
ನಮಸ್ಕಾರ ಸ್ನೇಹಿತರೆ, ಉದ್ಯೋಗ ಮಾಹಿತಿಗಾಗಿ ಕಾತುರದಿಂದ ಕಾಯುತ್ತಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ! ಸಶಸ್ತ್ರ ಸೀಮಾ ಬಲ್ ನೇಮಕಾತಿಯು 2026 ರಲ್ಲಿ ಒಟ್ಟು 827 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
SSB Recruitment in kannada
SSLC, ಡಿಪ್ಲೋಮಾ ಹಾಗೂ ITI ನಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಸಶಸ್ತ್ರ ಸೀಮಾ ಬಲ್ (SSB) ಸಂಸ್ಥೆಯ ಕೊನ್ಸ್ಟೇಬಲ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ದೇಶ ಸೇವೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಕೊನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು 21-03-2026 ರಿಂದ ಅವಕಾಶ ಕಲ್ಪಿಸಲಾಗಿದೆ ಹಾಗೂ ಅರ್ಜಿ ಸಲ್ಲಿಸಲು 20-04-2026 ಕೊನೆಯ ದಿನಾಂಕವಾಗಿದೆ. ನೀವೇನಾದರೂ ಅಖಿಲ ಭಾರತದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿದ್ದೀರಾ? ಹಾಗಿದ್ದರೆ ನಿಮಗಿದು ಉತ್ತಮ ಅವಕಾಶ.

ಪ್ರಸ್ತುತ ಲೇಖನದಲ್ಲಿ ಹುದ್ದೆಗೆ ಸಂಬಂಧಿಸಿದ ಶೆಕ್ಷಣಿಕ ಅರ್ಹತೆ, ವಯೋಮಿತಿ ವಿವರ, ವೇತನ ಶ್ರೇಣಿ, ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿಯನ್ನು ನೀಡಲಾಗಿದ್ದು, ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಎಲ್ಲಾ ಮಾಹಿತಿಗಳು ಹೆಲ್ಪ್ ಆಗಬಹುದು. ಹಾಗೆಯೆ ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದಿದ್ದರೆ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ.
ಹುದ್ದೆಯ ಕಿರು ವಿಮರ್ಶೆ:
| ನೇಮಕಾತಿ ಸಂಸ್ಥೆ | ಸಶಸ್ತ್ರ ಸೀಮಾ ಬಲ್ (SSB) |
| ಹುದ್ದೆಯ ಹೆಸರು | ಕಾನ್ಸ್ಟೇಬಲ್ ಹುದ್ದೆ |
| ಹುದ್ದೆಗಳ ಸಂಖ್ಯೆ | ಒಟ್ಟು 827 ಹುದ್ದೆಗಳು |
| ಉದ್ಯೋಗ ಸ್ಥಳ | ಅಖಿಲ ಭಾರತ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
| ಅಧಿಕೃತ ವೆಬ್ಸೈಟ್ ಲಿಂಕ್ | ssb.gov.in/ |
ಹುದ್ದೆಯ ಕಿರು ಪರಿಚಯ:
ಸಶಸ್ತ್ರ ಸೀಮಾ ಬಲ್ (SSB) ಸಂಸ್ಥೆಯು 2026 ರಲ್ಲಿ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 827 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. SSLC, ITI ಹಾಗೂ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವ 18 ವರ್ಷದಿಂದ 27 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುದ್ದೆಯ ಸಂಕ್ಷಿಪ್ತ ವಿವರ:
ಸಶಸ್ತ್ರ ಸೀಮಾ ಬಲ್ ಸಂಸ್ಥೆ (SSB) ಯು ವಿವಿಧ ಟ್ರೇಡ್ ಗಳ ಅಡಿಯಲ್ಲಿ 827 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದೆ. ಅವುಗಳ ವಿವರ ಈ ಕೆಳಗಿನಂತಿದೆ.
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಕಾನ್ಸ್ಟೇಬಲ್ (ನರ್ಸಿಂಗ್ ಆರ್ಡರ್ಲಿ) | 1 ಹುದ್ದೆ |
| ಕಾನ್ಸ್ಟೇಬಲ್ (ವೇಟರ್) | 3 ಹುದ್ದೆಗಳು |
| ಕಾನ್ಸ್ಟೇಬಲ್ (ವಾಟರ್ ಕ್ಯಾರಿಯರ್) | 5 ಹುದ್ದೆಗಳು |
| ಕಾನ್ಸ್ಟೇಬಲ್ (ಕಾರ್ಪೆನ್ಟರ್ ) | 7 ಹುದ್ದೆಗಳು |
| ಕಾನ್ಸ್ಟೇಬಲ್ (ಕೋಬ್ಲರ್) | 25 ಹುದ್ದೆಗಳು |
| ಕಾನ್ಸ್ಟೇಬಲ್ (ವೆಟರ್ನರಿ) | 34 ಹುದ್ದೆಗಳು |
| ಕಾನ್ಸ್ಟೇಬಲ್ (ಬಾರ್ಬರ್) | 43 ಹುದ್ದೆಗಳು |
| ಕಾನ್ಸ್ಟೇಬಲ್ (ಗಾರ್ಡನರ್) | 41 ಹುದ್ದೆಗಳು |
| ಕಾನ್ಸ್ಟೇಬಲ್ (ಟೈಲರ್) | 41 ಹುದ್ದೆಗಳು |
| ಕಾನ್ಸ್ಟೇಬಲ್ (ವಾಷರ್ ಮನ್) | 74 ಹುದ್ದೆಗಳು |
| ಕಾನ್ಸ್ಟೇಬಲ್ (ಡ್ರೇವರ್) | 553 ಹುದ್ದೆಗಳು |
| ಮುಖ್ಯ ಮಾಹಿತಿ: 827 ಕಾನ್ಸ್ಟೇಬಲ್ ಹುದ್ದೆಗಳಲ್ಲಿ ಶೇಕಡಾ 10% ಹುದ್ದೆಯನ್ನು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.” |
ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಗಳು:
- ಕಾನ್ಸ್ಟೇಬಲ್ (ವೆಟರ್ನರಿ) ಹುದ್ದೆಗೆ:
- ಕಾನ್ಸ್ಟೇಬಲ್ ವೆಟರ್ನರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳು ಮಾನ್ಯತೆ ಪಡೆದ ಪಶು ಆಸ್ಪತ್ರೆಯಲ್ಲಿ ಪ್ರಾಣಿಗಳ ಚಿಕಿತ್ಸೆಯಲ್ಲಿ ಒಂದು ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
- ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗೆ:
- ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳು ಕಡ್ಡಾಯವಾಗಿ ವಾಹನ ಚಾಲನಾ ಪರಬಾನಾಗಿಯನ್ನು ಹೊಂದಿರಬೇಕು.
- ಕಾನ್ಸ್ಟೇಬಲ್ (ನರ್ಸಿಂಗ್ ಆರ್ಡರ್ಲಿ) ಹುದ್ದೆಗೆ:
- ಕಾನ್ಸ್ಟೇಬಲ್ ನರ್ಸಿಂಗ್ ಆರ್ಡರ್ಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಮಂಡಳಿಯಲ್ಲಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳು ಸೆಂಟ್ ಜಾನ್ಸ್ ಆಂಬುಲೆನ್ಸ್ ಸಂಸ್ಥೆಯಲ್ಲಿ ಅಥವಾ ರೆಡ್ ಕ್ರಾಸ್ ಸೊಸೈಟಿ ಅಲ್ಲಿ ಪ್ರಥಮ ಚಿಕಿತ್ಸೆ ಪ್ರಮಾಣಪತ್ರ ಹೊಂದಿರಬೇಕು.
- ಕನಿಷ್ಠ 50 ಹಾಸಿಗೆಗಳನ್ನು ಒಳಗೊಂಡ ಆಸ್ಪತ್ರೆಯಲ್ಲಿ 1 ವರ್ಷಗಳ ಕಾಲ ಕೆಲಸದ ಅನುಭವವನ್ನು ಹೊಂದಿರಬೇಕು.
- ಕಾನ್ಸ್ಟೇಬಲ್ (ಕೋಬ್ಲರ್, ಟೈಲರ್, ವಾಷರ್ ಮನ್, ಗಾರ್ಡನರ್, ಬಾರ್ಬರ್, ವೇಟರ್, ಕಾರ್ಪೆನ್ಟರ್, ವಾಟರ್ ಕ್ಯಾರಿಯರ್) ಹುದ್ದೆಗಳಿಗೆ:
- ಈ ಮೇಲೆ ನೀಡಲಾದ ವಿವಿಧ ಟ್ರೇಡ್ ಗಳಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಈ ಕೆಳಗೆ ನೀಡಲಾದವುಗಳಲ್ಲಿ ಯಾವುದಾದರು ಒಂದು ವಿಭಾಗದಲ್ಲಿ ಅರ್ಹತೆಯನ್ನು ಹೊಂದಿರಬೇಕು.
- ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು ಜೊತೆಗೆ ಒಂದು ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
- ಸಂಬಂಧಿತ ಟ್ರೇಡ್ ಗಳಲ್ಲಿ 2 ವರ್ಷದ ಐಟಿಐ ಡಿಪ್ಲೋಮಾವನ್ನು ಪೂರ್ಣಗೊಳಿಸಿರಬೇಕು.
- ಸಂಬಂಧಿತ ಟ್ರೇಡ್ ಗಳಲ್ಲಿ 2 ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
ವಯೋಮಿತಿ ವಿವರ:
ಸಶಸ್ತ್ರ ಸೀಮಾ ಬಲ್ (SSB) ಸಂಸ್ಥೆಯು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ವಿವಿಧ ಟ್ರೇಡ್ ಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
- ಕಾನ್ಸ್ಟೇಬಲ್ (ಕಾರ್ಪೆನ್ಟರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಕಾನ್ಸ್ಟೇಬಲ್ (ವೆಟರ್ನರಿ, ನರ್ಸಿಂಗ್ ಆರ್ಡರ್ಲಿ, ಡ್ರೈವರ್, ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 27 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಇತರೆ ಎಲ್ಲಾ ಟ್ರೇಡ್ ಗಲ್ಲಿ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 23 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
ಸರ್ಕಾರದ ನಿಯಮಗಳ ಪ್ರಕಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅವುಗಳ ವಿವರ ಈ ಕೆಳಕಂಡಂತಿದೆ.
- ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ: 3 ವರ್ಷ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 3 ವರ್ಷ
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ (SC / ST)ಅಭ್ಯರ್ಥಿಗಳಿಗೆ: 5 ವರ್ಷ
- ಕೇಂದ್ರ ಸರ್ಕಾರಿ ನೌಕರರಿಗೆ ವರ್ಗವರು 40 – 45 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ:
ಸಶಸ್ತ್ರ ಸೀಮಾ ಬಲ್ (SSB) ಸಂಸ್ಥೆಯ ವಿವಿಧ ಟ್ರೇಡ್ ಗಳ ಅಡಿಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗ (CPC) ಲೆವೆಲ್ 3 ರ ಅಡಿಯಲ್ಲಿ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.
- ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ₹21,700 ದಿಂದ ₹69,100 ವರೆಗೆ ವೇತನವನ್ನು ನೀಡಲಾಗುತ್ತದೆ.
- ಸಶಸ್ತ್ರ ಸೀಮಾ ಬಲ್ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಅತ್ಯಾಕರ್ಷಕ ವೇತನದೊಂದಿಗೆ ತುಟ್ಟಿ ಭತ್ಯೆ, ಮನೆ ಬಾಡಿಗೆಯ ಭತ್ಯೆ, ರೇಷನ್ ಮನಿ ಭತ್ಯೆ ಸೇರಿದಂತೆ ಇನ್ನಿತರ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ:
ಸಶಸ್ತ್ರ ಸೀಮಾ ಬಲ್ (SSB) ಸಂಸ್ಥೆಯ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವರ್ಗಗಳಿಗೆ ಸಂಬಂಧಿಸಿದಂತೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ಸಾಮಾನ್ಯ, ಇತರೆ ಹಿಂದುಳಿದ ವರ್ಗ ಹಾಗೂ ಇ.ಡಬ್ಲ್ಯೂ.ಎಸ್ ಅಭ್ಯರ್ಥಿಗಳಿಗೆ: ₹1,00/-
ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- SSLC ಪ್ರಮಾಣಪತ್ರ
- ಐಟಿಐ ಪ್ರಮಾಣಪತ್ರ
- ಡಿಪ್ಲೋಮಾ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಅಭ್ಯರ್ಥಿಗಳ ಪಾಸ್ಪೋರ್ಟ್ ಅಳತೆಯ ಫೋಟೋ
- ಅಭ್ಯರ್ಥಿಗಳ ಸಹಿ
- ಜಾತಿ ಪ್ರಮಾಣಪತ್ರ (ಮೀಸಲಾತಿಗಾಗಿ)
- ಅನುಭವ ಪ್ರಮಾಣಪತ್ರ
- ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಶಸ್ತ್ರ ಸೀಮಾ ಬಲ್ ಅಧಿಕೃತ ವೆಬ್ಸೈಟ್ https://ssb.gov.in/ ಗೆ ಭೇಟಿ ನೀಡಿ.
- SSB ಕಾನ್ಸ್ಟೇಬಲ್ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ.
- ಅಭ್ಯರ್ಥಿಗಳ ಸಹಿ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಅನುಭವ ಪ್ರಮಾಣಪತ್ರ ಹಾಗೂ ಅಗತ್ಯ ಶೈಕ್ಷಣಿಕ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನಂತರ ನಿಮ್ಮ ವರ್ಗಗಳಿಗೆ ಸಂಬಂಧಿಸಿದ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಪೇಮೆಂಟ್ ರಿಸಿಪ್ಟ್ ಹಾಗೂ ಅಪ್ಲಿಕೇಶನ್ ಫಾರ್ಮ್ ನ ಪ್ರಿಂಟ್ ತಗೆದುಕೊಳ್ಳಿ.
ಆಯ್ಕೆ ವಿಧಾನ :
- ದೈಹಿಕ ಪರೀಕ್ಷೆ:
ಮೊದಲು ಅಭ್ಯರ್ಥಿಗಳ ದೈಹಿಕ ದಕ್ಷತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಪುರುಷ ಅಭ್ಯರ್ಥಿಗಳು 24 ನಿಮಿಷಗಳ ಒಳಗೆ 4.8 ಕಿ.ಮೀ ಓಟವನ್ನು ಹಾಗೂ ಮಹಿಳಾ ಅಭ್ಯರ್ಥಿಗಳು 18 ನಿಮಿಷಗಳಲ್ಲಿ 2.4 ಕಿ.ಮೀ ಓಟದ ಗುರಿಯನ್ನು ಪೂರ್ಣಗೊಳಿಸಿರಬೇಕು.
ನಂತರ ದೈಹಿಕ ಗುಣಮಟ್ಟದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ. ಮೀ ಎತ್ತರ ಹಾಗೂ ಕನಿಷ್ಠ 80 ಸೆಂ. ಮೀ ಎದೆಯ ಸುತ್ತಳತೆಯನ್ನು ಹೊಂದಿರಬೇಕು. ಹಾಗೂ ಮಹಿಳೆಯರು ಕನಿಷ್ಠ 157 ಸೆಂ. ಮೀ ಎತ್ತರವನ್ನು ಹೊಂದಿರಬೇಕು.
- ಲಿಖಿತ ಪರೀಕ್ಷೆ:
ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ 100 ಅಂಕಗಳ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು ಸಾಮಾನ್ಯ ಇಂಗ್ಲಿಷ್, ಹಿಂದಿ, ಸಾಮಾನ್ಯ ಜ್ಞಾನ, ರೀಸನಿಂಗ್ ಹಾಗೂ ಗಣಿತ ವಿಷಯಗಳ ಕುರಿತು ಇರುತ್ತದೆ.
- ದಾಖಲಾತಿ ಪರಿಶೀಲನೆ ಹಾಗೂ ಕೌಶಲ್ಯ ಪರೀಕ್ಷೆ:
ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಶಾರ್ಟ್ ಲಿಸ್ಟ್ ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಯನ್ನು ಪರಿಶೀಲನೆ ನಡೆಸಲಾಗುತ್ತದೆ ಹಾಗೂ ಸಂಬಂಧಿತ ಟ್ರೇಡ್ ಗಳಲ್ಲಿ ಅವರ ಕೌಶಲ್ಯವನ್ನು ಪರೀಕ್ಷೆ ಮಾಡಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ:
ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ಸಂಪೂರ್ಣ ದೇಹವನ್ನು ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 21-03-2026 |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-04-2026 |
ಅರ್ಜಿಸಲ್ಲಿಸಲು ಪ್ರಮುಖ ಲಿಂಕುಗಳು:
| ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ಮಾತು:
ಸಶಸ್ತ್ರ ಸೀಮಾ ಬಲ್ (SSB) 2026 ರ ನೇಮಕಾತಿಯಲ್ಲಿ ಒಟ್ಟು 827 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅಖಿಲ ಭಾರತದಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವುವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ನಿಗದಿಪಡಿಸಿದ ಕೊನೆಯ ದಿನಾಂಕ 20-04-2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದು ಆಸೆ ಕನಸ್ಸನ್ನು ಹೊತ್ತಿರುವ ನಿಮ್ಮ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಒಟ್ಟು 827 ಹುದ್ದೆಗಳು ಖಾಲಿ ಇದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-04-2026
ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ.
ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹21,700 ದಿಂದ ₹69,100 ವೇತನ ಸಿಗುತ್ತದೆ.
ಇತರೆ ಪ್ರಮುಖ ಲಿಂಕ್ ಗಳು:
- CSB: ರೂ. 1,77,500/- ವೇತನ, ವಿಜ್ಞಾನಿ ಹುದ್ದೆಗಳ ಭರ್ಜರಿ ನೇಮಕಾತಿ! ಈಗಲೇ ಅಪ್ಲೈ ಮಾಡಿ
- DRDO: ರೂ. ₹78,800 ವೇತನ, ಭರ್ಜರಿ ನೇಮಕಾತಿ 2026! ಯಾವುದೇ ಅರ್ಜಿ ಶುಲ್ಕವಿಲ್ಲದೆ ಸರ್ಕಾರಿ ಉದ್ಯೋಗಾವಕಾಶ!
- Budget karnataka 2026: ₹4.48 ಲಕ್ಷ ಕೋಟಿ ಬಜೆಟ್: ಸಿ.ಎಮ್ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ ಪ್ರಮುಖ ಯೋಜನೆಗಳು ಏನು?
- Swachh Bharat Mission: ಉಚಿತ ಶೌಚಾಲಯ ನಿರ್ಮಾಣಕ್ಕೆ ₹20,000/-ಸಹಾಯಧನ! ಸಂಪೂರ್ಣ ಮಾಹಿತಿ ಇಲ್ಲಿದೆ










