸಲು ಸುಮಾರು 3,000 ದಿಂದ 4,000 ರೂಪಾಯಿಗಳಷ್ಟು ಹಣ ಬೇಕಾಗುತ್ತದೆ ಈ ಯೋಜನೆಯಿಂದಾಗಿ ಸಾಧ್ಯವಾಗುತ್ತದೆ
5.ಮನೆಯ ಮಹಿಳೆಯರ ಹೆಸರಿನಲ್ಲಿ ಗ್ಯಾಸ್ ಕೊಡುವುದರಿಂದ ಅವರಿಗೆ ಕುಟುಂಬದಲ್ಲಿ ಒಂದು ರೀತಿಯ ಆರ್ಥಿಕ ಗೌರವ ಸಿಗುತ್ತದೆ.
5.ಸೌದೆಗಾಗಿ ಮರಗಳನ್ನು ಕಡಿಯುವುದು ಸುತ್ತಮುತ್ತಲಿನ ಪರಿಸರವನ್ನು ನಾಶ ಮಾಡುವುದು ತಪ್ಪುತ್ತದೆ ಇದರಿಂದಾಗಿ ನಮ್ಮ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬಹುದಾಗಿದೆ
6.ಅಡುಗೆ ಮನೆಯ ಹೊಗೆಯಿಂದ ಮಕ್ಕಳಿಗೆ ಬರುವ ಉಸಿರಾಟದ ತೊಂದರೆಗಳನ್ನು ತಡೆಗಟ್ಟುವುದು
ಅನಾನುಕೂಲಗಳು:-
- ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಲ್‌ಪಿಜಿ ಬೆಲೆ ಏರುತ್ತಿರುವುದು ಬಡ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ.
- ಸರ್ಕಾರ ಸಬ್ಸಿಡಿ ನೀಡಿದರು ಸಹ ಉಳಿಯದ ಉಳಿದ ಹಣವನ್ನು ಬರಿಸಲು ಅನೇಕ ಬಡ ಕುಟುಂಬಗಳಿಗೆ ತುಂಬಾ ಕಷ್ಟವಾಗಿದೆ
- ಮೊದಲು ಉಚಿತವಾಗಿ ಸಿಗುತ್ತದೆ ಸಿಲಿಂಡರ್ ಕಾಲಿಯಾದ ನಂತರ ಹಣದ ಕೊರತೆಯಿಂದಾಗಿ ಅನೇಕ ಕುಟುಂಬಗಳುಎರಡನೇ ಬಾರಿ ಸಿಲಿಂಡರ್ ಖರೀದಿ ಖರೀದಿಸುತ್ತಿಲ್ಲ ಅವರು ಮತ್ತೆ ಹಳೆಯ ಸೌದೆ ಒಲೆಗಳನ್ನು ಬಳಸಿ ಅಡುಗೆ ಮಾಡುತ್ತಿದ್ದಾರೆ
- ಕೆಲವೊಂದು ಸಾರಿ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಅಥವಾ ಬ್ಯಾಂಕ್ ಲಿಂಕ್ ಸಮಸ್ಯೆಯಿಂದಾಗಿ ಬಡವರಿಗೆ ತಲುಪುವುದಿಲ್ಲ
- ಕೆಲವೊಂದು ಹಳ್ಳಿಗಳಲ್ಲಿ ಗ್ಯಾಸ್ ಏಜೆನ್ಸಿಗಳು ಇಲ್ಲದಿರುವುದು ಅಥವಾ ಸಿಲಿಂಡರ್ ಮನೆಗೆ ತಲುಪಿಸಲು ಹೆಚ್ಚಿನ ಸಾರಿಗೆ ವೆಚ್ಚ ಕೇಳುವುದು ಜನರಿಗೆ ತುಂಬಾ ಸಮಸ್ಯೆ ಉಂಟುಮಾಡುತ್ತದೆ
- ಹಳ್ಳಿ ಭಾಗದ ಮಹಿಳೆಯರಿಗೆ ಗ್ಯಾಸನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವ ಕಾರಣ ಕೆಲವು ಕಡೆ ಅನಾಹುತಗಳು ಸಂಭವಿಸುವ ಭಯ ಇರುತ್ತದೆ
- ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳಲ್ಲಿ ಮಾಡುವ ಪ್ರಕ್ರಿಯೆ ಗ್ರಾಮೀಣ ಭಾಗದ ಜನರಿಗೆ ಗೊಂದಲವಾಗುತ್ತದೆ
ಅಗತ್ಯ ದಾಖಲೆಗಳು:-
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋ
- ಜಾಸ್ತಿ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ನಿವಾಸ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:-
ಆನ್ ಲೈನ್ ಮೂಲಕ ನೋಡೋಣ
P M ಉಜ್ವಲ ಯೋಜನೆ ಅಧಿಕೃತದ ಸ್ಟೇಟ್ https://www.pmuy.gov.in/index.aspx ಗೆ ಭೇಟಿ ನೀಡಿ
ನಿಮಗೆ ಹತ್ತಿರದ ಗ್ಯಾಸ್ ಕಂಪನಿ ಗೆ ಭೇಟಿ ನೀಡಿ
ಆನ್ಲೈನ್ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
ಹತ್ತಿರದ ಎಲ್ ಪಿ ಜಿ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ
ಅರ್ಜಿ ನಮೂನೆಯನ್ನು ಪಡೆದು ಸಂಪೂರ್ಣವಾಗಿ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಬೇಕು
ಏಜೆನ್ಸಿ ದೃಢೀಕರಣ ಪಡೆದುಕೊಳ್ಳಬೇಕು
ತೀರ್ಮಾನ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನಮ್ಮ ಹಳ್ಳಿಯ ಅನೇಕ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ದೊರೆಯುತ್ತಿದೆ ದೊರೆತಿದೆ ಹೊಗೆ ಮುಕ್ತ ಅಡುಗೆ ಮನೆಗಾಗಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ ಪ್ರತಿ ಸಿಲಿಂಡರ್ ಗೆ 300 ಸಬ್ಸಿಡಿ ಸಹ ಸಿಗುತ್ತದೆ ಇದರಿಂದ ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಒಂದು ಮಹತ್ವದ ಯೋಜನೆಯಾಗಿದೆ.








