
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾದದೆಂದರೆ ಸ್ವಚ್ಛ ಭಾರತ್ ಮಿಷನ್ ಯೋಜನೆ. ನಮ್ಮ ದೇಶದ ಸ್ವಚ್ಛತೆಗೆ ಮಹತ್ವದ ಹೆಜ್ಜೆಯಾದ ಕೇಂದ್ರ ಸರ್ಕಾರ ಆರಂಭಿಸಿದ ಮಹಾಕಾಂಕ್ಷಿಯ ಯೋಜನೆ ಇದಾಗಿದೆ.
ಸ್ವಚ್ಛತೆಯೇ ದೈವತ್ವ ಎಂಬ ಮಾತಿನಂತೆ ಪ್ರತಿಯೊಂದು ಮನೆಯಲ್ಲೂ ಶೌಚಾಲೆ ಇರಬೇಕೆಂಬುದು ಸರ್ಕಾರದ ಆಶಯ. ಆದರೆ ಹಲವು ಕುಟುಂಬಗಳು ಈಗಲೂ ಕೂಡ ಶೌಚಾಲಯದ ವ್ಯವಸ್ಥೆ ಇಲ್ಲದೆ ಬಯಲು ಶೌಚಾಲಯ ಅವಲಂಬಿಸಿದ್ದಾರೆ.ಇಂತಹ ಕುಟುಂಬಗಳ ನೆರವಿಗೆ ಸರ್ಕಾರವೇ ಶೌಚಾಲಯ ನಿರ್ಮಾಣಕ್ಕೆ₹20,000 ಸಹಾಯಧನ ನೀಡಲು ಮುಂದಾಗಿದೆ
Swachh Bharat Mission In Kannada
ನಿಮ್ಮ ಮನೆಯಲ್ಲಿ ಸರಿಯಾದ ಶೌಚಾಲಯ (SBM) ವ್ಯವಸ್ಥೆ ಇಲ್ಲವೇ? ಶೌಚಾಲಯ ಇಲ್ಲದ ಕಾರಣ ಬಯಲು ಪ್ರದೇಶವನ್ನೇ ಶೌಚಾಲಯವಾಗಿ ಬಳಸುತ್ತಿದ್ದೀರಾ? ನೀವು ಸರ್ಕಾರದ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಪಡೆದೊಕೊಳ್ಳಬೇಕೇ? ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡಿ.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ(Swachh Bharat Mission) ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸಾಕಷ್ಟು ನಗರ ಹಾಗೂ ಗ್ರಾಮೀಣ ಪ್ರದೇಶದ ನಿವಾಸಿಗಳು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಈ ಸಹಾಯಧನದಿಂದ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನೀವು ಕೂಡ ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ಪಡೆದುಕೊಳ್ಳಲು ಬಯಸುವಿರಾ ಹಾಗಿದ್ದರೆ, ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು, ಸರ್ಕಾರದಿಂದ ಸಿಗುವ ಒಟ್ಟು ಸಹಾಯಧನ, ಅರ್ಹ ಅಭ್ಯರ್ಥಿಗಳು ಹೀಗೆ ಇನ್ನಷ್ಟು ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಿತರ ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ.
ಯೋಜನೆಯ ಹೈಲೆಟ್ಸ್:
| ಯೋಜನೆಯ ಹೆಸರು | ಸ್ವಚ್ಛ ಭಾರತ್ ಮಿಷನ್(Swachh Bharat Mission) |
| ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ | ಶೌಚಾಲಯ ನಿರ್ಮಾಣಕ್ಕೆ ಸಹಾಯಧನ |
| ಅರ್ಹ ಫಲಾನುಭವಿಗಳು | ಗ್ರಾಮೀಣ ಹಾಗೂ ನಗರ ಪ್ರದೇಶದ ನಿವಾಸಿಗಳು |
| ಒಟ್ಟು ಸಬ್ಸಿಡಿ ಸಹಾಯಧನ | ₹20,000 |
| ಯೋಜನೆಯ ಉದ್ದೇಶ | ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಾಣ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ನಿರ್ಮಾಣ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಸ್ವಚ್ಛ ಭಾರತ್ ಮಿಷನ್ ಯೋಜನೆ:
ನಮ್ಮ ದೇಶದ ಸ್ವಚ್ಛತೆಗೆ ಮಹತ್ವದ ಹೆಜ್ಜೆಯಾಗಿ ಸರ್ಕಾರ ಆರಂಭಿಸಿದ ಮಹಾಕಾಂಕ್ಷೆಯ ಯೋಜನೆ ಎಂದರೆ ಸ್ವಚ್ಛ ಭಾರತ್ ಮಷೀನ್ ಯೋಜನೆ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಇರಬೇಕು ಬಯಲು ಶೌಚಾಲಯ ಸಂಪೂರ್ಣವಾಗಿ ನಿಲ್ಲಬೇಕು ಎಂಬುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಮಹಾತ್ಮಾ ಗಾಂಧಿಯವರ 150 ನೇ ಜನ್ಮದಿನಾಚರಣೆಯ ಸವಿ ನೆನಪಿಗಾಗಿ ಜಾರಿಗೊಳಿಸಿದ ಯೋಜನೆಯಾಗಿದ್ದು. ಈ ಯೋಜನೆಯ ಮೂಲ ಉದ್ದೇಶ ಬಯಲು ಶೌಚ ಮುಕ್ತ ಪ್ರದೇಶವನ್ನಾಗಿ ಮಾಡುವುದಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯು(Swachh Bharat Mission) ಕೇವಲ ಶೌಚಾಲಯ ನಿರ್ಮಾಣಕ್ಕೆ ಹಣ ನೀಡುವುದಷ್ಟೇ ಅಲ್ಲ ಇದು ಹಳ್ಳಿಗಳ ಮತ್ತು ಜನರ ಆರೋಗ್ಯ ಸುಧಾರಿಸುವ ಒಂದು ದೊಡ್ಡ ಆಂದೋಲನವಾಗಿದೆ. ಪ್ರತಿಯೊಂದು ಮನೆಯು ಶೌಚಾಲಯವನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಶೌಚಾಲಯ ನಿರ್ಮಾಣಕ್ಕೆ20,000 ರೂ ಸಹಾಯಧನವನ್ನು ನೀಡಲು ಮುಂದಾಗಿದೆ.
ನಮಗೆ ಶೌಚಾಲಯ ಏಕೆ ಮುಖ್ಯ:
ಶೌಚಾಲಯ ಎಂಬುದು ಕೇವಲ ಒಂದು ಕಟ್ಟಡವಲ್ಲ ಅದು ಒಂದು ಕುಟುಂಬದ ಆರೋಗ್ಯ ಗೌರವ ಮತ್ತು ಸುಸ್ಥಿರ ಜೀವನದ ಅಡಿಪಾಯವಾಗಿದೆ.
ಆರೋಗ್ಯ: ಬಯಲು ಮಲವಿಸರ್ಜನೆಯಿಂದ ಅನೇಕ ಮಾರಕ ಕಾಯಿಲೆಗಳು ಹರಡುತ್ತವೆ ಕಾಲರಾ ಅತಿಸಾರ ಟೈಪಾಯಿಡ್ ಕಾಮಾಲೆ ಯಂತಹ ರೋಗಗಳು ಹರಡುವುದನ್ನು ತಡೆಯಬಹುದು.
ಮಕ್ಕಳ ಬೆಳವಣಿಗೆ:ಅಶುಚಿತಯಿಂದ ಮಕ್ಕಳಿಗೆ ಪದೇ ಪದೇ ಸೋಂಕು ತಗುಲಿ ಅವರ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ ಶೌಚಾಲಯವಿದ್ದರೆ ಮಕ್ಕಳ ಆರೋಗ್ಯವಾಗಿ ವೇಗವಾಗಿ ಬೆಳವಣಿಗೆ ಹೊಂದುತ್ತಾರೆ
ಪರಿಸರ: ಲಕ್ಷಣಗಳು ಬಯನಲ್ಲಿ ಮಲವಿಸರ್ಜನೆ ಮಾಡುವುದರಿಂದ ಮಳೆ ಬಂದಾಗ ಅದು ನೀರು ಸೇರಿ ನೀರಿನ ಮೂಲಗಳು ಕಲುಷಿತ ವಾಗುತ್ತವೆ ಶೌಚಾಲಯ ನಿರ್ಮಾಣ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಶುದ್ಧವಾದ ಗಾಳಿ ಮತ್ತು ನೀರನ್ನು ಪಡೆಯಲು ಸಹಾಯವಾಗುತ್ತದೆ.
ಆರ್ಥಿಕ ಲಾಭ: ಕುಟುಂಬದ ಸದಸ್ಯರು ಪದೇ ಪದೇ ಕಾಯಿಲೆ ಬಿದ್ದು ಆಸ್ಪತ್ರೆಗೆ ಖರ್ಚು ಮಾಡುವ ಹಣ ಉಳಿತಾಯವಾಗುತ್ತದೆ. ಹಾಗೆಯೇ ಆರೋಗ್ಯವಾಗಿದ್ದರೆ ಪ್ರತಿದಿನ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆ ಇದರಿಂದ ಆದಾಯ ಹೆಚ್ಚುತ್ತದೆ.
ಈ ಯೋಜನೆಯ ಪ್ರಮುಖ ಉದ್ದೇಶ:
ಬಯಲು ಮುಕ್ತ ಭಾರತ:
ಈ ಯೋಜನೆ ಅತಿ ದೊಡ್ಡ ಗುರಿ ಎಂದರೆ ಜನರು ಅನಿವಾರ್ಯವಾಗಿ ಬಯಲು ಪ್ರದೇಶ ಗದ್ದೆ ಅಥವಾ ರಸ್ತೆ ಬದಿಗಳಲ್ಲಿ ಮನವಿಸರ್ಜನೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಪ್ರತಿಯೊಂದು ಕುಟುಂಬವು ತನ್ನದೇ ಆದ ಸ್ವಂತ ಶೌಚಾಲಯ ಹೊಂದಿರುವಂತೆ ಪ್ರೇರೇಪಿಸುವುದು ಇದರ(Swachh Bharat Mission) ಬಹುಮುಖ್ಯ ಉದ್ದೇಶವಾಗಿದೆ.
ಮಹಿಳೆಯರ ಗೌರವ ಮತ್ತು ಖಾಸಗೀಕರಣ ರಕ್ಷಣೆ:
ಗ್ರಾಮೀಣ ಭಾಗದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಮಲವಿಸರ್ಜನೆಗಾಗಿ ಕತ್ತಲಾಗುವವರೆಗೆ ಕಾಯುವ ಅಥವಾ ದೂರದ ಪ್ರದೇಶಗಳಿಗೆ ಹೋಗುವ ಅನಿವಾರ್ಯತೆಯನ್ನು ಹೋಗಲಾಡಿಸಿ ಅವರಿಗೆ ಸುರಕ್ಷತೆ ಮತ್ತು ಘನತೆಯ ಜೀವನ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು:
ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಜನರು ಹಣಕಾಸಿನ ಸಮಸ್ಯೆಯಿಂದ ಸ್ವಂತ ಖರ್ಚಿನಲ್ಲಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದ ಕಾರಣ ಬಯಲು ಶೌಚವನ್ನು ಬಳಸುತ್ತಿದ್ದಾರೆ. ಅಂತಹವರಿಗೆ ಸರ್ಕಾರವು ತಮ್ಮ ಮನೆಯಲ್ಲೇ ಶೌಚಾಲಯವನ್ನು ನಿರ್ಮಿಸಲು ಸಹಾಯಧನವನ್ನು ನೀಡುವ ಮೂಲಕ ಪ್ರತಿ ಮನೆಯು ಶೌಚಾಲಯವನ್ನು ಹೊಂದುವಂತೆ ಮಾಡುವುದು.
ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು:
ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ತಮ್ಮ ಗ್ರಾಮ ಹಾಗೂ ನಗರ ಪ್ರದೇಶವನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎನ್ನುವುದರ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಹಾಗೂ ಮಕ್ಕಳಿಗೆ ಶಾಲೆಗಳಲ್ಲಿ ಸ್ವಚ್ಛವಾಗಿ ಕೈ ತೊಳಿಯುವ ವಿಧಾನ, ಕಸವನ್ನು ವಿಂಗಡಣೆ ಮಾಡುವ ಬಗ್ಗೆ ಶಿಕ್ಷಣವನ್ನು ನೀಡುವ ಮೂಲಕ ಸ್ವಚ್ಛತೆ ಏಕೆ ಅಗತ್ಯ ಎನ್ನವ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಆರೋಗ್ಯ ಸುಧಾರಣೆಗೆ ಒತ್ತು ನೀಡುವುದು:
ಬಯಲು ಶೌಚ ಪದ್ಧತಿಯಿಂದಾಗಿ ಕಾಲರಾ, ಟೈಫಾಯ್ಡ್ ಗಳಂತಹ ಸಾಂಕ್ರಾಮಿಕ ರೋಗಗಳು ಬರುವುದರಿಂದ ಅವುಗಳನ್ನು ನಿರ್ಮೂಲನೆ ಮಾಡಲು ಸರ್ಕಾರವು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ನೀಡುವ ಮೂಲಕ ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು (Swachh Bharat Mission) ನೀಡಿದೆ.
ತಾಜ್ಯ ನಿರ್ವಹಣೆಗೆ ಒತ್ತು ನೀಡುವುದು:
ಸರ್ಕಾರವು ಸ್ವಚ್ಛ ಭಾರತ್ ಮಿಷನ್ (SBM) ಯೋಜನೆಯಡಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಘನ ಹಾಗೂ ದ್ರವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಂಗಡಿಸಿ, ಈ ಎಲ್ಲಾ ತಾಜ್ಯಗಳನ್ನು ಸಂಸ್ಕರಿಸುವ ವ್ಯವಸ್ಥೆಯನ್ನು ಜಾರಿ ಗೊಳಿಸುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದೆ.
ಶೌಚಾಲಯ ನಿರ್ಮಾಣಕ್ಕೆ ಸಿಗುವ ಸಹಾಯಧನ ಎಷ್ಟು:
ಕರ್ನಾಟಕದಲ್ಲಿ ಸ್ವಚ್ಛ ಭಾರತ್ ಮಷೀನ್ ಅಡಿಯಲ್ಲಿ(Swachh Bharat Mission) ಶೌಚಾಲಯ ನಿರ್ಮಾಣಕ್ಕೆ ಸಿಗುವ ಸಹಾಯಧನದ ಮೊತ್ತವು ವರ್ಗದ ಮೇಲೆ ಆಧಾರಿತವಾಗಿರುತ್ತದೆ
| ವರ್ಗ(Category೦) | ಸಹಾಯಧನದ ಮೊತ್ತ(Subsidy amount) |
| ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ(ST) | ₹20,000 /-ವರೆಗೆ |
| ಸಾಮಾನ್ಯ ಮತ್ತು ಇತರೆ ವರ್ಗಗಳು(OBC) | ₹12,000/- |
ಹಣ ಬಿಡುಗಡೆಯ ಹಂತಗಳು:
ಈ ಪ್ರೋತ್ಸಹದನವು ಒಟ್ಟಿಗೆ ಜಮೆಯಾಗುವುದಿಲ್ಲ(Swachh Bharat Mission) ಪಾರದರ್ಶಕತೆಗಾಗಿ ಸರ್ಕಾರವು ಇದನ್ನು ಎರಡು ಹಂತಗಳಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
1.ಮೊದಲ ಕಂತು: ಶೌಚಾಲಯದ ಗುಂಡಿ ತೆಗೆದು ನಂತರ ಮತ್ತು ಅದರ ಅಪ್ಲೋಡ್ ಆದಾಗ ಈ ಹಣ ಬರುತ್ತದೆ
2.ಎರಡನೇ ಹಂತ: ಶೌಚಾಲಯದ ಮೇಲ್ಚಾವಣಿ ಪೇಂಟ್ ಮತ್ತು ಬಾಗಿಲು ಅಳವಡಿಕೆಯಾದ ನಂತರ ಫಲಾನುಭವಿಯು ಆ ಶೌಚಾಲಯದ ಮುಂದೆ ನಿಂತು ಫೋಟೋ ತೆಗೆದು ಗ್ರಾಮ ಪಂಚಾಯಿತಿಗೆ ಕಳುಹಿಸಿದಾಗ ಹಣವು ಫಲಾನುಭವಿಯ ಖಾತೆಗೆ ಜಮಾ ಯಾಗುತ್ತದೆ.
ಗಮನಿಸಿ: ನೀವು ಶೌಚಾಲಯ ನಿರ್ಮಿಸಿದರು ಹಣ ಬರಲು ವಿಳಂಬವಾಗುತ್ತಿದ್ದರೆ ನಿಮ್ಮ ಗ್ರಾಮ ಪಂಚಾಯಿತಿನಲ್ಲಿ ನಿಮ್ಮ ಅಜ್ಜಿಯ ಸ್ಟೇಟಸ್ ಏನೆಂದು ಹೇಳಿ ಅಥವಾ ಅವರ ಲಾಗಿನ್ ನಲ್ಲಿ ಫೋಟೋ ಅಪ್ಲೋಡ್ ಆಗಿದೆ ಎಂದು ಪರಿಶೀಲಿಸಿ
ಶೌಚಾಲಯ ಕಟ್ಟಿದ ನಂತರ ಗಮನಿಸಬೇಕಾದ ಅಂಶಗಳು:
ಜಲಜೀವನ್ ಮಿಷನ್: ಶೌಚಾಲಯಕ್ಕೆ ನೀರಿನ ಸಂಪರ್ಕ ಪಡೆಯಲು ಪಂಚಾಯಿತಿನಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದು.
ಬಳಕೆ : ಶೌಚಾಲಯವನ್ನು ಕೇವಲ ಕಟ್ಟಿಸುವುದಷ್ಟೇ ಅಲ್ಲ ಅದನ್ನು ಬಳಸದಿದ್ದರೆ ದಂಡ ವಿನಿಸುವ ಅಥವಾ ರೇಷನ್ ಕಾರ್ಡ್ ಸೌಲಭ್ಯವನ್ನು ತಡೆ ಹಿಡಿಯುವ ನಿಯಮಗಳು ಕೆಲವು ಕಡೆ ಜಾರಿಯಲ್ಲಿದೆ.
ಈ ಯೋಜನೆಯಿಂದ ಸಿಗುವ ಇತರೆ ಸೌಲಭ್ಯಗಳು:
- ಸಮುದಾಯ ಶೌಚಾಲಯಗಳ ನಿರ್ಮಾಣ
- ಉದ್ಯೋಗವಕಾಶಗಳು
- ತಾಂತ್ರಿಕ ತರಬೇತಿ
- ಗೋಬರ್ಧನ್ ಯೋಜನೆ
ಶೌಚಾಲಯ ನಿರ್ಮಾಣ ಮಾಡುವುದರಿಂದ ಆಗುವ ಪ್ರಾಯೋಜನಗಳು:
- ಪರಿಸರ ಸ್ವಚ್ಛತೆ:
ಸ್ವಂತವಾಗಿ ಶೌಚಾಲಯ ನಿರ್ಮಾಣ ಮಾಡುವುದರಿಂದ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬಹುದು ನೆಲ ಮತ್ತು ನೀರಿನ ಮಾಲಿನ್ಯ ಕಡಿಮೆಯಾಗುತ್ತದೆ.ಗ್ರಾಮ ಹಾಗೂ ನಗರ ಪ್ರದೇಶದ ಜನರು ಬಯಲನ್ನು ಶೌಚಾಲಯವಾಗಿ ಬಳಸುವುದರಿಂದ ಜಲ ಮಾಲಿನ್ಯಗಳು ಹಾಗೂ ನೆಲ ಮಾಲಿನ್ಯಗಳು ಉಂಟಾಗುತ್ತದೆ. ಇದರಿಂದಾಗಿ ಪರಿಸರದ ಮೇಲೆ ಬಾರಿ ಪರಿಣಾಮ ಬೀರುತ್ತದೆ. ಇವುಗಳನ್ನು ನಿರ್ಮೂಲನೆ ಮಾಡಲು ಪ್ರತಿಯೊಂದು ಮನೆಯು ಸ್ವಂತವಾಗಿ ಶೌಚಾಲಯ ವ್ಯವಸ್ಥೆಯನ್ನು ಹೊಂದಲು ಸರ್ಕಾರದಿಂದ ಭಾರಿ ಮೊತ್ತದ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
- ಗ್ರಾಮ ಮತ್ತು ನಗರದಲ್ಲಿ ರೋಗಮುಕ್ತವಾಗಿಸುವುದು:
ಬಯಲು ಶೌಚ ಪದ್ಧತಿಯಿಂದಾಗಿ ಗ್ರಾಮ ಮತ್ತು ನಗರ ಪದೇಶಗಳಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳು ಬಂದು ಅಲ್ಲಿನ ಜನರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದರೆ ಗ್ರಾಮ ಹಾಗೂ ನಗರ ಪ್ರದೇಶದ ಜನರು ತಮ್ಮ ಮನೆಗಳಲ್ಲೇ ಸ್ವಂತವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳುವ ಮೂಲಕ ರೋಗಮುಕ್ತ ಗ್ರಾಮ ಹಾಗೂ ನಗರಗಳಾಗಿ ಮಾರ್ಪಾಡು ಮಾಡಲು ಇದು ನೆರವಾಗುತ್ತದೆ.
- ಮಹಿಳೆಯರ ಘನತೆ ಹಾಗೂ ಸುರಕ್ಷತೆಯನ್ನು ಕಾಪಾಡುವುದು:
ಸ್ವಚ್ಛ ಭಾರತ್ ಮಿಷನ್ (Swachh Bharat Mission) ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನವನ್ನು ಪಡೆದುಕೊಳ್ಳುವ ಮೂಲಕ ಶೌಚಾಲಯವಿಲ್ಲದೆ ಮಹಿಳೆಯರು ಅನುಭವಿಸುತ್ತಿದ್ದ ಮುಜುಗರ ಹಾಗೂ ಅಸುರಕ್ಷತೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಮಹಿಳೆಯರು ಘನತೆ ಹಾಗೂ ಗೌರವವನ್ನು ಹೆಚ್ಚಿಸುವುದು.
- ವೈದ್ಯಕೀಯ ವೆಚ್ಚಗಳಲ್ಲಿ ಉಳಿತಾಯ:
ಗ್ರಾಮೀಣ ಹಾಗೂ ನಗರದ ನಿವಾಸಿಗಳು ತಮ್ಮ ಮನೆಯಲ್ಲೇ ಸ್ವಂತವಾಗಿ ಶೌಚಾಲಯವನ್ನು ಹೊಂದುವ ಮೂಲಕ ಕಾಲರಾ, ಟೈಫಾಯ್ಡ್ ಅತಿಸಾರದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮೂಲಕ ವೈದ್ಯಕೀಯ ವೆಚ್ಚಗಳು ಕಡಿಮೆ ಆಗುತ್ತದೆ. ಇದರಿಂದಾಗಿ ಬಡ ಮತ್ತು ಮಾಧ್ಯಮ ವರ್ಗದ ಜನರು ಸ್ವಲ್ಪಮಟ್ಟಿಗಾದರೂ ಆರ್ಥಿಕವಾಗಿ ಸದೃಢರಾಗಲು ಸಹಾಯವಾಗುತ್ತದೆ.
| ಇಲ್ಲಿ ಗಮನಿಸಿ: “ನೀವೇನಾದರೂ ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದರೆ, ಈ ಸಹಾಯಧನವು ಎರಡು ಹಂತಗಳಲ್ಲಿ ನೇರ ನಗದು ವರ್ಗಾವಣೆಯ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.” |
ಅರ್ಜಿ ಸಲ್ಲಿಸಲು ಯಾರು ಅರ್ಹರು?
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಚ್ಛ ಭರತ್ ಮಿಷನ್ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಮೊದಲ ಆದ್ಯತೆ ನೀಡಲಾಗುವುದು.
- ಅರ್ಜಿದಾರರು ಈ ಹಿಂದೆ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ಪಡೆದುಕೊಂಡಿರಬಾರದು.
- ಭೂ ರಹಿತ ಕೃಷಿ ಕಾರ್ಮಿಕರು, ದೈಹಿಕ ವಿಕಲಚೇತನರು ಇರುವ ಕುಟುಂಬಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಹಿಳಾ ಪ್ರಧಾನ ಕುಟುಂಬಗಳು ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರು APL ಕಾರ್ಡ್ ಹೊಂದಿದ್ದರೂ ಸಹ ಸ್ವಚ್ಛ ಭರತ್ ಮಿಷನ್ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
- ಅರ್ಜಿದಾರರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ತಮ್ಮ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯನ್ನು ಹೊಂದಿರಬಾರದು.
ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಶೌಚಾಲಯದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಪ್ರಮುಖ ದಾಖಲೆಗಳು ನಿಮ್ಮ ಬಳಿ ಇರಬೇಕು ಇವುಗಳನ್ನು ಸಿದ್ಧಪಡಿಸಿಕೊಂಡರೆ ಅರ್ಜಿ ಪ್ರಕ್ರಿಯೆ ಸುಲಭವಾಗುತ್ತದೆ.
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ವಿಳಾಸ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಸೈಜ್ ಫೋಟೋ
- ಮನೆಯಲ್ಲಿ ಶೌಚಾಲಯ ಇಲ್ಲ ಎಂಬ ಪ್ರಮಾಣ ಪತ್ರ
ಗಮನಿಸಬೇಕಾದ ಪ್ರಮುಖ ಅಂಶಗಳು:
ಶೌಚಾಲಯ ನಿರ್ಮಾಣದ ಫೋಟೋ: ಶೌಚಾಲಯ ನಿರ್ಮಾಣದ ಮೊದಲು ಇರುವ ಜಾಗದ ಫೋಟೋ ಮತ್ತು ನಿರ್ಮಾಣದ ವಿವಿಧ ಹಂತಗಳ ಫೋಟೋಗಳನ್ನು ಪಂಚಾಯತ್ ಸಿಬ್ಬಂದಿಗೆ ಅಪ್ಲೋಡ್ ಮಾಡಬೇಕಾಗುತ್ತದೆ
ಬ್ಯಾಂಕ್ ಖಾತೆ: ಬ್ಯಾಂಕ್ ಖಾತೆಯು ಅರ್ಜಿದಾರರ ಹೆಸರಲ್ಲಿ ಹೆಸರಿನಲ್ಲಿ ಇರಬೇಕು ಮಹಿಳೆಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದರೆ ಅರ್ಜಿ ಪ್ರಕ್ರಿಯೆ ವೇಗವಾಗಿ ಸುಲಭವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ನೆನಪಿರಲಿ:ಕೇವಲ ಎಲೆಕ್ಷನ್ ಸಮದಲ್ಲಿ ಮಾತ್ರ ನಿಮ್ಮ ಮನೆಗೆ ಭೇಟಿ ನೀಡಿ ನಿಮಗೆ ಸಹಾಯ ಮಾಡಿಕೊಡುವುದಾಗಿ ತಿಳಿಸಿ ನಂತರ ನಿಮಗೆ ಸರಿಯಾಗಿ ಪ್ರತಿಕ್ರಿಯೆ ಮಾಡದಿದ್ದರೆ ಮೇಲ್ ಅಧಿಕಾರಿಗಳಿಗೆ ಕೂಡಲೇ ಮೇಲ ಅಧಿಕಾರಿಗಳಿಗೆ ತಿಳಿಸಿ
ಈ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಎಲ್ಲಿ?
Swachh Bharat Mission ಯೋಜನೆಯ ಮೂಲಕ 20,000 ಹಣ ಪಡೆಯಲು ನೀವು ಆನ್ಲೈನ್ ಮತ್ತು ಆಫ್ ಲೈನ್ ಎರಡರಲ್ಲಿಯೂ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ:
ನಗರ ಪದೇಶದ ಜನರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿಗಳು ಸ್ವಚ್ಛ ಭರತ್ ಮಿಷನ್ ಅಧಿಕೃತ ಪೋರ್ಟಲ್ https://sbmurban.org/ ಗೆ ಭೇಟಿ ನೀಡಿ.
- ಸಿಟಿಜನ್ ರಿಜಿಸ್ಟ್ರೇಷನ್ ವಿಭಾಗವನ್ನು ಆಯ್ಕೆಮಾಡಿ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ. ಮೊಬೈಲ್ ಸಂಖ್ಯೆಯೇ ನಿಮ್ಮ ಲಾಗಿನ್ ಐಡಿ ಆಗಿರುತ್ತದೆ.
- ನಂತರ ಲಾಗಿನ್ ಐಡಿ ಬಳಸಿ ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಪಡೆಯಿರಿ.
- ಅರ್ಜಿ ನಮೂನೆಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ನಿಮ್ಮ ವಾರ್ಡ್ ಸಂಖ್ಯೆಯನ್ನು ಆಯ್ಕೆ ಮಾಡಿ.
- ನಂತರ, ತಮ್ಮ ಸ್ವ ವಿವರ ಹಾಗೂ ಬ್ಯಾಂಕ್ ವಿವರವನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ನಗರ ಭಾಗದ ಜನರು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ನಿಮ್ಮ ಹತ್ತಿರದ ನಗರಸಭೆ ಮಹಾನಗರ ಪಾಲಿಕೆ ಅಥವಾ ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ
- Swachh Bharat Mission ಯೋಜನೆಯ ಅರ್ಜಿ ಪ್ರಾರಂಭ ಕೇಳಿ ಪಡೆಯಿರಿ
- ಅಲ್ಲಿ ಕೇಳಿರುವ ಅಗತ್ಯ ದಾಖಲೆಗಳನ್ನು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪ್ರತಿ ಇವುಗಳನ್ನು ಲಾಗುತ್ತಿಸಿ.
- ಭರ್ತಿಯಾದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಿ.
- ಅರ್ಜಿಯ ರಶೀದಿ ಸ್ವೀಕೃತಿ ಪತ್ರ ಪಡೆದುಕೊಳ್ಳಿ.
- ಎಲ್ಲಾ ಹಂತಗಳು ಮುಗಿದ ನಂತರ ಸಂಬಂಧಿಸಿದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಶೌಚಾಲಯ ಇಲ್ಲದಿರುವುದನ್ನು ಪರಿಶೀಲಿಸುತ್ತಾರೆ
ಗ್ರಾಮೀಣ ಪ್ರದೇಶದ ಜನರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಗ್ರಾಮೀಣ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿಗಳು ಸ್ವಚ್ಛ ಭರತ್ ಮಿಷನ್ ಅಧಿಕೃತ ಪೋರ್ಟಲ್ https://swachhbharatmission.ddws.gov.in/ ಗೆ ಭೇಟಿ ನೀಡಿ.
- ಸಿಟಿಜನ್ ರಿಜಿಸ್ಟ್ರೇಷನ್ ವಿಭಾಗವನ್ನು ಆಯ್ಕೆಮಾಡಿ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ. ಮೊಬೈಲ್ ಸಂಖ್ಯೆಯೇ ನಿಮ್ಮ ಲಾಗಿನ್ ಐಡಿ ಆಗಿರುತ್ತದೆ.
- ನಂತರ ಲಾಗಿನ್ ಐಡಿ ಬಳಸಿ ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಪಡೆಯಿರಿ.
- ಅರ್ಜಿ ನಮೂನೆಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತ್ ಅನ್ನು ಆಯ್ಕೆ ಮಾಡಿ.
- ನಂತರ, ತಮ್ಮ ಸ್ವ ವಿವರ ಹಾಗೂ ಬ್ಯಾಂಕ್ ವಿವರವನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಗ್ರಾಮೀಣ ಪ್ರದೇಶದ ಜನರು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ
- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿಯನ್ನು ಸಂಪರ್ಕಿಸಿ
- ಸ್ವಚ್ಛ ಭಾರತ್ ಮಷೀನ್ ಯೋಜನೆಯ ಅರ್ಜಿ ಫಾರಂ ಪಡೆದೆ, ಅರ್ಜಿಯಲ್ಲಿ ನಿಮ್ಮ ಹೆಸರು ವಿಳಾಸ ಬ್ಯಾಂಕ್ ಖಾತೆ ವಿವರ ಸರಿಯಾಗಿ ಭರ್ತಿ ಮಾಡಿ
- ನಂತರ ಅಗತ್ಯ ದಾಖಲೆ ದಾಖಲೆಗಳಾದ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ ಬುಕ್ ಪ್ರತಿ ಮೊಬೈಲ್ ಸಂಖ್ಯೆ ದಾಖಲೆ ಇವುಗಳನ್ನು ಜೋಡಿಸುವುದು
- ಬರ್ತಿಯಾದ ಅರ್ಜಿ ಮತ್ತು ದಾಖಲೆಯನ್ನು ಪಂಚಾಯಿತಿ ಕಚೇರಿಗೆ ಸಲ್ಲಿಸಿ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿಯನ್ನು ಪಡೆದುಕೊಳ್ಳಿ
- ಈ ಎಲ್ಲಾ ಹಂತಗಳು ಮುಗಿದ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಮನೆಯಲ್ಲಿ ಶೌಚಾಲಯ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳುತ್ತಾರೆ
ಅಂತಿಮ ಮಾತು:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಜಾರಿಯಾದ ಸ್ವಚ್ಛ ಭರತ್ ಮಿಷನ್ (Swachh Bharat Mission) ಯೋಜನೆಯು ಎಲ್ಲಾ ಮನೆಗಳು ಸ್ವಂತ ಶೌಚಾಲಯವನ್ನು ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತಿದ್ದು, ನೀವು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ನಿಮ್ಮ ನೆರೆ ಹೊರೆಯರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿ ಅವರ ಮನೆಗೆ ಸ್ವಂತ ಶೌಚಾಲಯ ನಿರ್ಮಾಣ ಮಾಡುವಂತೆ ಮಾಡಿ ಸ್ವಚ್ಛ ಭಾರತವನ್ನಾಗಿ ಮಾಡುವ ಕನಸ್ಸಿಗೆ ನಿಮ್ಮದೊಂದು ಸಣ್ಣ ಕೊಡುಗೆ ಇರುವಂತೆ ಮಾಡಿ.
ಗ್ರಾಮೀಣ ಭಾಗದ ಜನರಿಗೆ ಒಂದು ವಿಶೇಷ ಸೌಲಭ್ಯವಿದೆ ಏನೆಂದರೆ ಶೌಚಾಲಯ ನಿರ್ಮಾಣಕ್ಕಾಗಿ ನೀವು ಸ್ವತಹ ಕೆಲಸ ಮಾಡಿದರೆ ಉದ್ಯೋಗ ಖಾತರಿ ಯೋಜನೆ ಅಡಿ ಸುಮಾರು 5,000/-ರಿಂದ 7,000 ಸಾವಿರ ವರಿಗೆ ಹೆಚ್ಚುವರಿ ಕೂಲಿ ಹಣವನ್ನು ಪಡೆಯಬಹುದು. ನೀವು ಮನೆಯಲ್ಲಿ ಶೌಚಾಲಯ ಇಲ್ಲವಾದರೆ ಈಗಲೇ ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ಹೋಗಿ ಅಧಿಕಾರಿಗಳ ಬಳಿ ಪರಿಶೀಲಿಸಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಹೌದು ಕೆಲವು ಸಂದರ್ಭಗಳಲ್ಲಿ ಎಪಿಎಲ್ ಕಾರ್ಡ್ ಹೊಂದಿರುವ ಪಲಾನುಭವಿದು ಈ ಯೋಜನೆ ಲಾಭವನ್ನು ಪಡೆಯಬಹುದು ಆದರೆ ಕೆಲವು ಶರತ್ತುಗಳು ಅನ್ವಯವಾಗುತ್ತವೆ.
ಇಲ್ಲ ಇದು ಕೇವಲ ಹೊಸದಾಗಿ ಶೌಚಾಲಯ ಕಟ್ಟುವವರಿಗೆ ಮಾತ್ರ ಸಹಾಯಧನ ಸಿಗುತ್ತದೆ.
ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಖಾತೆ ವಿವರ ಫೋಟೋ ಮತ್ತು ವಿಳಾಸ ಪುರಾವೆ ಅಗತ್ಯವಾಗಿದೆ.
ಸಹಾಯಧನವನ್ನು ಪಲಾನುಭವಿಯು ಬ್ಯಾಂಕ್ ಖಾತೆಯ ಮೂಲಕ ನೇರವಾಗಿ ಪಡೆದುಕೊಳ್ಳಬಹುದು
ಶೌಚಾಲಯ ನಿರ್ಮಾಣಕ್ಕೆ 12,000/- ದಿಂದ 20,000/- ವರೆಗೆ ಸಹಾಯಧನ ಸಿಗುತ್ತದೆ








