ಗಮನಿಸಿ! ಶಿವಮೊಗ್ಗ-ಬೆಂಗಳೂರು ರೈಲು ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ.!

January 7, 2026 8:37 AM

Shimoga to Bangalore train timings : ನೈರುತ್ಯ ರೈಲ್ವೆ ವಲಯವು ಜನವರಿ ಒಂದರಿಂದ ಜಾರಿಗೆ ಬರುವ ಹಾಗೆ ರೈಲು ವೇಳಾಪಟ್ಟಿಯ ಪರಿಷ್ಕರಣಿಯನ್ನು ಇದೀಗ ಘೋಷಣೆ ಮಾಡಿದೆ ಶಿವಮೊಗ್ಗ ಮತ್ತು ಬೆಂಗಳೂರಿನ ಮಧ್ಯೆ ಸಂಚರಿಸುವ ಹಲವಾರು ರೈಲುಗಳ ಬೇಡಪಟ್ಟಿಯನ್ನು ಈ ಕೆಳಗೆ ನೀಡಲಾಗಿದ್ದು ಸಂಚಾರ ಮಾಡುವ ವ್ಯಕ್ತಿಗಳು ಈ ಎಲ್ಲಾ ವೇಳಾಪಟ್ಟಿಯನ್ನು ತಿಳಿದುಕೊಂಡು ಸೂಕ್ತ ಸಮಯಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪಲು ಈ ವೇಳಾಪಟ್ಟಿ ಸಹಾಯವಾಗಲಿದೆ.

ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12090):

ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಜನ ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರತಿದಿನ ಈ ರೈಲು ವಾರದ ಎಲ್ಲಾ ದಿನಗಳು ಬೆಳಿಗ್ಗೆ 5:15ಕ್ಕೆ ಶಿವಮೊಗ್ಗದಿಂದ ತೆರಳಿ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣವನ್ನ ಬೆಳಿಗ್ಗೆ 9:50 ಗಂಟೆಗೆ ತಲುಪಲಿದೆ, ರೈಲು ಈ ಮಾರ್ಗದಲ್ಲಿ ತೆರಳಲಿದೆ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು ತುಮಕೂರು, ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ತಾಳಗುಪ್ಪ – ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 20652):

ತಾಳಗುಪ್ಪ ಬೆಂಗಳೂರು ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲು ಪ್ರತಿದಿನ ತಾಳಗುಪ್ಪದಿಂದ ಬೆಳಿಗ್ಗೆ 5.20 ಗಂಟೆಗೆ ಹೊರಡುತ್ತದೆ, ಇದು ಸಾಗರದಿಂದ 5:37 ಕ್ಕೆ ಮತ್ತು ಶಿವಮೊಗ್ಗದಿಂದ 7.10ಕ್ಕೆ ಪ್ರಯಾಣಿಕರನ್ನ ಹೊತ್ತುಯುತ್ತದೆ ಭದ್ರಾವತಿಯಿಂದ 7.30ಕ್ಕೆ ಹೊರಟು ಇದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರನ್ನು ತಲುಪುತ್ತದೆ.

ಶಿವಮೊಗ್ಗ – ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16580):

ಶಿವಮೊಗ್ಗ ಯಶವಂತಪುರ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲು ಪ್ರತಿದಿನ ಮಧ್ಯಾಹ್ನ 3 .45 ಗಂಟೆಗೆ ಶಿವಮೊಗ್ಗದಿಂದ ಹೊರಡುವ ಈ ರೈಲು ಭದ್ರಾವತಿಯನ್ನು 4.10ಕ್ಕೆ ಸ್ಪರ್ಶಿಸಿ ರಾತ್ರಿ 8.35 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ.

ಶಿವಮೊಗ್ಗ – ಬೆಂಗಳೂರು – ಎಂ.ಜಿ.ಆರ್. ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12692):

ಶಿವಮೊಗ್ಗದಿಂದ ಬೆಂಗಳೂರು ಎಂ ಜಿ ಆರ್ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ವಾರಕ್ಕೊಮ್ಮೆ ಮಾತ್ರ ಶನಿವಾರದಂದು ಲಭ್ಯವಿರುತ್ತದೆ, ಇದು ಶನಿವಾರ ಸಂಜೆ 5:40 ಗಂಟೆಗೆ ಶಿವಮೊಗ್ಗದಿಂದ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರಿನ ತಲುಪುತ್ತದೆ ನಂತರ ಇದು ಮುಂದುವರಿದು ಭಾನುವಾರ ಬೆಳಗ್ಗೆ 4:55 ಗಂಟೆಗೆ ಚೆನ್ನೈ ತಲುಪುತ್ತದೆ

ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16228):

ತಾಳಗುಪ್ಪ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ರೈಲು ಪ್ರತಿದಿನ ರಾತ್ರಿ 8:55 ಗಂಟೆಗೆ ತಾಳಗುಪ್ಪದಿಂದ ಹೊರಡುವ ರೈಲು ರಾತ್ರಿ 11 ಗಂಟೆಗೆ ಶಿವಮೊಗ್ಗದಿಂದ ಪ್ರಯಾಣಿಕರನ್ನ ಸ್ವೀಕರಿಸುತ್ತದೆ ಇದು ಬೆಳಗ್ಗೆ 4. 50 ಗಂಟೆಗೆ ಬೆಂಗಳೂರು ಮತ್ತು ಬೆಳಗ್ಗೆ 8:20 ಗಂಟೆಗೆ ಮೈಸೂರು ತಲುಪುತ್ತದೆ.

ಶಿವಮೊಗ್ಗ – ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16582):

ಶಿವಮೊಗ್ಗ ಯಶವಂತಪುರ ಎಕ್ಸ್ಪ್ರೆಸ್ ರೈಲು ಭಾನುವಾರ ಮಂಗಳವಾರ ಮತ್ತು ಗುರುವಾರ ಮಾತ್ರ ಲಭ್ಯವಿರುತ್ತದೆ ಇದು ಶಿವಮೊಗ್ಗದಿಂದ ರಾತ್ರಿ 11:55 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 4:45 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ.

ವಿಶೇಷ ಸೂಚನೆ :- ಈ ಎಲ್ಲಾ ಬದಲಾವಣೆಗಳು ಜನವರಿ 1, 2026 ರಿಂದ ಜಾರಿಗೆ ಬರುವ ನೈರುತ್ಯ ರೈಲ್ವೆಯ ಹೊಸ ವೇಳಾಪಟ್ಟಿಯ ಭಾಗವಾಗಿದೆ ಪ್ರಯಾಣಿಕರು ತಮ್ಮ ಪ್ರಯಾಣದ ಆಯೋಜನೆ ಮಾಡುವ ಮುನ್ನ ಅಧಿಕೃತ ರೈಲ್ವೆ ಸೂಚನೆಗಳನ್ನು ಪರಿಶೀಲಿಸಿ ಪ್ರಯಾಣವನ್ನು ಕೈಗೊಳ್ಳಬಹುದು

ಇಂದನ್ನು ಓದಿರಿ :- ವಸತಿ ಯೋಜನೆಗಳಿದ್ದರೂ ಮನೆಯಿಲ್ಲದ ದುಃಸ್ಥಿತಿ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment