
ಪ್ರಿಯ ವಿದ್ಯಾರ್ಥಿಗಳೇ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ವರ್ಷನೀಡುತ್ತಿರುವ ಪ್ರೋತ್ಸಾಹ ಧನಕ್ಕೆ (Scholarship) ಗೆ ಅರ್ಜಿ ಸಲ್ಲಿಸುವ ಅವಕಾಶ ನಮ್ಮ ಕೈಮೀರಿ ಹೋಯಿತು ಎಂದು ಚಿಂತಿಸುವುದನ್ನು ಬಿಡಿ! ಯಾಕೆ ಗೊತ್ತ ? ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಈ ಸ್ಕಾಲರ್ಶಿಪ್ ಗೆ ಸರ್ಕಾರ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ. ಅರ್ಹ ವಿದ್ಯಾರ್ಥಿಗಳಿಗೆ ಈ ಸೌಲಭ್ಯದ ಲಾಭ ಪಡೆದುಕೊಳ್ಳಲು ಇಲಾಖೆ ತಿಳಿಸಿದೆ.
SSP Scholarship In Kannada Information
ಈ ವಿದ್ಯಾರ್ಥಿ ವೇತನ 20206ನೇ ಸಾಲಿನಲ್ಲಿ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದೆ ಇರುವ ವಿಚಾರವನ್ನು ಅರಿತು ಸರ್ಕಾರ ಪ್ರಸ್ತುತ ಸಾಲಿನ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು “28/02/2026 ವರೆಗೆ ವಿಸ್ತರಿಸಿದೆ” ಹಲವು ಕಾರಣಗಳಿಂದ ಈ “ಸ್ಕಾಲಸರ್ಕಾರ ರ್ಶಿಪ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ ವಿದ್ಯಾರ್ಥಿಗಳಿಗೆ ಮತ್ತೊಂದು ಗೋಲ್ಡನ್ ಚಾನ್ಸ್ ಕೊಟ್ಟಿದೆ.
ಸರ್ಕಾರವು ಇಲ್ಲಿ 10ನೇ ತರಗತಿ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅಂದರೆ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನ ಸಮಾಜ ಕಲ್ಯಾಣ ಇಲಾಖೆ ಅಡಿಯಿಂದ ಕೊಡಲಾಗುತ್ತದೆ.
ನನಪಿರಲಿ:- ಸರ್ಕಾರವು ಮತ್ತೆ ಈ ದಿನಾಂಕವನ್ನ ಮತ್ತೆ ವಿಸ್ತರಣೆ ಮಾಡುತ್ತದೆ ಎನ್ನುವ ನಿರೀಕ್ಷೆ ವಿದ್ಯಾರ್ಥಿಗಳಿಗೆ ಬೇಡ. ಕೆಳಗೆ ಕೊಡಲಾದ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸಿ ಇಂದೇ ಅರ್ಜಿ ಸಲ್ಲಿಸಿ ಅಥವಾ ಸರ್ಕಾರ ಈ ಪ್ರೋತ್ಸಾಹ ಧನಕ್ಕೆ ನೀಡಿರುವ ಅಂತಿಮ ಗಡುವಿನ ಒಳಗೆ ಅರ್ಜಿಯನ್ನು ಸಲ್ಲಿಸಿ.

ಸ್ಕಾಲರ್ಶಿಪ್ ನ ಹೈಲೆಟ್ಸ್:-
| ವಿದ್ಯಾರ್ಥಿ ವೇತನದ ಹೆಸರು | ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ(SSP Scholarship) |
| ಸ್ಕಾಲರ್ಶಿಪ್ ನ ಮೊತ್ತ | ₹3000 ದಿಂದ ₹35000 |
| ಫಲಾನುಭವಿಗಳು | ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು |
| ರಾಜ್ಯ | ಕರ್ನಾಟಕ |
ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್(SSP Scholarship) ಮೊತ್ತ ಸಿಗುತ್ತದೆ ಗೊತ್ತಾ ?
ಸರ್ಕಾರದ ಈ ಸ್ಕಾಲರ್ಶಿಪ್ ಹಣವು ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರದಿಂದ ಸ್ಕಾಲರ್ಶಿಪ್(SSP Scholarship) ಹಣವು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಯಾವುದೇ ವಿದ್ಯಾರ್ಥಿಗಳಿಗೂ ಭೇದಭಾವ ಇರುವುದಿಲ್ಲ ನೀವು ಪಡೆದಂತಹ ಅಂಕದ ಮೇಲೆ ಈ ವಿದ್ಯಾರ್ಥಿವೇತನವು ನಿರ್ಧಾರವಾಗಿರುತ್ತದೆ.
SSLC ವಿದ್ಯಾರ್ಥಿಗಳು
ಅರ್ಹತೆ :-
- ವಿದ್ಯಾರ್ಥಿಯು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
- ಕನಿಷ್ಠ 60% ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು
- ಕರ್ನಾಟಕದ ನಿವಾಸಿ ಆಗಿರಬೇಕು
- ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆದಿರಬೇಕು (ಪಿಯುಸಿ ಡಿಪ್ಲೋಮೋ ಐಟಿಐ )
- ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
ಪ್ರೋತ್ಸಾಹ ಧನ:-
- ಸಾಮಾನ್ಯವಾಗಿ 3000 ದಿಂದ ₹5,000ದವರೆಗೆ ಪಡೆಯಬಹುದು
- ಕೆಲವೊಂದು ವಿಶೇಷ ಯೋಜನೆಗಳಲ್ಲಿ ₹10,000 ವರೆಗೂ ವಿದ್ಯಾರ್ಥಿ ವೇತನ ಪಡೆಯಬಹುದು
- ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ
ಡಿಪ್ಲೋಮಾ ವಿದ್ಯಾರ್ಥಿಗಳು
ಅರ್ಹತೆ :-
- ಗೌರ್ಮೆಂಟ್ ಕಾಲೇಜಿನಲ್ಲಿ ಡಿಪ್ಲೋಮಾ ಪ್ರವೇಶ ಪಡೆದಿರಬೇಕು
- ನಿಯಮ ನಿಯಮಿತ ಕೋರ್ಸ್ ಗಳಲ್ಲಿ ಓದುತ್ತಿರಬೇಕು
- ಕುಟುಂಬದ ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿ ಒಡಗಿರಬೇಕು
- ಹಿಂದಿನ ತರಗತಿಯಲ್ಲಿ ಮುತ್ತಿಳ್ಳ ರಾಗಿರಬೇಕು
ಪ್ರೋತ್ಸಾಹ ಧನ:-
- 10,000 ದಿಂದ 20,000 ದವರೆಗೆ ಪ್ರತಿವರ್ಷ ವಿದ್ಯಾರ್ಥಿ ವೇತನ ಲಭಿಸುತ್ತದೆ
- ಅರ್ಜಿ ಶುಲ್ಕ ಕೆಲವೊಮ್ಮೆ ಸಂಪೂರ್ಣ ವಾಪಾಸ್ ಆಗುತ್ತದೆ
ಪದವಿ (Degree) ವಿದ್ಯಾರ್ಥಿಗಳು:-
ಅರ್ಹತೆ :-
- SSP Scholarship ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
- ಗೌರ್ಮೆಂಟ್ ಕಾಲೇಜಿನಲ್ಲಿ BA BSc BCom BBA BCA ಕೋರ್ಸಿನಲ್ಲಿ ಪ್ರವೇಶ ಪಡೆದಿರಬೇಕು
- ಕುಟುಂಬದ ಆದಾಯದ ಆದಾಯ ಸರ್ಕಾರ ಇರಬೇಕು
ಪ್ರೋತ್ಸಾಹ ಧನ:-
- ಪ್ರತಿ ವರ್ಷ ವಿದ್ಯಾರ್ಥಿಗಳಿಗೆ 20000 ರಿಂದ 25ವರೆಗೆ ಸ್ಕಾಲರ್ಶಿಪ್ ಸಿಗುತ್ತದೆ
- ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೆಚ್ಚುವರಿ
ಸ್ನಾತಕೋತ್ತರ ಪದವಿ (PG) ವಿದ್ಯಾರ್ಥಿಗಳು
ಅರ್ಹತೆ :-
- ವಿದ್ಯಾರ್ಥಿ ಪದವಿ ಕೋರ್ಸ್ ಗಳಲ್ಲಿ ಉತ್ತೀರ್ಣರಾಗಿರಬೇಕು
- MA, M.Sc. MBA MCA ಅಥವಾ ಇತರೆ ಪಿಜಿ ಕೋರ್ಸ್ ನಲ್ಲಿ ಪ್ರವೇಶ ಪಡೆದಿರಬೇಕು
- ಕುಟುಂಬದ ಆದಾಯ ಮಿತಿಯೊಳಗಿರಬೇಕು
ಪ್ರೋತ್ಸಾಹ ಧನ:-
- ಪ್ರತಿ ವರ್ಷ 25,000 ದಿಂದ 30,000 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ
- ಪಿಜಿ ಕೋರ್ಸ್ ಗಳಿಗೆ ಹೆಚ್ಚುವರಿ
ವೃತ್ತಿಪರ ಪದವಿ ವಿದ್ಯಾರ್ಥಿಗಳು (ವೈದ್ಯಕೀಯ, ತಾಂತ್ರಿಕ, ಕೃಷಿ, ಪಶು ವೈದ್ಯಕೀಯ)
ಅರ್ಹತೆ :-
- ವಿದ್ಯಾರ್ಥಿಯು ಪಿಯುಸಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿರಬೇಕು
- ಪ್ರೊಫೆಷನಲ್ ಕೋರ್ಸ್ ನಲ್ಲಿ ಪ್ರವೇಶ ಪಡೆದಿರಬೇಕು
- ರೆಗ್ಯುಲರ್ ಸ್ಟೂಡೆಂಟ್ ಆಗಿರಬೇಕು
ಪ್ರೋತ್ಸಾಹ ಧನ:-
- ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹30,000 ರಿಂದ ₹35,000 ದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ
- ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಸಿಗಬಹುದು
ಸರ್ಕಾರದ ಮುಖ್ಯ ಉದ್ದೇಶ (Purpose) :-
ಸರ್ಕಾರ ಯಾವುದೇ ಒಂದು ಯೋಜನೆಯನ್ನು ಘೋಷಣೆ ಮಾಡಿದರು ತನ್ನದೇ ಆದ ಪ್ರಮುಖ ಉದ್ದೇಶವನ್ನು ಒಳಗೊಂಡಿರುತ್ತದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಸಹಾಯ ಮಾಡಲು ರೂಪಿತವಾದ ಯೋಜನೆಯಾಗಿದೆ
ಹಾಗಿದ್ದರೆ ಮೆಟ್ರಿಕ್ ನಂತರದ ಪ್ರೋತ್ಸಾಹ ಧನ ನೀಡಲು ಸರ್ಕಾರ ಯಾವ ಉದ್ದೇಶವನ್ನು ಒಳಗೊಂಡಿದೆ ನೋಡ್ತಾ ಹೋಗೋಣ ಬನ್ನಿ,,,,,
- ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು:-ಎಸ್ ಎಸ್ ಎಲ್ ಸಿ ಮುಗಿದ ನಂತರ ಹಣದ ಕೊರತೆಯಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಹಾಗೆ ಮಾಡದೆ ಪಿಯುಸಿ ಡಿಪ್ಲೋಮೋ ಡಿಗ್ರಿ ಪೀಜಿ ಪ್ರೊಫೆಷನಲ್ ಕೋರ್ಸ್ ಓದಲು ಉತ್ತೇಜಿಸುವ ಗುರಿಯನ್ನು ಹೊಂದಿದೆ
- ಬಡ ಕುಟುಂಬಗ ವಿದ್ಯಾರ್ಥಿಗಳಿಗೆ ಪ್ರೋತ್ಸಹ :-ಕರ್ನಾಟಕದ ಅನೇಕ ಕುಟುಂಬಗಳು ತಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೊನೆಗೊಳಿಸಲು ಮುಂದಾಗುತ್ತಾರೆ ಅಥವಾ ವಿದ್ಯಾರ್ಥಿಗಳೇ ಅರ್ಧಕ್ಕೆ ತಮ್ಮ ಶಿಕ್ಷಣವನ್ನು ಮುಗಿಸಲು ಯೋಚಿಸುತ್ತಾರೆ. ಇಂತಹ ವಿಷಯಕ್ಕಾಗಿಯೇ ಸರ್ಕಾರ ಈ ಕುಟುಂಬಗಳಿಗೆ ನೆರವು ನೀಡಲು ಯಾವುದೇ ವಿದ್ಯಾರ್ಥಿಯಾದರು ತನ್ನ ಶಿಕ್ಷಣವನ್ನ ಪೂರ್ಣವಾಗಿ ಮುಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.
- ಶಿಕ್ಷಣವನ್ನು ಉತ್ತೇಜಿಸುವುದು:- ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ(Scholarship) ಕೊಟ್ಟು ಮುಂದಿನ ಶಿಕ್ಷಣಕ್ಕೆ ಅವರನ್ನು ಉತ್ತೇಜಿಸುವುದು.
- ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು:-ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಹಾಗೆ ವೃತ್ತಿಪರ ಶಿಕ್ಷಣದ ಕಡೆ ತಮ್ಮ ಗಮನವನ್ನು ಹರಿಸಲು ವಿದ್ಯಾರ್ಥಿವೇತನ ತನ್ನದೇ ಆದ ಪತ್ರ ವಹಿಸುತ್ತದೆ.
- ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ:-ಆರ್ಥಿಕವಾಗಿ ಹಿಂದುಳಿದ ಹಾಗೆಯೇ ಬಡ ವಿದ್ಯಾರ್ಥಿಗಳ ಕುಟುಂಬದ ಮೇಲೆ ಹಣದ ಒತ್ತಡ ಇದ್ದೇ ಇರುತ್ತದೆ ಈ ಒತ್ತಡವನ್ನ ಕಡಿಮೆ ಮಾಡುವುದೇ ಸರ್ಕಾರದ ಪ್ರಮುಖ ಉದ್ದೇಶ.
- ದಿನಾಂಕ ವಿಸ್ತರಣೆ:-2026 ನೇ ಸಾಲಿನ ಪ್ರೋತ್ಸಾಹ ಧನಕ್ಕೆ ಈಗಾಗಲೇ ಸರ್ಕಾರವು ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಿತು ಈ ದಿನಾಂಕವನ್ನು ವಿಸ್ತರಣೆ ಮಾಡಿ ಈಗಾಗಲೇ ಅರ್ಜಿ ಸಲ್ಲಿಸಲು ತಮ್ಮದೇ ಆದ ಕಾರಣಗಳನ್ನು ಒಳಗೊಂಡಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕೊಡಬೇಕೆಂದು ದಿನಾಂಕವನ್ನು ವಿತರಣೆ ಮಾಡಿದೆ.
- ಸಮಾನತೆ :-ಶಿಕ್ಷಣದ ಮೂಲಕ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳನ್ನ ಸಮಾಜದಲ್ಲಿ ಸಮಾನರಾಗಿ ಹಾಗೆ ಸ್ವಾವಲಂಬಿಯಾಗಿ ತಮ್ಮದೇ ಆದ ಜೀವನ ನಡೆಸಬೇಕೆನ್ನುವ ಉದ್ದೇಶವನ್ನು ಹೊಂದಿದೆ.
ದಿನಾಂಕ ವಿಸ್ತರಣೆ :-
ಪ್ರಿಯ ವಿದ್ಯಾರ್ಥಿಗಳೇ ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕವನ್ನು“ಫೆಬ್ರವರಿ 28, 2026 ಕ್ಕೆ ದಿನಾಂಕವನ್ನು ಈಗ ವಿಸ್ತರಣೆ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆಯು ಒಂದು ನೋಟಿಸ್ ಅನ್ನು ಹೊರಡಿತಿದೆ”.ವಿದ್ಯಾರ್ಥಿಗಳಿಗೆ ಸಂತೋಷವಾಗಿದೆ ಅನೇಕ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕಾರಣ ಸರ್ಕಾರ ಮತ್ತೊಮ್ಮೆ ಅವಕಾಶವನ್ನು ನೀಡಿದೆ ಇದು ಕೊನೆಯ ಅವಕಾಶ ಆಗಿರುವ ಸಾಧ್ಯತೆ ಹೆಚ್ಚು ಸರ್ಕಾರವು ಮತ್ತೆ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ಕಡಿಮೆ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.
ನನ್ನ ಸಲಹೆ:-ಅರ್ಜಿ ಸಲ್ಲಿಸುವ ಮೊದಲು ನಿನ್ನ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಪರಿಶೀಲಿಸಿ ಒಂದು ವೇಳೆ ಲಿಂಕ್ ಆಗದಿದ್ದರೆ ಬ್ಯಾಂಕ್ ಗೆ ಹೋಗಿ ಇಂದೇ ಸರಿಪಡಿಸಿಕೊಳ್ಳಿ ಇಲ್ಲವಾದರೆ ಹಣ ಬರುವುದು ತಡವಾಗಬಹುದು
ಸ್ಕಾಲರ್ಶಿಪ್ ಯಿಂದ ವಿದ್ಯಾರ್ಥಿಗಳಿಗಾಗುವ ಅನುಕೂಲ :-
- ಪುಸ್ತಕದ ಶುಲ್ಕ, ಕಾಲೇಜು, ಯೂನಿಫಾರಂ ಶುಲ್ಕ, ಪರೀಕ್ಷೆ ಫೀಸ್ ಮುಂತಾದ ಖರ್ಚುಗಳನ್ನ ಸುಲಭವಾಗಿ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನದಿಂದ (SSP Scholarship) ಬರಿಸಿಕೊಳ್ಳಬಹುದು.
- ವಿಧ್ಯಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಹಾಯವಾಗುತ್ತದೆ
- ಉತ್ತಮ ಶಿಕ್ಷಣ ಪಡೆಯಬೇಕು ಉದ್ಯೋಗ ಪಡೆದುಕೊಳ್ಳಬೇಕು ಎಂಬ ಆತುರ ಹೆಚ್ಚುತ್ತದೆ
- ಬಡ ಕುಟುಂಬಗಳ ಮೇಲೆ ಇರುವ ಶಿಕ್ಷಣದ ಹೊರೆ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಟುಂಬದ ಬೆಂಬಲ ಸಿಕ್ಕಂತಾಗುತ್ತದೆ.
- ಸ್ನಾತಕೋತ್ತರ ಡಿಪ್ಲೋಮಾ ಪದವಿ ಹಾಗೆ ವೃತ್ತಿಪರ ಶಿಕ್ಷಣವನ್ನ ನಿರ್ಭಯವಾಗಿ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಧನ (SSP Scholarship) ದಿಂದ ಅನುಕೂಲವಾಗುತ್ತದೆ.
- ಉತ್ತಮ ಶಿಕ್ಷಣದಿಂದ ಉತ್ತಮ ಉದ್ಯೋಗ ಹಾಗೆ ಉತ್ತಮವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೆ ವಿದ್ಯಾರ್ಥಿಗಳ ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾಗುತ್ತದೆ.
- ಈ ಪ್ರೋತ್ಸಾಹ ಧನ(SSP Scholarship) ದಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವು ನೇರವಾಗಿರುವುದರಿಂದ ಪಾರದರ್ಶಕತೆ ಇರುತ್ತದೆ.
- ಈ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಕೂಡ ಸಮಾಜದಲ್ಲಿ ಎಲ್ಲಾ ವಿದ್ಯಾರ್ಥಿಗಳಂತೆ ಸಮಾನವಾಗಿ ಶಿಕ್ಷಣ ಪಡೆಯುವ ಅವಕಾಶ ಲಭಿಸುತ್ತದೆ.
ಸ್ಕಾಲರ್ಶಿಪ್ ಪಡೆಯಲು ಅರ್ಹ ವಿದ್ಯಾರ್ಥಿಗಳು:-
1. ವಿದ್ಯಾರ್ಥಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿ ಸೇರಿರಬೇಕು
2. ಮೆಟ್ರಿಕ್ / 10ನೇ ತರಗತಿಯಲ್ಲಿ ಪ್ರಥಮ ದರ್ಜೆ ಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
3. ವಿದ್ಯಾರ್ಹತೆ :-
- ಪದವಿ (Degree)
- ಡಿಪ್ಲೋಮಾ
- ಸ್ನಾತಕೋತ್ತರ (PG)
- ವೃತ್ತಿಪರ ಕೋರ್ಸ್‌ಗಳು (ವೈದ್ಯಕೀಯ, ತಾಂತ್ರಿಕ, ಕೃಷಿ, ಪಶು ವೈದ್ಯಕೀಯ) ಗಳನ್ನ ಮಾಡುತ್ತಿರುವ ಅಭ್ಯರ್ಥಿಗಳು(SSP Scholarship) ಅರ್ಜಿಯನ್ನ ಸಲ್ಲಿಸಬಹುದು..
ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ದಾಖಲಾತಿಗಳು ಹೀಗಿವೆ:-
ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗಬೇಕೆನ್ನುವ ಉದ್ದೇಶದಿಂದ ಚಾರ್ಟ್ ಮೂಲಕ ದಾಖಲೆಗಳ ಪಟ್ಟಿಯನ್ನು ರಚಿಸಲಾಗಿದೆ.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ಹಿಂದಿನ ತರಗತಿಯ ಅಂಕಪಟ್ಟಿ
- ಆದಾಯ ಪ್ರಮಾಣ ಪತ್ರ
- ಕಾಲೇಜ್ ಐಡಿ
- ಪಾಸ್ವರ್ಡ್ ಸೈಜ್ ಫೋಟೋ
- ಬ್ಯಾಂಕ್ ಖಾತೆ ವಿವರ
ಅರ್ಜಿ ಸಲ್ಲಿಸುವ ವಿಧಾನ :-
ಕರ್ನಾಟಕ ಸರ್ಕಾರ ನೀಡುತ್ತಿರುವ 10ನೇ ತರಗತಿ ನಂತರ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ(SSP Scholarship) ಅರ್ಜಿ ಸಲ್ಲಿಸಲು
- ಮೊದಲು SSP Scholarship ಅಧಿಕೃತ ವೆಬ್ಸೈಟ್ ತೆರೆಯಿರಿ
- ವಿದ್ಯಾರ್ಥಿ ಲಾಗಿನ್ ಅಥವಾ ನ್ಯೂ ರಿಜಿಸ್ಟ್ರೇಷನ್ ಆಯ್ಕೆ ಮಾಡಿ
- ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ನಮೂದಿಸಿ OTP ಪರಿಶೀಲನೆ ಮಾಡಿ
- ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ರಚಿಸಿ
- Scholarshiಯೋಜನೆ ಆಯ್ಕೆ ಮಾಡಿ ವಿದ್ಯಾರ್ಥಿಯ ವಯಕ್ತಿಕ ವಿವರಗಳನ್ನು ನಮೂದಿಸಿ
- ಹೆಸರು ಕಾಲೇಜಿನ ಹೆಸರು ಬ್ಯಾಂಕ್ ಖಾತೆ ವಿವರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ (ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್) ಪ್ರತಿ ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
ಕೊನೆಯ ಮಾತು :-
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಉತ್ತನತ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪಬೇಕು ಎಂಬ ಅಸೆ ಇರುತ್ತದೆ ಆದರೆ ಮಾಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಗಳು ಮಕ್ಕಳ ಕನಸಿಗೆ ಅಂತ್ಯ ಹಾಡುವ ಸಾಧ್ಯತೆಗಳೇ ಹೆಚ್ಚು ಇಂತಹ ಸಂದರ್ಭದಲ್ಲಿ ಹಣಕಾಸಿನ ತೊಂದರೆಯಿಂದಾಗಿ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಧಕ್ಕೆ ನಿಲ್ಲಿಸಿ ಕುಟುಂಬದ ಜವಾಬ್ದಾರಿಯತ್ತ ಸಾಗುತ್ತಿರುವ ದೃಶ್ಯಗಳು ನಮ್ಮ ಕಣ್ಣು ಮುಂದೆ ಕಾಣುತ್ತಿವೆ.
ಸರ್ಕಾರದ ಇಂತಹ ವಿದ್ಯಾರ್ಥಿ ವೇತನವನ್ನುನೀಡಲು ಮುಂದಾಗಿದೆ ಅಷ್ಟೇ ಮೇಲೆ ತಿಳಿಸಿರುವ ಅಲ್ಲದೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ(SSP Scholarship) ದಿನಾಂಕ ವಿಸ್ತರಿಸಿದ್ದು ಇಂತಹ ಗೋಲ್ಡನ್ ಅವಕಾಶವನ್ನ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳದೆ ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿ. ಉತ್ತಮ ಉದ್ಯೋಗಿಗಳಾಗಿ ಹೊರ ಹೊಮ್ಮಿ ಇದರ ಬಗ್ಗೆ ಇನ್ನು ಮಾಹಿತಿ ಬೇಕಾದಲ್ಲಿ ನಿಮ್ಮ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಂಡು ಸಹಾಯಧನ ನಿಮ್ಮದಾಗಿಸಿಕೊಳ್ಳಿ
ಸಾಮಾನ್ಯ ಪ್ರಶ್ನೆಗಳು:-
ಖಂಡಿತ ಎಸ್ ಎಸ್ ಎಲ್ ಸಿ ನಂತರ ಪಿಯುಸಿ ಡಿಪ್ಲೋಮೋ ಡಿಗ್ರಿ ಮತ್ತು ಪ್ರೊಫೆಷನ್ ಕೋರ್ಸ್ ಓದುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳು (SSP Scholarship)ಪಡೆಯಬಹುದು
28/02/2026 ಕೊನೆಯ ದಿನಾಂಕ ವಾಗಿರುತ್ತದೆ
ಖಂಡಿತ ಎಸ್ ಎಸ್ ಎಲ್ ಸಿ ನಂತರ ಪಿಯುಸಿ ಡಿಪ್ಲೋಮೋ ಡಿಗ್ರಿ ಮತ್ತು ಪ್ರೊಫೆಷನ್ ಕೋರ್ಸ್ ಓದುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳು ಪಡೆಯಬಹುದು
3,000 ದಿಂದ 35,000 ದವರೆಗೆ ಕೋರ್ಸ್ ಗಳು ಮತ್ತು ಅರ್ಹತೆಗೆ ಆಅನುಗುಣವಾಗಿ ಸ್ಕಾಲರ್ಶಿಪ್ ನ ಮೊತ್ತ ಸಿಗುತ್ತದೆ
3,000 ದಿಂದ 35,000 ದವರೆಗೆ ಕೋರ್ಸ್ ಗಳು ಮತ್ತು ಅರ್ಹತೆಗೆ ಆಅನುಗುಣವಾಗಿ ಸ್ಕಾಲರ್ಶಿಪ್ ನ ಮೊತ್ತ ಸಿಗುತ್ತದೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಥವಾ ಪದವಿ ಅಂಕಪಟ್ಟಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರ ಬೇಕಾಗುತ್ತದೆ






